Instagram: ಇನ್​​​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಮಾಡಿ ಲಕ್ಷಗಟ್ಟಲೆ ಹಣ ಸಂಪಾದಿಸಿ! ಸೂಪರ್ ಐಡಿಯಾ ಇಲ್ಲಿದೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

Reels Offer: ಇದೀಗ ಇನ್​ಸ್ಟಾಗ್ರಾಮ್​ ರೀಲ್ಸ್​ ಮಾಡುವವರಿಗೆ ಹೊಸ ಆಫರ್​ ಒಂದನ್ನು ನೀಡುತ್ತಿದೆ. ಇನ್ಮುಂದೆ ರೀಲ್ಸ್​ ಮಾಡುವ ಮೂಲಕವೂ ಹಣ ಮಾಡಬಹುದಾಗಿದೆ. ಹಾಗಿದ್ರೆ ಇನ್​ಸ್ಟಾಗ್ರಾಮ್​ನ ಈ ಹೊಸ ಫೀಚರ್​ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.

ಮುಂದೆ ಓದಿ ...
  • Share this:

    ಸೋಶಿಯಲ್​ ಮೀಡಿಯಾಗಳ (Social Media) ಬಳಕೆ್ ಇತ್ತೀಚೆಗೆ ವ್ಯಾಪಕವಾಗಿ ಹಬ್ಬಿದೆ. ಸ್ಮಾರ್ಟ್​​ಫೋನ್​ಗಳ ಬಳಕೆ ಯಾವಾಗ ಹೆಚ್ಚಾಯ್ತೋ ಆವಾಗಿನಿಂ ಸೋಶಿಯಲ್​ ಮೀಡಿಯಾಗಳು ಸಹ ಹೊಸ ಹೊಸ ರೀತಿಗಳಲ್ಲಿ ಬರ್ತಾ ಇದೆ. ಅದರಲ್ಲೂ ಇನ್​​ಸ್ಟಾಗ್ರಾಮ್​ ಬಳಕೆದಾರರಿಗೆ ಕಂಪೆನಿ ಏನಾದರೊಂದು ಹೊಸ ಫೀಚರ್​ಗಳನ್ನು ಪರಿಚಯಿಸುತ್ತಿರುತ್ತದೆ. ಟಿಕ್​ಟಾಕ್ (TikTok) ಅಪ್ಲಿಕೇಶನ್ ಬ್ಯಾನ್ ಆದ ನಂತರ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್ (Instagram Reels)​ ಮಾಡುವವರ ಸಂಖ್ಯೆ ಹೆಚ್ಚಾಯ್ತು. ರೀಲ್ಸ್ ಮಾಡ್ತಾನೇ ಈಗ ಎಷ್ಟೋ ಮಂದಿ ಸೆಲಬ್ರಿಟಿಗಳಾಗಿಬಿಟ್ಟಿದ್ದಾರೆ. ಇದು ಟಿಕ್​​ಟಾಕ್​ ನಿಷೇಧದ ನಂತರ ಬಂದಂತಹ ಹೊಸ ಅಪ್ಡೇಟ್​ ಆಗಿದ್ದು, ಇಂದಿಗೆ ಬಹಳಷ್ಟು ಇನ್​ಸ್ಟಾಗ್ರಾಮ್​ ಬಳಕೆದಾರರು ಇದಕ್ಕೆ ಆಕರ್ಷಿತರಾಗಿದ್ದಾರೆ.


    ಇದೀಗ ಇನ್​ಸ್ಟಾಗ್ರಾಮ್​ ರೀಲ್ಸ್​ ಮಾಡುವವರಿಗೆ ಹೊಸ ಆಫರ್​ ಒಂದನ್ನು ನೀಡುತ್ತಿದೆ. ಇನ್ಮುಂದೆ ರೀಲ್ಸ್​ ಮಾಡುವ ಮೂಲಕವೂ ಹಣ ಮಾಡಬಹುದಾಗಿದೆ. ಹಾಗಿದ್ರೆ ಇನ್​ಸ್ಟಾಗ್ರಾಮ್​ನ ಈ ಹೊಸ ಫೀಚರ್​ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.


    ನಿಮ್ಮ ಖಾತೆಯನ್ನು ಪ್ರೊಫೆಶನಲ್ ಆಗಿ ಪರಿವರ್ತಿಸಿ


    ಹೌದು, ಇನ್​​ಸ್ಟಾಗ್ರಾಮ್ ಪರಿಚಯಿಸಿರುವ ರೀಲ್ಸ್​ನಲ್ಲಿ ಹಣ ಮಾಡುವ ಫೀಚರ್​ ಅನ್ನು ಪಡೆಯಬೇಕಾದರೆ ಮೊದಲಿಗೆ ನಿಮ್ಮ ಇನ್​​ಸ್ಟಾಗ್ರಾಮ್ ಅಕೌಂಟ್ ಅನ್ನು ಬ್ಯುಸಿನೆಸ್​ ಅಥವಾ ಕ್ರಿಯೇಟರ್ ಆಗಿ ಬದಲಾವಣೆ ಮಾಡಬೇಕು. ನಂತರ ನಿಮಗೆ ಈ ಆಯ್ಕೆ ದೊರೆಯುತ್ತದೆ. ಇನ್ನು ನೀವು ನಿಮ್ಮ ಅಕೌಂಟ್​ನಲ್ಲಿ ರೀಲ್ಸ್​ ಅನ್ನು ಅಪ್ಲೋಡ್ ಮಾಡ್ಬೇಕು. ನಂತರ ನಿಮಗೆ ಸೆಟ್ಟಿಂಗ್ಸ್​ನಲ್ಲಿ ಕ್ರಿಯೇಟರ್ ಆಯ್ಕೆಯಲ್ಲಿ ಬೋನಸ್ ಎಂಬ ಆಪ್ಷನ್ ಅನ್ನು ನೋಡಬಹುದು.




    ಸಹಾಯ ಪಡೆಯಿರಿ


    ನಿಮ್ಮ ಅಕೌಂಟ್​ ಅನ್ನು ಬ್ಯುಸಿನೆಸ್​ ಅಥವಾ ಕ್ರಿಯೇಟರ್ ಆಗಿ ಪರಿವರ್ತನೆ ಮಾಡಿದ ಬಳಿಕ, ನೀವು ಸೆಟ್ಟಿಂಗ್ಸ್​ನಲ್ಲಿ ಬೋನಸ್ ಆಯ್ಕೆಯನ್ನು ನೋಡಬಹುದು. ಒಂದು ವೇಳೆ ಈ ಆಯ್ಕೆ ಕಾಣದಿದ್ದರೆ ನೀವು ಇನ್​​ಸ್ಟಾ ಹೆಲ್ಪ್​ ಮೂಲಕ ಸಹಾಯವನ್ನು ಪಡೆಯಬಹುದು.


    ಕೆಲವರಿಗೆ ಮಾತ್ರ ಲಭ್ಯ


    ಇನ್ನು ಈ ಬೋನಸ್ ಎಂಬ ಫೀಚರ್​ ಸದ್ಯ ಕೆಲವು ಬಳಕೆದಾರರಿಗೆ ಮಾತ್ರ ಲಭ್ಯ ಇದ್ದು, ಎಲ್ಲಾ ಬಳಕೆದಾರರಿಗೆ ಲಭ್ಯವಾಗುವಂತೆ ಪರೀಕ್ಷೆ ನಡೆಯುತ್ತಿದೆ. ಆದರೆ ಮಾರ್ಚ್ ಅಂತ್ಯದ ವೇಳೆಗೆ ಈ ಫೀಚರ್​ ಎಲ್ಲರಿಗೂ ಲಭ್ಯವಾಗುತ್ತದೆ.


    ಪ್ರತೀ ರೀಲ್​ ಮೂಲಕ 550 ರೂಪಾಯಿವರೆಗೆ ಸಂಪಾದನೆ ಮಾಡ್ಬಹುದು


    ಈ ಹೊಸ ಫೀಚರ್​ ಅನ್ನು ನೀವು ಒಂದು ವೇಳೆ ಹೊಂದಿದ್ದರೆ ಬೋನಸ್ ಎಂಬ ಆಯ್ಕೆಯು ನಿಮ್ಮ ರೀಲ್​ನಲ್ಲಿ ಕಾಣಿಸಿಕೊಳ್ಳುತ್ತದೆ. ನೀವು ಮಾಡಿರುವ ರೀಲ್ಸ್​​ಗೆ ನಿಮ್ಮ ಫಾಲೋವರ್ಸ್​​​ಗಳು ಸ್ಟಾರ್​ ಅನ್ನು ಉಡುಗೊರೆಯಾಗಿ ನೀಡುತ್ತಾರೆ.


    ಸಾಂಕೇತಿಕ ಚಿತ್ರ


    ಏನಿದು ಬೋನಸ್​ ಆಯ್ಕೆ?


    ಬೋನಸ್​ ಆಯ್ಕೆ ಇನ್​ಸ್ಟಾಗ್ರಾಮ್​ನಲ್ಲಿ ಬರಲಿರುವಂತಹ  ಹೊಸ ಅಪ್ಡೇಟ್ ಆಗಿದೆ. ಇದರಲ್ಲಿ ಬಳಕೆದಾರರು ಮಾಡಿದ ರೀಲ್ಸ್​ಗೆ ಅವರ ಫಾಲೋವರ್ಸ್​ಗಳು ಸ್ಟಾರ್​ ಮೂಲಕ ಉಡುಗೊರೆ ನೀಡಬಹುದಾಗಿದೆ. ಈ ಸ್ಟಾರ್​ ನೀಡಲು ವೀವರ್ಸ್​​ಗೆ ನಿಮ್ಮ ರೀಲ್ಸ್​ನ ಮೇಲಿನ ಭಾಗದಲ್ಲಿ ಆಯ್ಕೆ ಕಾಣುತ್ತದೆ.


    ಇದನ್ನೂ ಓದಿ: ಜಿಯೋನ ಈ ರೀಚಾರ್ಜ್​ ಪ್ಲ್ಯಾನ್​ನಲ್ಲಿ ಯಾವುದು ಉತ್ತಮ? ಇಲ್ಲಿದೆ ಕಂಪ್ಲೀಟ್​ ಮಾಹಿತಿ


    ಹೀಗೆ ನಿಮ್ಮ ಫಾಲೋವರ್ಸ್​ಗಳು ನಿಮಗೆ 45 ಸ್ಟಾರ್​ಗಳನ್ನು ನೀಡಿದರೆ ನಿಮಗೆ 95 ರೂಪಾಯಿ ದೊರೆಯುತ್ತದೆ. ಹಾಗೆಯೇ 300 ಸ್ಟಾರ್​ ಪಡೆದರೆ 550 ರೂಪಾಯಿವರೆಗೆ ಹಣವನ್ನು ಪಡೆಯಬಹುದು. ಇನ್ನು ನಿಮ್ಮ ವಿಡಿಯೋನ ಲೈಕ್ಸ್​ಗಳು ಹೆ್ಚ್ಚಾದಂತೆ ನಿಮ್ಮ ಆದಾಯವು ಹೆಚ್ಚಾಗುತ್ತದೆ. ಈ ಫೀಚರ್​ ಎಲ್ಲಾ ಬಳಕೆದಾರರಿಗೆ ಶೇಘ್ರದಲ್ಲೇ ಲಭ್ಯವಾಗುತ್ತದೆ.


    ಈ ಫೀಚರ್ ಸದ್ಯ ಫೇಸ್​ಬುಕ್​ನಲ್ಲಿ ಕಾಣಬಹುದು. ಅದೇ ರೀತಿಯ ಫೀಚರ್ ಇನ್ನೇನು ಕೆಲವೇ ದಿನಗಳಲ್ಲಿ ಇನ್​ಸ್ಟಾಗ್ರಾಮ್​​ನಲ್ಲಿ ಲಭ್ಯವಾಗುತ್ತದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು