Reliance AGM 2022: ಕ್ವಾಲ್​ಕಾಮ್ ಜೊತೆ ಪಾಲುದಾರಿಕೆಯನ್ನು ಘೋಷಿಸಿದ ಮುಖೇಶ್ ಅಂಬಾನಿ!

Reliance AGM: ಕ್ವಾಲ್​ಕಾಮ್​ ಜೊತೆಗೆ ಪಾಲುದಾರಿಕೆ ಹೊಂದುವ ಮೂಲಕ, ಜನಪ್ರಿಯ ಕಂಪನಿಗಳಾದ  ಮೆಟಾ (Meta), ಗೂಗಲ್ (Google)​, ಮೈಕ್ರೋಸಾಫ್ಟ್​​, ನೋಕಿಯಾ (Nokia), ಸ್ಯಾಮ್​ಸಂಗ್​ (Samsung), ಎರಿಕ್ಸನ್​ ಮತ್ತು ಸಿಸ್ಕೋ ಇದರೊಂದಿಗೆ ಸೇರಿವೆ.

ಮುಕೇಶ್​ ಅಂಬಾನಿ

ಮುಕೇಶ್​ ಅಂಬಾನಿ

 • Share this:
  ರಿಲಯನ್ಸ್​ ಇಂಡಸ್ಟ್ರೀಸ್​ ಅಧ್ಯಕ್ಷ ಮುಖೇಶ್​​ ಅಂಬಾನಿ (Mukesh Ambani) ಚಿಪ್​ ಮೇಕರ್​ ಕ್ವಾಲ್​ಕಾಮ್​  (Qualcomm) ಜೊತೆಗೆ ಪಾಲುದಾರಿಗೆ ಹೊಂದುವ ಬಗ್ಗೆ ಘೋಷಿಸಿದ್ದಾರೆ. ರಿಲಯನ್ಸ್​ 2022ರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು , ಇದೇ ವರ್ಷ ದೀಪಾವಳಿ (Diwali) ವೇಳೆಗೆ ಮೆಟ್ರೋ (Metro) ನಗರಗಳಲ್ಲಿ 5ಜಿ ಸೇವೆ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಅದರೊಂದಿಗೆ ಕ್ವಾಲ್​ಕಾಮ್​ ಜೊತೆಗೆ ಪಾಲುದಾರಿಕೆ ಹೊಂದುವ ಮೂಲಕ, ಜನಪ್ರಿಯ ಕಂಪನಿಗಳಾದ  ಮೆಟಾ (Meta), ಗೂಗಲ್ (Google)​, ಮೈಕ್ರೋಸಾಫ್ಟ್​​, ನೋಕಿಯಾ (Nokia), ಸ್ಯಾಮ್​ಸಂಗ್​ (Samsung), ಎರಿಕ್ಸನ್​ ಮತ್ತು ಸಿಸ್ಕೋ ಇದರೊಂದಿಗೆ ಸೇರಿವೆ ಎಂದಿದ್ದಾರೆ.

  ಕ್ವಾಲ್​ಕಾಮ್​ ಸಿಇಓ ಕ್ರಿಸ್ಟಿಯಾನೊ ಅಮನ್​ ಮಾತನಾಡಿ, ‘‘5ಜಿ ಸ್ಪ್ರೆಕ್ಟ್ರಮ್​ ಹರಾಜು ಪ್ರಕ್ರಿಯೆಗಳು ನಡೆಯುತ್ತಿವೆ. ಜಿಯೋ ಉನ್ನತ ಹಂತದಲ್ಲಿ ಡಿಜಿಟಲ್​ ಮಾಹಿತಿಯನ್ನು ರವಾನಿಸುತ್ತಿದೆ. ಜೊತೆಗೆ 5ಜಿ ಸೇವೆಯಲ್ಲಿ 700ಎಮ್​ಹೆಚ್​ಝೆಡ್​ ಸೇವೆಯನ್ನು ನೀಡುವ ಮೂಲಕ ಗುರುತಿಸಿಕೊಂಡಿದೆ‘‘ ಎಂದು ಹೇಳಿದರು.

  ನಂತರ ಮಾತು ಮುಂದುವರಿಸಿದ ಅವರು, ‘‘1,000 ನಗರಗಳನ್ನು ತಲುಪುವ ಜಿಯೋದ ಯೋಜನೆಗಳು ಮಹತ್ವಾಕಾಂಕ್ಷೆಯಾಗಿದೆ, ಆದರೆ ಅದರ ಕಾರ್ಯಗತಗೊಳಿಸುವ ಸಾಮರ್ಥ್ಯದಲ್ಲಿ ನನಗೆ ವಿಶ್ವಾಸವಿದೆ. 2016 ರಲ್ಲಿ 4G ರೋಲ್‌ಔಟ್ ಸಮಯದಲ್ಲಿ, ನಮ್ಮ ಪಾಲುದಾರಿಕೆಯು ಗ್ರಾಹಕರು ಮತ್ತು ಸಾಧನಗಳನ್ನು ಒಳಗೊಂಡಿತ್ತು. ಜೊತೆಗೆ LTE ಡೇಟಾ ಸೇವೆಗಳನ್ನು ಒಳಗೊಂಡಂತೆ ಉತ್ತಮ ಸೇವೆ ಒದಗಿಸಿತು’’ ಎಂದು ಹೇಳಿದ್ದಾರೆ.

  ರಿಲಯನ್ಸ್​ 2022ರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹಲವು ಸಂಗತಿಯನ್ನು ತೆರೆದಿಡುವ ಮೂಲಕ ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡಲಿರುವ ಉತ್ಪನ್ನಗಳನ್ನು ಮತ್ತು ಬೆಳವಣೆಗೆ ಬಗ್ಗೆ ಹೇಳಿದ್ದಾರೆ. ಅದರಂತೆಯೇ ಭಾರತೀಯರು ಬಹುದಿನಗಳಿಂದ ಕಾಯುತ್ತಿರುವ ರಿಲಾಯನ್ಸ್​ ಜಿಯೋ 5ಜಿ ಸೇವೆಯ ಬಗ್ಗೆಯೂ ವಾರ್ಷಿಕ ಸಾಮನ್ಯ ಸಭೆಯಲ್ಲಿ ಹೇಳಿದ್ದಾರೆ. ಇದೇ ವರ್ಷ ದೀಪಾವಳಿ ವೇಳೆಗೆ ಭಾರತಯಲ್ಲಿ ಜಿಯೋ 5ಜಿ ಸೇವೆ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಕೊಲ್ಕತ್ತಾ ಮತ್ತು ಚೆನ್ನೈನಂತಹ ಮೆಟ್ರೋ ನಗರಗಳಿಗೆ ಈ ಸೇವೆ ಬರಲಿದೆ ಎಂದು ಮುಖೇಶ್​ ಅಂಬಾನಿ ಹೇಳಿದ್ದಾರೆ.

  ಜಿಯೋ 5ಜಿ ಸೇವೆಗಾಗಿ ಬಹುತೇಕರು ಕಾಯುತ್ತಿದ್ದಾರೆ. ಅದರಂತೆಯೇ ಏರ್​ಟೆಲ್​, ವೊಡಾಫೋನ್​ ಐಡಿಯಾ ಕೂಡ 5ಜಿ ಸೇವೆಯ ಬಗ್ಗೆ ಅಪ್ಡೇಡ್​ ಕೊಡುತ್ತಿದ್ದಾರೆ. ಒಟ್ಟಾರೆ ಹೇಳಬೇಕಾದರೆ ಟೆಲಿಕಾಂ ಕಂಪನಿಗಳು ಮುಂದಿನ 5ಜಿ ಅಡಿಯಲ್ಲಿ ಕೆಲಸ ಮಾಡುತ್ತಿದೆ. ಅದರಂತೆ ಜಿಯೋ ದೀಪಾವಳಿ ಉಡುಗೊರೆ ಎಂಬಂತೆ ಮೆಟ್ರೋ ನಗರಗಳಲ್ಲಿ 5ಜಿ ಸೇವೆ ಪ್ರಾರಂಭಿಸುವುದಾಗಿ ತಿಳಿಸಿದೆ. ಡಿಸೆಂಬರ್ 2023 ರ ವೇಳೆಗೆ 18 ತಿಂಗಳುಗಳಲ್ಲಿ ಇಡೀ ಭಾರತವನ್ನು ಆವರಿಸಲು ಇತರ ನಗರಗಳು ಮತ್ತು ಪಟ್ಟಣಗಳಿಗೆ ಹಂತ ಹಂತವಾಗಿ ವಿಸ್ತರಿಸಲಿದೆ. ವೇಗದ ಇಂಟರ್​ನೆಟ್​ ಸೇವೆಯನ್ನು ನೀಡಲಿದೆ.

  -ಜಿಯೋದ 5G ನೆಟ್‌ವರ್ಕ್ 4G ನೆಟ್‌ವರ್ಕ್‌ಗಿಂತ ವೇಗವಾಗಿರುತ್ತದೆ. ಸ್ಟ್ಯಾಂಡ್-ಅಲೋನ್ 5G ಆರ್ಕಿಟೆಕ್ಚರ್‌ನ ಮೂರು ಪಟ್ಟು ಪ್ರಯೋಜನ, ಸ್ಪೆಕ್ಟ್ರಮ್ ಮತ್ತು ಕ್ಯಾರಿಯರ್ ಒಟ್ಟುಗೂಡಿಸುವಿಕೆಯ ತಂತ್ರಜ್ಞಾನವನ್ನು ಹೊಂದಿರಲಿದೆ. ಜಿಯೋ 5G ಸೇವೆಯ ವ್ಯಾಪ್ತಿಯನ್ನು ಎಲ್ಲೆಡೆ ಪಸರಿಸಲಿದೆ.

  -ಜಿಯೋ ಸ್ಟ್ಯಾಂಡ್-ಅಲೋನ್ 5G  ಸೇವೆಯೊಂದಿಗೆ, 5G ಧ್ವನಿ, ಎಡ್ಜ್ ಕಂಪ್ಯೂಟಿಂಗ್ ಮತ್ತು ನೆಟ್‌ವರ್ಕ್ ಸ್ಲೈಸಿಂಗ್ ಮತ್ತು ಮೆಟಾವರ್ಸ್‌ನಂತಹ ಹೊಸ ಮತ್ತು ಶಕ್ತಿಯುತ ಸೇವೆಗಳನ್ನು ನೀಡಲಿದೆ. ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ ಹಲವಾರು ಸಂಗತಿಗಳನ್ನ ತೆರೆದಿಟ್ಟಿದೆ.

  ಇದನ್ನೂ ಓದಿ: Vi Data Leak: ವೊಡಾಫೋನ್ ಐಡಿಯಾ ಬಳಕೆದಾರರ ಡೇಟಾ ಸೋರಿಕೆ? ಸ್ಪಷ್ಟನೆ ನೀಡಿದ ಕಂಪನಿ

  -ದೇಶದ ಉದ್ದಗಲಕ್ಕೂ ಟ್ರೂ-5G ನೆಟ್‌ವರ್ಕ್ ನಿರ್ಮಿಸಲು ಜಿಯೋ ಮುಂದಾಗಿದೆ. ಅದಕ್ಕಾಗಿ ಒಟ್ಟು 2 ಲಕ್ಷ ಕೋಟಿ ಹೂಡಿಕೆಯನ್ನು ಮಾಡಿದೆ.

  -ಜಿಯೋ ಸ್ಥಳೀಯವಾಗಿ ಎಂಡ್-ಟು-ಎಂಡ್ 5G ಸ್ಟಾಕ್ ಅನ್ನು ಅಭಿವೃದ್ಧಿಪಡಿಸಿದೆ. ಕ್ವಾಂಟಮ್ ಸೆಕ್ಯುರಿಟಿಯಂತಹ ಸುಧಾರಿತ ವೈಶಿಷ್ಟ್ಯಗಳ ಬೆಂಬಲದೊಂದಿಗೆ ಡಿಜಿಟಲ್‌ನಲ್ಲಿ ನಿರ್ವಹಿಸಲಾಗಿದೆ.

  -ಜಿಯೋ 5G ನೆಟ್‌ವರ್ಕ್‌ನಲ್ಲಿ ಈ ಮೇಡ್-ಇನ್-ಇಂಡಿಯಾ 5G ಸ್ಟಾಕ್ ಅನ್ನು ಈಗಾಗಲೇ ನಿಯೋಜಿಸಿದೆ. ಮೊದಲ ದಿನದಿಂದಲೇ ನೂರಾರು ಮಿಲಿಯನ್ ಬಳಕೆದಾರರಿಗೆ ಈ ಸೇವೆ ಸಿಗಲಿದೆ.  ಇದನ್ನೂ ಓದಿ: Mukesh Ambani: 3D ವರ್ಲ್ಡ್ ಆಫ್ ಮೆಟಾವರ್ಸ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಭೆ! ನೀವೂ ಹೀಗೆ ಭಾಗವಹಿಸಿ

  -5G ಸೇವೆಯೊಂದಿಗೆ, ಜಿಯೋ ಸಂಪರ್ಕಿತ ಆರ್ಟಿಫಿಶೀಯಲ್​ ಇಂಟಲಿಜನ್ಸ್ ಒಳಗೊಂಡ ಸ್ಮಾರ್ಟ್​ ಸೆನ್ಸಾರ್​ಗಳನ್ನು ಪ್ರಾರಂಭಿಸುವುದಾಗಿ ಸಭೆಯಲ್ಲಿ ತಿಳಿಸಿದೆ. ಜೊತೆಗೆ ಇಂಟರ್ನೆಟ್ ಆಫ್ ಥಿಂಗ್ಸ್ ಅನ್ನು ಪ್ರಚೋದಿಸುತ್ತದೆ. ಇದು ನಾಲ್ಕನೇ ಕೈಗಾರಿಕಾ ಕ್ರಾಂತಿಯನ್ನು ಉತ್ತೇಜಿಸಲಿದೆ.

  -ಜಿಯೋ ಮುಂದಿನ ದಿನಗಳಲ್ಲಿ ಗ್ರಾಹಕರಿಗಾಗಿ ಅತ್ಯುನ್ನತ ಡೇಟಾದೊಂದಿಗೆ.  ಎಲ್ಲಾ ಸ್ಥಳವನ್ನು ಸಂಪರ್ಕಿಸುತ್ತದೆ ಎಂದು ರಿಲಯನ್ಸ್​ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹೇಳಿದೆ.
  Published by:Harshith AS
  First published: