ರೆಡ್ಮಿ ಕಂಪನಿಯ (Redmi Company) ಸ್ಮಾರ್ಟ್ಫೋನ್ಗಳು ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿರುವ ಸ್ಮಾರ್ಟ್ಫೋನ್ (Smartphone) ಆಗಿದೆ. ಇಂದಿನ ಯುವಜನತೆಯ ನೆಚ್ಚಿನ ಸ್ಮಾರ್ಟ್ಫೋನ್ ಕಂಪನಿಯೆಂದು ಗುರುತಿಸಿಕೊಂಡಿದೆ. ಶಿಯೋಮಿ ಕಂಪನಿಯಿಂದ (Xiaomi Company) ಬಿಡುಗಡೆಯಾಗುವಂತಹ ಮೊಬೈಲ್ಗಳೆಲ್ಲವೂ ಬಹಳಷ್ಟು ಗುಣಮಟ್ಟದ್ದಾಗಿರುತ್ತದೆ. ಅದೇ ರೀತಿ ಇದರ ಬೆಲೆ ಕೂಡ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಇರುವುದರಿಂದ ಗ್ರಾಹಕರು ಬೇಗನೆ ಖರೀದಿ ಮಾಡುತ್ತಾರೆ. ಇನ್ನೂ ವಿಶೇಷ ಎಂದರೆ ಶಿಯೋಮಿ ಕಂಪನಿ ವರ್ಷಕ್ಕೆ ಎರಡಾದರೂ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಅದೇ ರೀತಿ 2023ರಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಸ್ಮಾರ್ಟ್ಫೋನ್ ಎಂದರೆ ಅದು ರೆಡ್ಮಿ ನೋಟ್ 12 ಸೀರಿಸ್ (Redmi Note 12 Series) ಆಗಿದೆ.
ಶಿಯೋಮಿ ಕಂಪನಿ ಮುಂದಿನ ವರ್ಷದ ಜನವರಿ 5 ರಂದು ರೆಡ್ಮಿ ನೋಟ್ 12 ಸೀರಿಸ್ ಅನ್ನು ಬಿಡುಗಡೆ ಮಾಡುವುದಾಗಿ ನಿರ್ಧರಿಸಿದೆ. ಈ ಸೀರಿಸ್ನ ಅಡಿಯಲ್ಲಿ ರೆಡ್ಮಿ ನೋಟ್ 12, ರೆಡ್ಮಿ ನೋಟ್ 12 ಪ್ರೋ ಮತ್ತು ರೆಡ್ಮಿ ನೋಟ್ 12 ಪ್ರೋ ಪ್ಲಸ್ ಎಂಬ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದೆ. ಇದೀಗ ಹೊಸ ವರ್ಷದ ಮೊದಲಿಗೆ ರೆಡ್ಮಿ ನೋಟ್ 12 5ಜಿ ಸ್ಮಾರ್ಟ್ಫೋನ್ ಬಿಡುಗಡೆಯಾಗಲಿದೆ.
ರೆಡ್ಮಿ ನೋಟ್ 12 5ಜಿ ಸ್ಮಾರ್ಟ್ಫೋನ್ ಫೀಚರ್ಸ್
ರೆಡ್ಮಿ ನೋಟ್ 12 5ಜಿ ಸ್ಮಾರ್ಟ್ಫೋನ್ 6.67 ಇಂಚಿನ ಫುಲ್ ಹೆಚ್ಡಿ ಪ್ಲಸ್ ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ರೇಟ್ ಬೆಂಬಲವನ್ನು ಹೊಂದಿರುವ ಸಾದ್ಯತೆಯಿದೆ. ಜೊತೆಗೆ 1200 ಗರಿಷ್ಠ ಬ್ರೈಟ್ನೆಸ್ ಅನ್ನು ಇದು ನೀಡಲಿದೆ ಎಮದು ಎಂದು ನಿರೀಕ್ಷಿಸಲಾಗಿದೆ. ಇನ್ನು ಡಿಸ್ಪ್ಲೇ 85.0% ಸ್ಕ್ರೀನ್ ಟು ಬಾಡಿ ನಡುವಿನ ಅನುಪಾತವನ್ನು ಹೊಂದಿದೆ. ಇದರ ರಚನೆಯ ಅನುಪಾತ 20:9 ರಷ್ಟಿದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: ಇನ್ಮುಂದೆ ವಾಟ್ಸಪ್ ಸ್ಟೇಟಸ್ ಹಾಕಲು ನೋಡುಗರ ಒಪ್ಪಿಗೆ ಬೇಕು! ಸಿಕ್ಕ ಸಿಕ್ಕ ಫೋಟೋ, ವಿಡಿಯೋ ಹಾಕೋ ಆಗಿಲ್ಲ
ಕ್ಯಾಮೆರಾ ಫೀಚರ್ಸ್ ಹೇಗಿರಲಿದೆ?
ಇನ್ನು ಈ ಸ್ಮಾರ್ಟ್ಫೋನ್ನ ಕ್ಯಾಮೆರಾ ಸೆಟಪ್ ಬಗ್ಗೆ ಮಾತನಾಡುವುದಾದರೆ ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವ ಸಾಧ್ಯತೆಯಿದೆ. ಇನ್ನು ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರಲಿದೆ ಎನ್ನಲಾಗಿದೆ. ಇದಲ್ಲದೆ ಸೆಲ್ಫಿ ಮತ್ತು ವಿಡಿಯೋ ಕಾಲ್ಗಾಗಿ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸುವ ಸಾಧ್ಯತೆಯಿದೆ.
ಬ್ಯಾಟರಿ ಫೀಚರ್ಸ್
ರೆಡ್ಮಿ ನೋಟ್ 12 5ಜಿ ಸ್ಮಾರ್ಟ್ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ವೈಫೈ, ಯುಎಸ್ಬಿ ಸಿ ಪೋರ್ಟ್ ಅನ್ನು ಹೊಂದಿರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಪ್ರೊಸೆಸರ್ ಹೇಗೆ ಕಾರ್ಯನಿರ್ವಹಿಸುತ್ತದೆ?
ರೆಡ್ಮಿ ನೋಟ್ 12 5ಜಿ ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 4 Gen 1SoC ಪ್ರೊಸೆಸರ್ ವೇಗವನ್ನು ಹೊಂದಿರಲಿದೆ. ಇನ್ನು ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8ಜಿಬಿ ರ್ಯಾಮ್ ಮತ್ತು 256ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಆದರೆ ಈ ಸ್ಮಾರ್ಟ್ಫೋನ್ಗೆ ಮೆಮೊರಿಕಾರ್ಡ್ ಆ್ಯಡ್ ಮಾಡುವ ಬಗ್ಗೆ ಇದುವರೆಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.
ಬೆಲೆ ಮತ್ತು ಲಭ್ಯತೆ
ರೆಡ್ಮಿ ನೋಟ್ 12 5ಜಿ ಸ್ಮಾರ್ಟ್ಫೋನ್ 15,000ರೂಪಾಯಿ ಬೆಲೆಯಲ್ಲಿ ಬರುವ ಸಾಧ್ಯತೆಯಿದೆ. ಆದರೆ ಇದೇ ಸ್ಮಾರ್ಟ್ಫೋನ್ ಚೀನಾದಲ್ಲಿ ಬೇಸ್ ಮಾಡೆಲ್ 4ಜಿಬಿ ರ್ಯಾಮ್ ಮತ್ತು 128ಜಿಬಿ ಸ್ಟೋರೇಜ್ ಹೊಂದಿದ ಸ್ಮಾರ್ಟ್ಫೋನ್ CNY 1199 ಭಾರತದಲ್ಲಿ ಅಂದಾಜು 13500ರೂಪಾಯಿ ಬೆಲೆಯನ್ನು ಹೊಂದಿದೆ. ಇದರ 6ಜಿಬಿ ರ್ಯಾಮ್ ಮತ್ತು 128ಜಿಬಿ ಸ್ಟೋರೇಜ್ ಹೊಂದಿದ ಸ್ಮಾರ್ಟ್ಫೋನ್ ಅನ್ನು CNY 1299 ಭಾರತದಲ್ಲಿ ಸುಮಾರು 14,500ರೂಪಾಯಿ ಬೆಲೆಯಲ್ಲಿ ಖರೀದಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ