Reliance AGM 2022: ವಾಟ್ಸ್​ಆ್ಯಪ್​ನಲ್ಲಿಯೇ ಜಿಯೋಮಾರ್ಟ್​ ಉತ್ಪನ್ನಗಳನ್ನ ಶಾಪಿಂಗ್ ಮಾಡುವ ಆಯ್ಕೆ!

ಮೆಟಾ ಮತ್ತು ಜಿಯೋ ಪ್ಲಾಟ್‌ಫಾರ್ಮ್‌ಗಳು ವಾಟ್ಸ್​ಆ್ಯಪ್​​​ನಲ್ಲಿ ಎಂಡ್-ಟು-ಎಂಡ್ ಶಾಪಿಂಗ್ ಅನುಭವವನ್ನು ನೀಡಲಿವೆ. ಗ್ರಾಹಕರು ತಮ್ಮ ವಾಟ್ಸ್​ಆ್ಯಪ್​ ಚಾಟ್‌ನಲ್ಲಿಯೇ ಜಿಯೋಮಾರ್ಟ್​ನಿಂದ (JioMart) ಶಾಪಿಂಗ್ ಮಾಡಬಹುದಾಗಿದೆ. ಈ ಮೂಲಕ ಗ್ರಾಹಕರು ಸುಲಭವಾಗಿ ತಮಗೆ ಬೇಕಾದ ವಸ್ತುವನ್ನು ಖರೀದಿಸಲು ಅವಕಾಶ ಕಲ್ಪಿಸಿದೆ.

ಜಿಯೋಮಾರ್ಟ್

ಜಿಯೋಮಾರ್ಟ್

 • Share this:
  ರಿಲಯನ್ಸ್​ (Reliance) ಇಂದು 2022ರ ವಾರ್ಷಿಕ ಸಾಮಾನ್ಯ ಸಭೆ ಆಯೋಜಿಸುವ ಮೂಲಕ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ. ರಿಲಯನ್ಸ್​ ಇಂಡಸ್ಟ್ರೀಸ್​ನ ಅಧ್ಯಕ್ಷ ಮುಖೇಶ್​ ಅಂಬಾನಿ (Mukesh Ambani) ಇದೇ ದೀಪಾವಳಿ (Diwali) ವೇಳೆಗೆ 5G ಸೇವೆ ಆರಂಭಿಸುವುದಾಗಿ ಮತ್ತು ಕ್ವಾಲ್​ಕ್ಯಾಮ್​ (Qualcomm) ಜೊತೆಗಿನ ಪಾಲುದಾರಿಕೆಯ ಬಗ್ಗೆ ಹೇಳಿಕೊಂಡಿದ್ದಾರೆ. ಇದರೊಂದಿಗೆ ಜಿಯೋ ಫ್ಲಾಟ್​ಫಾರ್ಮ್​ (Jio Platform) ಗಳು ವಾಟ್ಸ್​ಆ್ಯಪ್ (WhatsApp)​ ಮೂಲಕ ಎಂಡ್​-ಟು-ಎಂಡ್​ ಶಾಪಿಂಗ್​ ಅನುಭವ ನೀಡಲಿದೆ ಎಂಬುದನ್ನು ಘೋಷಿಸಿದ್ದಾರೆ.

  ಮೆಟಾ ಮತ್ತು ಜಿಯೋ ಪ್ಲಾಟ್‌ಫಾರ್ಮ್‌ಗಳು ವಾಟ್ಸ್​ಆ್ಯಪ್​​​ನಲ್ಲಿ ಎಂಡ್-ಟು-ಎಂಡ್ ಶಾಪಿಂಗ್ ಅನುಭವವನ್ನು ನೀಡಲಿವೆ. ಗ್ರಾಹಕರು ತಮ್ಮ ವಾಟ್ಸ್​ಆ್ಯಪ್​ ಚಾಟ್‌ನಲ್ಲಿಯೇ ಜಿಯೋಮಾರ್ಟ್​ನಿಂದ (JioMart) ಶಾಪಿಂಗ್ ಮಾಡಬಹುದಾಗಿದೆ. ಈ ಮೂಲಕ ಗ್ರಾಹಕರು ಸುಲಭವಾಗಿ ತಮಗೆ ಬೇಕಾದ ವಸ್ತುವನ್ನು ಖರೀದಿಸಲು ಅವಕಾಶ ಕಲ್ಪಿಸಿದೆ.

  ಗ್ರಾಹಕರು ವಾಟ್ಸ್​ಆ್ಯಪ್​ ಚಾಟ್‌ನಿಂದ ಹೊರಹೋಗದೆಯೇ ಜಿಯೋಮಾರ್ಟ್​ನಿಂದ ವಸ್ತು ಅಥವಾ ಉತ್ಪನ್ನಗಳನ್ನು ಮನಬಂದಂತೆ ಬ್ರೌಸ್ ಮಾಡಬಹುದು, ನಂತರ ಬೇಕಾದ ವಸ್ತುವನ್ನು ಕಾರ್ಟ್‌ಗೆ ಸೇರಿಸಬಹುದು. ಬಳಿಕ ಖರೀದಿಯನ್ನು ಪೂರ್ಣಗೊಳಿಸಲು ಪಾವತಿ ಮಾಡುವ ಆಯ್ಕೆ ತೆರೆಯುತ್ತದೆ. ಇದರ ಮೂಲಕ ಪಾವತಿಸಿದರೆ ಸುಲಭವಾಗಿ ಜಿಯೋಮಾರ್ಟ್​ ವಸ್ತುಗಳು ಮನೆ ಬಾಗಿಲಿಗೆ ತಲುಪುತ್ತದೆ. ಭಾರತೀಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಜಿಯೋ ವಾಟ್ಸ್​ಆ್ಯಪ್​ನಲ್ಲಿ ಜಿಯೋಮಾರ್ಟ್​ ಸೇವೆಯನ್ನು ನೀಡುತ್ತಿದೆ.  ಇದನ್ನೂ ಓದಿ: Vi Data Leak: ವೊಡಾಫೋನ್ ಐಡಿಯಾ ಬಳಕೆದಾರರ ಡೇಟಾ ಸೋರಿಕೆ? ಸ್ಪಷ್ಟನೆ ನೀಡಿದ ಕಂಪನಿ

  ರಿಲಯನ್ಸ್ ಇಂಡಸ್ಟ್ರೀಸ್​ ಅಧ್ಯಕ್ಷ ಮುಖೇಶ್​​ ಅಂಬಾನಿ​ 2022ರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹಲವು ಸಂಗತಿಯನ್ನು ತೆರೆದಿಡುವ ಮೂಲಕ ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡಲಿರುವ ಉತ್ಪನ್ನಗಳನ್ನು ಮತ್ತು ಬೆಳವಣೆಗೆ ಬಗ್ಗೆ ಹೇಳಿದ್ದಾರೆ. ಅದರಂತೆಯೇ ಭಾರತೀಯರು ಬಹುದಿನಗಳಿಂದ ಕಾಯುತ್ತಿರುವ ರಿಲಾಯನ್ಸ್​ ಜಿಯೋ 5ಜಿ ಸೇವೆಯ ಬಗ್ಗೆಯೂ ವಾರ್ಷಿಕ ಸಾಮನ್ಯ ಸಭೆಯಲ್ಲಿ ಹೇಳಿದ್ದಾರೆ. ಇದೇ ವರ್ಷ ದೀಪಾವಳಿ ವೇಳೆಗೆ ಭಾರತಯಲ್ಲಿ ಜಿಯೋ 5ಜಿ ಸೇವೆ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಕೊಲ್ಕತ್ತಾ ಮತ್ತು ಚೆನ್ನೈನಂತಹ ಮೆಟ್ರೋ ನಗರಗಳಿಗೆ ಈ ಸೇವೆ ಬರಲಿದೆ ಎಂದು ಮುಖೇಶ್​ ಅಂಬಾನಿ ಹೇಳಿದ್ದಾರೆ.

  ಜಿಯೋ 5ಜಿ ಸೇವೆಗಾಗಿ ಬಹುತೇಕರು ಕಾಯುತ್ತಿದ್ದಾರೆ. ಅದರಂತೆಯೇ ಏರ್​ಟೆಲ್​, ವೊಡಾಫೋನ್​ ಐಡಿಯಾ ಕೂಡ 5ಜಿ ಸೇವೆಯ ಬಗ್ಗೆ ಅಪ್ಡೇಡ್​ ಕೊಡುತ್ತಿದ್ದಾರೆ. ಒಟ್ಟಾರೆ ಹೇಳಬೇಕಾದರೆ ಟೆಲಿಕಾಂ ಕಂಪನಿಗಳು ಮುಂದಿನ 5ಜಿ ಅಡಿಯಲ್ಲಿ ಕೆಲಸ ಮಾಡುತ್ತಿದೆ. ಅದರಂತೆ ಜಿಯೋ ದೀಪಾವಳಿ ಉಡುಗೊರೆ ಎಂಬಂತೆ ಮೆಟ್ರೋ ನಗರಗಳಲ್ಲಿ 5ಜಿ ಸೇವೆ ಪ್ರಾರಂಭಿಸುವುದಾಗಿ ತಿಳಿಸಿದೆ. ಡಿಸೆಂಬರ್ 2023 ರ ವೇಳೆಗೆ 18 ತಿಂಗಳುಗಳಲ್ಲಿ ಇಡೀ ಭಾರತವನ್ನು ಆವರಿಸಲು ಇತರ ನಗರಗಳು ಮತ್ತು ಪಟ್ಟಣಗಳಿಗೆ ಹಂತ ಹಂತವಾಗಿ ವಿಸ್ತರಿಸಲಿದೆ. ವೇಗದ ಇಂಟರ್​ನೆಟ್​ ಸೇವೆಯನ್ನು ನೀಡುವುದಾಗಿ ಜಿಯೋ ಹೇಳಿಕೊಂಡಿದೆ.

  ಇದನ್ನೂ ಓದಿ: Mukesh Ambani: 3D ವರ್ಲ್ಡ್ ಆಫ್ ಮೆಟಾವರ್ಸ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಭೆ! ನೀವೂ ಹೀಗೆ ಭಾಗವಹಿಸಿ

  ಜಿಯೋದ 5G ನೆಟ್‌ವರ್ಕ್ 4G ನೆಟ್‌ವರ್ಕ್‌ಗಿಂತ ವೇಗವಾಗಿರುತ್ತದೆ. ಸ್ಟ್ಯಾಂಡ್-ಅಲೋನ್ 5G ಆರ್ಕಿಟೆಕ್ಚರ್‌ನ ಮೂರು ಪಟ್ಟು ಪ್ರಯೋಜನ, ಸ್ಪೆಕ್ಟ್ರಮ್ ಮತ್ತು ಕ್ಯಾರಿಯರ್ ಒಟ್ಟುಗೂಡಿಸುವಿಕೆಯ ತಂತ್ರಜ್ಞಾನವನ್ನು ಹೊಂದಿರಲಿದೆ. ಜಿಯೋ 5G ಸೇವೆಯ ವ್ಯಾಪ್ತಿಯನ್ನು ಎಲ್ಲೆಡೆ ಪಸರಿಸಲಿದೆ.

  ಜಿಯೋ ಸ್ಟ್ಯಾಂಡ್-ಅಲೋನ್ 5G  ಸೇವೆಯೊಂದಿಗೆ, 5G ಧ್ವನಿ, ಎಡ್ಜ್ ಕಂಪ್ಯೂಟಿಂಗ್ ಮತ್ತು ನೆಟ್‌ವರ್ಕ್ ಸ್ಲೈಸಿಂಗ್ ಮತ್ತು ಮೆಟಾವರ್ಸ್‌ನಂತಹ ಹೊಸ ಮತ್ತು ಶಕ್ತಿಯುತ ಸೇವೆಗಳನ್ನು ನೀಡಲಿದೆ. ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ ಹಲವಾರು ಸಂಗತಿಗಗಳನ್ನ ತೆರೆದಿಟ್ಟಿದೆ.

  ದೇಶದ ಉದ್ದಗಲಕ್ಕೂ ಟ್ರೂ-5G ನೆಟ್‌ವರ್ಕ್ ನಿರ್ಮಿಸಲು ಜಿಯೋ ಮುಂದಾಗಿದೆ. ಅದಕ್ಕಾಗಿ ಒಟ್ಟು 2 ಲಕ್ಷ ಕೋಟಿ ಹೂಡಿಕೆಯನ್ನು ಮಾಡಿದೆ.  ಜಿಯೋ ಸ್ಥಳೀಯವಾಗಿ ಎಂಡ್-ಟು-ಎಂಡ್ 5G ಸ್ಟಾಕ್ ಅನ್ನು ಅಭಿವೃದ್ಧಿಪಡಿಸಿದೆ. ಕ್ವಾಂಟಮ್ ಸೆಕ್ಯುರಿಟಿಯಂತಹ ಸುಧಾರಿತ ವೈಶಿಷ್ಟ್ಯಗಳ ಬೆಂಬಲದೊಂದಿಗೆ ಡಿಜಿಟಲ್‌ನಲ್ಲಿ ನಿರ್ವಹಿಸಲಾಗಿದೆ.

  Jio5G ನೆಟ್‌ವರ್ಕ್‌ನಲ್ಲಿ ಈ ಮೇಡ್-ಇನ್-ಇಂಡಿಯಾ 5G ಸ್ಟಾಕ್ ಅನ್ನು ಈಗಾಗಲೇ ನಿಯೋಜಿಸಿದೆ. ಮೊದಲ ದಿನದಿಂದಲೇ ನೂರಾರು ಮಿಲಿಯನ್ ಬಳಕೆದಾರರಿಗೆ ಈ ಸೇವೆ ಸಿಗಲಿದೆ.

  5G ಸೇವೆಯೊಂದಿಗೆ, ಜಿಯೋ ಸಂಪರ್ಕಿತ ಆರ್ಟಿಫಿಶಿಯಲ್​ ಇಂಟಲಿಜನ್ಸ್ ಒಳಗೊಂಡ ಸ್ಮಾರ್ಟ್​ ಸೆನ್ಸಾರ್​ಗಳನ್ನು ಪ್ರಾರಂಭಿಸುವುದಾಗಿ ಸಭೆಯಲ್ಲಿ ತಿಳಿಸಿದೆ. ಜೊತೆಗೆ ಇಂಟರ್ನೆಟ್ ಆಫ್ ಥಿಂಗ್ಸ್ ಅನ್ನು ಪ್ರಚೋದಿಸುತ್ತದೆ. ಇದು ನಾಲ್ಕನೇ ಕೈಗಾರಿಕಾ ಕ್ರಾಂತಿಯನ್ನು ಉತ್ತೇಜಿಸಲಿದೆ.

  ಜಿಯೋ ಮುಂದಿನ ದಿನಗಳಲ್ಲಿ ಗ್ರಾಹಕರಿಗಾಗಿ ಅತ್ಯುನ್ನತ ಡೇಟಾದೊಂದಿಗೆ.  ಎಲ್ಲಾ ಸ್ಥಳವನ್ನು ಸಂಪರ್ಕಿಸುತ್ತದೆ ಎಂದು ರಿಲಯನ್ಸ್​ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹೇಳಿದೆ.
  Published by:Harshith AS
  First published: