• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Tech Tips: ಇನ್​ಸ್ಟಾಗ್ರಾಮ್​​ನಲ್ಲಿ ರೀಲ್ಸ್​, ಫೋಟೋಗಳು ಹೆಚ್ಚು ವೈರಲ್​ ಆಗ್ತಿಲ್ವಾ? ಈ ಟೈಮ್​ಗೆ ಪೋಸ್ಟ್ ಮಾಡಿ

Tech Tips: ಇನ್​ಸ್ಟಾಗ್ರಾಮ್​​ನಲ್ಲಿ ರೀಲ್ಸ್​, ಫೋಟೋಗಳು ಹೆಚ್ಚು ವೈರಲ್​ ಆಗ್ತಿಲ್ವಾ? ಈ ಟೈಮ್​ಗೆ ಪೋಸ್ಟ್ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇನ್​​ಸ್ಟಾಗ್ರಾಮ್​ನಲ್ಲಿ ನಾವು ಪೋಸ್ಟ್ ಮಾಡೋವಂತಹ ಫೋಟೋ, ರೀಲ್ಸ್​ ಹೆಚ್ಚಿನವರಿಗೆ ರೀಚ್ ಆಗೋದೇ ಇಲ್ಲ ಎಂಬ ಬೇಸರ ಹೆಚ್ಚಿನವರಿಗೆ ಇರುತ್ತದೆ. ಆದರೆ ಈ ಟ್ರಿಕ್ಸ್​ ಫಾಲೋ ಮಾಡಿದ್ರೆ ನೀವು ಸುಲಭದಲ್ಲಿ ನಿಮ್ಮ ಇನ್​ಸ್ಟಾಗ್ರಾಮ್​ ಅಕೌಂಟ್​ ಅನ್ನು ಹೆಚ್ಚಿನವರಿಗೆ ರೀಚ್ ಮಾಡ್ಬೋದು. 

  • Share this:

ಇತ್ತೀಚೆಗೆ ಸ್ಮಾರ್ಟ್​​ಫೋನ್​ಗಳ (Smartphones) ಬಳಕೆ ವ್ಯಾಪಕವಾಗಿ ಹೆಚ್ಚಾಗಿದೆ. ಇವುಗಳ ಜೊತೆಗೆ ಸೋಶಿಯಲ್ ಮೀಡಿಯಾಗಳನ್ನು (Social Media) ಸಹ ಬಳಸುವವರು ಹೆಚ್ಚಾಗಿದೆ. ಬೆಳಗಾದ್ರೆ ಸಾಕು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕೈಯಲ್ಲಿ ಸ್ಮಾರ್ಟ್​​ಫೋನ್​ ಹಿಡಿದು ರೀಲ್ಸ್ (Reels)​, ಫೋಟೋ ನೋಡ್ತಾ ಕೂತಿರುತ್ತಾರೆ. ಇನ್ನೂ ಹೆಚ್ಚಿನವರು ಇತ್ತೀಚೆಗೆ ಇನ್​ಸ್ಟಾಗ್ರಾಮ್​ ಅನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಈ ಅಪ್ಲಿಕೇಶನ್ ಹೊಂದಿರುವಂತಹ ಫೀಚರ್ಸ್​ ಅಂತಾನೇ ಹೇಳ್ಬಹುದು. ಇನ್ನೂ ಹೆಚ್ಚಿನವರು ಇನ್​ಸ್ಟಾಗ್ರಾಮ್ (Instagram)​ ಮೂಲಕವೇ ಸೆಲಬ್ರಿಟಿಗಳಾಗಿಬಿಟ್ಟಿದ್ದಾರೆ. ಇದಕ್ಕೆ ಕಾರಣ ಅವರು ಮಾಡುವಂತಹ ಪೋಸ್ಟ್​, ರೀಲ್ಸ್​ಗಳು ಅಂತಾನೇ ಹೇಳ್ಬಹುದು. ಆದರೆ ಕೆಲವೊಬ್ಬರು ಎಷ್ಟೇ ರೀಲ್ಸ್ ಮಾಡಿದ್ರು ವೈರಲ್ (Viral) ಆಗೋದೇ ಇಲ್ಲ.


ಇನ್​​ಸ್ಟಾಗ್ರಾಮ್​ನಲ್ಲಿ ನಾವು ಪೋಸ್ಟ್ ಮಾಡೋವಂತಹ ಫೋಟೋ, ರೀಲ್ಸ್​ ಹೆಚ್ಚಿನವರಿಗೆ ರೀಚ್ ಆಗೋದೇ ಇಲ್ಲ ಎಂಬ ಬೇಸರ ಹೆಚ್ಚಿನವರಿಗೆ ಇರುತ್ತದೆ. ಆದರೆ ಈ ಟ್ರಿಕ್ಸ್​ ಫಾಲೋ ಮಾಡಿದ್ರೆ ನೀವು ಸುಲಭದಲ್ಲಿ ನಿಮ್ಮ ಇನ್​ಸ್ಟಾಗ್ರಾಮ್​ ಅಕೌಂಟ್​ ಅನ್ನು ಹೆಚ್ಚಿನವರಿಗೆ ರೀಚ್ ಮಾಡ್ಬೋದು.


ಫೇಸ್​​ಬುಕ್​ ಲಿಂಕ್ ಮಾಡ್ಬೇಕು


ಇನ್​ಸ್ಟಾಗ್ರಾಮ್ ಮತ್ತು ಫೇಸ್​ಬುಕ್​ ಅನ್ನು ಆಳುತ್ತಿರುವ ಒಂದೇ ಕಂಪೆನಿಯೆಂದರೆ ಅದು ಮೆಟಾ. ಇತ್ತೀಚೆಗೆ ಇನ್​​ಸ್ಟಾಗ್ರಾಮ್​ ಮತ್ತು ಫೇಸ್​ಬುಕ್​​ ಅನ್ನು ಲಿಂಕ್​ ಮಾಡುವಂತೆ ಫೀಚರ್​ ಒಂದನ್ನು ಬಿಡುಗಡೆ ಮಾಡಿತ್ತು. ಅದೇ ರೀತಿ ನಿಮ್ಮ ಅಕೌಂಟ್​ ಅನ್ನು ನಿಮ್ಮ ಫೇಸ್​​ಬುಕ್​ ಅಕೌಂಟ್​​​ನೊಂದಿಗೆ ಲಿಂಕ್​​ ಮಾಡ್ಸಿದ್ರೆ ನಿಮ್ಮ ಅಕೌಂಟ್​ ಅನ್ನು ರೀಚ್​ ಮಾಡ್ಬೋದು. ಅದೇ ರೀತಿ ನೀವು ಪೋಸ್ಟ್​ ಮಾಡೋವಂತಹ ಸ್ಟೋರಿ, ರೀಲ್ಸ್, ಫೋಟೋವನ್ನು ನಿಮ್ಮ ಫೇಸ್​​ಬುಕ್​ನಲ್ಲಿರುವಂತಹ  ಫ್ರೆಂಡ್ಸ್​ ನೋಡ್ಬಹುದು.


ಇದನ್ನೂ ಓದಿ: ಲ್ಯಾಪ್​ಟಾಪ್ ಆನ್​ ಮಾಡಿದ ತಕ್ಷಣ ರಿಫ್ರೆಶ್ ಮಾಡ್ತೀರಾ? ಇದರಿಂದ ನಿಜವಾಗ್ಲು ಏನಾಗುತ್ತೆ ಗೊತ್ತಾ?


ಪದೇ ಪದೇ ಪೋಸ್ಟ್ ಮಾಡ್ಬೇಡಿ


ಇನ್ನು ಇನ್​ಸ್ಟಾಗ್ರಾಮ್​​ನಲ್ಲಿ ಯಾವುದೇ ಫೋಟೋ, ವಿಡಿಯೋಗಳನ್ನು ಪೋಸ್ಟ್​ ಮಾಡುವಾಗ ಸರಿಯಾದ ಸಮಸಯದಲ್ಲಿ ಪೋಸ್ಟ್ ಮಾಡ್ಬೇಕು. ಇನ್ನು ಒಂದೇ ಬಾರಿಗೆ 2-3 ವಿಡಿಯೋಗಳನ್ನು ಪೋಸ್ಟ್ ಮಾಡ್ಬಾರ್ದು. ಈ ರೀತಿ ಮಾಡೋದ್ರಿಂದ ನಿಮ್ಮ ರೀಲ್ಸ್ ಹೆಚ್ಚು ಜನರಿಗೆ ರೀಚ್​ ಆಗದೇ ಇರಬಹುದು.


ಟೈಮ್​ಗೆ ಅನುಗುಣವಾಗಿ ಪೋಸ್ಟ್ ಮಾಡಿ


ಇನ್ನು ಇನ್​ಸ್ಟಾಗ್ರಾಮ್​​ನಲ್ಲಿ ಯಾವುದೇ ವಿಷಯವನ್ನು ಪೋಸ್ಟ್ ಮಾಡೋ ಸಂದರ್ಭದಲ್ಲಿ ಅದಕ್ಕಂತನೇ ಒಂದು ಸಮಯ ಮೀಸಲಿಡಿ. ಇನ್ನು ವರದಿ ಪ್ರಕಾರ ಸೋಮವಾರ ಮಧ್ಯಾಹ್ನ 3:30, ಸಂಜೆ 7:30 ಹಾಗೂ ಬೆಳಗ್ಗೆ 7:30 ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಪೋಸ್ಟ್ ಮಾಡಲು​ ಉತ್ತಮ ಸಮಯವಂತೆ. ಹಾಗೆಯೇ ಮಂಗಳವಾರ ಫೋಟೋ ಅಥವಾ ರೀಲ್ಸ್ ಹಂಚಿಕೊಳ್ಳುವ ಪ್ಲಾನ್​ನಲ್ಲಿದ್ದರೆ ನೀವು 11:30 am, 1:30 am, 6:30 amಗೆ ಉತ್ತಮ ಸಮಯ. ಇನ್ನು ಬುಧವಾರ- 4:30 pm, 5:30 pm, 8:30 am, ಗುರುವಾರ- 6:30 pm, 9:30 am, 4:30 am, ಶುಕ್ರವಾರ- 2:30 pm, 10:30 pm, 12:30 am. ಇನ್ನು ಶನಿವಾರ- 8:30 pm, 4:30 am 5:30 am. ಹಾಗೆಯೇ ಭಾನುವಾರ- 4:30 pm, 5:30 pm, 1:30 am.


ಸಾಂಕೇತಿಕ ಚಿತ್ರ


ಒಂದೇ ರೀತಿಯ ಫೋಟೋವನ್ನು ಪುನಃ ಪೋಸ್ಟ್ ಮಾಡಬೇಡಿ. ಒಂದು ಪೋಟೋ ಚೆನ್ನಾಗಿದೆ ಎಂದು ಫೋಟೋವನ್ನೇ ಹತ್ತು ಬಾರಿ ಇನ್‌ಸ್ಟಾಗ್ರಾಂನಲ್ಲಿ ಫೋಸ್ಟ್ ಮಾಡಬೇಡಿ. ಗಮನ ಸೆಳೆಯುವಂತಹ ಕೆಲವೊಂದು ಗುಣಮಟ್ಟದ ಚಿತ್ರಗಳನ್ನು ಮಾತ್ರ ಶೇರ್ ಮಾಡಿ. ದಿನಕ್ಕೆ ಹೆಚ್ಚೆಂದರೆ 2 ರಿಂದ 3 ಫೋಟೋಗಳನ್ನು ಶೇರ್ ಮಾಡುವುದು ಉತ್ತಮ.




ನಿಮ್ಮ ಖಾತೆಯನ್ನು ಪ್ರೊಫೆಶನಲ್ ಆಗಿ ಪರಿವರ್ತಿಸಿ

top videos


    ಹೌದು, ಇನ್​​ಸ್ಟಾಗ್ರಾಮ್ ಪರಿಚಯಿಸಿರುವ ರೀಲ್ಸ್​ನಲ್ಲಿ ಹಣ ಮಾಡುವ ಫೀಚರ್​ ಅನ್ನು ಪಡೆಯಬೇಕಾದರೆ ಮೊದಲಿಗೆ ನಿಮ್ಮ ಇನ್​​ಸ್ಟಾಗ್ರಾಮ್ ಅಕೌಂಟ್ ಅನ್ನು ಬ್ಯುಸಿನೆಸ್​ ಅಥವಾ ಕ್ರಿಯೇಟರ್ ಆಗಿ ಬದಲಾವಣೆ ಮಾಡಬೇಕು. ನಂತರ ನಿಮಗೆ ಈ ಆಯ್ಕೆ ದೊರೆಯುತ್ತದೆ. ಇನ್ನು ನೀವು ನಿಮ್ಮ ಅಕೌಂಟ್​ನಲ್ಲಿ ರೀಲ್ಸ್​ ಅನ್ನು ಅಪ್ಲೋಡ್ ಮಾಡ್ಬೇಕು. ನಂತರ ನಿಮಗೆ ಸೆಟ್ಟಿಂಗ್ಸ್​ನಲ್ಲಿ ಕ್ರಿಯೇಟರ್ ಆಯ್ಕೆಯಲ್ಲಿ ಬೋನಸ್ ಎಂಬ ಆಪ್ಷನ್ ಅನ್ನು ನೋಡಬಹುದು.

    First published: