ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಆಕರ್ಷಿಸುವ ಪ್ರಮುಖ ಬ್ರ್ಯಾಂಡ್ಗಳೆಂದರೆ ಅದು ರೆಡ್ಮಿ (Redmi) ಮತ್ತು ರಿಯಲ್ ಮಿ (Realme) ಮೊಬೈಲ್ ಕಂಪನಿಗಳು. ಈ ಬ್ರ್ಯಾಂಡ್ಗಳು ಅದ್ಭುತ ಫೀಚರ್ಸ್ನೊಂದಿಗೆ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಮೂಲಕ ಜನರನ್ನು ತನ್ನತ್ತ ಆಕರ್ಷಿಸುತ್ತಿವೆ. ಈ ಎರಡೂ ಕಂಪನಿಗಳು ಬೇರೆ ಬೇರೆ ರೀತಿಯ ಫೀಚರ್ಸ್ಗಳು ಅಳವಡಿಸಿ ಮಾರಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿವೆ. ಇತ್ತೀಚಗೆ ರಿಯಲ್ ಮಿ ಕಂಪನಿ ತನ್ನ ಬ್ರಾಂಡ್ನ ಅಡಿಯಲ್ಲಿ ರಿಯಲ್ ಮಿ 10 ಪ್ರೋ 5ಜಿ (Realme 10 Pro 5G) ಸ್ಮಾರ್ಟ್ಫೋನ್ ಅನ್ನು ಪರಿಚಯಿಸಿತ್ತು. ಅದೇ ರೀತಿ ರೆಡ್ಮಿ ಕಂಪನಿ ಕೂಡ ರೆಡ್ಮಿ ನೋಟ್ 12 ಪ್ರೋ ಸ್ಮಾರ್ಟ್ಫೋನ್ ಅನ್ನು ಇತ್ತೀಚೆಗೆ ಮಾರುಕಟ್ಟೆಗೆ ಪರಿಚಯಿಸಿದೆ.
ರೆಡ್ಮಿ ಮತ್ತು ರಿಯಲ್ ಮಿ ಕಂಪನಿಗಳ ಸ್ಮಾರ್ಟ್ಫೋನ್ಗಳು ಎರಡೂ ಬಹುತೇಕ ಒಂದೇ ರೀತಿಯ ಫೀಚರ್ಸ್ಗಳನ್ನು ಹೊಂದದಿರುತ್ತದೆ. ಆದರೆ ಕೆಲವೊಂದು ಮಾತ್ರ ಬೇರೆ ಬೇರೆಯದ್ದಾಗಿರುತ್ತದೆ. ಅದ್ರಲ್ಲೂ ನಾವು ವಿನ್ಯಾಸವನ್ನು ಕಾಣಬಹುದು.
ಡಿಸ್ಪ್ಲೇ ಮತ್ತು ವಿನ್ಯಾಸ
ರೆಡ್ಮಿ ನೋಟ್ 12 ಪ್ರೋ ಮತ್ತು ರಿಯಲ್ ಮಿ 10 ಪ್ರೋ 5ಜಿ ಎರಡೂ ಸ್ಮಾರ್ಟ್ಫೋನ್ಗಳನ್ನು ಮೂರು ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ರೆಡ್ಮಿ ನೋಟ್ 12 ಪ್ರೋ ಮೊಬೈಲ್ ಸ್ಟಾರ್ಡಸ್ಟ್ ಪರ್ಪಲ್, ಫ್ರಾಸ್ಟೆಡ್ ಬ್ಲೂ, ಓನಿಕ್ಸ್ ಬ್ಲ್ಯಾಕ್ ಶೇಡ್ ಈ ರೀತಿಯ ಬಣ್ಣಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ: ಆನ್ಲೈನ್ ಸ್ಟೇಟಸ್ ಬೇರೆಯವ್ರಿಗೆ ಕಾಣ್ಬಾರ್ದಾ? ತಕ್ಷಣ ಈ ಟ್ರಿಕ್ಸ್ ಬಳಸಿ
ಇನ್ನು ರಿಯಲ್ ಮಿ 10 ಪ್ರೋ ಹೈಪರ್ ಸ್ಪೇಸ್ ಗೋಲ್ಡ್, ನೆಬ್ಯುಲಾ ಬ್ಲೂ, ಡಾರ್ಕ್ ಮ್ಯಾಟರ್(ಕಪ್ಪು) ಬಣ್ಣಗಳಲ್ಲಿ ಲಭ್ಯವಿದೆ. ರಿಯಲ್ ಮಿ 10 ನೋಟ್ ಪ್ರೋ ಮೊಬೈಲ್ 6.7-ಇಂಚಿನ ಎಲ್ಸಿಡಿ ಡಿಸ್ಪ್ಲೇಯೊಂದಿಗೆ 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ, ರೆಡ್ಮಿ ನೋಟ್ 12 ಪ್ರೋ ಮೊಬೈಲ್ 6.6-ಇಂಚಿನ ಅಮೋಲ್ಡ್ ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ನೊಂದಿಗೆ ಬಿಡುಗಡೆಯಾಗಿದೆ.
ಪ್ರೊಸೆಸರ್ ಹಾಗೂ ಸ್ಟೋರೇಜ್ ಸಾಮರ್ಥ್ಯ
ಈ ಎರಡೂ ಸ್ಮಾರ್ಟ್ಫೋನ್ಗಳು ಕನಿಷ್ಠ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದೆ. ರೆಡ್ಮಿ ನೋಟ್ 12 ಪ್ರೋ 6ಜಿಬಿ ರ್ಯಾಮ್ ಮತ್ತು 128ಜಿಬಿ, 8ಜಿಬಿ ರ್ಯಾಮ್ ಮತ್ತು 256ಜಿಬಿ ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದೆ. ರಿಯಲ್ ಮಿ 10 ಪ್ರೋ ಸ್ಮಾರ್ಟ್ಫೋನ್ 6ಜಿಬಿ ರ್ಯಾಮ್ ಮತ್ತು 128ಜಿಬಿ, 8ಜಿಬಿ ರ್ಯಾಮ್ ಮತ್ತು 128ಜಿಬಿ ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ರೆಡ್ಮಿ ನೋಟ್ 12 ಪ್ರೋ ಮೊಬೈಲ್ ಮೀಡಿಯಾಟೆಕ್ ಡೈಮೆನ್ಷನ್ 1080 ಚಿಪ್ಸೆಟ್ನಿಂದ ಚಾಲಿತವಾಗಿದೆ. ಅದೇ ರೀತಿ ರಿಯಲ್ಮಿ 10 ಪ್ರೋ ಫೋನ್ ಸ್ನಾಪ್ಡ್ರಾಗನ್ 695 ಪ್ರೊಸೆಸರ್ನಿಂದ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ಫೀಚರ್ಸ್
ರೆಡ್ಮಿ ನೋಟ್ 12 ಪ್ರೋ ಸ್ಮಾರ್ಟ್ಫೋನ್ 50-ಮೆಗಾಪಿಕ್ಸೆಲ್ ಪ್ರಾಥಮಿಕ OIS + 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ + 2-ಮೆಗಾಪಿಕ್ಸೆಲ್ ಮ್ಯಾಕ್ರೋ ಜೊತೆಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
ರಿಯಲ್ಮಿ 10 ಪ್ರೋ ಹ್ಯಾಂಡ್ಸೆಟ್ 108-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಶೂಟರ್ನೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಎರಡೂ ಮಾದರಿಗಳು ಮುಂಭಾಗದಲ್ಲಿ 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನುಹೊಂದಿದೆ.
ಬ್ಯಾಟರಿ ಫೀಚರ್ಸ್
ರೆಡ್ಮಿ ನೋಟ್ 12 ಪ್ರೋ 67W ವೇಗದ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ 5,000mAh ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಅದೇ ರೀತಿ ರಿಯಲ್ಮಿ 10 ಪ್ರೋ ಸಾಧನವು ಕೂಡ 5000mAh ಬ್ಯಾಟರಿಯನ್ನು ಹೊಂದಿದೆ. ಜೊತೆಗೆ ಇದು 33W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ.
ಬೆಲೆ
ರೆಡ್ಮಿ ನೋಟ್ 12 ಪ್ರೋ ಬೇಸ್ ವೇರಿಯಂಟ್ 6ಜಿಬಿ ರ್ಯಾಮ್ + 128ಜಿಬಿ ಬೆಲೆ ರೂ.24,999 ಆಗಿದೆ. 8ಜಿಬಿ ರ್ಯಾಮ್ + 128ಜಿಬಿ ರೂಪಾಂತರದ ಬೆಲೆ ರೂ.26,999 ಆಗಿದೆ.
ಅದೇ ರೀತಿ ರಿಯಲ್ಮಿ 10 ಪ್ರೋ ಸ್ಮಾರ್ಟ್ಫೋನ್ನ ಮೂಲ ರೂಪಾಂತರಕ್ಕೆ ರೂ 18,999 ಮತ್ತು ಇನ್ನೊಂದು ರೂಪಾಂತರಕ್ಕೆ ರೂ 19,999 ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ