HOME » NEWS » Tech » RELIANCE 44TH AGM ON JUNE 24 JIO 5G PHONE MAY LAUNCH THIS WEEK SPECS FEATURES INDIA PRICE HG

ಇದೇ ವಾರ ಜಿಯೋ 5G ಫೋನ್​ ಬಿಡುಗಡೆ; 2500 ರೂ.ಗೆ ಸಿಗಲಿದೆಯಾ ಈ ಫೋನ್​?

Reliance Jio: ಇದೀಗ ರಿಲಯನ್ಸ್​ ಭಾರತದಲ್ಲಿ 5G ಸೇವೆಯನ್ನು ಅನಾವರಣಗೊಳಿಸಲು ಮುಂದಾಗಿದ್ದು, ಅದರ ಜತೆಗೆ 5G ಫೋನ್​ ಬಿಡುಗಡೆ ಮಾಡಲು ಬಯಸಿದೆ.

news18-kannada
Updated:June 22, 2021, 4:41 PM IST
ಇದೇ ವಾರ ಜಿಯೋ 5G ಫೋನ್​ ಬಿಡುಗಡೆ; 2500 ರೂ.ಗೆ ಸಿಗಲಿದೆಯಾ ಈ ಫೋನ್​?
Jio 5G Phone
  • Share this:
ರಿಲಯನ್ಸ್ ಜಿಯೋ ಜೂನ್​ 24ರಂದು 44ನೇ ವಾರ್ಷಿಕ ಸಾಮಾನ್ಯ ಸಭೆಯನ್ನು(AGM) ಹಮ್ಮಿಕೊಂಡಿದೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಹಲವು ಸಾಧನಗಳನ್ನು ಗ್ರಾಹಕರಿಗೆ ಪರಿಚಯಿಸಲಿದೆ.  ಕೆಲವು ತಿಂಗಳಿಂದ ಜಿಯೋ 5G ಫೋನ್ ಬಗ್ಗೆ ಸುದ್ದಿ ಹರಿದಾಡುತ್ತಿದ್ದು, ರಿಲಯನ್ಸ್​ ಸಾಮಾನ್ಯ ಸಭೆಯಲ್ಲಿ ಈ ಫೋನನ್ನು ಪರಿಚಯಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಕಳೆದ ಎರಡು ತಿಂಗಳಿಂದ ಜಿಯೋ 5G ಫೋನ್​ ಪರಿಚಯಿಸುವ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಈಗಾಗಲೇ ಹರಿದಾಡಿರುವ ಮಾಹಿತಿ ಪ್ರಕಾರ ನೂತನ ಫೋನ್​ 5 ಸಾವಿರಕ್ಕಿಂತ ಕಡಿಮೆ ಬೆಲೆ ಹೊಂದಿರಲಿದೆ ಎನ್ನಲಾಗುತ್ತಿದೆ. ಇನ್ನು ಕೆಲವು 2,500ಕ್ಕೆ ಖರೀದಿಗೆ ಸಿಗಲಿದೆ ಎನ್ನಲಾಗುತ್ತಿದೆ.

ಇತ್ತೀಚೆಗೆ ಏಷ್ಯಾ ಪೆಸಿಫಿಕ್‌ನ ಆಯ್ದ ವರದಿಗಾರರೊಂದಿಗಿನ ವರ್ಚುವಲ್ ಕಾನ್ಫರೆನ್ಸ್‌ನಲ್ಲಿ, ಭಾರತ ಭರವಸೆಯ "ಕೈಗೆಟುಕುವ" ಸ್ಮಾರ್ಟ್‌ಫೋನ್ ತರಲು ಗೂಗಲ್ ಟೆಲಿಕಾಂ ದೈತ್ಯರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸುಂದರ್ ಪಿಚೈ ಪ್ರಸ್ತಾಪಿಸಿದ್ದಾರೆ.

ಇದೀಗ ರಿಲಯನ್ಸ್​ ಭಾರತದಲ್ಲಿ 5G ಸೇವೆಯನ್ನು ಅನಾವರಣಗೊಳಿಸಲು ಮುಂದಾಗಿದ್ದು, ಅದರ ಜತೆಗೆ 5G ಫೋನ್​ ಬಿಡುಗಡೆ ಮಾಡಲು ಬಯಸಿದೆ.

ಜಿಯೋ 5G ಫೋನ್​​ವೈಶಿಷ್ಟ್ಯತೆಗಳು:

ಗೂಗಲ್ ಕಳೆದ ವರ್ಷ ರಿಲಯನ್ಸ್​ ಎಂಜಿಎಂ ಕಾರ್ಯಕ್ರಮದ ಮೂಲಕ ಜಿಯೋಗೆ  337 ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿತು. ಅದರ ಸಹಭಾಗಿತ್ವದಲ್ಲಿ ಮುಂಬರುವ ಈವೆಂಟ್​ನಲ್ಲಿ 5G ಫೊನ್​ ಅನ್ನು ಅಭಿವೃದ್ಧಿ ಪಡಿಸಿ ಪರಿಚಯಿಸುತ್ತಿದೆ.

ಜಿಯೋ ಆ್ಯಂಡ್ರಾಯ್ಡ್​ 5G ಸ್ಮಾರ್ಟ್​ಫೋನನ್ನ ಪರಿಚಯಿಸಲಿದೆ ಎನ್ನಲಾಗುತ್ತಿದೆ. ಹಾಗಾಗಿ ಜಿಯೋ 5ಜಿ ಫೋನ್​ ಫೀಚರ್​ ಫೊನ್​ ಅಲ್ಲ ಎಂಬುದು ಮೇಲನೋಟಕ್ಕೆ ಹೇಳಲಾಗುತ್ತಿದೆ.ಜಿಯೋ ಪಾಲುದಾರಿಕೆ ಕೇವಲ ಗೂಗಲ್​ಗೆ ಸೀಮಿತವಲ್ಲ. ಇದರೊಂದಿಗೆ ಜನಪ್ರಿಯ ಕಾಲ್ಕಾಮ್​ ಬ್ರಾಂಡ್​ ಸಹ ಒಪ್ಪಂದ ಮಾಡಿಕೊಂಡಿದೆ.

ಸ್ನಾಪ್​​​ಡ್ರಾಗನ್​ 480 5G ಅಗ್ಗದ ಜಿಪ್​ ಸೆಟ್​ಗಳಲ್ಲಿ ಒಂದು. ಜಿಯೋ ಮುಂಬರುವ ಸಾಧನಕ್ಕೆ ಇದನ್ನು ಬಳಸಿಕೊಂಡಿದೆ.

ಜಿಯೋ ಫೋನ್​​ 2

ಜಿಯೋ ಫೋನ್​​ 2 ಅನ್ನು 2018ರಲ್ಲಿ ಪರಿಚಯಿಸಿತು. ಕ್ವೆಂಟಿ ಡಿವೈಸ್​ ನೊಂದಿಗೆ 4G ಬೆಂಬಲವನ್ನು ಈ ಫೋನ್ ಹೊಂದಿದೆ. ಗುಣಮಟ್ಟದ 4G ಸ್ಮಾರ್ಟಫೋನ್​ಗಳನ್ನು ಖರೀದಿಸಲು ಸಾಧ್ಯವಾಗದ ಗ್ರಾಹಕರನ್ನು ಗುರಿಯಾಗಿಸಿಕೊಂಡು 2999 ರೂ.ಗೆ ಪರಿಚಯಿಸಿದೆ.

ಈ ಸಾಧನವು 2.4 ಇಂಚಿನ ಟಿಎಫ್​ಟಿ ಡಿಸ್​ಪ್ಲೇ ಜತೆಗೆ 320x​240 ಪಿಕ್ಸೆಲ್​ ರೆಸಲ್ಯೂಶನ್​ ಹೊಂದಿದೆ. ಡುಯೆಲ್​ ಕೋರ್​ ಚಿಪ್​ಸೆಟ್​​ ಹೊಂದಿದೆ. ಇದರೊಂದಿಗೆ 512 RAM ಮತ್ತು 4G ಅನ್​ಬೋರ್ಡ್ ಸಂಗ್ರಹವಿದೆ. ಎಸ್​ಡಿ ಕಾರ್ಡನ್ನು 128GB ತನಕ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿಭಾಗದಲ್ಲಿ 2 ಮೆಗಾಫಿಕ್ಸೆಲ್​ ಶೂಟರ್​ ಮತ್ತು ಸೆಲ್ಫಿಗಾಗಿ 0.2 ಕ್ಯಾಮೆರಾ ಅಳವಡಿಸಲಾಗಿದೆ. 2 ಸಾವಿರ mAh​ ಬ್ಯಾಟರಿ ಅಳವಡಿಸಿಕೊಂಡಿದೆ. ಫೇಸ್​​ಬುಕ್​, ಯ್ಯೂಟೂಬ್​, ವಾಟ್ಸ್ಆ್ಯಪ್ ಬೆಂಬಲ ಇದರಲ್ಲಿದೆ.
Published by: Harshith AS
First published: June 22, 2021, 4:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories