HOME » NEWS » Tech » REDMI XL EXPERIENCE TV LAUNCH IN INDIA TODAY CHECK TIME PRICE SPECS AND OTHER DETAILS HG

ರೆಡ್​ಮಿ ‘XL Experience’ ಟಿವಿ ಇಂದು ಮಾರುಕಟ್ಟೆಗೆ; ಹೇಗಿದೆ ಗೊತ್ತಾ?

ಈಗಾಗಲೇ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಹೊಸ ಟಿವಿ ಎರಡು ಆಯ್ಕೆಯಲ್ಲಿ ಸಿಗಲಿದೆ ಎನ್ನಲಾಗುತ್ತಿದೆ. 55 ಮತ್ತು 65 ಇಂಚು ಹೊಂದಿರಲಿದೆ ಎನ್ನಲಾಗುತ್ತಿದೆ. ಜೊತೆಗೆ ಹೆಚ್​​​ಆರ್​ಡಿ 10+ ಮತ್ತು ಡಾಲ್ಬಿ ವಿಷನ್​ ಅಳವಡಿಸಲಾಗಿದೆ.

news18-kannada
Updated:March 17, 2021, 9:21 AM IST
ರೆಡ್​ಮಿ ‘XL Experience’ ಟಿವಿ ಇಂದು ಮಾರುಕಟ್ಟೆಗೆ; ಹೇಗಿದೆ ಗೊತ್ತಾ?
Redmi TV
  • Share this:
ರೆಡ್​ಮಿ ಹೊಸ ಟಿವಿಯೊಂದನ್ನು ಸಿದ್ಧಪಡಿಸಿದ್ದು, ಇಂದು (ಮಾರ್ಚ್​ 17) ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಲೈವ್​ ಕಾರ್ಯಕ್ರಮದ ವೇಳೆ ಹೊಸ ಟಿವಿಯನ್ನು ಕಂಪನಿ ಪರಿಚಯಿಸುತ್ತಿದೆ. ಸ್ಮಾರ್ಟ್​ಫೋನ್​, ಪವರ್​ ಬ್ಯಾಂಕ್​​, ಆಡಿಯೋ ಅಸೆಸ್ಸರೀಸ್​ ಮತ್ತು ವಿವಿಧ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸಿರುವ ರೆಡ್ಮಿ ಇದೀಗ ‘ದಿ ಎಕ್ಸ್​ಎಲ್​ ಎಕ್ಸ್​ಪೀರಿಯನ್ಸ್’​ ಹೊಂದಿರುವ ಟಿವಿಯನ್ನು ರೆಡ್​​ಮಿ ಪರಿಚಯಿಸುತ್ತಿದೆ.

ಕಳೆದ ಬಾರಿ ರೆಡ್​ಮಿ ಇಂಡಿಯಾ ಟ್ವಿಟ್ಟರ್​ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕಂಪನಿ ರೆಡ್​ಮಿ ಟಿವಿ ಪರಿಚಯಿಸುತ್ತಿದ್ದೇವೆ ಎಂದು ತಿಳಿಸಿತ್ತು.

ಕಳೆದ ತಿಂಗಳು ಮನು ಕುಮಾರ್​ ಜೈನ್​​ ರೆಡ್​ಮಿ ನೋಟ್​ 10 ಸ್ಮಾರ್ಟ್​ಫೋನ್​ ಪರಿಚಯಿಸುವ ಸಮಯದಲ್ಲಿ ರೆಡ್​ಮಿ ಟಿವಿ ಪರಿಚಯಿಸುವುದರ ಯೋಜನೆ ಬಗ್ಗೆ ಹೇಳಿಕೊಂಡಿದ್ದರು.

ನಂತರ ‘ನಾವು ನಮ್ಮ ಫೋನ್​ ಪ್ಲಸ್​​ ಕಾರ್ಯತಂತ್ರವನ್ನು ಪ್ರಾರಂಭಿಸಿದ್ದೇವೆ ಮತ್ತು ಪವರ್​ ಬ್ಯಾಂಕ್​, ಫಿಟ್ನೆಸ್​ ಬ್ಯಾಂಡ್​​ಗಳಂತಹ ಹೊಸ ಉತ್ಪನ್ನಗಳನ್ನು ಪ್ರಾರಂಭಿಸಿದ್ದೇವೆ. ಈ ವರ್ಷ  2021ರಲ್ಲಿ ನಾವು ಏನಾದರೂ ದೊಡ್ಡದನ್ನು ಪರಿಚಯಿಸಲು ಹೆಮ್ಮೆಪಡುತ್ತೇವೆ’ ಎಂದು ತಿಳಿಸಿದ್ದರು.

ಅದರಂತೆ ಇಂದು ಹೊಸ ಟಿವಿಯನ್ನು ಪರಿಚಯಿಸಿಲು ಶಿಯೋಮಿ ರೆಡ್​ಮಿ ಮುಂದಾಗಿದೆ. ನೂತನ ಟಿವಿಯ ಬಗ್ಗೆ ಈಗಾಗಗಲೇ ಕುತೂಹಲ ಹುಟ್ಟಿಕೊಂಡಿದೆ. ನೂತನ ಟಿವಿ ಹೇಗಿರಲಿದೆ. ಅದರ ಬೆಲೆ ಎಷ್ಟಿರಲಿದೆ ಕುತೂಹಲದ ಸಂಗತಿಯಾಗಿದೆ.

ಈಗಾಗಲೇ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಹೊಸ ಟಿವಿ ಎರಡು ಆಯ್ಕೆಯಲ್ಲಿ ಸಿಗಲಿದೆ ಎನ್ನಲಾಗುತ್ತಿದೆ. 55 ಮತ್ತು 65 ಇಂಚು ಹೊಂದಿರಲಿದೆ ಎನ್ನಲಾಗುತ್ತಿದೆ. ಜೊತೆಗೆ ಹೆಚ್​​​ಆರ್​ಡಿ 10+ ಮತ್ತು ಡಾಲ್ಬಿ ವಿಷನ್​ ಅಳವಡಿಸಲಾಗಿದೆ. 4ಕೆ ಪ್ಯಾನೆಲ್​ ಹೊಂದಿರುವ ಈ ಟಿವಿಯಲ್ಲಿ ಎಕ್ಸ್​ಎಲ್​ ಆಡಿಯೊ ಎಕ್ಸ್​ಪೀರಿಯನ್ಸ್​ ನೀಡಲಾಗಿದೆ. ಇದರ ಬೆಲೆ 50 ಸಾವಿರದಿಂದ, 55 ಸಾವಿರದವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ. ಮಧ್ಯಾಹ್ನ 12 ಗಂಟೆಗೆ ನಡೆಯುವ ಲೈವ್​ ಕಾರ್ಯಕ್ರಮದ ವೇಳೆ ರೆಡ್​ಮಿ ನೂತನ ಟಿವಿಯ ಕುರಿತಾಗಿ ಎಲ್ಲಾ ಮಾಹಿತಿ ಬಹಿರಂಗವಾಗಲಿದೆ.
Youtube Video


ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಸ್ಯಾಮ್​​ಸಂಗ್​, ಸೋನಿ, ಎಲ್​ಜಿ ಸ್ಮಾರ್ಟ್​ಟಿವಿಗಳು ರಾರಾಜಿಸುತ್ತಿವೆ. ಅದರಂತೆ ಇದೀಗ ರೆಡ್​ಮಿ ಟಿವಿ ಕೂಡ ಅದರ  ಸಾಲಿಗೆ ಸೇರಲಿದೆ ಎಂದು ಹೇಳಲಾಗುತ್ತಿದೆ.
Published by: Harshith AS
First published: March 17, 2021, 9:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories