ರಿಚಾರ್ಜ್​ ಪ್ಲ್ಯಾನ್​ ಬದಲಿಸಿದ ಜಿಯೋ: ಇನ್ಮುಂದೆ ಪ್ರತಿದಿನ 2GB ಡೇಟಾ​ ಉಚಿತ

398 ರೂ. ರಿಚಾರ್ಜ್​ ಮಾಡಿಕೊಂಡರೆ, ಪ್ರತಿನಿತ್ಯ 2GB ಇಂಟರ್​ನೆಟ್​ ಡೇಟಾ ಹಾಗೂ ಅನಿಯಮಿತ ಕರೆಗಳನ್ನು ಮಾಡಬಹುದು.

zahir | news18
Updated:March 14, 2019, 8:08 PM IST
ರಿಚಾರ್ಜ್​ ಪ್ಲ್ಯಾನ್​ ಬದಲಿಸಿದ ಜಿಯೋ: ಇನ್ಮುಂದೆ ಪ್ರತಿದಿನ 2GB ಡೇಟಾ​ ಉಚಿತ
ಸಾಂದರ್ಭಿಕ ಚಿತ್ರ
zahir | news18
Updated: March 14, 2019, 8:08 PM IST
ರಿಯಲನ್ಸ್ ಜಿಯೋ ಸಂಸ್ಥೆಯು ತನ್ನ ರಿಚಾರ್ಜ್​ ಪ್ಲ್ಯಾನ್​ನಲ್ಲಿ ಕೆಲ ಬದಲಾವಣೆ ಮಾಡಿಕೊಂಡಿದೆ. ಈ ಹಿಂದಿದ್ದ ರಿಚಾರ್ಜ್​ ಮೊತ್ತಕ್ಕೆ ಇದೀಗ ಪ್ರತಿದಿನ 2GB ಹೈಸ್ಪೀಡ್​ ಡೇಟಾ ಸೇವೆಯನ್ನು ಒದಗಿಸಲಿದೆ. 198 ರೂ.ನಿಂದ ಪ್ರಾರಂಭವಾಗುವ ಪ್ಲ್ಯಾನ್​ನಿಂದ 498 ರವರೆಗಿನ ರಿಚಾರ್ಜ್​ನಲ್ಲಿ 2GB ಡೇಟಾ ಹಾಗೂ ಅನಿಯಮಿತ ಕರೆಗಳ ಆಫರ್ ನೀಡಲಾಗಿದೆ. ಇದರಲ್ಲಿ ನಾಲ್ಕು ಪ್ಲಾನ್​ಗಳನ್ನು ತಿಳಿಸಲಾಗಿದ್ದು, ಆಯಾ ರಿಚಾರ್ಜ್​ ಮೊತ್ತಕ್ಕೆ ಅನುಗುಣವಾಗಿ 28 ದಿನಗಳಿಂದ ಹಿಡಿದು 91 ದಿನಗಳವರೆಗಿನ ವ್ಯಾಲಿಟಿಡಿ ಕೂಡ ಸಿಗಲಿದೆ. ಜಿಯೋ ಪ್ರಸ್ತುತಪಡಿಸಿರುವ ಹೊಸ ಯೋಜನೆಗಳು ಹೀಗಿವೆ.

198 ರಿಚಾರ್ಜ್ ಪ್ಲ್ಯಾನ್:

198 ರೂ. ರಿಚಾರ್ಜ್​ ಪ್ಲ್ಯಾನ್​ನಲ್ಲಿ 28 ದಿನಗಳ ವ್ಯಾಲಿಟಿಡಿಯೊಂದಿಗೆ ಪ್ರತಿದಿನ ಹೈಸ್ಪೀಡ್​ 2GB ಇಂಟರ್​ನೆಟ್​ ಡೇಟಾ ಸಿಗಲಿದೆ. ಇದರೊಂದಿಗೆ ಅನಿಯಮಿತ ಕರೆ ಮತ್ತು ಪ್ರತಿದಿನ 100 ಉಚಿತ ಎಸ್​ಎಂಎಸ್​ಗಳು ಲಭ್ಯವಿರಲಿದೆ.

398 ರಿಚಾರ್ಜ್ ಪ್ಲ್ಯಾನ್:

398 ರೂ. ರಿಚಾರ್ಜ್​ ಮಾಡಿಕೊಂಡರೆ, ಪ್ರತಿನಿತ್ಯ ಹೈಸ್ಪೀಡ್​ 2GB ಇಂಟರ್​ನೆಟ್​ ಡೇಟಾ ಹಾಗೂ ಅನಿಯಮಿತ ಕರೆಗಳನ್ನು ಮಾಡಬಹುದು. 70 ದಿನಗಳ ವ್ಯಾಲಿಟಿಡಿ ಹೊಂದಿರುವ ಈ ಪ್ಲಾನ್​ನಲ್ಲಿ ದಿನ 100 ಎಸ್ಎಂಎಸ್​ಗಳನ್ನು ಉಚಿತವಾಗಿ ಕಳುಹಿಸುವ ಅವಕಾಶ ಕೂಡ ಸಿಗಲಿದೆ.

448 ರಿಚಾರ್ಜ್ ಪ್ಲ್ಯಾನ್:
Loading...

ದೀರ್ಘಾವಧಿಯ ವ್ಯಾಲಿಟಿಡಿ ಬೇಕೆನ್ನುವವರು ಈ ಪ್ಲ್ಯಾನ್​ ಅನ್ನು ರಿಚಾರ್ಜ್​ ಮಾಡಿಕೊಳ್ಳಬಹುದು. 448 ರೂ.ವಿನ ಈ ಯೋಜನೆಯಲ್ಲೂ ದಿನನಿತ್ಯ ಹೈಸ್ಪೀಡ್​ 2GB ಡೇಟಾ ಇಂಟರ್​ನೆಟ್​ ಹಾಗೂ 100 ಎಸ್​ಎಂಎಸ್​ಗಳು ಲಭ್ಯವಿರಲಿದೆ. ಅನಿಯಮಿತ ಕರೆಯನ್ನು ಒಳಗೊಂಡ ಈ ಯೋಜನೆಯ ವ್ಯಾಲಿಟಿಡಿ 84 ದಿನಗಳು.

ಇದನ್ನೂ ಓದಿ: ಕ್ಯಾಲಿಫೋರ್ನಿಯಾದಲ್ಲೂ ಕೆ.ಜಿ.ಎಫ್ ಕ್ರೇಜ್? ಕೆಟಿಎಂ ಡ್ಯೂಕ್​ ಆಯ್ತು ರಾಕಿ ಬೈಕ್

498 ರಿಚಾರ್ಜ್ ಪ್ಲ್ಯಾನ್:

498 ರೂ. ಯೋಜನೆ ಕೂಡ ದೀರ್ಘಾವಧಿಯ ವ್ಯಾಲಿಟಿಡಿಯನ್ನು ನೀಡಲಿದೆ. ಇದರಲ್ಲಿ ಪ್ರತಿದಿನ 2GB ಡೇಟಾ ಹಾಗೂ ಅನಿಯಮಿತ ಕರೆ ಸೌಲಭ್ಯವಿರಲಿದೆ. ಹಾಗೆಯೇ 91 ದಿನಗಳ ವ್ಯಾಲಿಟಿಡಿಯಲ್ಲಿ ಪ್ರತಿದಿನ 100 ಎಸ್​ಎಂಎಸ್​ಗಳನ್ನು ಉಚಿತವಾಗಿ ಕಳುಹಿಸುವ ಅವಕಾಶ ಕೂಡ ಇರಲಿದೆ.

ಇದನ್ನೂ ಓದಿ: ಲೈಂಗಿಕ ಕ್ರಿಯೆಯ ಪರಾಕಾಷ್ಠೆ ಮಹಿಳೆಯನ್ನು ಆಸ್ಪತ್ರೆ ಸೇರುವಂತೆ ಮಾಡಿತು..!

First published:March 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626