Reliance Digital: ಜಿಯೋ ಎಚ್‌ಪಿ ಸ್ಮಾರ್ಟ್ ಸಿಮ್ ಲ್ಯಾಪ್‌ಟಾಪ್ ಆಫರ್‌ನಲ್ಲಿ 100GB ಡೇಟಾ ಉಚಿತ!

ಜಿಯೋ ಎಚ್‌ಪಿ ಸ್ಮಾರ್ಟ್ ಸಿಮ್ ಲ್ಯಾಪ್‌ಟಾಪ್ ಆಫರ್ ಅನ್ನು ರಿಲಯನ್ಸ್ ಡಿಜಿಟಲ್ ಸ್ಟೋರ್‌ಗಳಲ್ಲಿ ಖರೀದಿಸಬಹುದು ಅಥವಾ RelianceDigital.in ಅಥವಾ JioMart.com ಮೂಲಕ ಆನ್‌ಲೈನ್‌ನಲ್ಲಿ ಪಡೆಯಬಹುದು.

ಎಚ್‌ಪಿ ಸ್ಮಾರ್ಟ್ ಸಿಮ್ ಲ್ಯಾಪ್‌ಟಾಪ್

ಎಚ್‌ಪಿ ಸ್ಮಾರ್ಟ್ ಸಿಮ್ ಲ್ಯಾಪ್‌ಟಾಪ್

 • Share this:
  ಜಿಯೋ "ಎಚ್‌ಪಿ ಸ್ಮಾರ್ಟ್ ಸಿಮ್ ಲ್ಯಾಪ್‌ಟಾಪ್" ಆಫರ್ ವಿಶಿಷ್ಟ ರೀತಿಯ ಪ್ರಥಮ ಸ್ಮಾರ್ಟ್ ಎಲ್‌ಟಿಇ ಲ್ಯಾಪ್‌ಟಾಪ್ ಕೊಡುಗೆಯಾಗಿದ್ದು, ಇದು ಎಚ್‌ಪಿ ಸ್ಮಾರ್ಟ್ ಸಿಮ್ನೊಂದಿಗೆ (HP Smart Sim) ಗ್ರಾಹಕರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 100 ಜಿಬಿ ಡೇಟಾದೊಂದಿಗೆ ಜಿಯೋ ಡಿಜಿಟಲ್ ಲೈಫ್‌ನ (Jio Digital Life) ಪ್ರಯೋಜನಗಳನ್ನು ಆನಂದಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಆಯ್ದ ಎಚ್‌ಪಿ ಲ್ಯಾಪ್‌ಟಾಪ್‌ಗಳ (HP Laptop) ಹೊಸ ಗ್ರಾಹಕರಿಗೆ ಈ ಕೊಡುಗೆ ಅನ್ವಯಿಸುತ್ತದೆ. ಹೊಸ ಎಚ್‌ಪಿ ಎಲ್‌ಟಿಇ ಲ್ಯಾಪ್‌ಟಾಪ್‌ ಜೊತೆಗೆ ಹೊಸ ಜಿಯೋ ಸಿಮ್‌ಗೆ (Jio Sim) ಚಂದಾದಾರರಾದಾಗ, ನೀವು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 365 ದಿನಗಳವರೆಗೆ (ರೂ. 1500 ಮೌಲ್ಯದ) 100 ಜಿಬಿ ಡೇಟಾ ಪಡೆಯುತ್ತೀರಿ. ಎಚ್‌ಪಿ ಲ್ಯಾಪ್‌ಟಾಪ್ ಮಾದರಿಗಳಾದ ಎಚ್‌ಪಿ 14ef1003tu ಮತ್ತು ಎಚ್‌ಪಿ 14ef1002tu ನಲ್ಲಿ ಲಭ್ಯವಿರುತ್ತವೆ.

  ಜಿಯೋ ಎಚ್‌ಪಿ ಸ್ಮಾರ್ಟ್ ಸಿಮ್ ಲ್ಯಾಪ್‌ಟಾಪ್ ಆಫರ್ ಅನ್ನು ರಿಲಯನ್ಸ್ ಡಿಜಿಟಲ್ ಸ್ಟೋರ್‌ಗಳಲ್ಲಿ ಖರೀದಿಸಬಹುದು ಅಥವಾ RelianceDigital.in ಅಥವಾ JioMart.com ಮೂಲಕ ಆನ್‌ಲೈನ್‌ನಲ್ಲಿ ಪಡೆಯಬಹುದು.

  ಈ ಸಾಧನವನ್ನು ಖರೀದಿಸಿದಾಗ, ಗ್ರಾಹಕರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಹೊಸ ಜಿಯೋ ಸಿಮ್ ಅನ್ನು ಪಡೆಯಬಹುದು. ಜೊತೆಗೆ ರೂ.1500 ಮೌಲ್ಯದ 100 ಜಿಬಿ ಉಚಿತ ಡೇಟಾ ಸಿಗುತ್ತದೆ. 100 ಜಿಬಿ ಡೇಟಾ ಖಾಲಿಯಾದ ನಂತರ, ಉಳಿದ ಮಾನ್ಯ ಅವಧಿಗೆ ಇಂಟರ್ನೆಟ್ ವೇಗವು 64 ಕೆಬಿಪಿಎಸ್ ಆಗಿರುತ್ತದೆ. ಬಳಕೆದಾರರು ಹೆಚ್ಚಿನ ವೇಗದ 4G ಡೇಟಾಗಾಗಿ MyJio ಅಥವಾ Jio.com ನಿಂದ ಲಭ್ಯವಿರುವ ಡೇಟಾ ಪ್ಯಾಕ್‌ಗಳು/ಪ್ಲಾನ್‌ಗಳ ರೀಚಾರ್ಜ್ ಮಾಡಬಹುದು. ಈ ಮೂಲಕ ಹೆಚ್ಚಿನ ವೇಗದ ಡೇಟಾ ಪಡೆಯಬಹುದು.

  ಇದನ್ನೂ ಓದಿ: Smart Phone: ಕಳೆದು ಹೋದ ಫೋನ್​ನಲ್ಲಿರುವ Google Pay, PhonePe ಖಾತೆಯನ್ನು ನಿರ್ಬಂಧಿಸಲು ಹೀಗೆ ಮಾಡಿ

  Jio Institute: ಮೊದಲ ಬ್ಯಾಚ್‌ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಜಿಯೋ ಇನ್‌ಸ್ಟಿಟ್ಯೂಟ್

  ಇತ್ತೀಚೆಗೆ ಜಿಯೋ ಇನ್‌ಸ್ಟಿಟ್ಯೂಟ್‌ (Jio Institute) ತನ್ನ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳನ್ನು  ಸ್ವಾಗತಿಸಿದೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಅವರ ಪಾಲಕರು, ಜಿಯೋ ಇನ್‌ಸ್ಟಿಟ್ಯೂಟ್‌ನ ಸಿಬ್ಬಂದಿ, ರಿಲಯನ್ಸ್‌ (Reliance) ಕುಟುಂಬದ ಸದಸ್ಯರು ಹಾಗೂ ಉದ್ಯಮ ಮತ್ತು ಶಿಕ್ಷಣ ವಲಯದ ಮುಖ್ಯಸ್ಥರು ಭಾಗವಹಿಸಿದ್ದರು. ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ (artificial intelligence) ಮತ್ತು ಡಿಜಿಟಲ್‌ ಮೀಡಿಯಾ ಮತ್ತು ಮಾರ್ಕೆಟಿಂಗ್‌ (Digital Media And Marketing) ಸಂಹನಗಳಲ್ಲಿ ಒಟ್ಟು ಎರಡು ಸ್ನಾತಕೋತ್ತರ ಪದವಿಯನ್ನು ಜಿಯೋ ಇನ್‌ಸ್ಟಿಟ್ಯೂಟ್‌ ಆರಂಭಿಸುತ್ತಿದೆ. ತರಗತಿಗಳು 21 ಜುಲೈ 2022 ರಿಂದ ಆರಂಭವಾಗಿದೆ.

  ಜಿಯೋ ಇನ್‌ಸ್ಟಿಟ್ಯೂಟ್‌ನ ಮೊದಲ ಸ್ನಾತಕೋತ್ತರ ಪದವಿಯ ಬ್ಯಾಚ್‌ನಲ್ಲಿ ವಿವಿಧ ಪ್ರದೇಶಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿದ್ದಾರೆ. 19 ರಾಜ್ಯಗಳು ಮತ್ತು ದಕ್ಷಿಣ ಆಫ್ರಿಕಾ, ಭೂತಾನ್‌, ನೇಪಾಳ ಮತ್ತು ಘಾನಾ ದೇಶದ ವಿದ್ಯಾರ್ಥಿಗಳು ಮೊದಲ ಬ್ಯಾಚ್‌ನಲ್ಲಿದ್ದಾರೆ. ಇಂಜಿನಿಯರಿಂಗ್‌, ವಿಜ್ಞಾನ, ಕಲೆ, ವಾಣಿಜ್ಯ, ಸಮೂಹ ಮಾಧ್ಯಮ ಮತ್ತು ಮ್ಯಾನೇಜ್‌ಮೆಂಟ್‌ ಸ್ಟಡೀಸ್‌/ಬ್ಯುಸಿನೆಸ್‌ ಅಡ್ಮಿನಿಸ್ಟ್ರೇಶನ್‌ ವಿಭಾಗದಿಂದ ಬಂದ ವಿದ್ಯಾರ್ಥಿಗಳೂ ಇದರಲ್ಲಿದ್ದಾರೆ. ಜಾಹೀರಾತು, ಆಟೋಮೋಟಿವ್, ಬ್ಯಾಂಕಿಂಗ್‌, ನಿರ್ಮಾಣ, ಡಿಜಿಟಲ್‌ ಮಾಧ್ಯಮ, ಎಡ್‌ಟೆಕ್, ಫಿನ್‌ಟೆಕ್‌, ಆರೋಗ್ಯ ಸೇವೆ, ಮಾಹಿತಿ ತಂತ್ರಜ್ಞಾನ, ಲಾಜಿಸ್ಟಿಕ್ಸ್‌, ಸಣ್ಣ ಹಣಕಾಸು, ತೈಲ ಮತ್ತು ಅನಿಲ, ಫಾರ್ಮಾ, ಟೆಲಿಕಾಂ, ಸರ್ಕಾರ, ಎನ್‌ಜಿಒ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸರಾಸರಿ ಸುಮಾರು 4 ವರ್ಷಗಳವರೆಗೆ ಕೆಲಸ ಮಾಡಿದ ಅನುಭವವನ್ನು ವಿದ್ಯಾರ್ಥಿಗಳು ಹೊಂದಿದ್ದಾರೆ.

  ಇದನ್ನೂ ಓದಿ: Maison de Couture ಬ್ರಾಂಡ್ ಅನ್ನು ಪ್ರಾರಂಭಿಸಲಿರುವ ರಿಲಯನ್ಸ್ ಬ್ರಾಂಡ್ಸ್ ಮತ್ತು ಇಟಲಿಯ ಮೈಸನ್ ವ್ಯಾಲೆಂಟಿನೋ
   ಎರಡೂ ಕೋರ್ಸ್‌ಗಳನ್ನು ಜಾಗತಿಕ ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮದ ಪರಿಣಿತರು ಮತ್ತು ಪ್ರೊಫೆಸರ್‌ಗಳು ಬೋಧಿಸಲಿದ್ದಾರೆ. ಪ್ರಾಥಮಿಕ ಬೋಧನೆಯ ಜೊತೆಗೆ ಅಗತ್ಯ ಜೀವನ ಕೌಶಲವನ್ನೂ ರೂಪಿಸುವಲ್ಲಿ ಜಿಯೋ ಇನ್‌ಸ್ಟಿಟ್ಯೂಟ್‌ ಗಮನ ಹರಿಸಿದೆ. ವಿದೇಶದಲ್ಲಿ ಅಧ್ಯಯನ ಅವಧಿಯನ್ನೂ ಜಿಯೋ ಇನ್‌ಸ್ಟಿಟ್ಯೂಟ್‌ ಯೋಜಿಸಿದ್ದು,  ಜನಪ್ರಿಯ ಜಾಗತಿಕ ವಿಶ್ವವಿದ್ಯಾಲಯಗಳಿಗೆ ವಿದ್ಯಾರ್ಥಿಗಳು ತೆರೆದುಕೊಳ್ಳಲಿದ್ದಾರೆ.
  Published by:Harshith AS
  First published: