ಭಾರತದ ಮಾರುಕಟ್ಟೆಯಲ್ಲಿ ದಾಖಲೆ ನಿರ್ಮಿಸಿದ ಚೀನಾದ ಸ್ಮಾರ್ಟ್​ಫೋನ್​ ಯಾವುದು ಗೊತ್ತಾ?

ರೆಡ್​ಮಿ ನೋಟ್​ 7 ಪ್ರೋ ಸ್ಮಾರ್ಟ್​ಪೋನ್​ ಕೂಡ ಬಿಡುಗಡೆಯಾದ ಮೊದಲ ತಿಂಗಳಿನಲ್ಲೇ 1 ಮಿಲಿಯನ್​ನಷ್ಟು ಮಾರಾಟವಾಗಿತ್ತು. ಇದೀಗ ರೆಡ್​ಮಿ ನೋಟ್​ 7 ಸ್ಮಾರ್ಟ್​ಫೋನ್​​ ಕೂಡ 2 ಮಿಲಿಯನಷ್ಟು ಮಾರಾಟವಾಗಿ ದಾಖಲೆ ಬರೆದಿದೆ.

news18
Updated:June 26, 2020, 5:49 PM IST
ಭಾರತದ ಮಾರುಕಟ್ಟೆಯಲ್ಲಿ ದಾಖಲೆ ನಿರ್ಮಿಸಿದ ಚೀನಾದ ಸ್ಮಾರ್ಟ್​ಫೋನ್​ ಯಾವುದು ಗೊತ್ತಾ?
ರೆಡ್​ಮಿ ನೋಟ್​ 7
  • News18
  • Last Updated: June 26, 2020, 5:49 PM IST
  • Share this:
ಪ್ರತಿಷ್ಠಿತ ಶಿಯೋಮಿ ಕಂಪೆನಿಯ ರೆಡ್​ಮಿ ನೋಟ್​ 7 ಮೊಬೈಲ್​ ತನ್ನ ಮಾರಾಟದಿಂದ ದಾಖಲೆಯನ್ನು ನಿರ್ಮಿಸಿದೆ. ಭಾರತದಾದ್ಯಂತ 14 ಕೋಟಿಯಷ್ಟು ಮಾರಾಟವಾಗಿ  ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಹವಾ ಸೃಷ್ಠಿಸಿದೆ. ವಿಶೇಷ ಫೀಚರ್​ ಮತ್ತು ಬೆಲೆಯ ಮೂಲಕ ಗ್ರಾಹಕರ ಮನಗೆದ್ದ ರೆಡ್​ಮಿ ನೋಟ್​ 7 ಸ್ಮಾರ್ಟ್​ಫೋನ್​ ಇದೀಗ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಮಾರಾಟವಾಗಿದೆ.

ಅಂತೆಯೇ, ರೆಡ್​ಮಿ ನೋಟ್​ 7 ಪ್ರೋ ಸ್ಮಾರ್ಟ್​ಪೋನ್​ ಕೂಡ ಬಿಡುಗಡೆಯಾದ ಮೊದಲ ತಿಂಗಳಿನಲ್ಲೇ 7 ಕೋಟಿಯಷ್ಟು ಮಾರಾಟವಾಗಿತ್ತು. ಇದೀಗ ರೆಡ್​ಮಿ ನೋಟ್​ 7 ಸ್ಮಾರ್ಟ್​ಫೋನ್​​ ಕೂಡ 14 ಕೋಟಿಯಷ್ಟು ಮಾರಾಟವಾಗಿ ದಾಖಲೆ ಬರೆದಿದೆ.

ಭಾರತದಲ್ಲಿ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾದ ಶಿಯೋಮಿ ರೆಡ್​ಮಿ ನೋಟ್​ 7 ಸ್ಮಾರ್ಟ್​ಫೋನ್​ 11,248 ರೂ ನಲ್ಲಿ ಮಾರಾಟ ಮಾಡಿದೆ. ಬ್ಲಾಕ್​, ಗೋಲ್ಡ್​, ಮತ್ತು ನೀಲಿ ಬಣ್ಣಗಳಲ್ಲಿ ಈ ಮೊಬೈಲ್​ ಬಿಡುಗಡೆಯಾಗಿದೆ.

ಶಿಯೋಮಿ ರೆಡ್ಮಿ ನೋಟ್ 7​ ಫೀಚರ್ಸ್​:
ಡಿಸ್​ಪ್ಲೇ: 6.3 ಇಂಚಿನ ಪೂರ್ಣ ಎಚ್​ಡಿ, 1080x2340 ಪಿಕ್ಸೆಲ್ ರೆಸಲ್ಯೂಷನ್

ಪ್ರೊಸೆಸರ್: 2.2GHz ಸ್ನಾಪ್​ಡ್ರಾಗನ್ 660 ಆಕ್ಟಾ-ಕೋರ್
RAM: 3,4 ಮತ್ತು 6GB RAMಗಳಲ್ಲಿ ಲಭ್ಯವಿದೆಸ್ಟೋರೇಜ್: 32GB ಮತ್ತು 64GB ಮಾಡೆಲ್​ಗಳಿದ್ದು, ಮೈಕ್ರೋ ಎಸ್​ಡಿ ಕಾರ್ಡ್​ ಬಳಸಿ 256GBವರೆಗೂ ವಿಸ್ತರಿಸಬಹುದು.
ಕ್ಯಾಮೆರಾ: ಹಿಂಭಾಗದಲ್ಲಿ 48MP + 5MP, ಮುಂಭಾಗದಲ್ಲಿ 13MP
ಬ್ಯಾಟರಿ: 4,000 mAh ಸಾಮರ್ಥ್ಯ
ಆಪರೇಟಿಂಗ್ ಸಿಸ್ಟಂ​: MIUI 9 ಆಧರಿಸಿ ಆಂಡ್ರಾಯ್ಡ್ ಒರಿಯೊ ಒಎಸ್​ನಲ್ಲಿ ಕಾರ್ಯಾಚರಿಸಲಿದೆ. ​ 4G VoLTE ನೆಟ್​ವರ್ಕ್​, ವೈಫೈ, ಆಡಿಯೋ ಜಾಕ್ ಸೇರಿದಂತೆ ಇನ್ನು ಹಲವು ಫೀಚರ್​ಗಳನ್ನು ರೆಡ್​ಮಿ ನೋಟ್​ 7ನಲ್ಲಿ ನೀಡಲಾಗಿದೆ.

ಶಿಯೋಮಿ ರೆಡ್​ಮಿ ನೋಟ್​ 7 ಪ್ರೋ  ಬೆಲೆ:

ಭಾರತದಲ್ಲಿ ಹವಾ ಸೃಷ್ಠಿಸಿದ ರೆಡ್​ಮಿ ನೋಟ್​ 7 ಪ್ರೋ ಸ್ಮಾರ್ಟ್​ಪೋನ್​ 16,599 ರೂ. ಬೆಲೆಗೆ ಮಾರಾಟವಾಗುತ್ತಿದೆ. ಗ್ರಾಹಕರಿಗೆ ಅನುಗುಣವಾಗಿ ರೆಡ್, ಬ್ಲೂ, ಬ್ಲಾಕ್​ ಬಣ್ಣದಲ್ಲಿ ದೊರೆಯುತ್ತಿದೆ.

ಶಿಯೋಮಿ ರೆಡ್​ಮಿ ನೋಟ್ 7​ ಪ್ರೋ ಫೀಚರ್ಸ್​:

ಡಿಸ್​ಪ್ಲೇ: 6.3 ಇಂಚಿನ ಪೂರ್ಣ ಎಚ್​ಡಿ, 1080x2340 ಪಿಕ್ಸೆಲ್ ರೆಸಲ್ಯೂಷನ್

ಪ್ರೊಸೆಸರ್: 2.2GHz ಸ್ನಾಪ್​ಡ್ರಾಗನ್ 675 ಆಕ್ಟಾ-ಕೋರ್
RAM: 6GB RAMಗಳಲ್ಲಿ ಲಭ್ಯವಿದೆ
ಸ್ಟೋರೇಜ್: 32GB ಮತ್ತು 64GB ಮಾಡೆಲ್​ಗಳಿದ್ದು, ಮೈಕ್ರೋ ಎಸ್​ಡಿ ಕಾರ್ಡ್​ ಬಳಸಿ 256GBವರೆಗೂ ವಿಸ್ತರಿಸಬಹುದು.
ಕ್ಯಾಮೆರಾ: ಹಿಂಭಾಗದಲ್ಲಿ 48MP + 5MP, ಮುಂಭಾಗದಲ್ಲಿ 13MP
ಬ್ಯಾಟರಿ: 4,000 mAh ಸಾಮರ್ಥ್ಯ ಹೊಂದಿದೆ
ಆಪರೇಟಿಂಗ್ ಸಿಸ್ಟಂ​: MIUI 9 ಆಧರಿಸಿ ಆಂಡ್ರಾಯ್ಡ್ ಒರಿಯೊ ಒಎಸ್​ನಲ್ಲಿ ಕಾರ್ಯಾಚರಿಸಲಿದೆ. ​ 3Gಮತ್ತು 4G VoLTE ನೆಟ್​ವರ್ಕ್​, ವೈಫೈ, ಆಡಿಯೋ ಜಾಕ್ ಸೇರಿದಂತೆ ಇನ್ನು ಹಲವು ಫೀಚರ್​ಗಳನ್ನು ರೆಡ್​ಮಿ ನೋಟ್​ 7 ಪ್ರೋ ನಲ್ಲಿ ನೀಡಲಾಗಿದೆ
First published: May 14, 2019, 2:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading