ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಗ್ಯಾಜೆ್ಟ್ಗಳ (Gadgets) ಮೇಲೆ ಎಲ್ಲಿಲ್ಲದ ಬೇಡಿಕೆ. ಅದ್ರಲ್ಲೂ ವೈರ್ಲೆಸ್ ಇಯರ್ಬಡ್ಸ್ಗಳಂತೂ ಹೊಸ ಹೊಸ ಮಾದರಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ಮೂಲಕ ಗ್ರಾಹರನ್ನು ಸೆಳೆಯುತ್ತಲೇ ಇದೆ.ಇದೀಗ ಪ್ರಮುಖ ಇಕಾಮರ್ಸ್ ಕಂಪನಿಯಾದ (E-Commerse Company) ಅಮೆಜಾನ್ನಲ್ಲಿ ಭಾರೀ ರಿಯಾಯಿತಿ ಲಭ್ಯವಿದೆ. ಶೇಕಡಾ 75 ರಷ್ಟು ರಿಯಾಯಿತಿ ಕೊಡುಗೆ ಇಯರ್ಬಡ್ಸ್ಗಳ (Earbuds) ಮೇಲೆ ಲಭ್ಯವಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಬಡ್ಸ್ಲೈವ್ ಬ್ಲೂಟೂತ್ ಇಯರ್ಬಡ್ಸ್ಗಳ ಮೇಲೆ ಅಮೆಜಾನ್ (Amazon) ಇದೀಗ ಆಫರ್ ಅನ್ನು ಬಿಡುಗಡೆ ಮಾಡಿದೆ. ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ನಲ್ಲಿ ಸ್ಯಾಮ್ಸಂಗ್ನ ಈ ಇಯರ್ಬಡ್ಸ್ ಅನ್ನು ಭಾರೀ ಅಗ್ಗದಲ್ಲಿ ಪಡೆಯಬಹುದು.
ಇದೀಗ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ನಲ್ಲಿ ಗ್ಯಾಜೆಟ್ಸ್ಗಳ ಮೇಲೆ ಶೇಕಡಾ 75% ರಷ್ಟು ರಿಯಾಯಿತಿಯನ್ನು ಘೋಷಿಸಿದೆ. ಇದೀಗ 21 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದ ಸ್ಯಾಮ್ಸಂಗ್ ಕಂಪೆನಿಯ ಇಯರ್ಬಡ್ಸ್ ಆಫರ್ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಹಾಗಿದ್ರೆ ಈ ಇಯರ್ಬಡ್ಸ್ನ ಫೀಚರ್ಸ್ ಹೇಗಿದೆ ಎಂಬುದನ್ನು ಈ ಲೇಖನದಲ್ಲಿ ನೋಡಿ.
ಆಫರ್ ಬೆಲೆ ಹೇಗಿದೆ?
ಸ್ಯಾಮ್ಸಂಗ್ ಗ್ಯಾಲಕ್ಸಿ ಬಡ್ಸ್ ಲೈವ್ ಇಯರ್ಬಡ್ಸ್ನ ಮೂಲ ಬೆಲೆ 15,990 ರೂಪಾಯಿ ಆಗಿದೆ. ಆದರೆ ಇದೀಗ ಅಮೆಜಾನ್ ಆಫರ್ ಸೇಲ್ನಲ್ಲಿ ಈ ಇಯರ್ಬಡ್ಸ್ ಅನ್ನು ಕೇವಲ 3,999 ರೂಪಾಯಿಗೆ ಖರೀದಿಸಬಹುದು. ಅಂದರೆ ಈ ಇಯರ್ಬಡ್ಸ್ನ ಮೇಲೆ ಬರೋಬ್ಬರಿ ಶೇಕಡಾ 75 ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ.
ಜೊತೆಗೆ ಈ ಸಾಧನದ ಮೇಲೆ ಬ್ಯಾಂಕ್ ಆಫರ್ಸ್ಗಳು ಕೂಡ ಲಭ್ಯವಿದೆ. ನೀವು ಎಸ್ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಈ ಇಯರ್ಬಡ್ಗಳನ್ನು ಖರೀದಿಸಿದರೆ ಶೇಕಡಾ 10 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ. ಈ ರಿಯಾಯಿತಿ ಪ್ರಕಾರ ನೀವು ಈ ಇಯರ್ಬಡ್ಸ್ ಅನ್ನು ಕೇವಲ 3,599 ರೂಪಾಯಿಗೆ ಖರೀದಿಸಬಹುದು.
ಸ್ಯಾಮ್ಸಂಗ್ ಗ್ಯಾಲಕ್ಸಿ ಬಡ್ಸ್ ಲೈವ್ ಫೀಚರ್ಸ್
ಸ್ಯಾಮ್ಸಂಗ್ ಗ್ಯಾಲಕ್ಸಿ ಬಡ್ಸ್ ಲೈವ್ ಇಯರ್ಬಡ್ಗಳು ಒಟ್ಟು ಮೂರು ಮೈಕ್ಗಳನ್ನು ಒಳಗೊಂಡಿದೆ. ಇನ್ನು ಈ ಮೈಕ್ಗಳು ಸೌಂಡ್ ಪಿಕಪ್ ಫೀಚರ್ ಅನ್ನು ಒಳಗೊಂಡಿದೆ. ಈ ಇಯರ್ಬಡ್ಸ್ಗಳು ಹೊಂದಿರುವ ಎಲ್ಲಾ ಸ್ಪೀಕರ್ಗಳು 12 ಎಂಎಂ ಸ್ಪೀಕರ್ಗಳಾಗಿವೆ. ಜೊತೆಗೆ ಈ ಇಯರ್ಬಡ್ಸ್ ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ ಅನ್ನು ಹೊಂದಿದ್ದು ಕಾಲ್ನಲ್ಲಿ ಬಹಳಷ್ಟು ಆರಾಮವಾಗಿ ಮಾತನಾಡಬಹುದಾಗಿದೆ. ಇದಕ್ಕಾಗಿ ಈ ಸಾಧನ ಬ್ಲೂಟೂತ್ 5.0 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಬ್ಯಾಟರಿ ಫೀಚರ್ಸ್
ಸ್ಯಾಮ್ಸಂಗ್ ಗ್ಯಾಲಕ್ಸಿ ಬಡ್ಸ್ ಲೈವ್ ಇಯರ್ಬಡ್ಸ್ನ ಬ್ಯಾಟರಿ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದು ವೈರ್ಲೆಸ್ ಚಾರ್ಜಿಂಗ್ ಫೀಚರ್ ಅನ್ನು ಹೊಂದಿದೆ. ಈ ಮೂಲಕ ಚಾರ್ಜಿಂಗ್ ಕೇಸ್ 21 ಗಂಟೆಗಳ ಚಾರ್ಜಿಂಗ್ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ.
ಬೆಲೆ ಮತ್ತು ಲಭ್ಯತೆ
ಪ್ರೀಮಿಯಂ ಇಯರ್ಬಡ್ಸ್ ಖರೀದಿಸಲು ಯೋಚಿಸುತ್ತಿರುವವರಿಗೆ ಈ ಕೊಡುಗೆ ಬಹಳ ಉತ್ತಮವಾಗಿದೆ. ಇನ್ನು ಕಪ್ಪು ಬಣ್ಣದ ಇಯರ್ಬಡ್ಸ್ ಅನ್ನು ಖರೀದಿ ಮಾಡುವವರಿಗೆ ಈ ಅಮೆಜಾನ್ ಆಫರ್ ಬೆಲೆ ಅನ್ವಯಿಸುತ್ತದೆ. ಅದೇ ಕೆಂಪು ಬಣ್ಣದ ಇಯರ್ಬಡ್ಸ್ ಅನ್ನು ಖರೀದಿ ಮಾಡುವುದಾದರೆ ಸ್ವಲ್ಪ ಜಾಸ್ತಿ ಹಣವನ್ನು ಪಾವತಿಸಬೇಕು. ಇದರ ಬೆಲೆ ರೂ. 7,900 ಆಗಿದೆ.
ಇದನ್ನೂ ಓದಿ: ಅಮೆಜಾನ್ನಲ್ಲಿ ಈ ನಾಲ್ಕು ಸ್ಮಾರ್ಟ್ಫೋನ್ಗಳ ಮೇಲೆ ಬಂಪರ್ ಆಫರ್! ಫೀಚರ್ಸ್ ಹೇಗಿದೆ?
ಹಾಗಾಗಿ ನೀವು ಈ ಇಯರ್ಬಡ್ಸ್ ಅನ್ನು ಖರೀದಿಸಲು ಬಯಸಿದರೆ, ಕಪ್ಪು ಬಣ್ಣದ ಇಯರ್ಬಡ್ಸ್ ಅನ್ನು ಆಯ್ಕೆ ಮಾಡುವುದು ಉತ್ತಮ. ಕೆಂಪು ಬಣ್ಣದ ಇಯರ್ಬಡ್ಸ್ಗೆ ಹೋಲಿಸಿದರೆ ಇವು ಅರ್ಧದಷ್ಟು ಬೆಲೆಯಲ್ಲಿ ಲಭ್ಯವಿವೆ. ಇನ್ನು ಈ ಇಯರ್ಬಡ್ಸ್ ಅನ್ನು ಇಎಮ್ಐ ಆಯ್ಕೆಯಲ್ಲೂ ಖರೀದಿ ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ