• Home
 • »
 • News
 • »
 • tech
 • »
 • Xiaomi Redmi Note 12 ಸೀರಿಸ್‌ ರಿಲೀಸ್​ ಡೇಟ್​ ಫಿಕ್ಸ್​, ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ಫೋನ್

Xiaomi Redmi Note 12 ಸೀರಿಸ್‌ ರಿಲೀಸ್​ ಡೇಟ್​ ಫಿಕ್ಸ್​, ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ಫೋನ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Xiaomi ಕಂಪನಿ ಈ ಬಾರಿ Redmi Note 12 ಸೀರಿಸ್‌ ಅನ್ನು ಲಾಂಚ್‌ ಮಾಡುವುದಾಗಿ ಘೋಷಿಸಿದೆ. ಇದು ಈವರೆಗೆ ಬಂದ ಸೀರಿಸ್‌ನಲ್ಲಿ ಉತ್ತಮ ಫೀಚರ್ಸ್‌ ಹೊಂದಿರಲಿದೆ ಎಂದು ತಂತ್ರಜ್ಞರು ವರದಿ ಮಾಡಿದ್ದಾರೆ.

 • Share this:

  ಸ್ಮಾರ್ಟ್‌ಫೋನ್‌ಗಳ ಕಂಪನಿಗಳಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರಗಳು ಆಗುತ್ತಾ ಇರುತ್ತವೆ. ಈ ಬಾರಿ ಕೂಡ ಹಲವಾರು ಮೊಬೈಲ್‌ಗಳು ಲಾಂಚ್‌ (Mobile Launch) ಆಗಿವೆ. ಹಲವಾರು ಸ್ಮಾರ್ಟ್‌ಫೋನ್‌ ಕಂಪನಿಗಳಿವೆ ಆದರೆ ಕೆಲವೊಂದು ಸ್ಮಾರ್ಟ್‌ಫೋನ್‌ ಕಂಪನಿಗಳು (Smartphone Company) ಮಾತ್ರ ವರ್ಷಕ್ಕೊಂದಾದರು ಮೊಬೈಲ್‌ ಅನ್ನು ಲಾಂಚ್‌ ಮಾಡುತ್ತದೆ. ಅದೇ ರೀತಿ ಈ ಬಾರಿ ಆಪಲ್‌ (Apple), ಸ್ಯಾಮ್‌ಸಂಗ್‌ (Samsung), ಕ್ಸಯೋಮಿ (Xiaomi), ರಿಯಲ್‌ಮಿ, ಒಪ್ಪೊ ಈ ಕಂಪನಿಗಳು ಕೂಡ ಲಾಂಚ್‌ ಮಾಡಿದೆ. ಇದರಿಂದ ಗ್ರಾಹಕರು ಹೊಸ ಸ್ಮಾರ್ಟ್‌ಫೋನ್‌ಗಳಿಗಾಗಿ ಕಾಯುತ್ತಿರುತ್ತಾರೆ. ಈ ರೀತಿಯ ಫೋನ್‌ಗಳು ಬಂದಾಗ ಗ್ರಾಹಕರು (Customer) ಬೇಗನೆ ತೆಗೆದುಕೊಳ್ಳುತ್ತಾರೆ. ಇದನ್ನೇ ಗ್ರಾಹಕರು ಕಾಯುತ್ತಿರುವುದರಿಂದ ಜನರಿಗೆ ಖರೀದಿಸಲು ಸುಲಭವಾಗುತ್ತದೆ.


  ಈ ಬಾರಿ Xiaomi ಕಂಪನಿ Redmi Note 12 ಸೀರಿಸ್‌ ಅನ್ನು ಲಾಂಚ್‌ ಮಾಡುವುದಾಗಿ ಘೋಷಿಸಿದೆ. ಇದು ಈವರೆಗೆ ಬಂದ ಸೀರಿಸ್‌ನಲ್ಲಿ ಉತ್ತಮ ಫೀಚರ್ಸ್‌ ಹೊಂದಿರಲಿದೆ ಎಂದು ತಂತ್ರಜ್ಞರು ವರದಿ ಮಾಡಿದ್ದಾರೆ. ಇದೇ ವರ್ಷದಲ್ಲಿ ಪ್ರಾರಂಭವಾಗಲಿದ್ದು ಮೊದಲಿಗೆ ಇದರ ಬಿಡುಗಡೆಯ ಕಾರ್ಯಕ್ರಮ ಮ್ಯಾಂಡರಿನ್‌ನಲ್ಲಿ ನಡೆಯಲಿದೆ.


  ಇದಲ್ಲದೆ ಈ ರೆಡ್ಮಿ ನೋಟ್‌ 12 ಸೀರಿಸ್‌ಗಳು ಮೊದಲಿಗೆ ಚೀನಾದಲ್ಲಿ ಆರಂಭವಾಗುತ್ತದೆ. ನಂತರದಲ್ಲಿ ಭಾರತ ಮತ್ತು ಇತರ ಮಾರುಕಟ್ಟೆಯಲ್ಲಿ ಲಾಂಚ್‌ ಆಗಲಿದೆ ಎಂದು ವರದಿ ಮಾಡಿದ್ದಾರೆ. ಈ Redmi Note 12ನ ಸೀರಿಸ್‌ಗಳು ಉತ್ತಮ ಫೀಚರ್ಸ್‌ ಅನ್ನು ಹೊಂದಿದ್ದು ಈ ಬಾರಿ ಹೊಸ ಫೀಚರ್ಸ್‌ಗಳು ಆ್ಯಡ್ ಆಗಲಿದೆ ಎಂದು ತಿಳಿಸಿದ್ದಾರೆ.


  ಈ ಬಾರಿ ರೆಡ್ಮಿ ನೋಟ್‌ 12 (Redmi Note 12) ಸೀರಿಸ್‌ ಏನೆಲ್ಲಾ ಬಿಡುಗಡೆ ಮಾಡುತ್ತದೆ


  Xiomi Redmi Note 12 ಸೀರಿಸ್‌ನಲ್ಲಿ ಈ ಬಾರಿ 4 ರೀತಿಯ ಮಾಡೆಲ್‌ಗಳು ಬರಲಿದೆ. ಅದೇ ರೀತಿ Pro ಮತ್ತು Pro+ ಮಾದರಿಯಲ್ಲಿ ಕೂಡ ಸ್ಮಾರ್ಟ್‌ಫೋನ್‌ ಲಭ್ಯವಾಗಲಿದೆ. ಇನ್ನೂ ವಿಶೇಷವಾಗಿ ರೆಡ್ಮಿ ಇಯರ್‌ ಬಡ್ಸ್‌, ರೆಡ್ಮಿ ಲ್ಯಾಪ್‌ಟಾಪ್‌, ರೆಡ್ಮಿ ಸ್ಮಾರ್ಟ್‌ ಟಿವಿಗಳು ಬರಲಿವೆ.


  ಇದನ್ನೂ ಓದಿ: ಟಾಪ್ 5 ಬೆಸ್ಟ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್ ಫೋನ್‌ಗಳು ಇಲ್ಲಿವೆ!


  ಈ ಸೀರಿಸ್‌ ಏನೆಲ್ಲಾ ಸ್ಪೆಷಲ್‌ ಫೀಚರ್ಸ್‌ ಹೊಂದಿದೆ


  ಇದಕ್ಕಿಂತ ಮೊದಲು ಲಾಂಚ್‌ ಆದ ರೆಡ್ಮಿ ನೋಟ್‌ 11 ಸೀರಿಸ್‌ ಕೂಡ ಉತ್ತಮ ಬಜೆಟ್‌ನಲ್ಲಿ ಗುಣಮಟ್ಟದ ಫೀಚರ್ಸ್‌ ಅನ್ನು ಹೊಂದಿತ್ತು. ಇದೀಗ ರೆಡ್ಮಿ ನೋಟ್‌ 12 ಸೀರಿಸ್‌ನ ಸ್ಪೆಷಲ್‌ ಫೀಚರ್ಸ್‌ಗಾಗಿ ಗ್ರಾಹಕರು ಕಾಯುತ್ತಿದ್ದಾರೆ.


  Redmi Note 12 series launch confirmed Hit the market in a few days
  ಸಾಂದರ್ಭಿಕ ಚಿತ್ರ


  • ಈ ಬಾರಿ ರೆಡ್ಮಿ ನೋಟ್‌ 12 ಸೀರಿಸ್‌ 67 ವ್ಯಾಟ್ಸ್‌ನಷ್ಟು ವೇಗದ ಚಾರ್ಜಿಂಗ್‌ ಬ್ಯಾಟರಿಯನ್ನು ಹೊಂದಿದೆ.

  • ಇನ್ನು ರೆಡ್ಮಿ ನೋಟ್‌ 12 ಪ್ರೊ+ ನಲ್ಲಿ 200 ಮೆಗಾಪಿಕ್ಸೆಲ್‌ ಕ್ಯಾಮೆರಾ ಮತ್ತು 210 ವ್ಯಾಟ್ಸ್‌ ವೇಗದ ಚಾರ್ಜಿಂಗ್‌ ಬ್ಯಾಟರಿಯನ್ನು ಹೊಂದಿದೆ.

  • ಅದೇ ರೀತಿ 120 ವ್ಯಾಟ್ಸ್‌ ಚಾರ್ಜಿಂಗ್‌ ವೇಗವನ್ನು ರೆಡ್ಮಿ ನೋಟ್‌ 12 ಮೊಬೈಲ್‌ ಹೊಂದಿದೆ.

  • ಈ ಸೀರಿಸ್‌ನ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 13 ಅಪರೇಟಿಂಗ್‌ ಸಿಸ್ಟಮ್‌ ಅನ್ನು ಹೊಂದಿದೆ.


  ಕ್ಸಯೋಮಿ ರೆಡ್ಮಿ ನೋಟ್‌ 12 ಸೀರಿಸ್‌ ಸ್ಮಾರ್ಟ್‌ಫೋನ್‌ನ ಬೆಲೆ


  ರೆಡ್ಮಿ ನೋಟ್‌ 12 ಪ್ರೊ+ ನ ಆರಂಭಿಕ ಬೆಲೆಯೇ  28,000 ರೂಪಾಯಿಯಿಂದ ಆರಂಭವಾಗಲಿದೆ ಎಂದು ವರದಿ ಮಾಡಲಾಗಿದೆ.


  ಇದನ್ನೂ ಓದಿ: ನಿಮ್ಮ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ ವಿಡಿಯೋ ಸಿನಿಮಾದಷ್ಟು ಸಖತ್ ಆಗಿರ್ಬೇಕಾ? ಇಲ್ಲಿದೆ ಸಿಂಪಲ್ ಟ್ರಿಕ್ಸ್


  ಇದು ಈ ಬಾರಿ ಲಾಂಚ್‌ ಆಗುತ್ತಿರುವ ರೆಡ್ಮಿ ನೋಟ್‌ ಸೀರಿಸ್‌ನ ಫೀಚರ್ಸ್‌, ಬೆಲೆಗಳಾಗಿವೆ. ಇದು ಈಗಿನ ಮೊಬೈಲ್‌ ಯುಗದಲ್ಲಿ ಬರುತ್ತಿರುವ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಇದೂ ಒಂದಾಗಿದೆ.

  Published by:Harshith AS
  First published: