Redmi TV 70 Launch; ಸೆ. 17ರಂದು ಶಿಯೋಮಿ ಸ್ಮಾರ್ಟ್​ ಟಿವಿ ಮಾರುಕಟ್ಟೆಗೆ; ಇದರ ವಿಶೇಷತೆಯೇನು ಗೊತ್ತಾ.?

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ರೆಡ್​ಮಿ 70 ಟಿವಿ 2GB RAM ಮತ್ತು 16GB ಸ್ಟೊರೇಜ್​​​ ಮಾದರಿಯಲ್ಲಿದೆ.

news18-kannada
Updated:September 7, 2019, 6:43 PM IST
Redmi TV 70 Launch; ಸೆ. 17ರಂದು ಶಿಯೋಮಿ ಸ್ಮಾರ್ಟ್​ ಟಿವಿ ಮಾರುಕಟ್ಟೆಗೆ; ಇದರ ವಿಶೇಷತೆಯೇನು ಗೊತ್ತಾ.?
ಶಿಯೋಮಿ
news18-kannada
Updated: September 7, 2019, 6:43 PM IST
ಶಿಯೋಮಿ ಕಂಪೆನಿ ನೂತನವಾಗಿ ಸಿದ್ಧಪಡಿಸಿದ ರೆಡ್​​ಮಿ 70 LED ಟಿವಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ನೂತನ ಟಿವಿಯನ್ನು ಭಾರತದಲ್ಲಿ ಸೆ. 17 ರಂದು ಬಿಡುಗಡೆಗೊಳಿಸುತ್ತಿದ್ದು, ಅದಕ್ಕಾಗಿ ಈವೆಂಟ್​ವೊಂದನ್ನು ಎರ್ಪಡಿಸಿದೆ.

ಶಿಯೋಮಿ ತನ್ನ ಟ್ವಿಟ್ಟರ್​ ಖಾತೆಯಲ್ಲಿ ರೆಡ್​ಮಿ 70 ಟಿವಿ ಬಿಡುಗಡೆಯ ಕುರಿತು ಟ್ವೀಟ್​ ಮಾಡಿದ್ದು, ಎಂಐ ಟಿವಿ ಬಿಡುಗಡೆ ಬಳಿಕ ರೆಡ್​ಮಿ ಬ್ರಾಂಡ್​ನ ಟಿವಿಯನ್ನು ಮಾರುಕಟ್ಟೆಗೆ ಪರಿಚಯಿಸಲು ತಯಾರಿ ನಡೆಸಲಿದೆ ಎಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ರೆಡ್​ಮಿ 70 ಟಿವಿ 2GB RAM ಮತ್ತು 16GB ಸ್ಟೊರೇಜ್​​​ ಮಾದರಿಯಲ್ಲಿದೆ. ಕ್ವಾಡ್​​ ಕೋರ್​ 64 bit Amlogic Soc, ಡಾಲ್ಬಿ ಆಡಿಯೋ ಮತ್ತು ಡಿಟಿಎಸ್​ HD ಟೆಕ್ನಾಲಜಿಯನ್ನು ಹೊಂದಿದೆ.

ಬೆಂಗಳೂರಿನಲ್ಲಿ ಸೆ. 17 ರಂದು ಶಿಯೋಮಿ ಸ್ಟಾರ್ಟರ್​ ಲೀವಿಂಗ್​ 2020 ಕಾರ್ಯಕ್ರಮ ನಡೆಯಲಿದ್ದು, ಆ ಸಂದರ್ಭದಲ್ಲಿ ರೆಡ್​ಮಿ ಟಿವಿ ಹಾಗೂ ಕೆಲವೊಂದು ಉಪಕರಣಗಳನ್ನು ಪರಿಚಯಿಸುವುದಾಗಿ ತಿಳಿಸಿದೆ.

 





ಈಗಾಗಲೇ ಶಿಯೋಮಿ ರೆಡ್​ಮಿ 70 ಟಿವಿ ಚೀನಾದಲ್ಲಿ ಆಗಸ್ಟ್​ ತಿಂಗಳಿನಲ್ಲಿ ಬಿಡುಗಡೆಯಾಗಿದೆ. ಇದರ ಅಂದಾಜು ಬೆಲೆ 38,000 ರೂ ಎನ್ನಲಾಗಿದೆ.
First published:September 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...