Reliance Digital: ನಾಳೆಯಿಂದ ರಿಲಯನ್ಸ್ ಡಿಜಿಟಲ್​ನಲ್ಲಿ ಆಕರ್ಷಕ ಕೊಡುಗೆಗಳ 'ಫೆಸ್ಟಿವಲ್ ಆಫ್ ಎಲೆಕ್ಟ್ರಾನಿಕ್ಸ್' ಮಾರಾಟ!

ಎಲ್ಲಕ್ಕಿಂತ ಹೆಚ್ಚಾಗಿ, ಗೃಹೋಪಯೋಗಿ ವಸ್ತುಗಳ ಮೇಲೂ ಹೆಚ್ಚಿನ ಕೊಡುಗೆಗಳಿವೆ! 5,093 ರೂ. ಮೌಲ್ಯದ ಸ್ಯಾಂಡ್ ವಿಚ್ ಮೇಕರ್, ಎಲೆಕ್ಟ್ರಿಕ್ ಕೆಟಲ್ ಮತ್ತು ಹ್ಯಾವೆಲ್ಸ್ ಬಿಸಿ ಮತ್ತು ತಣ್ಣೀರಿನ ಬಾಟಲಿಗಳ ಉಪಾಹಾರ ಕಾಂಬೊವನ್ನು ಕೇವಲ 1,699ರೂಪಾಯಿಗೆ ಪಡೆಯಬಹುದಾಗಿದೆ.

ರಿಲಯನ್ಸ್ ಡಿಜಿಟಲ್

ರಿಲಯನ್ಸ್ ಡಿಜಿಟಲ್

  • Share this:
    ಬೆಂಗಳೂರು (ಅಕ್ಟೋಬರ್ 02): ಈ ಹಬ್ಬದ ಋತುವಿನಲ್ಲಿ ಫೆಸ್ಟಿವಲ್ ಆಫ್ ಎಲೆಕ್ಟ್ರಾನಿಕ್ಸ್ ಜೊತೆ ಆಚರಿಸಲು ರಿಲಯನ್ಸ್ ಡಿಜಿಟಲ್ ಎಲ್ಲರಿಗೂ ಹೊಸ ಕಾರಣವನ್ನು ನೀಡುತ್ತಿದೆ. ನಿಮ್ಮ ರೀತಿಯ ತಂತ್ರಜ್ಞಾನದಲ್ಲಿ ಅದ್ಭುತ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಪಡೆಯಿರಿ. ಈ ಮಾರಾಟವು ಅಕ್ಟೋಬರ್ 3 ರಿಂದ ಎಲ್ಲಾ ರಿಲಾಯನ್ಸ್ ಡಿಜಿಟಲ್, ಮೈ ಜಿಯೋ ಸ್ಟೋರ್ ಗಳು ಮತ್ತು www.reliancedigital.in ಲೈವ್ ಬರಲಿದೆ. ಗ್ರಾಹಕರು ಎಲ್ಲಾ ಎಸ್‌ಬಿಐ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಮೇಲೆ 2,000 ರೂಪಾಯಿ ವರೆಗಿನ ಶೇ. 10 ತ್ವರಿತ ರಿಯಾಯಿತಿ ಪಡೆಯಬಹುದು.

    ಈ ಕೊಡುಗೆಯು ಅಕ್ಟೋಬರ್ 3 ರಿಂದ 12 ರವರೆಗೆ ಅಂಗಡಿಗಳಿಂದ ಮಾಡಿದ ಖರೀದಿಗಳ ಮೇಲೆ ಮತ್ತು ಅಕ್ಟೋಬರ್ 3 ರಿಂದ 10 ರವರೆಗೆ www.reliancedigital.in ನಿಂದ ಖರೀದಿಗಳ ಮೇಲೆ ಅನ್ವಯಿಸುತ್ತದೆ. ಪೇಟಿಎಂ ಮೂಲಕ ಮಾಡಿದ ಕನಿಷ್ಠ 4,999 ರೂ. ಪಾವತಿಯ ಮೇಲೆ ಗ್ರಾಹಕರು 1,000 ರೂ. ವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದು. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಟಿವಿಗಳು, ರೆಫ್ರಿಜರೇಟರ್‌ಗಳು, ವಾಷಿಂಗ್ ಮಷಿನ್‌ಗಳು, ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಗೃಹೋಪಯೋಗಿ ಉಪಕರಣಗಳಂತಹ ವ್ಯಾಪಕ ಶ್ರೇಣಿಯ ವಿಭಾಗಗಳಲ್ಲಿ ವಿಶೇಷ ಮತ್ತು ಆಕರ್ಷಕ ಕೊಡುಗೆಗಳಿವೆ.

    ಟಿವಿಗಳ ಮೇಲೆ ಶೇ. 20 ರಷ್ಟು ಕ್ಯಾಶ್‌ಬ್ಯಾಕ್ ಜೊತೆ 3 ವರ್ಷದ ವಾರಂಟಿಯಿರುವ ಸ್ಯಾಮ್ ಸಂಗ್ ನಿಯೋ ಕ್ಯೂ ಎಲ್ಇಡಿ ಖರೀದಿಸಿದರೆ 37,400 ರೂ. ಮೌಲ್ಯದ ಸ್ಯಾಮ್ ಸಂಗ್ ಸೌಂಡ್ ಬಾರ್ ಅನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯಬಹುದಾಗಿ. ಅಲ್ಲದೆ, LG OLED ಶ್ರೇಣಿಯ ಸ್ಮಾರ್ಟ್ ಟಿವಿಗಳು 3 ವರ್ಷಗಳ ವಾರಂಟಿ ಮತ್ತು ಶೇ. 20 ವರೆಗಿನ ಕ್ಯಾಶ್‌ಬ್ಯಾಕ್ ನೊಂದಿಗೆ ಲಭ್ಯವಿವೆ.

    LG, ಸ್ಯಾಮ್ ಸಂಗ್ ಮತ್ತು ವರ್ಲ್ ಪೂಲ್ ನಂತಹ ಪ್ರಮುಖ ಬ್ರಾಂಡ್ ಗಳಿಂದ ಫ್ರಾಸ್ಟ್-ಫ್ರೀ ರೆಫ್ರಿಜರೇಟರ್ ಗಳು 19,990 ರೂ. ಅದ್ಭುತ ಬೆಲೆಯಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ, ನೀವು ಕೇವಲ 12,490 ರೂಪಾಯಿಯಿಂದ ಪ್ರಾರಂಭವಾಗುವ ಡೈರೆಕ್ಟ್ ಕೂಲ್ ರೆಫ್ರಿಜರೇಟರ್ ಗಳನ್ನೂ ಖರೀದಿಸಬಹುದು. ವಾಷಿಂಗ್ ಮಶೀನ್ ಗಳಲ್ಲಿ, ಟಾಪ್ ಲೋಡ್ ಶ್ರೇಣಿಯು 12,990 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಅಲ್ಲದೇ ಪ್ರಮುಖ ಬ್ರಾಂಡ್​ಗಳ ಫ್ರಂಟ್ ಲೋಡ್ ವಾಷಿಂಗ್ ಮಷಿನ್  ಕೇವಲ 18,990 ರೂ. ಬೆಲೆಯಲ್ಲಿ ಲಭ್ಯವಿದೆ. 37,999 ರೂ. ನಿಂದ ಪ್ರಾರಂಭವಾಗುವ ನಮ್ಮ Corei3 ಲ್ಯಾಪ್ ಟಾಪ್ ಗಳನ್ನು ಖರೀದಿಸಬಹುದಾಗಿದೆ. ಎಚ್ ಪಿ ವಿಕ್ಟಸ್ ಇಂಟೆಲ್ ಗೇಮಿಂಗ್ ಲ್ಯಾಪ್ ಟಾಪ್ ಗಳ ಶ್ರೇಣಿಯು RDಯಲ್ಲಿ ರೂ.75,999ರಿಂದ ಪ್ರಾರಂಭವಾಗುತ್ತದೆ. ಇದಲ್ಲದೆ, ಆಯ್ದ ಲ್ಯಾಪ್ ಟಾಪ್ ಖರೀದಿಗಳಲ್ಲಿ ವೈರ್ ಲೆಸ್ ಆಡಿಯೋ ಮತ್ತು ಐಟಿ ಬಿಡಿಭಾಗದ ಆಡ್-ಆನ್ ಗಳನ್ನು 11,963 ರೂ. ಮೌಲ್ಯದ ಅತ್ಯಾಕರ್ಷಕ ಬೆಲೆಯಲ್ಲಿ ಯಾವುದೇ ವೆಚ್ಚವಿಲ್ಲದ ಇಎಂಐ ಕೊಡುಗೆಗಳೊಂದಿಗೆ ಪಡೆಯಿರಿ.

    ಮೊಬೈಲ್ ಖರೀದಿಯಲ್ಲೂ ಆಕರ್ಷಕ ಕೊಡುಗೆ

    ಮೊಬೈಲ್ ಫೋನ್ ಗಳ ವಿಶೇಷ ಕೊಡುಗೆಗಳಲ್ಲಿ ಇತ್ತೀಚಿನ ಐಫೋನ್ 13ರಲ್ಲಿ 6,000 ರೂ. ಕ್ಯಾಶ್ ಬ್ಯಾಕ್ ಮತ್ತು 3,000 ರೂ. ವಿನಿಮಯ ಬೋನಸ್‌ಗಳು ಸೇರಿವೆ. ಹೆಚ್ಚುವರಿಯಾಗಿ, ಒನ್ ಪ್ಲಸ್ ನಾರ್ಡ್ ಸಿಇ 24,999 ರೂಪಾಯಿಂದ ಲಭ್ಯವಿದೆ.

    ಎಲ್ಲಕ್ಕಿಂತ ಹೆಚ್ಚಾಗಿ, ಗೃಹೋಪಯೋಗಿ ವಸ್ತುಗಳ ಮೇಲೂ ಹೆಚ್ಚಿನ ಕೊಡುಗೆಗಳಿವೆ! 5,093 ರೂ. ಮೌಲ್ಯದ ಸ್ಯಾಂಡ್ ವಿಚ್ ಮೇಕರ್, ಎಲೆಕ್ಟ್ರಿಕ್ ಕೆಟಲ್ ಮತ್ತು ಹ್ಯಾವೆಲ್ಸ್ ಬಿಸಿ ಮತ್ತು ತಣ್ಣೀರಿನ ಬಾಟಲಿಗಳ ಉಪಾಹಾರ ಕಾಂಬೊವನ್ನು ಕೇವಲ 1,699ರೂಪಾಯಿಗೆ ಪಡೆಯಬಹುದಾಗಿದೆ.

    ಇದನ್ನು ಓದಿ: Air India ಹರಾಜಾಗಿರುವುದು ಸುಳ್ಳು, ಶೀಘ್ರದಲ್ಲೇ ಈ ಬಗ್ಗೆ ಸ್ಪಷ್ಟೀಕರಣ ನೀಡುವುದಾಗಿ ತಿಳಿಸಿದ DIPAM

    ಸುಲಭ ಹಣಕಾಸು ಮತ್ತು ಇಎಂಐ ಆಯ್ಕೆಗಳೊಂದಿಗೆ ಎಲೆಕ್ಟ್ರಾನಿಕ್ಸ್ ಹಬ್ಬದ ಅನುಭವವನ್ನು ಈ ವರ್ಷ ರಿಲಯನ್ಸ್ ಡಿಜಿಟಲ್ ಇನ್ನಷ್ಟು ಆಕರ್ಷಕವಾಗಿಸಿದೆ. ಗ್ರಾಹಕರು ತಮ್ಮ ಹತ್ತಿರದ ಸ್ಟೋರ್ ಗಳಿಂದ ಇನ್ ಸ್ಟಾ ಡೆಲಿವರಿ (3 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಡೆಲಿವರಿ) ಮತ್ತು ಸ್ಟೋರ್ ಪಿಕ್-ಅಪ್ ಆಯ್ಕೆಗಳನ್ನು ಸಹ ಪಡೆಯಬಹುದು. ಎಲ್ಲಾ ಸ್ಟೋರ್ ಗಳು ಮತ್ತು ಡೆಲಿವರಿ ಪಾರ್ಟ್​ನರ್ ಗಳು ಗ್ರಾಹಕರು ಮತ್ತು ಉದ್ಯೋಗಿಗಳ ಸುರಕ್ಷತೆಗಾಗಿ ಕೋವಿಡ್-ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದಾರೆ ಎಂದು ರಿಲಯನ್ಸ್ ಡಿಜಿಟಲ್ ತಿಳಿಸಿದೆ. ಹಾಗೆಯೇ ಎಲ್ಲಾ ಕೊಡುಗೆಗಳು ಮತ್ತು ಬೆಲೆಗಳ ಮೇಲೆ ನಿಯಮಗಳು ಮತ್ತು ಷರತ್ತುಗಳು ಅನ್ವಯ ಆಗಲಿವೆ. ಆಫರ್ www.reliancedigital.in ನಲ್ಲಿ ಅಕ್ಟೋಬರ್ 10 ರವರೆಗೆ ಮಾನ್ಯವಾಗಿರುತ್ತದೆ.
    Published by:HR Ramesh
    First published: