Jio ಪ್ರಿಪೇಯ್ಡ್‌ ಪ್ಲಾನ್‌ಗಳ ದರ ಹೆಚ್ಚಳ: ಆದ್ರೆ ಈ ಪ್ಲಾನ್‌ಗಳಲ್ಲಿ ಸಿಗುವ ಲಾಭ ಬೇರೆಲ್ಲೂ ಸಿಗದು!

Jio Prepaid Plans: ಡಿಸೆಂಬರ್ 1, 2021 ರ ಮೊದಲು ಹೊಸ ಪ್ಲಾನ್​​ ಖರೀದಿಸಿದರೆ, ನೀವು ಹೆಚ್ಚಿನ ಹಣವನ್ನು ಉಳಿಸುತ್ತೀರಿ. ಆದ್ದರಿಂದ, ಖರ್ಚು ಮಾಡಿದ ಹಣಕ್ಕೆ ಹೆಚ್ಚಿನ ಮೌಲ್ಯ ನೀಡುವ 84 ದಿನಗಳ ಮಾನ್ಯತೆಯೊಂದಿಗೆ ಪ್ಲಾನ್​​‌ಗಳು ಇಲ್ಲಿವೆ.

Jio /ಜಿಯೋ

Jio /ಜಿಯೋ

  • Share this:
    ಏರ್‌ಟೆಲ್ (Airtel) ಮತ್ತು ವೊಡಾಫೋನ್ ಐಡಿಯಾ (Vi) ನಂತರ, ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಪ್ಲಾನ್​​‌ಗಳಿಗೆ (Jio Prepaid Plan) ಸುಂಕ ಹೆಚ್ಚಿಸಿದೆ. ಬೆಲೆ ಏರಿಕೆಯ ಹೊರತಾಗಿಯೂ, ಜಿಯೋದಿಂದ ಕೆಲವು ಹೊಸ ಪ್ರಿಪೇಯ್ಡ್ ಪ್ಲಾನ್‌ಗಳು Vi ಮತ್ತು Airtelಗೆ ಹೋಲಿಸಿದರೆ ಖರ್ಚು ಮಾಡಿದ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ನೀಡುತ್ತವೆ. ಆರ್ಥಿಕ ಪ್ರಿಪೇಯ್ಡ್ ಯೋಜನೆಗಳನ್ನು ಪರಿಗಣಿಸಿ, ಜಿಯೋದ 155 ರೂ. ಯೋಜನೆಯು ತಿಂಗಳಿಗೆ 2GB ಡೇಟಾ, ಅನಿಯಮಿತ ವಾಯ್ಸ್‌ ಕಾಲ್ (Unlimited Voice Call) ಮತ್ತು 300 SMS ನೀಡುತ್ತದೆ. ಅದೇ ಪ್ರಯೋಜನಗಳನ್ನು ಏರ್‌ಟೆಲ್ ಮತ್ತು Vi ಎರಡೂ 179 ರೂ. ಗಳಲ್ಲಿ ನೀಡುತ್ತವೆ. ಅಲ್ಲದೆ, ಜಿಯೋದ 239 ರೂ. ನ ದೈನಂದಿನ ಡೇಟಾ ಯೋಜನೆಯು 28 ದಿನಗಳವರೆಗೆ ದಿನಕ್ಕೆ 1.5GB ಡೇಟಾ ನೀಡುತ್ತದೆ; ಏರ್‌ಟೆಲ್ ಮತ್ತು Vi 299 ರೂ.ಗಳಲ್ಲಿ ಅದೇ ಪ್ರಯೋಜನ ನೀಡುತ್ತವೆ.

    ರಿಲಯನ್ಸ್ ಜಿಯೋ (Reliance Jio) ಚಂದಾದಾರರಿಗೆ, ಹೆಚ್ಚು ಮಾನ್ಯತೆಯೊಂದಿಗೆ ಪ್ಲಾನ್‌ ಆಯ್ಕೆ ಮಾಡಲು ಇದು ಅರ್ಥಪೂರ್ಣವಾಗಿದೆ. ಸಹಜವಾಗಿ, ಚಂದಾದಾರರು ಆರಂಭದಲ್ಲಿ ಹೆಚ್ಚು ಪಾವತಿಸಬೇಕಾಗುತ್ತದೆ. ಆದರೆ ಮಾಸಿಕ ವೆಚ್ಚವನ್ನು ಹೋಲಿಸಿದರೆ, 84 ದಿನಗಳ ವ್ಯಾಲಿಡಿಟಿ ಹೊಂದಿರುವ ಯೋಜನೆಯು 28 ದಿನಗಳ ಮಾನ್ಯತೆಯ ಪ್ಲಾನ್‌ಗಿಂತ ಹೆಚ್ಚು ಮೌಲ್ಯವನ್ನು ನೀಡುತ್ತದೆ.

    ಪರಿಗಣಿಸಬೇಕಾದ ಇನ್ನೊಂದು ವಿಷಯವೆಂದರೆ ನೀವು ಡಿಸೆಂಬರ್ 1, 2021 ರ ಮೊದಲು ಹೊಸ ಪ್ಲಾನ್ ಖರೀದಿಸಿದರೆ, ನೀವು ಹೆಚ್ಚಿನ ಹಣವನ್ನು ಉಳಿಸುತ್ತೀರಿ. ಆದ್ದರಿಂದ, ಖರ್ಚು ಮಾಡಿದ ಹಣಕ್ಕೆ ಹೆಚ್ಚಿನ ಮೌಲ್ಯ ನೀಡುವ 84 ದಿನಗಳ ಮಾನ್ಯತೆಯೊಂದಿಗೆ ಪ್ಲಾನ್‌ಗಳು ಇಲ್ಲಿವೆ:

    ರಿಲಯನ್ಸ್ ಜಿಯೋ 395 ರೂ.ಪ್ಲಾನ್‌ - 84 ದಿನಗಳ ಮಾನ್ಯತೆಯೊಂದಿಗೆ

    ನಿಮ್ಮ ಮನೆ ಮತ್ತು ಕಚೇರಿಯಲ್ಲಿ ವೈ-ಫೈ ಇಂಟರ್ನೆಟ್ ಸಂಪರ್ಕಕ್ಕೆ ನೀವು ಪ್ರವೇಶ ಹೊಂದಿದ್ದರೆ ಮತ್ತು ಕರೆಗಳು ಹಾಗೂ SMSಗಾಗಿ ಹಣಕ್ಕಾಗಿ ಮೌಲ್ಯದ ಯೋಜನೆ ಅಗತ್ಯವಿದ್ದರೆ 395 ರೂ. ಪ್ಲಾನ್‌ ಪರಿಗಣಿಸುವುದು ಅರ್ಥಪೂರ್ಣವಾಗಿದೆ. ಈ ಯೋಜನೆಯೊಂದಿಗೆ ನೀವು ಸಂಪೂರ್ಣ 84 ದಿನಗಳ ಅವಧಿಗೆ 6GB ಡೇಟಾ ಜತೆಗೆ ಅನಿಯಮಿತ ವಾಯ್ಸ್‌ ಕಾಲ್‌ ಮತ್ತು 1000 SMS ಪಡೆಯುತ್ತೀರಿ. ನೀವು ಇದನ್ನು ಲೆಕ್ಕ ಮಾಡಿದರೆ, ವೆಚ್ಚವು 28 ದಿನಗಳವರೆಗೆ ಸುಮಾರು 132 ರೂ. ಆಗುತ್ತದೆ. ಅದರ ಬದಲಿಗೆ ನೀವು 28 ದಿನಗಳ ಯೋಜನೆಯನ್ನು ಆರಿಸಿಕೊಂಡರೆ ಇದೇ ಪ್ರಯೋಜನಕ್ಕಾಗಿ ನೀವು 155 ರೂ. ಪಾವತಿಸಬೇಕಾಗುತ್ತದೆ. ಅಲ್ಲದೆ, ನೀವು ಡಿಸೆಂಬರ್ 1 ರ ಮೊದಲು ಹೊಸ ಯೋಜನೆಯನ್ನು ಖರೀದಿಸಿದರೆ, ನೀವು ಅದನ್ನು 329 ರೂ.ಗೆ ಪಡೆಯುತ್ತೀರಿ.

    ರಿಲಯನ್ಸ್ ಜಿಯೋ 666 ರೂ. ಪ್ಲಾನ್ - 84 ದಿನಗಳ ಮಾನ್ಯತೆಯೊಂದಿಗೆ

    ಈ ಯೋಜನೆಯು ದಿನಕ್ಕೆ 1.5GB ಡೇಟಾವನ್ನು ಅನಿಯಮಿತ ವಾಯ್ಸ್‌ ಕಾಲ್‌ ಜೊತೆಗೆ 84 ದಿನಗಳವರೆಗೆ ದಿನಕ್ಕೆ 100 SMS ನೀಡುತ್ತದೆ. ಅದೇ ಪ್ರಯೋಜನ ನೀಡುವ 28 ದಿನಗಳ ವ್ಯಾಲಿಡಿಟಿಯ ಯೋಜನೆಯು ಈಗ 239 ರೂ. ವೆಚ್ಚವಾಗುತ್ತದೆ. ಹಾಗಾಗಿ, ಇಂಟರ್ನೆಟ್ ಬ್ರೌಸ್ ಮಾಡಲು ನಿಮಗೆ ಡೇಟಾ ಬೇಕಾದರೆ ಈ ಯೋಜನೆಯು ಇತರ ಆಯ್ಕೆಗಳಿಗಿಂತ ಹೆಚ್ಚಿನ ಮೌಲ್ಯ ನೀಡುತ್ತದೆ. ಅಲ್ಲದೆ, ನೀವು ಡಿಸೆಂಬರ್ 1ರ ಮೊದಲು ಹೊಸ ಪ್ಲಾನ್‌ ಖರೀದಿಸಿದರೆ, ನೀವು ಅದನ್ನು 555 ರೂ. ಗೆ ಪಡೆಯುತ್ತೀರಿ. ಇದು ಹೆಚ್ಚಿನ ಹಣ ಉಳಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

    ಇದನ್ನು ಓದಿ: Twitter CEO ಸ್ಥಾನಕ್ಕೆ ಜಾಕ್​​ ಡಾರ್ಸಿ ರಾಜೀನಾಮೆ: ಭಾರತ ಮೂಲದ ಪರಾಗ್​ ಅಗರ್ವಾಲ್​ ಹೊಸ ಬಾಸ್​!

    ರಿಲಯನ್ಸ್ ಜಿಯೋ 719 ರೂ. ಪ್ಲಾನ್‌ 84 ದಿನಗಳ ಮಾನ್ಯತೆಯೊಂದಿಗೆ

    ಈ ಯೋಜನೆಯು ದಿನಕ್ಕೆ 2GB ಡೇಟಾವನ್ನು ಅನಿಯಮಿತ ವಾಯ್ಸ್‌ ಕಾಲ್ ಜೊತೆಗೆ 84 ದಿನಗಳವರೆಗೆ ದಿನಕ್ಕೆ 100 SMS ನೀಡುತ್ತದೆ. ನೀವು ಡಿಸೆಂಬರ್ 1ರ ಮೊದಲು ಈ ಪ್ಲಾನ್​​ಅನ್ನು ಖರೀದಿಸಿದರೆ, ನೀವು 599 ರೂ. ಗೆ ಅದೇ ಪ್ರಯೋಜನಗಳನ್ನು ಪಡೆಯುತ್ತೀರಿ. ಇದು ಮೇಲಿನ ಯೋಜನೆಗೆ ಹೋಲುತ್ತದೆ ಮತ್ತು ಸಾಮಾಜಿಕ ಮಾಧ್ಯಮ ಬಳಕೆ ಹಾಗೂ ಗೇಮಿಂಗ್‌ಗಾಗಿ ನಿಮಗೆ ಸ್ವಲ್ಪ ಹೆಚ್ಚಿನ ಡೇಟಾ ಅಗತ್ಯವಿದ್ದರೆ ಮಾತ್ರ ಅರ್ಥಪೂರ್ಣವಾಗಿರುತ್ತದೆ. ಅದೇ ಪ್ರಯೋಜನ ನೀಡುವ 28 ದಿನಗಳ ವ್ಯಾಲಿಡಿಟಿಯ ಯೋಜನೆಯು ಈಗ 299 ರೂ. ಆಗಿದೆ.

    ಇದನ್ನು ಓದಿ: Oppo ಮೊದಲ ಫೋಲ್ಡೆಬಲ್ ಸ್ಮಾರ್ಟ್​​ಫೋನ್ ಮುಂದಿನ ತಿಂಗಳು ಮಾರುಕಟ್ಟೆಗೆ! ಫೀಚರ್ಸ್ ಹೇಗಿದೆ?

    ರಿಲಯನ್ಸ್ ಜಿಯೋ 2,879 ರೂ.ಪ್ಲಾನ್​​365 ದಿನಗಳ ಮಾನ್ಯತೆಯೊಂದಿಗೆ

    ನೀವು 2,879 ರೂ. ಆರಂಭಿಕ ವೆಚ್ಚವನ್ನು ಪಡೆಯಲು ಸಾಧ್ಯವಾದರೆ, ಈ ಯೋಜನೆಯನ್ನು ಖರೀದಿಸುವುದರಿಂದ ಅನಿಯಮಿತ ವಾಯ್ಸ್‌ ಕಾಲ್‌ನೊಂದಿಗೆ ದಿನಕ್ಕೆ 2GB ಡೇಟಾ ಮತ್ತು 100 SMS ಅನ್ನು ಒದಗಿಸುತ್ತದೆ. ಪರಿಣಾಮಕಾರಿ ಮಾಸಿಕ ವೆಚ್ಚವು ಸುಮಾರು 240 ರೂ. ಆಗಿರುತ್ತದೆ. ಆದರೆ, 28 ದಿನಗಳ ಮಾನ್ಯತೆಯೊಂದಿಗೆ ಅದೇ ಪ್ರಯೋಜನಗಳನ್ನು ನೀಡುವ ಯೋಜನೆಯು 299 ರೂ. ವೆಚ್ಚವಾಗುತ್ತದೆ.

    ಇತ್ತೀಚಿನ ರಾಜ್ಯರಾಷ್ಟ್ರೀಯಕೊರೋನಾವೈರಸ್​ಮತ್ತಿತರ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್​ ಮಾಡಿ. ನ್ಯೂಸ್​18 ಕನ್ನಡವನ್ನು ಫೇಸ್​ಬುಕ್​ನಲ್ಲಿ ಫಾಲೋ ಮಾಡಲು ಇಲ್ಲಿ ಕ್ಲಿಕ್​ ಮಾಡಿ, ಟ್ವಿಟ್ಟರ್​ಗಾಗಿ ಇಲ್ಲಿ ಕ್ಲಿಕ್​ ಮಾಡಿ.
    Published by:Harshith AS
    First published: