Jio: 700 MHz ಬ್ಯಾಂಡ್ ಏಕೆ ಮುಖ್ಯ? 5G ಸೇವೆಗಾಗಿ ಜಿಯೋ ಏನು ಮಾಡಿದೆ ನೋಡಿ

ಪ್ರಪಂಚದಾದ್ಯಂತ 5G ಗೆ 700 MHz ಬ್ಯಾಂಡ್ ಅನ್ನು ಪ್ರಮುಖ ಬ್ಯಾಂಡ್ ಆಗಿ ಬಳಸಲಾಗುತ್ತಿದೆ. ಯುಎಸ್‌ ಮತ್ತು ಯುರೋಪಿಯನ್ ಯೂನಿಯನ್ ಕೂಡ ಇದನ್ನು 5G ಸೇವೆಗಾಗಿ 'ಪ್ರೀಮಿಯಂ ಬ್ಯಾಂಡ್' ಎಂದು ಘೋಷಿಸಿದೆ. ಪ್ರಪಂಚದಾದ್ಯಂತ ಈ ಬ್ಯಾಂಡ್ ಜನಪ್ರಿಯವಾಗಲು ಹಲವು ಕಾರಣಗಳಿವೆ.

ಜಿಯೋ

ಜಿಯೋ

 • Share this:
  ನವದೆಹಲಿ, ಆಗಸ್ಟ್ 08, 2022: 5G ತರಂಗಾಂತರದ ಹರಾಜಿನಿಂದ, ಭಾರತದಲ್ಲಿ (India) 5G ಸೇವೆಗೆ ಅವಕಾಶ ಮುಕ್ತವಾಗಿದೆ. 5G ಗೆ ಅತ್ಯುತ್ತಮವೆಂದು ಪರಿಗಣಿಸಲಾಗಿರುವ ಪ್ರೀಮಿಯಂ 700 MHz ಬ್ಯಾಂಡ್‌ನಲ್ಲಿ 5G ಸ್ಪೆಕ್ಟ್ರಮ್ ಖರೀದಿಸಲು ಎಲ್ಲಾ 22 ಟೆಲಿಕಾಂ (Telecom) ವಲಯಗಳಲ್ಲಿ ಜಿಯೋ (Jio) ಏಕೈಕ ಆಪರೇಟರ್ ಆಗಿದೆ. ಎಲ್ಲಾ ನಿರ್ವಾಹಕರು ಈ ಬ್ಯಾಂಡ್ ಗಾಗಿ (Band) ಕಾಯುತ್ತಿದ್ದರು. ಆದರೆ ಈ ಪ್ರೀಮಿಯಂ 700 MHz ಬ್ಯಾಂಡ್‌ನೊಂದಿಗೆ ಜಿಯೋ 5G ರೇಸ್‌ನಲ್ಲಿ ಆರಂಭಿಕ ಮುನ್ನಡೆ ಸಾಧಿಸಿದೆ. ಪ್ರಪಂಚದಾದ್ಯಂತ 5G ಗೆ 700 MHz ಬ್ಯಾಂಡ್ ಅನ್ನು ಪ್ರಮುಖ ಬ್ಯಾಂಡ್ ಆಗಿ ಬಳಸಲಾಗುತ್ತಿದೆ. ಯುಎಸ್‌ ಮತ್ತು ಯುರೋಪಿಯನ್ ಯೂನಿಯನ್ ಕೂಡ ಇದನ್ನು 5G ಸೇವೆಗಾಗಿ 'ಪ್ರೀಮಿಯಂ ಬ್ಯಾಂಡ್' ಎಂದು ಘೋಷಿಸಿದೆ. ಪ್ರಪಂಚದಾದ್ಯಂತ ಈ ಬ್ಯಾಂಡ್ ಜನಪ್ರಿಯವಾಗಲು ಹಲವು ಕಾರಣಗಳಿವೆ.

  ಟೆಲಿಕಾಂ ವಲಯದ ಪರಿಣಿತರಾದ ರೋಹನ್ ಧಮಿಜಾ ಅವರು 700 MHz ಅನ್ನು ಅದರ ಉನ್ನತ ಒಳಾಂಗಣ ಮತ್ತು ಹೊರಾಂಗಣ ಕವರೇಜ್‌ ಅದರ ಜನಪ್ರಿಯತೆಗೆ ಮುಖ್ಯ ಕಾರಣವೆಂದು ಹೇಳುತ್ತಾರೆ. ಅದರ ಕಡಿಮೆ ಆವರ್ತನ ಬ್ಯಾಂಡ್‌ನಿಂದಾಗಿ, ಅದರ ಸಂಕೇತಗಳು ಕಟ್ಟಡಗಳ ಒಳಗೆ ಎಲ್ಲಿಯಾದರೂ ನುಗ್ಗಬಲ್ಲವು. ಅಂದರೆ ಇದರ ಒಳಾಂಗಣ ಕವರೇಜ್‌ ಅತ್ಯುತ್ತಮವಾಗಿದೆ. ಆದ್ದರಿಂದ 700 MHz ಬ್ಯಾಂಡ್ ಅನ್ನು ಜನನಿಬಿಡ ಪ್ರದೇಶಗಳು ಮತ್ತು ಭಾರೀ ಡೇಟಾ ಬಳಕೆಯ ಪ್ರದೇಶಗಳಿಗೆ ಸೂಕ್ತವೆಂದು ಪರಿಗಣಿಸಲಾಗಿದೆ.

  ಇನ್ನೊಂದು ಕಾರಣವೆಂದರೆ, ಅದರ ಹೊರಾಂಗಣ ವ್ಯಾಪ್ತಿ ದೀರ್ಘವಾಗಿದೆ. 700 MHz ಬ್ಯಾಂಡ್‌ನಲ್ಲಿರುವ ಒಂದು ಟವರ್‌ 10 ಕಿಮೀ ವರೆಗೆ ವ್ಯಾಪ್ತಿಯನ್ನು ಒದಗಿಸುತ್ತದೆ. ಅದರ ಈ ದೀರ್ಘ ವ್ಯಾಪ್ತಿಯ ಕಾರಣ, ನಿರ್ವಾಹಕರು ಕಡಿಮೆ ಟವರ್‌ಗಳನ್ನು ಸ್ಥಾಪಿಸಿದರ ಸಾಲುತ್ತದೆ, ಕಾರ್ಯಾಚರಣೆಯ ವೆಚ್ಚವು ಕಡಿಮೆಯಾಗುತ್ತದೆ. ಆದ್ದರಿಂದ, ದುಬಾರಿಯಾಗಿದ್ದರೂ, ಈ ಬ್ಯಾಂಡ್ ಕೈಗೆಟುಕುವ 5G ಸೇವೆಗಳಿಗೆ ಸೂಕ್ತವಾಗಿದೆ.

  ಇದನ್ನೂ ಓದಿ: Jio: ದೇಶಾದ್ಯಂತ 5G ನೆಟ್‌ವರ್ಕ್‌ ಆರಂಭಕ್ಕೆ ಸಿದ್ಧವಾದ ಜಿಯೋ! ಹೊಸ ಯುಗವನ್ನ ಮುನ್ನಡೆಸಲಿದೆ ಅಂಬಾನಿ ಕಂಪನಿ

  ಹೆಚ್ಚಿನ ಸಂಖ್ಯೆಯ ಜನರು ಹಳ್ಳಿಗಳಲ್ಲಿ ವಾಸಿಸುವ ಭಾರತದಂತಹ ದೇಶದಲ್ಲಿ, 700 MHz ಬ್ಯಾಂಡ್‌ನ ವಿಶಾಲ ವ್ಯಾಪ್ತಿಯು ಗ್ರಾಮೀಣ ಭಾರತವನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಅಂದರೆ, 5G ನಗರಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅದರ ಪ್ರಯೋಜನ ಹಳ್ಳಿಗಳಿಗೂ ತಲುಪುವುದು ಖಚಿತ. ದೂರದ ಗ್ರಾಮೀಣ/ದಟ್ಟಣೆಯ ಪ್ರದೇಶಗಳಲ್ಲಿ ಸಂಪರ್ಕವನ್ನು ಒದಗಿಸಲು 700 MHz ಬ್ಯಾಂಡ್ ಸಹಾಯ ಮಾಡುತ್ತದೆ ಎಂದು ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

  ಮೂರನೆಯ ಮತ್ತು ಪ್ರಮುಖವಾದ ಸಂಗತಿಯೆಂದರೆ, ಡೇಟಾ ಟ್ರಾಫಿಕ್ ನಿರ್ವಹಣೆಯಲ್ಲಿ ಅದು ಪ್ರಾವೀಣ್ಯತೆ ಹೊಂದಿದೆ. ಈ ಬ್ಯಾಂಡ್ ಸ್ವತಂತ್ರ 5G ನೆಟ್‌ವರ್ಕ್‌ಗಳನ್ನು ಬೆಂಬಲಿಸುತ್ತದೆ. 700 MHz ಬ್ಯಾಂಡ್ 1800 MHz ಗಿಂತ 5 ಪಟ್ಟು ಹೆಚ್ಚು ಮತ್ತು 900 MHz ಗಿಂತ ಎರಡು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ತಜ್ಞರು ಒಪ್ಪುತ್ತಾರೆ. 26 GHz ಹೈ-ಫ್ರೀಕ್ವೆನ್ಸಿ ಮಿಲಿಮೀಟರ್ ಬ್ಯಾಂಡ್ ವೇಗವಾಗಿದೆ. ಆದರೆ ಬಹಳ ಸೀಮಿತ ವ್ಯಾಪ್ತಿಯನ್ನು ಹೊಂದಿದೆ. ಅಲ್ಲದೆ, 2100 MHz ಗೆ ಹೋಲಿಸಿದರೆ 700 MHz ನಲ್ಲಿ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸುವುದು ಅಗ್ಗವಾಗಿದೆ.

  ಇದನ್ನೂ ಓದಿ: Independence Day Sale: ಲ್ಯಾಪ್​ಟಾಪ್ ಖರೀದಿಸುವ ಪ್ಲಾನ್​ ಇದೆಯಾ? ಇಲ್ಲಿ ಆಫರ್​ ಬೆಲೆಗೆ ಸಿಗುತ್ತಿದೆ ನೋಡಿ

  ಇತ್ತೀಚೆಗೆ  5G ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿ ರಿಲಯನ್ಸ್‌ ಜಿಯೋ (Reliance Jio) ಅತಿ ಹೆಚ್ಚಿನ ತರಂಗಾಂತರಗಳನ್ನು ಖರೀದಿಸಿದೆ. ಒಟ್ಟು 88078 ಕೋಟಿ ರೂ. ಮೌಲ್ಯದ 5G ತರಂಗಾಂತರಗಳನ್ನು ರಿಲಯನ್ಸ್‌ ಜಿಯೋ ಖರೀದಿ ಮಾಡಿದೆ. 700 ಮೆಗಾಹರ್ಟ್ಸ್‌ (megahertz), 800 ಮೆಗಾಹರ್ಟ್ಸ್‌, 1800 ಮೆಗಾಹರ್ಟ್ಸ್‌, 3300 ಮೆಗಾಹರ್ಟ್ಸ್‌ ಮತ್ತು 26 ಗಿಗಾಹರ್ಟ್ಸ್‌ ಬ್ಯಾಂಡ್‌ಗಳನ್ನು ರಿಲಯನ್ಸ್‌ ಜಿಯೋ ಖರೀದಿ ಮಾಡಿದೆ. ರಿಲಯನ್ಸ್‌ ಜಿಯೋ ಇನ್‌ಫೋಕಾಮ್‌ (Jio Infocomm) ಅಧ್ಯಕ್ಷ ಆಕಾಶ್ ಅಂಬಾನಿ (Akash Ambani) ಮಾತನಾಡಿ “ಭಾರತವು ತಂತ್ರಜ್ಞಾನ ಶಕ್ತಿ ಅಳವಡಿಸಿಕೊಂಡು ವಿಶ್ವದ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಲಿದೆ ಎಂಬುದರಲ್ಲಿ ನಮಗೆ ವಿಶ್ವಾಸವಿದೆ. ಈ ಧ್ಯೇಯವನ್ನು ಇಟ್ಟುಕೊಂಡೇ ನಾವು ಜಿಯೋ (Jio) ಸ್ಥಾಪಿಸಿದ್ದೇವೆ. ಜಿಯೋ 4G ಮೂಲಕ ಹೊರಹೊಮ್ಮಿಸಿದ ವೇಗ, ತೀವ್ರತೆ ಮತ್ತು ಸಾಮಾಜಿಕ ಬದಲಾವಣೆ ಅತ್ಯಂತ ಮಹತ್ವದ್ದು. ಈಗ ಇನ್ನೊಂದು ಮಹತ್ವಾಕಾಂಕ್ಷೆ ಮತ್ತು ಸಂಕಲ್ಪದಿಂದ 5ಜಿ ಯುಗವನ್ನು ಮುನ್ನಡೆಸಲು ಜಿಯೋ ಸಿದ್ಧವಾಗಿದೆ.

  ನಾವು ಇಡೀ ಭಾರತದಲ್ಲಿ 5G ಪರಿಚಯಿಸುವುದರೊಂದಿಗೆ ಆಜಾದಿ ಕಾ ಅಮೃತ್ ಮಹೋತ್ಸವ್ ಅನ್ನು ಆಚರಿಸುತ್ತೇವೆ. ವಿಶ್ವದರ್ಜೆಯ 5ಜಿ ನೆಟ್‌ವರ್ಕ್‌ ಅನ್ನು ಕೈಗೆಟಕುವ ದರದಲ್ಲಿ ಒದಗಿಸಲು ನಾವು ಸಿದ್ಧವಾಗಿದ್ದೇವೆ. ನಾವು ಭಾರತದ ಡಿಜಿಟಲ್ ಕ್ರಾಂತಿಯನ್ನು ವೇಗಗೊಳಿಸುವ ಸೇವೆಗಳು, ವೇದಿಕೆಗಳು ಮತ್ತು ಪರಿಹಾರಗಳನ್ನು ಒದಗಿಸುತ್ತೇವೆ, ವಿಶೇಷವಾಗಿ ಶಿಕ್ಷಣ, ಆರೋಗ್ಯ, ಕೃಷಿ, ಉತ್ಪಾದನೆ ಮತ್ತು ಇ-ಆಡಳಿತದಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ಮತ್ತು ಗೌರವಾನ್ವಿತ ಪ್ರಧಾನ ಮಂತ್ರಿಯವರ ಡಿಜಿಟಲ್ ಇಂಡಿಯಾ ಮಿಷನ್‌ಗೆ ಮತ್ತೊಂದು ಹೆಮ್ಮೆಯ ಕೊಡುಗೆಯನ್ನು ನೀಡುತ್ತೇವೆ” ಎಂದಿದ್ದಾರೆ.
  Published by:Harshith AS
  First published: