• Home
  • »
  • News
  • »
  • tech
  • »
  • IPhone Foldable Smartphone: ಆ್ಯಪಲ್ ಕಂಪನಿಯಿಂದ ಹೊಸ ಫೋಲ್ಡಬಲ್ ಐಫೋನ್​ ಬಿಡುಗಡೆ! ಯಾವಾಗ ಅನಾವರಣ?

IPhone Foldable Smartphone: ಆ್ಯಪಲ್ ಕಂಪನಿಯಿಂದ ಹೊಸ ಫೋಲ್ಡಬಲ್ ಐಫೋನ್​ ಬಿಡುಗಡೆ! ಯಾವಾಗ ಅನಾವರಣ?

ಆ್ಯಪಲ್​ ಫೋಲ್ಡಬಲ್ ಐಫೋನ್

ಆ್ಯಪಲ್​ ಫೋಲ್ಡಬಲ್ ಐಫೋನ್

ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯಲ್ಲಿರುವ ಕಂಪನಿಯೆಂದರೆ ಅದು ಆ್ಯಪಲ್ ಕಂಪನಿ. ಇದೀಗ ಈ ಕಂಪನಿ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಲು ರೆಡಿಯಾಗಿದೆ. ಅಂದರೆ ಸದ್ಯದಲ್ಲೇ ಆ್ಯಪಲ್ ಫೋಲ್ಡಬಲ್​ ಐಫೋನ್ ಅನ್ನು ಪರಿಚಯಿಸಲಿದೆ ಎಂದು ಕಂಪನಿ ಹೇಳಿದೆ.

  • Share this:

    ಮೊಬೈಲ್​ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಒಂದು ರೀತಿಯ ಸ್ಮಾರ್ಟ್​​ಫೋನ್ (Smartphone)​ ಸಂಚಲನವನ್ನೇ ಮೂಡಿಸಿತ್ತು. ಅದು ಯಾವುದೆಂದರೆ ಫೋಲ್ಟಬಲ್ ಸ್ಮಾರ್ಟ್​​ಫೋನ್​ಗಳು. ಈ ಫೋಲ್ಡಬಲ್ ಸ್ಮಾರ್ಟ್​​ಫೋನ್​ಗಳು (Foldable Smartphone) ಒಂದು ವಿಶೇಷ ಫೀಚರ್ಸ್​​ಗಳನ್ನೊಳಗೊಂಡ ಮೊಬೈಲ್​ಗಳು ಎನ್ನಬಹುದು. ಯಾಕೆಂದರೆ ಇದರ ವಿನ್ಯಾಸವೇ ಒಂದು ರೀತಿಯಲ್ಲಿ ಡಿಫರೆಂಟ್ ಅಂತ ಹೇಳ್ಬಹುದು. ಇದುವರೆಗೆ ಮೊಬೈಲ್​ ಮಾರುಕಟ್ಟೆಯಲ್ಲಿ (Mobile Market) ಕೆಲವೇ ಕೆಲವು ಫೋಲ್ಡಬಲ್ ಸ್ಮಾರ್ಟ್​​ಫೋನ್​​​ಗಳಿದ್ದವು. ಆದರೆ ಇದೀಗ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಒಂದು ಸ್ಮಾರ್ಟ್​ಫೋನ್ ಕಂಪನಿ ರೆಡಿಯಾಗಿದೆ. ಈ ಕಂಪನಿ ಸದ್ಯದಲ್ಲೇ ಮಾರುಕಟ್ಟೆಗೆ ಫೋಲ್ಡಬಲ್ ಸ್ಮಾರ್ಟ್​ಫೋನ್​ ಅನ್ನು ಬಿಡುಗಡೆ ಮಾಡುವ ಸುದ್ದಿಯೊಂದನ್ನು ಹರಿಬಿಟ್ಟಿದೆ. ಇದನ್ನು ಗಮನಿಸಿದ ಜನರಲ್ಲು ಬಹಳಷ್ಟೂ ಕುತೂಹಲವನ್ನು ಮೂಡಿಸಿದೆ.


    ಹೌದು, ನಾವೀಗ ಮಾತನಾಡುತ್ತಿರುವ ಕಂಪನಿ ಯಾವುದೆಂದರೆ ಅದುವೆ ಆ್ಯಪಲ್ ಕಂಪನಿ. ಆ್ಯಪಲ್ ಕಂಪನಿಯಿಂದ ಫೋಲ್ಡಬಲ್ ಐಫೋನ್​ ಬಿಡುಗಡೆ ಮಾಡಲು ನಿರ್ಧರಿಸಿದೆ. ಜಗತ್ತಿನ ದುಬಾರಿ ಹಾಗೂ ಪ್ರಬಲ ಸಾಮರ್ಥ್ಯವನ್ನು ಹೊಂದಿರುವ ಕಂಪನಿಯೆಂದರೆ ಅದು ಐಫೋನ್ ಇದೀಗ ಈ ಕಂಪನಿ ಹೊಸ ಫೋಲ್ಡಬಲ್ ಸ್ಮಾರ್ಟ್​ಫೋನ್​ ಅನ್ನು ಬಿಡುಗಡೆ ಮಾಡುವುದಾಗಿ ನಿರ್ಧರಿಸಿದ್ದು. ಇದರ ಕೆಲವೊಂದು ಫೀಚರ್ಸ್​ ಬಗ್ಗೆ ಸೋರಿಕೆಯಾಗಿದೆ. ಈ ಫೋಲ್ಡಬಲ್ ಐಫೋನ್ ಏನೆಲ್ಲಾ ಫೀಚರ್ಸ್​ ಹೊಂದಿರಲಿದೆ ಎಂಬುದನ್ನು ತಿಳೀಬೇಕಾದರೆ ಈ ಲೇಖನವನ್ನು ಓದಿ.


    2025ರಲ್ಲಿ ಬರುವ ಸಾಧ್ಯತೆ


    ಆ್ಯಪಲ್ ಕಂಪನಿ ಇದೀಗ ಫೋಲ್ಡಬಲ್ ಐಫೋನ್ ಅನ್ನು ಮೊಬೈಲ್ ಮಾರುಕಟ್ಟೆಗೆ ಪರಿಚಯಿಸೋಕೆ ಸಿದ್ಧತೆ ನಡೆಸಿದೆ ಎಂದು ವರದಿಯಲ್ಲಿ ತಿಳಿಸಿದೆ. ಇನ್ನು ಆ್ಯಪಲ್​ನ ಈ ಫೋಲ್ಡಬಲ್ ಐಫೋನ್ 2025 ಕ್ಕೆ ಲಗ್ಗೆಯಿಡಲಿದ್ದು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸೋದಂತೂ ಗ್ಯಾರಂಟಿ.


    ವಿಶೇಷವಾಗಿ ಈ ಫೋನ್​ ಯುಎಸ್​​ಬಿ ಟೈಪ್ ಸಿ ಪೋರ್ಟ್​ ಮತ್ತು ಮ್ಯಾಗ್​ಸೇಫ್​ ಸಪೋರ್ಟ್​​ ಅನ್ನು ಹೊಂದಿರುವ ಸಾಧ್ಯತೆಯಿದೆ. ಜೊತೆಗೆ ಇದು ಕನಿಷ್ಠ ಟಚ್ ಐಡಿಯನ್ನು ಬಳಸುವ ನಿರೀಕ್ಷೆಯಿದೆ. ಇದರಲ್ಲಿಯೂ ಸಹ ಆ್ಯಪಲ್ ಫೇಸ್ ಐಡಿಯನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.


    ಇದನ್ನೂ ಓದಿ: ಏರ್​ಟೆಲ್​ನ ಈ ಪ್ಲ್ಯಾನ್​ನಲ್ಲಿ​ ಪ್ರತೀದಿನ 3ಜಿಬಿ ಫ್ರೀ! ಇಂದೇ ನಿಮ್ಮ ಸಿಮ್​ಗೆ ಹಾಕಿಸ್ಕೊಳ್ಳಿ


    ಫೋಲ್ಡಬಲ್ ಐಫೋನ್ ಮಾತ್ರವಲ್ಲ ಫೋಲ್ಡಬಲ್ ಐಪ್ಯಾಡ್ ಕೂಡ ಬಿಡುಗಡೆ


    ಇದರ ನಡುವೆ ಐಫೋನ್‌ ಫೋಲ್ಡ್‌ಗಿಂತ ಮೊದಲು ಫೋಲ್ಡಬಲ್ ಐಪ್ಯಾಡ್ ಅನ್ನು ಪ್ರಾರಂಭಿಸಬಹುದು ಎನ್ನುವ ವರದಿ ಕೂಡ ಇದೆ. ಇನ್ನು ಆ್ಯಪಲ್ ಕಂಪನಿಯ ಫೋಲ್ಡಬಲ್ ಪ್ರಾಡಕ್ಟ್‌ಗಳಲ್ಲಿ ಬಳಸಬಹುದಾದ ಅಲ್ಟ್ರಾ ತೆಳುವಾದ ಕವರ್ ಗ್ಲಾಸ್ ಅನ್ನು ರಚಿಸಲು ಎಲ್​ಜಿ ಯೊಂದಿಗೆ ಕೆಲಸ ಮಾಡುತ್ತಿದೆ ಎನ್ನುವ ಸುದ್ದಿ ಕೂಡ ಇದೆ. ಜೊತೆಗೆ, ಆ್ಯಪಲ್ ತನ್ನದೇ ಆದ ಚಿಪ್ ವಿನ್ಯಾಸದಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತದೆ. ಇದರಿಂದ ಆ್ಯಪಲ್ ಫೋಲ್ಡಬಲ್‌ನಲ್ಲಿ ಕೂಡ ಆ್ಯಪಲ್​ನ ಚಿಪ್‌ಸೆಟ್‌ ಹೊಂದಿರಲಿದೆ ಎಂದು ಹೇಳಿದೆ.


    ಆ್ಯಪಲ್​ ಫೋಲ್ಡಬಲ್ ಐಫೋನ್


    ಡಿಸ್​​ಪ್ಲೇ ಫೀಚರ್ಸ್​​ ಹೇಗಿರಲಿದೆ?


    ಆ್ಯಪಲ್ ಪ್ರಸ್ತುತ 20 ಇಂಚಿನ ಫೋಲ್ಡಬಲ್‌ ಡಿಸ್‌ಪ್ಲೇಗಾಗಿ ಡಿಸ್‌ಪ್ಲೇ ಪೂರೈಕೆದಾರರೊಂದಿಗೆ ಮಾತುಕತೆ ನಡೆಸುತ್ತಿದೆ. ಇದರಿಂದ ಆ್ಯಪಲ್ ಕಂಪನಿಯ ಐಫೋನ್‌ ಫೋಲ್ಡ್‌ 20 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ ಎಂದು ಗ್ಯಾರಂಟಿ ನೀಎಬಹುದಾಗಿದೆ. ಇದಲ್ಲದೆ ಆ್ಯಪಲ್ ಕಂಪನಿಯು ಫೋಲ್ಡಬಲ್ ಮ್ಯಾಕ್‌ಬುಕ್‌ಗಳಲ್ಲಿ ಕೂಡ ಫೋಲ್ಡಬಲ್‌ ಡಿಸ್‌ಪ್ಲೇ ತರುವುದಕ್ಕೆ ಸಿದ್ಧತೆ ನಡೆಸಿದೆ. ಈ ಮ್ಯಾಕ್‌ಬುಕ್ ಮಾದರಿಗಳು 2026 ಅಥವಾ 2027 ರಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.


    ಇನ್ನು ಇತ್ತೀಚಿನ ಮಾಹಿತಿಯಂತೆ ಆ್ಯಪಲ್ ಐಫೋನ್‌ ಫೋಲ್ಡ್‌ ಡಿಸ್‌ಪ್ಲೇಗಾಗಿ ಸಿಲ್ವರ್‌ ನ್ಯಾನೊವೈರ್ ಟಚ್ ಸಲ್ಯೂಶನ್‌ ಅನ್ನು ಬಳಸುವ ಸಾಧ್ಯತೆಯಿದೆ. ಇದರಿಂದ ಫೋಲ್ಡಬಲ್‌ ವಲಯದಲ್ಲಿ ಐಫೋನ್‌ ಹೊಸ ಸಂಚಲನವನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಇದರಿಂದ ಈಗಾಗಲೇ ಫೋಲ್ಡಬಲ್‌ ಫೋನ್‌ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಸ್ಯಾಮ್‌ಸಂಗ್‌, ಒಪ್ಪೋ, ಹುವಾವೇ ಕಂಪನಿಗಳಿಗೆ ಹೊಡೆತ ಬೀಳುವ ಸಾಧ್ಯತೆಯಿದೆ.






    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು