ರಿಲಾಯನ್ಸ್​​​​ ‘ಡಿಜಿಟಲ್​ ಇಂಡಿಯಾ ಸೇಲ್​‘: ಸ್ವಾತಂತ್ರ್ಯ ದಿನಾಚರಣೆಗೆ ಆಫರ್​ಗಳ ಸುರಿಮಳೆ

ಇನ್ನು ಇಲೆಕ್ಟ್ರಾನಿಕ್ಸ್​ ವಸ್ತುಗಳ ಮೇಲೆ ಶೇ.15ರಷ್ಟು ಕ್ಯಾಶ್​ಬ್ಯಾಕ್​ ಕೊಡುಗೆಯನ್ನು ನೀಡಿದೆ. ಅಂತೆಯೇ, ಶೇ.10 ಎಚ್​​ಡಿಎಫ್​ಸಿ ಕ್ಯಾಶ್​​ಬ್ಯಾಕ್​ ಹಾಗೂ ಶೇ.5ರಷ್ಟು ರಿಲಾಯನ್ಸ್​ ಡಿಜಿಟಲ್​ ಕ್ಯಾಶ್​ಬ್ಯಾಕ್​ ನೀಡುತ್ತಿದೆ.

news18
Updated:August 13, 2019, 2:13 PM IST
ರಿಲಾಯನ್ಸ್​​​​ ‘ಡಿಜಿಟಲ್​ ಇಂಡಿಯಾ ಸೇಲ್​‘: ಸ್ವಾತಂತ್ರ್ಯ ದಿನಾಚರಣೆಗೆ ಆಫರ್​ಗಳ ಸುರಿಮಳೆ
ರಿಲಾಯನ್ಸ್​​​​ ‘ಡಿಜಿಟಲ್​ ಇಂಡಿಯಾ ಸೇಲ್​‘
  • News18
  • Last Updated: August 13, 2019, 2:13 PM IST
  • Share this:
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಿಲಾಯನ್ಸ್​ ಡಿಜಿಟಲ್​ ತನ್ನ ಗ್ರಾಹಕರಿಗಾಗಿ 'ಡಿಜಿಟಲ್​ ಇಂಡಿಯಾ ಸೇಲ್'​ ಅನ್ನು ಆರಂಭಿಸಿದೆ. ಇದರಲ್ಲಿ ಇಲೆಕ್ಟ್ರಾನಿಕ್ಸ್​ ವಸ್ತುಗಳ ಮೇಲೆ ಭರ್ಜರಿ ಆಫರ್​ ನೀಡಿದ್ದು, ಕಡಿಮೆ ಬೆಲೆಯಲ್ಲಿ ಗ್ಯಾಜೆಟ್​ಗಳನ್ನು ಖರೀದಿಸಬಹುದಾಗಿದೆ.

ರಿಲಾಯನ್ಸ್​ 360ಕ್ಕೂ ಹೆಚ್ಚಿನ ಮಳಿಗೆಗಳಿಗೆ ಹಾಗೂ 220ಕ್ಕೂ ಹೆಚ್ಚಿನ ಮೈ ಜಿಯೋ ಮಳಿಗೆಗಳಲ್ಲೂ ಈ ಕೊಡುಗೆ ದೊರಕಲಿದೆ. ಈ ಆಫರ್​ ಆಗಸ್ಟ್​ 10 ರಿಂದ 15ರ ವರೆಗೆ ಲಭ್ಯವಿದೆ.

ರಿಲಾಯನ್ಸ್​ ನೀಡಿರುವ ಈ ಆಫರ್​ನಲ್ಲಿ ಅತ್ಯುತ್ತಮ ಡೀಲ್​ಗಳು, ತಂತ್ರಜ್ನಾನದ ವಿಸ್ತಾರವಾದ ಶ್ರೇಣಿ ಹಾಗೂ ‘ಅಬ್​ ಇಂಡಿಯಾ ಬಲೇಗಾ‘(ಈಗ ಭಾರತ ಬದಲಾಗುತ್ತಿದೆ) ಎನ್ನುವ ಉದ್ದೇಶದಿಂದ ಲಕ್ಷಾಂತರ ಭಾರತೀಯರಿಗೆ  ಇಲೆಕ್ಟ್ರಾನಿಕ್ಸ್​ ವಸ್ತುಗಳನ್ನು ಮಾರಾಟ ಮಾಡಲು ಹೊರಟಿದೆ.

ಇನ್ನು ಇಲೆಕ್ಟ್ರಾನಿಕ್ಸ್​ ವಸ್ತುಗಳ ಮೇಲೆ ಶೇ.15ರಷ್ಟು ಕ್ಯಾಶ್​ಬ್ಯಾಕ್​ ಕೊಡುಗೆಯನ್ನು ನೀಡಿದೆ. ಅಂತೆಯೇ, ಶೇ.10 ಎಚ್​​ಡಿಎಫ್​ಸಿ ಕ್ಯಾಶ್​​ಬ್ಯಾಕ್​ ಹಾಗೂ ಶೇ.5ರಷ್ಟು ರಿಲಾಯನ್ಸ್​ ಡಿಜಿಟಲ್​ ಕ್ಯಾಶ್​ಬ್ಯಾಕ್​ ನೀಡುತ್ತಿದೆ.

ಇದನ್ನೂ ಓದಿ: ‘ನೆರೆ ವೀಕ್ಷಣೆಗೆ ಗೃಹ ಸಚಿವ ಅಮಿತ್ ಶಾ ಬಂದ್ರು ಹೋದ್ರು ಆದರೆ, ಪರಿಹಾರ ಮಾತ್ರ ಬರಲಿಲ್ಲ’; ವಿ.ಎಸ್. ಉಗ್ರಪ್ಪ ಕಿಡಿ

ಗ್ರಾಹಕರಿಗಾಗಿ ಟಿ.ವಿಗಳ ಮೇಲೆ ಭಾರೀ ಕೊಡುಗೆಯನ್ನು ನೀಡಿದೆ. ರೆಫ್ರಿಜರೇಟರ್​ ಹಾಗೂ ವಾಷಿಂಗ್​ ಮಶೀನು, ಎ.ಸಿ, ಲ್ಯಾಪ್​ಟಾಪ್​​ಗಳ ಮೇಲೂ ದರ ಕಡಿತ ಮಾರಾಟ ನಡೆಸುತ್ತಿದೆ. ಜೊತೆಗೆ ಕ್ಯಾಶ್​ಬ್ಯಾಕ್​ ಕೊಡುಗೆಗಳು, ಎಕ್ಸ್​ಚೇಂಜ್​ ಆಫರ್​ಗಳು ಹಾಗೂ ಉಚಿತ ಶಾಪಿಂಗ್​​ ವಾಚರ್​ಗಳನ್ನು ನೀಡುತ್ತಿದೆ

ಒಪ್ಪೋ,ಮೊಟೊ ಸ್ಮಾರ್ಟ್​ಪೋನ್​​ಗಳ ಮೇಲೂ ದರ ಕಡಿತ ಮಾರಾಟ ಮಾಡುತ್ತಿದೆ. ಸ್ವಾತಂತ್ರ್ಯ ದಿನಾಚರಣೆಗೆ ಅಂಗವಾಗಿ ಶೂನ್ಯ ಡೌನ್​ ಪೇಮೆಂಟ್​ ಹಾಗೂ ಇಎಂಐಗಳಲ್ಲಿ ಅದ್ಭುತ ಪೈನಾನ್ಸ್​ ಆಯ್ಕೆಯನ್ನು ನೀಡುತ್ತಿದೆ.
First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...