ಮಾರುಕಟ್ಟೆಯಲ್ಲಿ ಇಂದು ಬಿಡುಗಡೆಯಾದ ರೆಡ್​ಮಿ ನೋಟ್​ 8 ಪ್ರೊ, ರೆಡ್​ಮಿ ನೋಟ್​ 8 ಸ್ಮಾರ್ಟ್​ಫೋನ್​

ಹೊಸ ರೆಡ್​ಮಿ ನೋಟ್​ 8 ಪ್ರೊ ಸ್ಮಾರ್ಟ್​ಫೋನ್​ 6.53  ಇಂಚಿನ ಫುಲ್​ HD+ ರೆಸಲ್ಯೂಷನ್​ ಡಿಸ್​​ಪ್ಲೇ ಹೊಂದಿದೆ. ನೀರು ಮತ್ತು ಧೂಳಿನಿಂದ ರಕ್ಷಿಸಲು IP52 ತಂತ್ರಜ್ಞಾನವನ್ನು ಅಳವಡಿಸಿದೆ.

news18
Updated:August 29, 2019, 3:10 PM IST
ಮಾರುಕಟ್ಟೆಯಲ್ಲಿ ಇಂದು ಬಿಡುಗಡೆಯಾದ ರೆಡ್​ಮಿ ನೋಟ್​ 8 ಪ್ರೊ, ರೆಡ್​ಮಿ ನೋಟ್​ 8 ಸ್ಮಾರ್ಟ್​ಫೋನ್​
ರೆಡ್​ಮಿ ನೋಟ್​ 8 ಪ್ರೊ
  • News18
  • Last Updated: August 29, 2019, 3:10 PM IST
  • Share this:
ಶಿಯೋಮಿ ಕಂಪೆನಿ ನೂತನವಾಗಿ ತಯಾರಿಸಿದ ರೆಡ್​ಮಿ ನೋಟ್​ 8 ಮತ್ತು ನೋಟ್​ 8 ಪ್ರೊ ಸ್ಮಾರ್ಟ್​ಫೋನ್​ ಇಂದು ಚೀನಾದಲ್ಲಿ ಬಿಡುಗಡೆಯಾಗುತ್ತಿದೆ. ಚೀನಾದ ಬೀಜಿಂಗ್​ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ನೂತನ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸಲಾಗುತ್ತಿದೆ. ಇದರ ಜೊತೆಗೆ ರೆಡ್​ಮಿಬುಕ್​ 14 ಲ್ಯಾಪ್​ಟಾಪ್​ ಮತ್ತು ರೆಡ್​ಮಿ ಟಿವಿ ಸರಣಿಗಳನ್ನು ಬಿಡುಗಡೆ ಮಾಡಲು ಕಂಪೆನಿ ಮುಂದಾಗಿದೆ.

ಗ್ರಾಹಕರಿಗಾಗಿ ಶಿಯೋಮಿ ರೆಡ್​ಮಿ ನೋಟ್​ 8 ಮತ್ತು ನೋಟ್​ 8 ಪ್ರೊ ಸ್ಮಾರ್ಟ್​ಫೋನ್​ ಬಿಡುಗಡೆ ಕಾರ್ಯಕ್ರಮವನ್ನು ಕಂಪೆನಿಯ ಅಧಿಕೃತ ವೆಬ್​ಸೈಟ್​ನಲ್ಲಿ ಹಾಗೂ ಲೈವ್ ಕಾರ್ಯಕ್ರಮವನ್ನು ವೈಬೋ ಸೈಟ್​ನಲ್ಲಿ ಪ್ರಸಾರ ಮಾಡುತ್ತಿದೆ.

ರೆಡ್​ಮಿ ನೋಟ್​ 8 ಪ್ರೊ

ಹೊಸ ರೆಡ್​ಮಿ ನೋಟ್​ 8 ಪ್ರೊ ಸ್ಮಾರ್ಟ್​ಫೋನ್​ 6.53  ಇಂಚಿನ ಫುಲ್​ HD+ ರೆಸಲ್ಯೂಷನ್​ ಡಿಸ್​​ಪ್ಲೇ ಹೊಂದಿದೆ. ನೀರು ಮತ್ತು ಧೂಳಿನಿಂದ ರಕ್ಷಿಸಲು IP52 ತಂತ್ರಜ್ನಾನವನ್ನು ಅಳವಡಿಸಿದೆ.

ನೂತನ ಸ್ಮಾರ್ಟ್​ಫೋನ್​ 6GB RAM​ ಮತ್ತು ​ 8GB ವೆರಿಯಂಟ್​ಗಳಲ್ಲಿ ಪರಿಚಯಿಸುತ್ತಿದೆ. 128GB ಸ್ಟೊರೇಜ್​ ಅನ್ನು ಹೊಂದಿದೆ. ಸ್ಮಾರ್ಟ್​ಪೋನಿನಲ್ಲಿ ಕ್ವಾಡ್​ ರಿಯರ್​ ಕ್ಯಾಮೆರಾವನ್ನು ನೀಡಲಾಗಿದ್ದು, ಸ್ಯಾಮ್​ಸಂಗ್​​ ಐಸೋಸೆಲ್ GW 64 ಮೆಗಾಫಿಕ್ಸೆಲ್​  ಸೆನ್ಸಾರ್​ ಹೊಂದಿರುವ ಎಫ್​/1.7 ಪ್ರೈಮರಿ ಕ್ಯಾಮೆರಾವನ್ನು ನೀಡಲಾಗಿದೆ. 8 ಮೆಗಾಫ್ಸೆಲ್​​​​ ಅಲ್ಟ್ರಾ ವೈಡ್​​ ಕ್ಯಾಮೆರಾ, 2 ಮೆಗಾಫಿಕ್ಸೆಲ್​​ ಮಾಕ್ರೊ ಕ್ಯಾಮೆರಾ ಜೊತೆಗೆ 2 ಮೆಗಾಫಿಕ್ಸೆಲ್​ ಅಸಿಸ್ಟಿಂಗ್​ ಕ್ಯಾಮೆರಾವನ್ನು ನೀಡಲಾಗಿದೆ. ಸ್ಮಾರ್ಟ್​ಫೋನ್​ ಮುಂಭಾಗದಲ್ಲಿ 20 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ಸ್ಮಾರ್ಟ್​ಫೋನ್​ ಮೀಡಿಯಾಟೆಕ್ ಹೆಲಿಯೋ G90Tನಿಂದ ಕಾರ್ಯನಿರ್ವಹಿಸುತ್ತಿದೆ.

ರೆಡ್​ಮಿ ನೋಟ್​ 8 ಪ್ರೊ ಸ್ಮಾರ್ಟ್​ಫೋನ್​ ಧೀರ್ಘ ಕಾಲದ ಬಳಕೆಗಾಗಿ 4,500 mAh​ ಬ್ಯಾಟರಿ ನೀಡಲಾಗಿದೆ. ಸ್ಮಾರ್ಟ್​ಫೋನ್​ ​ವೇಗವಾಗಿ ಚಾರ್ಜ್​ ಮಾಡಲು ಕ್ವಿಕ್​ ಚಾರ್ಜ್​ 4+ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ರೆಡ್​ಮಿ ನೋಟ್​​​ 8ರೆಡ್​ಮಿ ನೋಟ್​ 8 ಸ್ಮಾರ್ಟ್​ಫೋನ್​ 6.53 ಇಂಚಿನ ಡಿಸ್​​ಪ್ಲೇ ಹೊಂದಿದ್ದು, ಸ್ನಾಪ್​ ಡ್ರ್ಯಾಗನ್​ 665 Socಯಿಂದ ಕಾರ್ಯನಿರ್ವಹಿಸುತ್ತಿದೆ. ನೂತನ ಸ್ಮಾರ್ಟ್​ಫೋನ್​ನಲ್ಲಿರುವ​ ಪ್ರೈಮರಿ ಕ್ಯಾಮೆರಾ 48 ಮೆಗಾಫಿಕ್ಸೆಲ್​ ​ಸೆನ್ಸಾರ್​ ಹೊಂದಿದೆ. ಜೊತೆಗೆ 4GB RAM​  ಹಾಗೂ 64GB ಸ್ಟೊರೇಜ್​ ಆಯ್ಕೆಯನ್ನು ನೀಡಲಾಗಿದೆ.

ಇನ್ನು ರೆಡ್​ಮಿ ನೋಟ್ 8​ ಸ್ಮಾರ್ಟ್​ಫೋನ್​ ಬೆಲೆಯನ್ನು 12,000 ರೂಪಾಯಿ. ರೆಡ್​ಮಿ ನೋಟ್​ 8 ಪ್ರೊ ಸ್ಮಾರ್ಟ್​ಫೋನ್​ ಬೆಲೆಯನ್ನು 21,000 ರೂಪಾಯಿಯೆಂದು ಅಂದಾಜಿಸಲಾಗಿದೆ
First published:August 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading