ಮಾರ್ಚ್ 8 ರಿಂದ ಶಿಯೋಮಿ ರೆಡ್ಮಿ ನೋಟ್​ 5 ಆಫ್​​ಲೈನ್ ಡೆಲಿವರಿ

news18
Updated:March 3, 2018, 5:46 PM IST
ಮಾರ್ಚ್ 8 ರಿಂದ ಶಿಯೋಮಿ ರೆಡ್ಮಿ ನೋಟ್​ 5 ಆಫ್​​ಲೈನ್ ಡೆಲಿವರಿ
news18
Updated: March 3, 2018, 5:46 PM IST
- ನ್ಯೂಸ್ 18 ಕನ್ನಡ

ಚೀನಾದ ಸ್ಮಾರ್ಟ್ ಪೋನ್​​ಗಳು ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್​ಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇತ್ತೀಚೆಗಷ್ಟೇ ಶಿಯೋಮಿ ರೆಡ್ಮಿ ನೋಟ್​ 5 ಮತ್ತು ಶಿಯೋಮಿ ನೋಟ್ 5 ಪ್ರೋ ಸ್ಮಾರ್ಟ್​ ಫೋನ್​ಗಳನ್ನು ಪರಿಚಯಿಸಿತು. ಇದೀಗ ಈ ಫೋನ್​ಗಳು ಮಾರುಕಟ್ಟೆಯಲ್ಲಿ ಬಹುಬೇಡಿಕೆಯಲ್ಲಿವೆ.

ರೆಡ್ಮಿ ನೋಟ್ 5 ಆಫ್​ಲೈನ್ ಮಳಿಗೆಗಳ ಮೂಲಕ ಖರೀದಿಸುವ ಶಿಯೋಮಿ ಗ್ರಾಹಕರಿಗೆ ಮುಂಗಡ ಬುಕಿಂಗ್ ಆರಂಭಿಸಿದೆ. ಇದರ ವಿತರಣೆ ಮಾರ್ಚ್​ 8 ರಂದು ಪ್ರಾರಂಭವಾಗಲಿದೆ. ಆಫ್​ಲೈನ್ ಮಳಿಗೆಗಳಲ್ಲಿ ಖರೀದಿಸುವ ಗ್ರಾಹಕರು ಹೆಚ್ಚುವರಿ 500 ರೂ ಪಾವತಿಸಬೇಕಾಗುತ್ತದೆ.

ಶಿಯೋಮಿ ರೆಡ್ಮಿ ನೋಟ್ 5ಸ್ಮಾರ್ಟ್​ ಫೋನ್​ ನ ಆನ್​ಲೈನ್ ಮಾರಾಟವನ್ನು ಫೆಬ್ರವರಿ 22 ರಿಂದ ಪ್ರಾರಂಭಿಸಲಾಯಿತು. ಈಗ ಆಫ್​ಲೈನ್ ಸ್ಟೋರ್​ಗಳಲ್ಲಿ ಪೂರ್ವ ಬುಕಿಂಗ್ ಆರಂಭಿಸಲಾಗಿದ್ದು, ಗ್ರಾಹಕರು ತಮ್ಮ ಬುಕಿಂಗ್ ದೃಢೀಕರಿಸಲು 2 ಸಾವಿರ ರೂ. ಪಾವತಿಸಬೇಕಾಗುತ್ತದೆ.

ರೆಡ್ಮಿ ನೋಟ್​​ 5 (3GB RAM, 32GB) ಸ್ಮಾರ್ಟ್​ ಪೋನ್ ಬೆಲೆ  10,499 ರೂ. ಆಗಿದೆ. ರೆಡ್ಮಿ ನೋಟ್​ 5(4GB RAM, 64 GB) ಸ್ಮಾರ್ಟ್​ ಫೋನ್​ ಬೆಲೆ   12,499  ರೂ ಇದೆ.

 

 
First published:March 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...