ಅಮೆಜಾನ್​ನಲ್ಲಿ ಮಾರಾಟ ಪ್ರಾರಂಭಿಸಿದ ರೆಡ್​ಮಿ ನೋಟ್​ 9 ಪ್ರೊ ಮ್ಯಾಕ್ಸ್​​ ಸ್ಮಾರ್ಟ್​ಫೋನ್; ಎಷ್ಟು ಬೆಲೆ? ಇಲ್ಲಿದೆ ಮಾಹಿತಿ

Redmi Note 9 Pro Max: ನೂತನ ಸ್ಮಾರ್ಟ್​ಫೋನ್​​​ 6.67 ಇಂಚಿನ ಪುಲ್​​ HD​+ ಐಪಿಎಸ್​​ ಡಿಸ್​ಪ್ಲೇಯನ್ನು ಹೊಂದಿದ್ದು, ಒಕ್ಟಾ ಕೋರ್​​ ಕ್ವಾಲ್​ಕ್ಯಾಮ್​​​ ಸ್ನಾಪ್​ಡ್ರ್ಯಾಗನ್​​​​ 720G Soc ಪ್ರೊಸೆಸರ್​ ಕಾರ್ಯ ನಿರ್ವಹಿಸುತ್ತಿದೆ. ಆ್ಯಂಡ್ರಾಯ್ಡ್​​ 10 ಬೆಂಬಲವನ್ನು ಪಡೆದಿದೆ.

news18-kannada
Updated:May 27, 2020, 4:29 PM IST
ಅಮೆಜಾನ್​ನಲ್ಲಿ ಮಾರಾಟ ಪ್ರಾರಂಭಿಸಿದ ರೆಡ್​ಮಿ ನೋಟ್​ 9 ಪ್ರೊ ಮ್ಯಾಕ್ಸ್​​ ಸ್ಮಾರ್ಟ್​ಫೋನ್; ಎಷ್ಟು ಬೆಲೆ? ಇಲ್ಲಿದೆ ಮಾಹಿತಿ
ರೆಡ್​ಮಿ ನೋಟ್​ 9 ಪ್ರೊ ಮ್ಯಾಕ್ಸ್
  • Share this:
Redmi Note 9 Pro Max | ರೆಡ್​ಮಿ ನೋಟ್​ 9 ಪ್ರೊ ಮ್ಯಾಕ್ಸ್​​ ಸ್ಮಾರ್ಟ್​ಫೋನ್​ ಭಾರತದಲ್ಲಿ ಮಾರಾಟ ಪ್ರಾರಂಭಿಸಿದೆ. ಆನ್​ಲೈನ್​ ಮಳಿಗೆಯಾದ ಅಮೆಜಾನ್​ ಮತ್ತು ಮಿ.ಕಾಮ್​​ ಸೈಟ್​ನಲ್ಲಿ ಮಾರಾಟ ಮಾಡುವ ಮೂಲಕ ಗ್ರಾಹಕರಿಗೆ ಖರೀದಿಗೆ ಅವಕಾಶ ನೀಡಿದೆ. ರೆಡ್​ಮಿ ನೋಟ್​ 9 ಪ್ರೊ ಮ್ಯಾಕ್ಸ್​​ ಸ್ಮಾರ್ಟ್​ಫೋನ್​​ ಮಾರ್ಚ್​ ತಿಂಗಳಿನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಆದರೆ ಕೊರೋನಾ ಲಾಕ್​ಡೌನ್​ನಿಂದಾಗಿ ಭಾರತದಲ್ಲಿ ಮಾರಾಟವನ್ನು ಪ್ರಾರಂಭಿಸಿರಲಿಲ್ಲ. ಇದೀಗ ಅಮೆಜಾನ್​​ ಮತ್ತು ಮಿ.ಕಾಮ್​ ಸೈಟ್​ನಲ್ಲಿ ಬಿಡುವ ಮೂಲಕ ಮಾರಾಟವನ್ನು ಪ್ರಾರಂಭಿಸಿದೆ.

ರೆಡ್​ಮಿ ನೋಟ್​ 9 ಪ್ರೊ ಮ್ಯಾಕ್ಸ್​​ ಸ್ಮಾರ್ಟ್​ಫೋನ್ ವಿಶೇಷತೆ:

ನೂತನ ಸ್ಮಾರ್ಟ್​ಫೋನ್​​​ 6.67 ಇಂಚಿನ ಪುಲ್​​ HD​+ ಐಪಿಎಸ್​​ ಡಿಸ್​ಪ್ಲೇಯನ್ನು ಹೊಂದಿದ್ದು, ಒಕ್ಟಾ ಕೋರ್​​ ಕ್ವಾಲ್​ಕ್ಯಾಮ್​​​ ಸ್ನಾಪ್​ಡ್ರ್ಯಾಗನ್​​​​ 720G Soc ಪ್ರೊಸೆಸರ್​ ಕಾರ್ಯ ನಿರ್ವಹಿಸುತ್ತಿದೆ. ಆ್ಯಂಡ್ರಾಯ್ಡ್​​ 10 ಬೆಂಬಲವನ್ನು ಪಡೆದಿದೆ. 8GB RAM ​ ಮತ್ತು 128GB ಸ್ಟೊರೇಜ್​ ಆಯ್ಕೆಯನ್ನು ಹೊಂದಿದೆ. 512GB ವರೆಗೆ ಸ್ಟೊರೇಜ್​ ಆಯ್ಕೆಯನ್ನು ಹಿಗ್ಗಿಸಬಹುದಾಗಿದೆ.

ಕ್ಯಾಮೆರಾ:

ರೆಡ್​ಮಿ ನೋಟ್​ 9 ಪ್ರೊ ಮ್ಯಾಕ್ಸ್​​ ಸ್ಮಾರ್ಟ್​ಫೋನ್​​ನಲ್ಲಿ 64 ಮೆಗಾಫಿಕ್ಸೆಲ್​​​​​ ಪ್ರೈಮರಿ ಸೆನ್ಸಾರ್​​, 8 ಮೆಗಾಫಿಕ್ಸೆಲ್​​​ ಸೆಕೆಂಡರಿ ಸೆನ್ಸಾರ್​ ಮತ್ತು ಅಲ್ಟ್ರಾ ವೈಡ್​ ಆ್ಯಂಗಲ್​​ ಲೆನ್ಸ್​​​​​, 5 ಮೆಗಾಫಿಕ್ಸೆಲ್​​​​​​ ಮಾಕ್ರೊ ಶೂಟರ್​ ಮತ್ತು 2 ಮೆಗಾಫಿಕ್ಸೆಲ್​​ ಡೆಪ್ತ್​ ಸೆನ್ಸಾರ್​ ಹೊಂದಿದೆ. ಇನ್ನು ಸೆಲ್ಫಿಗಾಗಿ  32 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಅಳವಡಿಸಲಾಗಿದೆ.

4G ವೋಲ್ಟ್​​ ಸ್ಮಾರ್ಟ್​ಫೋನ್​ ಇದಾಗಿದ್ದು, ವೈ-ಫೈ, ಬ್ಲೂಟೂತ್​​, GPS/A-GPS​, ಯುಎಸ್​ಬಿ ಟೈಪ್​​​-ಸಿ, 3.5mm​ ಹೆಡ್​ಫೋನ್​ ಜಾಕ್​​, ಫಿಂಗರ್​ ಪ್ರಿಂಟ್​ ಸೆನ್ಸಾರ್​​ ನೀಡಲಾಗಿದೆ. ಧೀರ್ಘಕಾಲದ ಬ್ಯಾಟರಿಗಾಗಿ 5,020mAh​​​​ ಬ್ಯಾಟರಿಯನ್ನು ರೆಡ್​ಮಿ ನೋಟ್​ 9 ಪ್ರೊ ಮ್ಯಾಕ್ಸ್​​ ಸ್ಮಾರ್ಟ್​ಫೋನ್ ಒಳಗೊಂಡಿದೆ.

ಬೆಲೆ:ರೆಡ್​ಮಿ ನೋಟ್​ 9 ಪ್ರೊ ಮ್ಯಾಕ್ಸ್​​ ಸ್ಮಾರ್ಟ್​ಫೋನ್ ಮೂರು ವೆರಿಯಂಟ್​ಗಳಲ್ಲಿ ಗ್ರಾಹಕರಿಗೆ ಸಿಗಲಿದೆ. 6GB RAM+ 64GB ಸ್ಟೊರೇಜ್​​ ನೀಡಲಾಗಿದ್ದು, ಇದರ ಬೆಲೆ 16,499 ರೂ ಇರಲಿದೆ. 6GB RAM​+128GB ಸ್ಟೊರೇಜ್​ ಆಯ್ಕೆಯ ಸ್ಮಾರ್ಟ್​ಫೋನ್​ ಬೆಲೆ 17,999 ರೂ. ಹಾಗೂ 8GB + 128GB ವೆರಿಯಂಟ್​​ನಲ್ಲಿ ಸಿಗುವ ರೆಡ್​ಮಿ ನೋಟ್​ 9 ಪ್ರೊ ಮ್ಯಾಕ್ಸ್​​ ಸ್ಮಾರ್ಟ್​ಫೋನ್ ಬೆಲೆ 19,999 ರೂ ಇರಲಿದೆ.

Work From Home: ಉದ್ಯೋಗಿಗಳಿಗೆ ಲಾಪ್​ಟಾಪ್​ ಖರೀದಿಸಲು 75 ಸಾವಿರ ರೂಪಾಯಿ ನೀಡಿದ ಗೂಗಲ್

ನಕ್ಕು ನಗಲು ತಯಾರಾಗಿರಿ; ಮತ್ತೆ ಬರಲಿದೆ ‘ಮಜಾ ಟಾಕೀಸ್​‘
First published: May 27, 2020, 2:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading