Jio Prepaid Plan: ಜುಲೈ ತಿಂಗಳಲ್ಲಿ ಅಳವಡಿಸಬಹುದಾದ ಬೆಸ್ಟ್​​ ಪ್ರಿಪೇಯ್ಡ್​​ ಪ್ಲಾನ್​ಗಳು

Jio Prepaid Plan: ಕೊರೋನಾ ಕಾಲದಲ್ಲಿ ರಿಲಾಯನ್ಸ್​ ಜಿಯೋ ತನ್ನ ಆಕರ್ಷಣೀಯ ಪ್ಲಾನ್​ಗಳನ್ನು ಪರಿಚಯಿಸುತ್ತಾ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿದೆ. ಹಾಗಾಗಿ ಜುಲೈ ತಿಂಗಳಿನಲ್ಲಿ ಗ್ರಾಹಕರು ಆಳವಡಿಸಬಹುದಾದ ಕೆಲವು ಬೆಸ್ಟ್​​ ಪ್ರಿಪೇಯ್ಡ್​​ ಪ್ಲಾನ್​ಗಳು ಇಲ್ಲಿವೆ

news18-kannada
Updated:July 8, 2020, 1:17 PM IST
Jio Prepaid Plan: ಜುಲೈ ತಿಂಗಳಲ್ಲಿ ಅಳವಡಿಸಬಹುದಾದ ಬೆಸ್ಟ್​​ ಪ್ರಿಪೇಯ್ಡ್​​ ಪ್ಲಾನ್​ಗಳು
ಜಿಯೋ
  • Share this:
ರಿಲಾಯನ್ಸ್ ಜಿಯೋ ಪ್ರಿಯೇಯ್ಡ್​ ಗ್ರಾಹಕರಿಗಾಗಿ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಡೇಟಾ, ಅನಿಯಮಿತ ಕರೆ, ಎಸ್​ಎಮ್​ಎಸ್​, ಒಟಿಟಿ ಸದಸತ್ವ ಹೀಗೆ ಅನೇಕ ಆಯ್ಕೆಗಳನ್ನು ಜಿಯೋ ತನ್ನ ಪ್ರಿಪೇಯ್ಡ್​ ಗ್ರಾಹಕರಿಗೆ ಪರಿಚಯಿಸುತ್ತಾ ಬಂದಿದೆ. ಕೊರೋನಾ ಕಾಲದಲ್ಲಿ ರಿಲಾಯನ್ಸ್​ ಜಿಯೋ ತನ್ನ ಆಕರ್ಷಣೀಯ ಪ್ಲಾನ್​ಗಳನ್ನು ಪರಿಚಯಿಸುತ್ತಾ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿದೆ. ಹಾಗಾಗಿ ಜುಲೈ ತಿಂಗಳಿನಲ್ಲಿ ಗ್ರಾಹಕರು ಆಳವಡಿಸಬಹುದಾದ ಕೆಲವು ಬೆಸ್ಟ್​​ ಪ್ರಿಪೇಯ್ಡ್​​ ಪ್ಲಾನ್​ಗಳು ಇಲ್ಲಿವೆ.

555 ರೂಪಾಯಿ ಪ್ಲಾನ್​:

ರಿಲಾಯನ್ಸ್​​ ಜಿಯೋ ಪರಿಚಯಿಸಿರುವ ಪ್ರಿಪೇಯ್ಡ್​ ಪ್ಲಾನ್​ಗಳಲ್ಲಿ 555 ರೂಪಾಯಿಯ ಪ್ಲಾನ್​ ಅನ್ನು ಹೆಚ್ಚು ಜನರು ಬಳಕೆ ಮಾಡುತ್ತಿದ್ದಾರೆ. ಈ ಪ್ಲಾನ್​​​ ದಿನಕ್ಕೆ 1.5GB ಡೇಟಾವನ್ನು ಒದಗಿಸುತ್ತಿದೆ. ಜೊತೆಗೆ ಅನಿಯಮಿತ ಕರೆ ಸೌಲಭ್ಯ, ಉಚಿತ ಎಸ್​​ಎಮ್​ಎಸ್​ ಅನ್ನು ನೀಡುತ್ತಿದೆ. ಜಿಯೋದಿಂದ ಇತರೆ ನೆಟ್​ವರ್ಕ್​ಗಳ ಮೇಲೆ 3000 ಎಫ್​ಯುಪಿ ನಿಮಿಷಗಳನ್ನು ನೀಡುತ್ತಿದೆ. ಈ ಪ್ಲಾನ್​ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

599 ರುಪಾಯಿ ಪ್ಲಾನ್​:

ಮೊದಲಿಗೆ ಈ ಪ್ಲಾನ್​ ಅಳವಡಿಸಿಕೊಂಡ ಗ್ರಾಹಕರಿಗೆ ದಿನ ಬಳಕೆಗೆ 1.5GB ಡೇಟಾವನ್ನು ಒದಗಿಸುತ್ತಿತ್ತು. ಇತ್ತೀಚೆಗೆ ಜಿಯೋ ಈ ಪ್ಲಾನ್​ ಅನ್ನು ಕೊಂಚ ಬದಲಾವಣೆ ಮಾಡಿದ್ದು, ಪ್ರತಿದಿನ 2GB ಡೇಟಾವನ್ನು ನೀಡುತ್ತಿದೆ. ಜೊತೆಗೆ ಅನಿಯಮಿತ ಕರೆ, 100 ಎಸ್ಎಮ್​ಎಸ್​​ ನೀಡುತ್ತಿದೆ. ಜಿಯೋದಿಂದ ಇತರೆ ನೆಟ್​ವರ್ಕ್​ಗಳ ಕರೆಯ ಮೇಲೆ 3000 ಎಫ್​ಯುಪಿ ನಿಮಿಷಗಳನ್ನು ಒದಗಿಸುತ್ತಿದೆ. ಈ ಪ್ಲಾನ್​​​​ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

2599 ರೂಪಾಯಿ ಪ್ಲಾನ್​:

ಜಿಯೋ ಪರಿಚಯಿಸಿರುವ 2599 ರೂಪಾಯಿಯ ಪ್ರಿಪೇಯ್ಡ್​ ಪ್ಲಾನ್​ ಅಳವಡಿಸಿಕೊಂಡ ಗ್ರಾಹಕರಿಗೆ ಹೆಚ್ಚಿನ ಬೆನಿಫಿಟ್​ ಒದಗಿಸುತ್ತಿದೆ. ಇದರಲ್ಲಿ ಡಿಸ್ನಿ+ಹಾಟ್​ಸ್ಟಾರ್​ ವಿಐಪಿ ಸದಸ್ಯತ್ವವನ್ನು ಬಳಕೆದಾರರಿಗೆ ನೀಡುತ್ತಿದೆ. ಜೊತೆಗೆ ಪ್ರತಿದಿನ 2GB ಡೇಟಾ ನೀಡುವುದರ ಜೊತೆಗೆ ಬೋನಸ್​ ಆಗಿ 10GB ಡೇಟಾ ಒದಗಿಸುತ್ತಿದೆ. ಅಷ್ಟೇ ಅಲ್ಲದೆ, ಜಿಯೋ ನೆಟ್​ವರ್ಕ್​ನಿಂದ ಇತರೆ ನೆಟ್​ವರ್ಕ್​ಗಳ ಕರೆ ಮೇಲೆ 12,000 ಎಫ್​ಯುಪಿ ನಿಮಿಷಗಳನ್ನು ನೀಡುತ್ತಿದೆ. ಮಾತ್ರವಲ್ಲದೆ, ಅನಿಯಮಿತ ಕರೆ ಸೌಲಭ್ಯ, 100 ಎಸ್​​ಎಮ್​ಎಸ್​​ ಒದಗಿಸುತ್ತಿದೆ. ಈ ಪ್ಲಾನ್​​ ಒಂದು ವರ್ಷದ ಸಿಂಧುತ್ವವನ್ನು ಹೊಂದಿದೆ.2121 ರೂಪಾಯಿ ಪ್ಲಾನ್​:

ದಿನಬಳಕೆಗಾಗಿ 1.5GB ಡೇಟಾವನ್ನು ಒದಗಿಸುತ್ತಿದೆ. 100 ಎಸ್​ಎಮ್​ಎಸ್​ ಜೊತೆಗೆ ಅನಿಯಮಿತ ಕರೆ ಸೌಲಭ್ಯವನ್ನು ನೀಡುತ್ತಿದೆ. ಇನ್ನು ಜಿಯೋ ನೆಟ್​​ವರ್ಕ್​ನಿಂದ ಇತರೆ ನೆಟ್​ವರ್ಕ್​ಗಳ ಕರೆಯ ಮೇಲೆ 12,000 ಎಫ್​ಯುಪಿ ನಿಮಿಷಗಳನ್ನು ನೀಡುತ್ತಿದೆ. ಈ ಪ್ಲಾನ್​ 336 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

401 ರೂಪಾಯಿಯ ಪ್ಲಾನ್​:

ಜಿಯೋ 401 ರುಪಾಯಿ ಪ್ಲಾನ್​ ಅಳವಡಿಸಿಕೊಂಡ ಗ್ರಾಹಕರಿಗೆ ಒಂದು ವರ್ಷದ ಡಿಸ್ನಿ+ಹಾಟ್​​ಸ್ಟಾರ್​​ ಸದಸ್ಯತ್ವವನ್ನು ನೀಡುತ್ತಿದೆ. ಪ್ರತಿ ದಿನ 3GB ಡೇಟಾವನ್ನು ಒದಗಿಸುತ್ತಿದೆ. ಜೊತೆಗೆ 6ಜಿಬಿ ಬೋನಸ್​ ಡೇಟಾವನ್ನು ನೀಡುತ್ತಿದೆ. ಮಾತ್ರವಲ್ಲದೆ ಅನಿಮಮಿತ ಕರೆ, 100 ಎಸ್​ಎಮ್​ಎಸ್​ ಸೌಲಭ್ಯ, ಜಿಯೋದಿಂದ ಇತರೆ ನೆಟ್​​ವರ್ಕ್​ಗಳ ಕರೆಯ ಮೇಲೆ 1000 ಎಫ್​ಯುಪಿ ನಿಮಿಗಳನ್ನು ನೀಡುತ್ತಿದೆ.  ಈ ಪ್ಲಾನ್​​ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

Kalave Mosagara: ಸ್ಯಾಂಡಲ್​​​ವುಡ್​ನಲ್ಲಿ ಮತ್ತೊಂದು ಪಂಚಭಾಷಾ ಸಿನಿಮಾ ಸದ್ದು!; ಕಾಲವೇ ಮೋಸಗಾರ ಚಿತ್ರಕ್ಕೆ ಡಿಜಿಟಲ್​​​ನಲ್ಲಿ ಡಿಮ್ಯಾಂಡ್!

ಚೀನಾ ಕಂಪನಿ ಬದಲಿಗೆ ಭಾರತೀಯರು ಬೇರೆ ಯಾವ ಟಿವಿಗಳನ್ನು ಖರೀದಿಸಬಹುದು?
Published by: Harshith AS
First published: July 8, 2020, 1:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading