• Home
 • »
 • News
 • »
 • tech
 • »
 • Redmi Note 12 Series: ಹೊಸವರ್ಷಕ್ಕೆ ಭಾರತಕ್ಕೆ ಕಾಲಿಡುತ್ತಿದೆ ರೆಡ್​ಮಿ ಸ್ಮಾರ್ಟ್​ಫೋನ್​! ಏನಿರಲಿದೆ ಸ್ಪೆಷಲ್​ ಫೀಚರ್ಸ್​

Redmi Note 12 Series: ಹೊಸವರ್ಷಕ್ಕೆ ಭಾರತಕ್ಕೆ ಕಾಲಿಡುತ್ತಿದೆ ರೆಡ್​ಮಿ ಸ್ಮಾರ್ಟ್​ಫೋನ್​! ಏನಿರಲಿದೆ ಸ್ಪೆಷಲ್​ ಫೀಚರ್ಸ್​

ರೆಡ್​ಮಿ ನೋಟ್​ 12 ಸೀರಿಸ್​

ರೆಡ್​ಮಿ ನೋಟ್​ 12 ಸೀರಿಸ್​

ಈ ಶಿಯೋಮಿ ಕಂಪನಿ ತನ್ನ ಬ್ರಾಂಡ್​ನ ಅಡಿಯಲ್ಲಿ ರೆಡ್​ಮಿ ನೋಟ್​ 12 ಸೀರಿಸ್​ ಅನ್ನು ಹೊಸವರ್ಷಕ್ಕೆ ಬಿಡುಗಡೆ ಮಾಡುವುದಾಗಿ ಹೇಳಿದೆ. ಇದು ಹೊಸವರ್ಷಕ್ಕೆ ಕಾಲಿಡುತ್ತಿರುವ ಮದಲ ಸ್ಮಾರ್ಟ್​ಫೋನ್​ ಆಗಿದ್ದು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಲಿದೆ.

 • Share this:

  ಸ್ಮಾರ್ಟ್​ಫೋನ್​ಗಳ ಕಂಪನಿಯಲ್ಲಿ (Smartphone Company) ಬಹಳ ಮುಂಚೂಣಿಯಲ್ಲಿರುವ ಕಂಪನಿಯೆಂದರೆ ಶಿಯೋಮಿ ಕಂಪನಿ (Xiaomi Company). ಚೀನಾ (China) ಮೂಲದ್ದಾಗಿರುವ ಶಿಯೋಮಿ ಕಂಪನಿ ತನ್ನ ಬ್ರಾಂಡ್​ನ ಅಡಿಯಲ್ಲಿ ಭಾರತದಲ್ಲಿ (India) ಇದುವರೆಗೆ ಬಹಳಷ್ಟು ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸಿದೆ. ಆದರೆ ಇತ್ತೀಚೆಗೆ ಶಿಯೋಮಿ ತನ್ನ ಕಂಪನಿಯಿಂದ ಮೊಬೈಲ್​ಗಳನ್ನು ಉತ್ಪಾದನೆ ಮಾಡುವುದನ್ನು ಕಡಿಮೆ ಮಾಡಿದೆ. ಆದರೆ ಈಗ ರೆಡ್​ಮಿ ಗ್ರಾಹಕರಿಗೆ ಶಿಯೋಮಿ ಕಂಪನಿ ಶುಭಸುದ್ದಿಯನ್ನು ನೀಡುತ್ತಿದೆ. ಶಿಯೋಮಿ ಕಂಪನಿ ಭಾರತದಲ್ಲಿ ಒಂದು ಪವರ್​ಫುಲ್​ ಸ್ಮಾರ್ಟ್​ಫೋನ್ ಅನ್ನು ಪರಿಚಯಿಸುತ್ತಿದೆ. ಈ ಸ್ಮಾರ್ಟ್​ಫೋನ್ ರೆಡ್​ಮಿ ನೋಟ್​ 12 ಸೀರಿಸ್​ (Redmi Note 12 Series) ಆಗಿದೆ. ಇದು ಹೊಸವರ್ಷದ ಮೊದಲ ಸ್ಮಾರ್ಟ್​ಫೋನ್ ಆಗಲಿದೆ ಎಂದು ತಂತ್ರಜ್ಞರು ಹೇಳುತ್ತಾರೆ. ರೆಡ್​ಮಿ ನೋಟ್​ 12 ಸೀರಿಸ್​ನ ಅಡಿಯಲ್ಲಿ ರೆಡ್ಮಿ ನೋಟ್ 12 (Redmi Note 12), ರೆಡ್ಮಿ ನೋಟ್ 12 ಪ್ರೋ (Redmi Note 12 Pro) ಮತ್ತು ರೆಡ್ಮಿ ನೋಟ್ 12 ಪ್ರೋ+ (Redmi Note 12 Pro +) ಎಂಬ ಮೂರು ಸ್ಮಾರ್ಟ್​ಫೋನ್​ಗಳು ಬಿಡುಗಡೆಯಾಗಲಿವೆ.


  ಶಿಯೋಮಿ ಕಂಪನಿ ತನ್ನ ಬ್ರಾಂಡ್​ನ ಅಡಿಯಲ್ಲಿ ರೆಡ್​ಮಿ ನೋಟ್​ 12 ಸೀರಿಸ್​ ಅನ್ನು ಹೊಸವರ್ಷಕ್ಕೆ ಬಿಡುಗಡೆ ಮಾಡುವುದಾಗಿ ಹೇಳಿದೆ. ಇದು ಹೊಸವರ್ಷಕ್ಕೆ ಕಾಲಿಡುತ್ತಿರುವ ಮದಲ ಸ್ಮಾರ್ಟ್​ಫೋನ್​ ಆಗಿದ್ದು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಲಿದೆ.


  ಡಿಸ್​ಪ್ಲೇ ಫೀಚರ್ಸ್​


  ರೆಡ್​ಮಿ ನೋಟ್​ 12 ಸೀರಿಸ್​ನ ಅಡಿಯಲ್ಲಿ ಬಿಡುಗಡೆ ಮಾಡುತ್ತಿರುವ 3 ಸ್ಮಾರ್ಟ್​ಫೋನ್​ಗಳಲ್ಲಿ ರೆಡ್​​ಮಿ ನೋಟ್​ 12 ಪ್ರೋ + ಸ್ಮಾರ್ಟ್​ಫೊನ್​ ಬಹಳಷ್ಟು ಫೀಚರ್ಸ್​ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ. ಈ ಸ್ಮಾರ್ಟ್​ಫೋನ್ಸ್​ 2400 x 1080 ಪಿಕ್ಸೆಲ್​ ರೆಸಲ್ಯೂಶನ್​ನೊಂದಿಗೆ 6.67 ಇಂಚಿನ ಫುಲ್ ಹೆಚ್​​ಡಿ ಪ್ಲಸ್​ ಡಿಸ್​ಪ್ಲೇಯನ್ನು ಹೊಂದಿರಲಿದೆ.


  ಇದನ್ನೂ ಓದಿ: ಜಿಯೋದಿಂದ ಬಿಡುಗಡೆಯಾಯ್ತು ನೋಡಿ 100 ರೂಪಾಯಿ ಒಳಗಿನ ರೀಚಾರ್ಜ್​ ಪ್ಲಾನ್​ಗಳು! ಜಿಯೋ ಗ್ರಾಹಕರಿಗೆ ಬಂಪರ್ ಆಫರ್


  120Hz ರಿಫ್ರೆಶ್ ರೇಟ್​ ಮತ್ತು 240Hz ಟಚ್​ ಸ್ಯಾಂಪ್ಲಿಂಗ್​ ರೇಟ್​ ಅನ್ನು ಹೊಂದಿರಲಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 1080 SoC ಪ್ರೊಸೆಸರ್​ನಲ್ಲಿ ಕಾರ್ಯನಿರ್ವಹಿಸಲಿದೆ. ಅದೇ ರೀತಿ ಈ ಸೀರಿಸ್​ನ ರೆಡ್​ಮಿ ನೋಟ್​ 12 ಪ್ರೋ ಕೂಡ ಇದೇ ಪ್ರೊಸೆಸರ್​ನಿಂದ ಕೂಡಿದೆ. ಆದರೆ ರೆಡ್​ಮಿ ನೋಟ್​ 12 ಮಾತ್ರ ಸ್ನ್ಯಾಪ್​​ಡ್ರಾಗನ್​ 4 ಜೆನ್​ 1 ಪ್ರೊಸೆಸರ್​​ನಿಂದ ಕಾರ್ಯನಿರ್ವಹಿಸುತ್ತದೆ. ಡಿಸ್​ಪ್ಲೇ ಫೀಚರ್ಸ್​​ ಮಾತ್ರ ಮೂರೂ ಒಂದೇ ರೀತಿಯಾಗಿದೆ.


  ರೆಡ್​ಮಿ ನೋಟ್​ 12 ಸೀರಿಸ್​


  ಕ್ಯಾಮೆರಾ ಫೀಚರ್ಸ್​


  ರೆಡ್​ಮಿ ನೋಟ್​ 12: ಈ ಸ್ಮಾರ್ಟ್​ಫೋನ್​ನ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದರ ಸೆಕೆಂಡರಿ ಕ್ಯಾಮೆರಾ 2 ಮೆಗಾಪಿಕ್ಸೆಲ್​ನಿಂದ ಕೂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ನಲ್ಲಿ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ.


  ರೆಡ್​ಮಿ ನೋಟ್​ 12 ಪ್ರೋ: ಈ ಸ್ಮಾರ್ಟ್​ಫೋನ್​ ಮಾತ್ರ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್​ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದ್ದು, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ನೊಂದಿಗೆ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ.


  ರೆಡ್​ಮಿ ನೋಟ್​ 12 ಪ್ರೋ+: ಈ ಸ್ಮಾರ್ಟ್​ಫೋನ್​ ಕೂಡ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್​ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾವೇ ವಿಶೇಷವಾಗಿ 200 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಸೆಲ್ಫಿ ಕ್ಯಾಮೆರಾ ಕಾರ್ಯನನಿರ್ವಹಿಸುತ್ತದೆ.


  ರೆಡ್​ಮಿ ನೋಟ್​ 12 ಸೀರಿಸ್​


  ಬ್ಯಾಟರಿ ಸಾಮರ್ಥ್ಯ


  ರೆಡ್​ಮಿ ನೋಟ್​ ಸೀರಿಸ್​ನಲ್ಲಿ ಬಿಡುಗಡೆಯಾಗುವಂತಹ ಮೂರು ಸ್ಮಾರ್ಟ್​ಫೋನ್​ಗಳು 5000mAh ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿರುತ್ತದೆ. ಆದರೆ ನೋಟ್ 12 33W ವೇಗದ ಚಾರ್ಜಿಂಗ್‌, ನೋಟ್ 12 ಪ್ರೋ 67W ವೇಗದ ಚಾರ್ಜಿಂಗ್‌ ಹಾಗೂ ನೋಟ್ 12 ಪ್ರೋ+ 210W ಚಾರ್ಜಿಂಗ್‌ ವೇಗದ ಚಾರ್ಜಿಂಗ್ ಫೀಚರ್ಸ್​ ಅನ್ನು ಹೊಂದಿದೆ.


  ವಿಶೇಷ ಏನೆಂದರೆ ರೆಡ್​ಮಿ ನೋಟ್​ 12 ಪ್ರೋ+ ಸ್ಮಾರ್ಟ್​ಫೋನ್ ಮಾತ್ರ ಕೇವಲ 9 ನಿಮಿಷಗಳಲ್ಲಿ ಫುಲ್ ಚಾರ್ಜ್​ ಆಗುತ್ತದೆ.


  ಈ ಸ್ಮಾರ್ಟ್​ಫೋನ್​ನ ಬೆಲೆಗಳು


  ಇದೀಗ ಈ ಸ್ಮಾರ್ಟ್​ಫೋನ್​ ಚೀನಾ ಮೊಬೈಲ್​ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯನ್ನು ಪಡೆದಿದೆ. ಆದರೆ ಭಾರತದಲ್ಲಿ ಬಿಡುಗಡೆಯ ಸಮಯ ಮತ್ತು ಫೀಚರ್ಸ್​ ಮಾತ್ರ ಬಿಡುಗಡೆಯಾಗಿದ್ದು ಇದರ ಬೆಲೆಯ ಬಗ್ಗೆ ಇನ್ನೂ ನಿರ್ದಿಷ್ಟವಾಗಿ ಕಂಪನಿ ಬಹಿರಂಗಪಡಿಸಿಲ್ಲ. ರೆಡ್ಮಿ ನೋಟ್‌ 12 5ಜಿ ಸ್ಮಾರ್ಟ್​​ಫೋನ್​ನ ಚೀನಾದಲ್ಲಿ ಆರಂಭಿಕ ಬೆಲೆ CNY 1,199 ಆಗಿದೆ ಅಂದರೆ ಭಾರತದಲ್ಲಿ ಅಂದಾಜು 13,600ರೂಪಾಯಿಯಾಗಿದೆ. ರೆಡ್ಮಿ ನೋಟ್‌ 12 ಪ್ರೊ 5ಜಿ ಸ್ಮಾರ್ಟ್​ಫೋನ್​ನ ಆರಂಭಿಕ ಬೆಲೆ CNY 1,699, ಅಂದರೆ ಭಾರತದಲ್ಲಿ ಅಂದಾಜು 19,300ರೂಪಾಯಿಯಾಗಿದೆ. ರೆಡ್ಮಿ ನೋಟ್‌ 12 ಪ್ರೊ+ 5ಜಿ ಮೊಬೈಲ್​ನ ಆರಂಭಿಕ ಬೆಲೆ CNY 2,199 ಆಗಿದೆ ಅಂದರೆ ಭಾರತದಲ್ಲಿ ಅಂದಾಜು 25,500ರೂಪಾಯಿಯಾಗಿರುತ್ತದೆ.

  Published by:Prajwal B
  First published: