ಕೇವಲ 22 ತಿಂಗಳಲ್ಲಿ ಜಿಯೋ ಸಂಪಾದಿಸಿ ಗ್ರಾಹಕರ ಸಂಖ್ಯೆ ಎಷ್ಟು?


Updated:July 5, 2018, 8:46 PM IST
ಕೇವಲ 22 ತಿಂಗಳಲ್ಲಿ ಜಿಯೋ ಸಂಪಾದಿಸಿ ಗ್ರಾಹಕರ ಸಂಖ್ಯೆ ಎಷ್ಟು?

Updated: July 5, 2018, 8:46 PM IST
ಮುಂಬೈ: ಜಿಯೋ ಬಿಡುಗಡೆಗೊಂಡು ಕೇವಲ 22 ತಿಂಗಳಲ್ಲಿ 215 ಮಿಲಿಯನ್​ ಗ್ರಾಹಕರನ್ನು ಹೊಂದಿದೆ ಎಂದು , ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹೇಳಿದ್ದಾರೆ.

ಜೂ.05 ರಂದು ನಡೆದ ರಿಲಾಯನ್ಸ್ ಸಂಸ್ಥೆಯ 41 ನೇ ಸಭೆಯಲ್ಲಿ ಮಾತನಾಡಿದ ಮುಖೇಶ್ ಅಂಬಾನಿ ಕಳೆದ 1 ವರ್ಷದಲ್ಲಿ ಗ್ರಾಹಕರ ಸಂಖ್ಯೆ ದುಪ್ಪಟ್ಟುಗೊಂಡಿದ್ದು ಇದೇ ಸಂದರ್ಭದಲ್ಲಿ ಗ್ರಾಹಕರ ಮನೆಗೆ ಬ್ರಾಡ್ ಬ್ಯಾಂಡ್ ವ್ಯವಸ್ಥೆಯ ಯೋಜನೆಯನ್ನೂ ಘೋಷಿಸಿದ್ದಾರೆ.

22 ತಿಂಗಳಲ್ಲಿ ನಮ್ಮ ಬೆಳವಣಿಗೆಯನ್ನು ಗಮನಿಸಿದರೆ ಈ ವರೆಗಿನ ಯಾವುದೇ ಕಂಪನಿಗಳು ಈ ಮಟ್ಟದಲ್ಲಿ ಸಾಧನೆ ಮಾಡಿಲ್ಲ. ಜಿಯೋ ಈವರೆಗಿನ ಎಲ್ಲಾ ದಾಖಲೆಯನ್ನು ಮುರಿದಿದೆ. ಈ ಹಿಂದೆ 125 ಕೋಟಿ ಜಿಬಿಗಳಷ್ಟು ಬಳಕೆಯಾಗುತ್ತಿದ್ದ ಜಿಯೋ ಇಂಟರ್​ನೆಟ್​ ಸೇವೆ ದುಪ್ಪಟ್ಟು ಗೊಂಡಿದ್ದು 240 ಕೋಟಿ ಜಿಬಿಗೂ ಅಧಿಕ ಜಿಯೋ ಇಂಟರ್​ನೆಟ್​ ಸೇವೆ ಪೂರೈಕೆಯಾಗುತ್ತುದೆ ಎಂದು ಮುಖೇಶ್​ ಅಂಬಾನಿ ಹೇಳಿದ್ದಾರೆ.

ಜಿಯೋ ಗ್ರಾಹಕರೂ ದಿನವೊಂದಕ್ಕೆ 290ನಿಮಿಷಕ್ಕೂ ಅಧಿಕ ಕಾಲ ನಮ್ಮ ಸೇವೆಯನ್ನು ಬಳಸುತ್ತಿದ್ದಾರೆ, ಶೇ.99ರಷ್ಟು ಮಂದಿ 4G-LTE ಸೇವೆಯನ್ನು ಬಳಕೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
First published:July 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...