ಎಕ್ಸ್​ಚೇಂಜ್​ ಆಫರ್​: ಜಿಯೋ ವೈಫೈ ಬಳಕೆದಾರರಿಗೆ ಸಿಗುತ್ತೆ ರೂ.2,200 ಕ್ಯಾಶ್​ಬ್ಯಾಕ್​!

news18
Updated:April 30, 2018, 1:19 PM IST
ಎಕ್ಸ್​ಚೇಂಜ್​ ಆಫರ್​: ಜಿಯೋ ವೈಫೈ ಬಳಕೆದಾರರಿಗೆ ಸಿಗುತ್ತೆ ರೂ.2,200 ಕ್ಯಾಶ್​ಬ್ಯಾಕ್​!
news18
Updated: April 30, 2018, 1:19 PM IST
ನ್ಯೂಸ್​18 ಕನ್ನಡ

ನವದೆಹಲಿ: ತಮ್ಮ ವಿಶೇಷ​ ಆಫರ್​ಗಳ ಮೂಲಕ ಮನೆ ಮಾತಾಗಿರುವ ರಿಲಿಯನ್ಸ್ ಜಿಯೋ ಇದೀಗ ತಮ್ಮ ವೈಫೈ ಗ್ರಾಹಕರಿಗೆ ವಿಶೇಷ ಕ್ಯಾಷ್​ಬ್ಯಾಕ್​ ಅಫರ್​ ನೀಡಿದೆ.

ಜಿಯೋ ಡಾಂಗಲ್​ ಹಾಗೂ ಮಾಡೆಮ್​ ಬಳಕೇದಾರರಿಗೆ ಎಕ್ಸ್​ಚೇಂಜ್​ ಆಫರ್​ ನೀಡಿರುವ ಜಿಯೋ, ನೂತನ ಜಿಯೋ ವೈಫೈ ಪಡೆದುಕೊಂಡರೆ ರೂ.2,200 ವರೆಗೂ ಕ್ಯಾಷ್​ಬ್ಯಾಕ್​ ಆಫರ್​ನ್ನು ಪಡೆದುಕೋಳ್ಳಬಹುದು. ಆದರೆ ಈ ಹಣ ಮೈ ಜಿಯೋ ಅಕೌಂಟ್​ಗೆ ಜಮೆಯಾಗುತ್ತದೆ. ಈ ಹಣವನ್ನು ಪಡೆದುಕೊಳ್ಳಲು ಗ್ರಾಹಕರು ತಮ್ಮ ಹಳೇಯ ಡಾಂಗಲ್​ ಮತ್ತು Jio MISISDN ನಂಬರ್​ನ್ನು ಜಿಯೋ ಸೆಂಟರ್​ಗೆ ನೀಡಬೇಕು. ತಲಾ ರೂ.50ರಂತೆ 44 ಜಿಯೋ ವೋಚರ್​ಗಳನ್ನು ಮೈ ಜಿಯೋ ಖಾತೆಗೆ ಜಮೆಯಾಗುತ್ತದೆ.

ಈ ಎಕ್ಸ್​ಚೇಂಜ್​ ಅಫರ್​ ಪಡೆದುಕೊಳ್ಳುವ ವಿಧಾನ ಹೀಗಿದೆ

ಮೊದಲು ರೂ.999 ಪಾವತಿಸಿ ಜಿಯೋ ವೈಫೈ ಪಡೆದುಕೊಳ್ಳಿ,
ರೂ.198 ಅಥವಾ ರೂ.299+ರೂ.99 (ಜಿಯೋ ಪ್ರೈಮ್​) ರೀಚಾರ್ಜ್​ ಮಾಡಿ
ಸಮೀಪದ ರಿಲೆಯನ್ಸ್​ ಡಿಜಿಟಲ್​ ಸ್ಟೋರ್​ಗೆ ಭೇಟಿ ನೀಡಿ ನಿಮ್ಮ ಹಳೇಯ ಜಿಯೋ ಡಾಂಗಲ್​ ಅಥವಾ ಮಾಡೆಮ್​ನ್ನು ರಿಲಯನ್ಸ್​ ಸ್ಟೋರ್​ಗೆ ಹಿಂತಿರುಗಿಸಿ
Loading...

ಹೊಸ JioFi MSISDN ನಂಬರ್​ನೊಂದಿಗೆ ಹಳೇಯ ಜಿಯೋ ಡಾಂಗಲ್​/ಮಾಡೆಮ್​ನ ಸೀರಿಯಲ್​ ನಂಬರ್​ ಸ್ಟೋರ್​ನವರಿಗೆ ಕೊಟ್ಟ ಬಳಿಕ ನಿಮ್ಮ ಖಾತೆಗೆ ಕ್ಯಾಶ್​ಬ್ಯಾಕ್​ ಬರುತ್ತದೆ.

 
First published:April 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...