Reliance AGM 2022: ಕೈಗೆಟುಕುವ ದರದಲ್ಲಿ 5ಜಿ ಸ್ಮಾರ್ಟ್ ಫೋನ್ಸ್! ರಿಲಯನ್ಸ್ ಕನಸಿಗೆ ಗೂಗಲ್ ಬೆಂಬಲ

ಯುವ ಜನರ ಕನಸನ್ನು ನನಸು ಮಾಡಲು ರಿಲಯನ್ಸ್ ಜಿಯೋ ಮುಂದಾಗಿದೆ. ಕೈಗೆಟುಕುವ ದರದಲ್ಲಿ ದೇಶದ ಜನರಿಗೆ 5ಜಿ ಸ್ಮಾರ್ಟ್‌ ಫೋನ್‌ಗಳನ್ನು ದೊರಕಿಸಿ ಕೊಡಲು ರಿಲಯನ್ಸ್ ಜಿಯೋ ಮುಂದಾಗಿದೆ. ರಿಲಯನ್ಸ್‌ ಜಿಯೋದ ಈ ಮಹತ್ವಾಕಾಂಕ್ಷೆ ಕನಸು ನನಸು ಮಾಡಲು ಗೂಗಲ್ (Google) ಕೈಜೋಡಿಸುತ್ತಿದೆ.

ಜಿಯೋ ಡಿಜಿಟಲ್

ಜಿಯೋ ಡಿಜಿಟಲ್

  • Share this:
ಮುಂಬೈ: 4ಜಿ (4G) ಹಳೆದಾಯ್ತು, ಈಗೇನಿದ್ದರೂ 5ಜಿ (5G) ಜಮಾನ! ನಮಗೆ ಯಾವಾಗ 5ಜಿ ನೆಟ್‌ವರ್ಕ್ (Network) ಸಿಗುತ್ತಪ್ಪಾ ಅಂತ ಯುವಜನರು (Youths) ಕಾಯುತ್ತಿದ್ದಾರೆ. 5ಜಿ ನೆಟ್‌ವರ್ಕ್ ಜೊತೆಗೆ 5ಜಿ ಮೊಬೈಲ್ (5G Mobile) ಸಿಕ್ಕಿಬಿಟ್ಟರೆ ಸಂತೋಷಕ್ಕೆ ಪಾರವೇ ಇಲ್ಲ. ಇವುಗಳ ಜೊತೆಗೆ ಕೈಗೆಟುಕುವ ದರದಲ್ಲಿ (Price) 5ಜಿ ಸ್ಮಾರ್ಟ್‌ಫೋನ್ (Smart Phones) ಸಿಕ್ಕಿಬಿಟ್ಟರೆ ಸ್ವರ್ಗಕ್ಕೆ ಮೂರೇ ಗೇಣು! ಇಂತಹ ಯುವ ಜನರ ಕನಸನ್ನು ನನಸು ಮಾಡಲು ರಿಲಯನ್ಸ್ ಜಿಯೋ (Reliance Jio) ಮುಂದಾಗಿದೆ. ಕೈಗೆಟುಕುವ ದರದಲ್ಲಿ ದೇಶದ ಜನರಿಗೆ 5ಜಿ ಸ್ಮಾರ್ಟ್‌ ಫೋನ್‌ಗಳನ್ನು ದೊರಕಿಸಿ ಕೊಡಲು ರಿಲಯನ್ಸ್ ಜಿಯೋ ಮುಂದಾಗಿದೆ. ರಿಲಯನ್ಸ್‌ ಜಿಯೋದ ಈ ಮಹತ್ವಾಕಾಂಕ್ಷೆ ಕನಸು ನನಸು ಮಾಡಲು ಗೂಗಲ್ (Google) ಕೈಜೋಡಿಸುತ್ತಿದೆ.

ಗೂಗಲ್ ಜೊತೆ ರಿಲಯನ್ಸ್ ಜಿಯೋ ಕೆಲಸ

ರಿಲಯನ್ಸ್ ಜಿಯೋ ಭಾರತಕ್ಕಾಗಿ ಕೈಗೆಟುಕುವ 5G ಸ್ಮಾರ್ಟ್‌ಫೋನ್‌ಗಳನ್ನು ಅಭಿವೃದ್ಧಿಪಡಿಸಲು ಗೂಗಲ್‌ನೊಂದಿಗೆ ಕೆಲಸ ಮಾಡುತ್ತಿದೆ ಎಂದು ರಿಲಯನ್ಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಕಂಪನಿಯ 45 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ತಮ್ಮ ಮುಖ್ಯ ಭಾಷಣದಲ್ಲಿ ಈ ವಿಚಾರವನ್ನು ಅವರು ಪ್ರಸ್ತಾಪಿಸಿದ್ದಾರೆ.

RIL ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ


ಅತ್ಯಂತ ವೇಗದ ನೆಟ್‌ವರ್ಕ್ ನೀಡುವ ಭರವಸೆ

ಕಳೆದ ವರ್ಷ ಜಿಯೋಫೋನ್ ನೆಕ್ಸ್ಟ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ರಿಲಯನ್ಸ್ ಈ ಹಿಂದೆ ಗೂಗಲ್‌ನೊಂದಿಗೆ ಸಹಕರಿಸಿತ್ತು. ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನ ಅತ್ಯಂತ ಸುಧಾರಿತ ಆವೃತ್ತಿಯನ್ನು ಗೂಗಲ್ ಮತ್ತು ಜಿಯೋ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿದೆ. ವಿಶೇಷವಾಗಿ ಇದನ್ನು ಭಾರತೀಯ ಮಾರುಕಟ್ಟೆಗಾಗಿ ವಿನ್ಯಾಸಗೊಳಿಸಲಾಗಿದ್ದು, ವಿಶ್ವದ ಅತ್ಯಂತ ವೇಗದ ನೆಟ್‌ವರ್ಕ್ ಅನ್ನು ಹೊಂದಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Reliance AGM 2022: ಕ್ವಾಲ್​ಕಾಮ್ ಜೊತೆ ಪಾಲುದಾರಿಕೆಯನ್ನು ಘೋಷಿಸಿದ ಮುಖೇಶ್ ಅಂಬಾನಿ!

ಗೂಗಲ್ ಕ್ಲೌಡ್‌ನ ಸುಧಾರಿತ ತಂತ್ರಜ್ಞಾನ ಬಳಕೆ

ಜುಲೈ 2021 ರಲ್ಲಿ ಗೂಗಲ್ ಮತ್ತು ಜಿಯೋ ಪ್ಲಾಟ್‌ಫಾರ್ಮ್‌ಗಳು ಜಂಟಿಯಾಗಿ ಕೈಗೆಟುಕುವ ಸ್ಮಾರ್ಟ್‌ಫೋನ್ ಅನ್ನು ಅಭಿವೃದ್ಧಿಪಡಿಸಲು ವಾಣಿಜ್ಯ ಒಪ್ಪಂದವನ್ನು ಮಾಡಿಕೊಂಡವು. ಗೂಗಲ್ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ 4.5 ಶತಕೋಟಿ ಡಾಲರ್ ಹೂಡಿಕೆ ಮಾಡಿತು, ಸಂಸ್ಥೆಯಲ್ಲಿ 7.73 ಶೇಕಡಾ ಪಾಲನ್ನು ತೆಗೆದುಕೊಂಡಿತು. ಜಿಯೋದ ಖಾಸಗಿ 5G ಸ್ಟಾಕ್ ಮತ್ತು ಇತರ 5G-ಸಕ್ರಿಯಗೊಳಿಸಿದ ವ್ಯವಸ್ಥೆಯನ್ನು ದೇಶೀಯ ಮತ್ತು ಜಾಗತಿಕ ಬಳಕೆದಾರರಿಗೆ ನೀಡಲು ನಾವು ಗೂಗಲ್ ಕ್ಲೌಡ್‌ನ ಸುಧಾರಿತ ಸಾಮರ್ಥ್ಯಗಳನ್ನು ಸಹ ಬಳಸಿಕೊಳ್ಳುತ್ತೇವೆ ಎಂದು ಮುಕೇಶ್ ಅಂಬಾನಿ ತಿಳಿಸಿದ್ದಾರೆ.\

ಸುಧಾರಿತ ತಂತ್ರಜ್ಞಾನ ನೀಡುವ ಭರವಸೆ

ಎರಡೂ ಕಂಪನಿಗಳು ಜಿಯೋನ 5G ನೆಟ್‌ವರ್ಕ್ ಮತ್ತು AI/ML, ಡೇಟಾ ಮತ್ತು ಅನಾಲಿಟಿಕ್ಸ್‌ನಲ್ಲಿ Google ಕ್ಲೌಡ್‌ನ ಪರಿಣತಿಯಿಂದ ನಡೆಸಲ್ಪಡುವ ಗೇಮಿಂಗ್, ಹೆಲ್ತ್‌ಕೇರ್, ಶಿಕ್ಷಣ ಮತ್ತು ಮನರಂಜನೆ ಸೇರಿದಂತೆ ಹಲವಾರು ವರ್ಟಿಕಲ್‌ಗಳಲ್ಲಿ 5G ಎಡ್ಜ್ ಕಂಪ್ಯೂಟಿಂಗ್ ಪರಿಹಾರಗಳ ಪೋರ್ಟ್‌ಫೋಲಿಯೊವನ್ನು ತರಲು ಸಹಕರಿಸುವುದಾಗಿ ಹೇಳಿದರು.

ಪ್ರತಿಷ್ಠಿತ ಕಂಪನಿಗಳೊಂದಿಗೆ ಒಪ್ಪಂದ

"ಎರಿಕ್ಸನ್, ನೋಕಿಯಾ, ಸ್ಯಾಮ್ಸಂಗ್ ಮತ್ತು ಸಿಸ್ಕೊದಂತಹ ಪ್ರಮುಖ ಜಾಗತಿಕ ನೆಟ್‌ವರ್ಕ್ ತಂತ್ರಜ್ಞಾನ ಪೂರೈಕೆದಾರರೊಂದಿಗೆ ನಾವು ಸುಸ್ಥಾಪಿತ ಸಂಬಂಧವನ್ನು ಹೊಂದಿದ್ದೇವೆ" ಎಂದು ಮುಖೇಶ್ ಅಂಬಾನಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Reliance AGM 2022 Live Updates: ದೀಪಾವಳಿಗೆ ಭಾರತೀಯರಿಗೆ ಬಂಪರ್! ಜಿಯೋ 5ಜಿ ಆರಂಭ

ಕ್ವಾಲ್ಕಾಮ್ ಸಿಇಒ ಹೇಳಿದ್ದೇನು?

ಇನ್ನು ಕಾಲ್ಕಾಮ್ ಸಿಇಒ ಕ್ರಿಸ್ಟಿಯಾನೊ ಅಮನ್ ಮಾತನಾಡಿ, "ಭಾರತವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವಾಗ, ಜಿಯೋ ಜೊತೆಗೆ, ನಾಗರಿಕರು ಮತ್ತು ವ್ಯವಹಾರಗಳ ಯಶಸ್ಸನ್ನು ಶಕ್ತಗೊಳಿಸುವ ಡಿಜಿಟಲ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ. ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಲ್ಪಿಸಿದ ಹೊಸ ಭಾರತವನ್ನು ಕಟ್ಟಲು ನಾವು ಶ್ರಮಿಸುತ್ತೇವೆ ಅಂತ ಅವರು ಭರವಸೆ ನೀಡಿದ್ರು.
Published by:Annappa Achari
First published: