ಜಿಯೋ ಧಮಾಕ: ದಿನಕ್ಕೆ 1.5 ಜಿಬಿ ಅಧಿಕ ಡೇಟಾ

news18
Updated:June 13, 2018, 3:43 PM IST
ಜಿಯೋ ಧಮಾಕ: ದಿನಕ್ಕೆ 1.5 ಜಿಬಿ ಅಧಿಕ ಡೇಟಾ
Reliance Jio fonder Mukesh Ambani
news18
Updated: June 13, 2018, 3:43 PM IST
ನವದೆಹಲಿ: ರಿಲಯನ್ಸ್​ ಜಿಯೋ ಮತ್ತು ಉಳಿದ ನೆಟ್​ವರ್ಕ್​ಗಳ ನಡುವ ಡೇಟಾ ಯುದ್ಧ ಬೇಗನೆ ಶಮನವಾಗುವಂತೆ ಕಾಣುತ್ತಿಲ್ಲ, ಇತ್ತೀಚೆಗೆ ಏರ್ಟ್​ ಅತೀ ಕಡಿಮೆ ಬೆಲೆಗೆ ದಿನಕ್ಕೆ 2 ಜಿಬಿ ಇಂಟರ್​ನೆಟ್​ ಸೇವೆ ನೀಡುತ್ತದೆ ಎಂದು ಘೋಷಿಸಿದ ಬೆನ್ನಿಗೆ ಅಂಬಾನಿ ಒಡೆತನದ ಜಿಯೋ ತನ್ನ ಗ್ರಾಹಕರಿಗೆ ಡಬಲ್​ ಧಮಕಾ ನೀಡಲು ಮುಂದಾಗಿದೆ.

ಜಿಯೋ ಗ್ರಾಹಕರಿಗೆ ಈಗಾಗಲೇ ಡಬಲ್​ ಧಮಾಕ ಎಂಬ ಆಫರ್​ನಡಿ 149 ರೂ, ನಿಂದ ರೂ.799ರವರೆಗಿನ ರೀಚಾರ್ಜ್​ ಮಾಡಿಸಿಕೊಂಡವರಿಗೆ 1.5 ಜಿಬಿ ಅಧಿಕಾ ಡೇಟಾವನ್ನು ನೀಡುವುದಾಗಿ ಜಿಯೋ ಘೋಷಿಸಿದೆ. ಈ ರೀಚಾರ್ಜ್​ ಜೂನ್​ ತಿಂಗಳಲ್ಲಿ ಮಾಡಿಸಿಕೊಂಡವರಿಗೆ ಲಭ್ಯವಿದ್ದು, 1.5 ಜಿವಿ ಡೇಟಾ ಬಳಕೆ ಮಾಡುತ್ತಿದ್ದವರಿಗೆ ದಿನಕ್ಕೆ 3 ಜಿಬಿ ಇಂಟರ್​ನೆಟ್​  ಅಧಿಕ ಡೇಟಾ ದೊರಕಲಿದೆ.

ಕೆಲ ದಿನಗಳ ಹಿಂದೆಯಷ್ಟೇ ಏರ್​ಟೆಲ್​ ಪ್ರತಿದಿನ 2 ಜಿಬಿ ಡೇಟಾವನ್ನು ಘೋಷಿಸಿ ಜಿಯೋಗೆ ಸೆಡ್ಡು ಹೊಡೆಯಲು ಮುಂದಾಗಿತ್ತು. ಆದರೆ ಇದೀಗ ಈ ಆಫರ್​ ಪ್ರತಿಯಾಗಿ ಜಿಯೋ ಕೂಡಾ ದಿನಕ್ಕೆ 3 ಜಿಬಿ ಇಂಟರ್​ನೆಟ್​ ಡೇಟಾವನ್ನು ನೀಡಿದೆ.
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ