HOME » NEWS » Tech » RELIANCE JIO IN FLIGHT CONNECTIVITY PLANS AVAILABLE STARTING AT RS 499 HG

Reliance Jio: ಕಡಿಮೆ ಬೆಲೆಯ ಇನ್-​ಫ್ಲೈಟ್​ ಕನೆಕ್ಟಿವಿಟಿ ಪ್ಲಾನ್​ ಪರಿಚಯಿಸಿದ ಜಿಯೋ; 22 ಏರ್​ಲೈನ್ಸ್​ಗಳಲ್ಲಿ ಈ ಸೇವೆ ಲಭ್ಯ!

ಜಿಯೋ ತನ್ನ ವೆಬ್​ಸೈಟ್​ನಲ್ಲಿ ಇನ್​ಫ್ಲೈಟ್​​ ಕನೆಕ್ಟಿವಿಟಿಯ ಕುರಿತು ಮಾಹಿತಿಯನ್ನು ನೀಡಿದೆ. ಜೊತೆಗೆ ಪ್ಲಾನ್ಸ್​, ವಾಯ್ಸ್​ ಕರೆ, ಎಸ್​ಎಮ್​ಎಸ್​ ಕುರಿತಾದ ಮಾಹಿತಿಯನ್ನು ಹಂಚಿಕೊಂಡಿದೆ.  2000 ಫೀಟ್​ ಎತ್ತರದವರೆಗೆ ಜಿಯೋ ಇನ್​ಫ್ಲೈಟ್​​ ಸೇವೆ ಲಭ್ಯವಿರಲಿದೆ.

news18-kannada
Updated:December 25, 2020, 5:27 PM IST
Reliance Jio: ಕಡಿಮೆ ಬೆಲೆಯ ಇನ್-​ಫ್ಲೈಟ್​ ಕನೆಕ್ಟಿವಿಟಿ ಪ್ಲಾನ್​ ಪರಿಚಯಿಸಿದ ಜಿಯೋ; 22 ಏರ್​ಲೈನ್ಸ್​ಗಳಲ್ಲಿ ಈ ಸೇವೆ ಲಭ್ಯ!
ಇನ್​ಫ್ಲೈಟ್​ ಕನೆಕ್ಟಿವಿಟಿ ಪ್ಲಾನ್​
  • Share this:
ಟೆಲಿಕಾಂ ದೈತ್ಯ ರಿಲಾಯನ್ಸ್​ ಜಿಯೋ ಸೆಪ್ಟೆಂಬರ್​ ತಿಂಗಳಿನಲ್ಲಿ ಇನ್​​​ಫ್ಲೈಟ್​​ ಕನೆಕ್ಟಿವಿಟಿ (ಐಎಫ್​ಸಿ)ಯನ್ನು ಪರಿಚಯಿಸಿದ್ದು, ವಿಮಾನದ ಒಳಗೆ ಕುಳಿತುಕೊಂಡು ಜಿಯೋ ನೆಟ್​ವರ್ಕ್​ ಬಳಸಬಹುದಾದ ಅವಕಾಶ ಒದಗಿಸಿದೆ. ಇದೇ ಮೊದಲ ಬಾರಿಗೆ ಜಿಯೋ ವಿಭಿನ್ನ ಯೋಜನೆಯನ್ನು ಗ್ರಾಹಕರಿಗೆ ಮುಂದಿರಿಸಿದ್ದು, ಪೋಸ್ಟ್​​ಪೇಯ್ಡ್​ ಹಾಗೂ ಪ್ರಿಪೇಯ್ಡ್​​ ಪ್ಲಾನ್​ಗಳನ್ನು ಅಳವಡಿಸಿಕೊಂಡು ಬಳಸಬಹುದಾಗಿದೆ.

ಇದೀಗ ಜಿಯೋ ಕಡಿಮೆ ಬೆಲೆಯ ಐಎಫ್​ಸಿ ಪ್ಲಾನ್​ ಅನ್ನು ಗ್ರಾಹಕರಿಸಿಗೆ ಪರಿಚಯಿಸಿದೆ. 499 ರೂ, 699 ರೂ ಮತ್ತು 999 ರೂ.ವಿನ ಪ್ಲಾನ್​ ಅನ್ನು ನೀಡಿದೆ. ಈ ಮೂರು ಪ್ಲಾನ್​ಗಳು ಒಂದು ದಿನದ ವ್ಯಾಲಿಡಿಟಿ ಹೊಂದಿದೆ. 22 ಏರ್​ಲೈನ್ಸ್​​​ನಲ್ಲಿ  ಜಿಯೋ ತನ್ನ ಪಾಟ್ನರ್​​ಶಿಪ್​ ಹೊಂದಿದೆ.

ಜಿಯೋ ತನ್ನ ವೆಬ್​ಸೈಟ್​ನಲ್ಲಿ ಇನ್​ಫ್ಲೈಟ್​​ ಕನೆಕ್ಟಿವಿಟಿಯ ಕುರಿತು ಮಾಹಿತಿಯನ್ನು ನೀಡಿದೆ. ಜೊತೆಗೆ ಪ್ಲಾನ್ಸ್​, ವಾಯ್ಸ್​ ಕರೆ, ಎಸ್​ಎಮ್​ಎಸ್​ ಕುರಿತಾದ ಮಾಹಿತಿಯನ್ನು ಹಂಚಿಕೊಂಡಿದೆ.  2000 ಫೀಟ್​ ಎತ್ತರದವರೆಗೆ ಜಿಯೋ ಇನ್​ಫ್ಲೈಟ್​​ ಸೇವೆ ಲಭ್ಯವಿರಲಿದೆ.

ಟೆಲಿಕಾಂ ಟಾಕ್​ ಹೊರಡಿಸಿರಿವ ಮಾಹಿತಿ ಪ್ರಕಾರ, ‘ವಿಸ್ತಾರ ಮತ್ತು ಇಂಡಿಗೊ ಭಾರತದಲ್ಲಿ ಇನ್​ಫ್ಲೈಟ್​ ಕನೆಕ್ಟಿವಿಡಿಯನ್ನು ಜಾರಿಗೆ ತರಲು ಮುಂದಾಗಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಈ ಐಎಫ್​ಸಿ ಸೇವೆಯ ಮೇಲಿನ ನಿರ್ಬಂಧಗಳನ್ನು ತೆಗೆದು ಹಾಕಿದೆ. ಹಾಗಾಗಿ ಭಾರತದಲ್ಲಿ ಐಎಫ್​ಸಿ ಸೇವೆ ಅಧಿಕೃತಗೊಂಡ ನಂತರ ಸ್ಥಳೀಯ ವಾಯುಪ್ರದೇಶದಲ್ಲಿ ಜಿಯೋ ಐಏಫ್​ಸಿ ಪ್ಯಾಕ್​ ಅನ್ನು ಬಳಕೆಗೆ ಸಿಗುತ್ತಿದೆ’ ಎಂದಿದೆ.

ವಿಮಾನ ಪ್ರಯಾಣಿಕರು ವಿಮಾನದಲ್ಲಿದ್ದಾಗ ಮತ್ತು 2 ಸಾವಿರ ಅಡಿ ತಲುಪಿದಾಗ ಐಎಫ್​​ಸಿ ಪ್ಯಾಕ್​ ಅನ್ನು ಸಕ್ರೀಯಗೊಳಿಸಿ ಬಳಸಬಹುದಾಗಿದೆ.
Published by: Harshith AS
First published: December 25, 2020, 5:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories