• Home
 • »
 • News
 • »
 • tech
 • »
 • Jio True 5G: ಮೈಸೂರಿನಲ್ಲೂ 5ಜಿ ವಿಸ್ತರಿಸಿದ ರಿಲಯನ್ಸ್ ಜಿಯೋ! ಹೇಗಿದೆ ಗೊತ್ತಾ ಇಂಟರ್ನೆಟ್​ ಸ್ಪೀಡ್​?

Jio True 5G: ಮೈಸೂರಿನಲ್ಲೂ 5ಜಿ ವಿಸ್ತರಿಸಿದ ರಿಲಯನ್ಸ್ ಜಿಯೋ! ಹೇಗಿದೆ ಗೊತ್ತಾ ಇಂಟರ್ನೆಟ್​ ಸ್ಪೀಡ್​?

ಜಿಯೋ 5ಜಿ ಸೇವೆ

ಜಿಯೋ 5ಜಿ ಸೇವೆ

ವಿಶ್ವದಾದ್ಯಂತ ಜಿಯೋ ಟ್ರೂ ಸೇವೆಯನ್ನು 2023ರ ಡಿಸೆಂಬರ್​ ಒಳಗಡೆ ಜಿಯೋ ಟ್ರೂ 5ಜಿ ಸೇವೆಯನ್ನು ಪ್ರಾರಂಭಿಸುವುದಾಗಿ ಭರವಸೆ ನೀಡಿತ್ತು. ಇದೀಗ 2022ರ ಅಂತ್ಯದಲ್ಲಿ ಮೈಸೂರಿನಲ್ಲೂ ಟ್ರೂ 5ಜಿ ಸೇವೆಯನ್ನು ಸ್ಥಾಪಿಸಿ ಗ್ರಾಹಕರಿಗೆ ಸಂತೋಷವನ್ನು ನೀಡಿದೆ.

 • Share this:

  ಟೆಲಿಕಾಂ ವಲಯದಲ್ಲಿ (Telecom Company) ದಾಖಲೆಯನ್ನು ಸೃಷ್ಟಿಸಿದ ಕಂಪನಿಯೆಂದರೆ ಅದು ರಿಲಯನ್ಸ್​ ಜಿಯೋ (Reliance Jio). ಪ್ರಪಂಚದಾದ್ಯಂತ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಟೆಲಿಕಾಂ ಕಂಪನಿಯೆಂದು ಜಿಯೋ ಗುರುತಿಸಿಕೊಂಡಿದೆ. ಇದೀಗ ವಿಶ್ವದಾದ್ಯಂತ ಬಹಳಷ್ಟು ಮಾತುಕತೆಯಲ್ಲಿರುವ ಸುದ್ದಿಯೆಂದರೆ ಅದು 5ಜಿ ನೆಟ್​​ವರ್ಕ್​ ಸೇವೆ. ಜಿಯೋ ಈ ಹಿಂದೆ ಹಲವಾರು ಕಡೆಗಳಲ್ಲಿ 5ಜಿ ನೆಟ್​ವರ್ಕ್​ ಸೇವೆಯನ್ನು ಪ್ರಾರಂಬಿಸುವ ಮೂಲಕ ಎಲ್ಲರ ಮನ್ನಣೆಗೆ ಪಾತ್ರವಾಗಿತ್ತು. ಇದೀಗ ಮತ್ತೆ ಜಿಯೋ ಗ್ರಾಹಕರಿಗೆ ಗುಡ್​​ನ್ಯೂಸ್​ ನೀಡಿದೆ. ಡಿಸೆಂಬರ್​ 28 ರಂದು ರಿಲಯನ್ಸ್​ ಜಿಯೋ ಮೈಸೂರಿನಲ್ಲೂ ತನ್ನ ಜಿಯೋ ಟ್ರೂ 5ಜಿ (Jio True 5G) ಸೇವೆಯನ್ನು ಪ್ರಾರಂಭಿಸಿದೆ. ಇದೀಗ ವರ್ಷಾಂತ್ಯದಲ್ಲಿ ಈ ಸೇವೆಯನ್ನು ಪ್ರಾರಂಭಿಸಿದ್ದು ಬಹಳ ವಿಶೇಷ.


  ವಿಶ್ವದಾದ್ಯಂತ ಜಿಯೋ ಟ್ರೂ ಸೇವೆಯನ್ನು 2023ರ ಡಿಸೆಂಬರ್​ ಒಳಗಡೆ ಜಿಯೋ ಟ್ರೂ 5ಜಿ ಸೇವೆಯನ್ನು ಪ್ರಾರಂಭಿಸುವುದಾಗಿ ಭರವಸೆ ನೀಡಿತ್ತು. ಇದೀಗ 2022ರ ಅಂತ್ಯದಲ್ಲಿ ಮೈಸೂರಿನಲ್ಲೂ ಟ್ರೂ 5ಜಿ ಸೇವೆಯನ್ನು ಸ್ಥಾಪಿಸಿ ಗ್ರಾಹಕರಿಗೆ ಸಂತೋಷವನ್ನು ನೀಡಿದೆ.


  ಮೈಸೂರಿನಲ್ಲಿ ಜಿಯೋ ಟ್ರೂ 5ಜಿ


  ರಿಲಯನ್ಸ್ ಜಿಯೋ ಇಂದು ಡಿಸೆಂಬರ್ 28 ರಂದು ಮೈಸೂರಿನಲ್ಲಿ ಟ್ರೂ 5ಜಿ ಸೇವೆಗಳಿಗೆ ಚಾಲನೆ ನೀಡಿತು. ಈ ಸಂದರ್ಭದಲ್ಲಿ ಲಖನೌ, ತಿರುವನಂತಪುರಂ, ನಾಸಿಕ್, ಔರಂಗಾಬಾದ್, ಚಂಡೀಗಢ, ಮೊಹಾಲಿ, ಪಂಚಕುಲ, ಜಿರಾಕ್‌ಪುರ, ಖರಾರ್ ಮತ್ತು ದೇರಾಬಸ್ಸಿಗಳಲ್ಲಿ ಕೂಡ ತನ್ನ ಟ್ರೂ 5ಜಿ ಸೇವೆಗಳ ಪ್ರಾರಂಭದ ಬಗ್ಗೆ ಘೋಷಣೆ ಮಾಡಿತು. ಅಂದಹಾಗೆ, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸುವ ಮೊದಲ ಮತ್ತು ಏಕೈಕ ಆಪರೇಟರ್ ರಿಲಯನ್ಸ್ ಜಿಯೋ ಆಗಿದೆ.


  ಇದನ್ನೂ ಓದಿ: ಅತ್ಯಂತ ಕಡಿಮೆ ಬೆಲೆಯ 3 ರೀಚಾರ್ಜ್ ಪ್ಲಾನ್​​ಗಳ ಮಾಹಿತಿ ಇಲ್ಲಿದೆ


  ಜಿಯೋ ವಕ್ತಾರರ ಮಾತು


  ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಜಿಯೋ ವಕ್ತಾರರು, 'ಮೈಸೂರು ನಗರದಲ್ಲಿ 5ಜಿ ಆರಂಭಿಸುವುದಕ್ಕೆ ನಾವು ಹೆಮ್ಮೆಪಡುತ್ತೇವೆ ಮತ್ತು ನಾವು ಟ್ರೂ 5ಜಿ ಸೇವೆಗಳನ್ನು ಹೊರತರಲು ಪ್ರಾರಂಭಿಸಿದಾಗಿನಿಂದ ನಮ್ಮ ಅತಿದೊಡ್ಡ ಆರಂಭದಲ್ಲಿ ಇದು ಒಂದಾಗಿದೆ. ಜಿಯೋ ಟ್ರೂ 5ಜಿ ತಂತ್ರಜ್ಞಾನದ ವೇರಿಯಂಟ್‌ ಪ್ರಯೋಜನಗಳನ್ನು ಆನಂದಿಸುವ ಮೂಲಕ ಈಗ 2023ರಿಂದ ಪ್ರಾರಂಭ ಆಗುವುದರೊಂದಿಗೆ ಲಕ್ಷಾಂತರ ಜಿಯೋ ಬಳಕೆದಾರರಿಗೆ ಇದು ಗೌರವವಾಗಿದೆ.


  ಜಿಯೋ 5ಜಿ ಸೇವೆ


  ಈ 5ಜಿ ನೆಟ್​​ವರ್ಕ್​ನಲ್ಲಿ ಇನ್ನೂ ಹಲವು ಸೇವೆಗಳು ಲಭ್ಯ


  'ಮೈಸೂರು ನಮ್ಮ ದೇಶದ ಪ್ರಮುಖ ಪ್ರವಾಸೋದ್ಯಮ ಕೇಂದ್ರ ಮತ್ತು ಪ್ರಮುಖ ಶಿಕ್ಷಣ ಕೇಂದ್ರವಾಗಿದೆ. ಜಿಯೋದ ಟ್ರೂ 5ಜಿ ಸೇವೆಗಳ ಪ್ರಾರಂಭದೊಂದಿಗೆ ಈ ಪ್ರದೇಶದ ಗ್ರಾಹಕರು ಕೇವಲ ಉತ್ತಮ ನೆಟ್​​ವರ್ಕ್​ ವ್ಯವಸ್ತೆಯನ್ನು ಮಾತ್ರವಲ್ಲದೇ, ಜೊತೆಗೆ ಇ-ಆಡಳಿತ, ಶಿಕ್ಷಣ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್, ಆರೋಗ್ಯ, ಕೃಷಿ, ಐಟಿ ಕ್ಷೇತ್ರಗಳಲ್ಲಿ ಮತ್ತು ಸಣ್ಣ ಮತ್ತು ಮಧ್ಯಮ ವ್ಯವಹಾರ ಸಂಸ್ಥೆಗಳ ಉತ್ತಮ ಬೆಳವಣಿಗೆಯನ್ನು ಕಾಣಬಹುದಾಗಿದೆ.


  ಹಲವು ನಗರಗಳಲ್ಲಿ ಜಿಯೋ 5ಜಿ ಸೇವೆ ಲಭ್ಯ


  ಜಿಯೋ ಟ್ರೂ 5ಜಿ ಸೇವೆಯನ್ನು ದೆಹಲಿ, ಬೆಂಗಳೂರು, ಮುಂಬೈ, ವಾರಣಾಸಿ, ಕೋಲ್ಕತ್ತಾ, ಹೈದರಾಬಾದ್, ಚೆನ್ನೈ, ನಾಥದ್ವಾರ, ಪುಣೆ, ಗುರುಗ್ರಾಮ, ನೋಯ್ಡಾ, ಘಾಜಿಯಾಬಾದ್, ಫರಿದಾಬಾದ್ ಮತ್ತು ಗುಜರಾತ್‌ನ 33 ಜಿಲ್ಲಾ ಕೇಂದ್ರಗಳಲ್ಲಿ ಇದುವರೆಗೆ ಸ್ಥಾಪಿಸಿದೆ


  ಪ್ಯಾನ್​ ಇಂಡಿಯಾ ಮಾದರಿಯಲ್ಲಿ ಜಿಯೋ 5ಜಿ


  ಇದುವರೆಗೆ ಜಿಯೋ 5ಜಿ ಸೇವೆಯನ್ನು ದೇಶದ ಪ್ರಮುಖ ನಗರಗಳಲ್ಲಿ ಮಾತ್ರ ಪ್ರಾರಂಭಿಸಿದೆ. ಆದರೆ 2023ರ ಅಂತ್ಯದ ವೇಳೆಗೆ ಪ್ಯಾನ್ ಇಂಡಿಯಾವಾಗಿ ವಿಸ್ತರಿಸುವ ಗುರಿಯನ್ನು ಹೊಂದಿದೆ. ಈ ಮೂಲಕ ಜಿಯೋನ ಗ್ರಾಹಕರ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಹೇಳಬಹುದು. ಜಿಯೋ 5ಜಿ ಸೇವೆಯಿಂದ ಹಲವಾರು ಸೌಲಭ್ಯಗಳು ದೊರೆಯಲಿದ್ದು, ಇದುವರೆಗೆ ಜಿಯೋ 5ಜಿ ಪಡೆದವರು ಜಿಯೋ ವೆಲ್​​ಕಂ ಆಫರ್​ ಅನ್ನು ಕೂಡ ಪಡೆಯಬಹುದಾಗಿದೆ.

  Published by:Prajwal B
  First published: