ಅಕ್ಟೋಬರ್ 28ಕ್ಕೆ ಬಿಡುಗಡೆಯಾಗಲಿದೆ Redmi Note 11: ಈ ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯತೆಗಳು ಹೀಗಿದೆ..

Redmi Note 11: ಹೊಸ Redmi Note 11 ಸೀರಿಸ್ ಸ್ಮಾರ್ಟ್‌ಫೋನ್ ಅನ್ನು ಅಕ್ಟೋಬರ್ 28ಕ್ಕೆ ಚೀನಾದಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಾಗುವುದು ಎಂದು ಹೇಳಲಾಗುತ್ತಿದೆ. ಈ ಮುಂಬರುವ ಸ್ಮಾರ್ಟ್‌ಫೋನ್ ಬಗ್ಗೆ ಲಭ್ಯವಿರುವ ಮಾಹಿತಿ ಇಲ್ಲಿದೆ ನೋಡಿ.

Redmi Note 11

Redmi Note 11

 • Share this:

  Redmi ಸ್ಮಾರ್ಟ್‌ಫೋನ್ ಪ್ರಿಯರು ತಮ್ಮ ನೆಚ್ಚಿನ ಬ್ರ್ಯಾಂಡ್ ಅವರು ಮುಂದೆ ಯಾವ ಸೀರಿಸ್‌ನ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಾರೆ ಎಂದು ಕುತೂಹಲದಿಂದ ಕಾಯುತ್ತಿರುತ್ತಾರೆ.ಹೊಸ ಸೀರಿಸ್‌ನ ಸ್ಮಾರ್ಟ್‌ಫೋನ್ ಯಾವ ಯಾವ ವಿನೂತನವಾದ ವೈಶಿಷ್ಟ್ಯತೆಗಳನ್ನು ಹೊಂದಿದೆ ಎಂದು ಕುತೂಹಲ ಇರುವುದು ಸಹಜವಾದ ಸಂಗತಿಯಾಗಿದೆ. ಈಗ ಈ ಸ್ಮಾರ್ಟ್‌ಫೋನ್ ಪ್ರಿಯರಿಗೆ ಒಂದು ಸಿಹಿ ಸುದ್ದಿ ಇದೆ. ಆದೇನಪ್ಪಾ ಅಂತೀರಾ? ರೆಡ್ಮಿ ನೋಟ್ 10 ಸೀರಿಸ್ ನಂತರ ಬರುವ ಹೊಸ ನೋಟ್ ಸೀರಿಸ್ ಫೋನ್‌ಗಳ ಬಿಡುಗಡೆ ದಿನಾಂಕವನ್ನು ರೆಡ್‌ಮಿ ಘೋಷಿಸಿದೆ.


  ಹೊಸ Redmi Note 11 ಸೀರಿಸ್ ಸ್ಮಾರ್ಟ್‌ಫೋನ್ ಅನ್ನು ಅಕ್ಟೋಬರ್ 28ಕ್ಕೆ ಚೀನಾದಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಾಗುವುದು ಎಂದು ಹೇಳಲಾಗುತ್ತಿದೆ. ಈ ಮುಂಬರುವ ಸ್ಮಾರ್ಟ್‌ಫೋನ್ ಬಗ್ಗೆ ಲಭ್ಯವಿರುವ ಮಾಹಿತಿ ಇಲ್ಲಿದೆ ನೋಡಿ.


  ಈ ಸ್ಮಾರ್ಟ್‌ಫೋನ್‌ನ ಕೆಲವು ಪೋಸ್ಟರ್‌ಗಳನ್ನು ಹಂಚಿಕೊಳ್ಳಲು ರೆಡ್‌ಮಿ ಚೀನಾದ ಮೈಕ್ರೋ-ಬ್ಲಾಗಿಂಗ್ ಸೈಟ್ ‘ವೀಬೊ’ ವನ್ನು ಬಳಸಿಕೊಂಡಿದೆ. ಈ ಫೋಟೋದಲ್ಲಿ ಆಯತಾಕಾರದ ಹಿಂಭಾಗದ ಕ್ಯಾಮೆರಾ ಮಾಡ್ಯೂಲ್ ಮತ್ತು ಮುಂಭಾಗದಲ್ಲಿ ಪಂಚ್-ಹೋಲ್ ನಾಚ್ ಅನ್ನು ನಾವು ಕಾಣಬಹುದು. ಮೇಲ್ಭಾಗದಲ್ಲಿ 3.5 ಮಿಲಿಮೀಟರ್ ಗಾತ್ರದಲ್ಲಿರುವ ಹೆಡ್ ಫೋನ್ ಪೋರ್ಟ್ ಅನ್ನೂ ನಾವು ನೋಡಬಹುದಾಗಿದೆ.


  Read Aslo: Facebook New look: ಶೀಘ್ರದಲ್ಲೇ ಹೊಸ ರೂಪ, ಹೆಸರಿನೊಂದಿಗೆ ಫೇಸ್​ಬುಕ್​​

  ಕಂಪೆನಿಯು ನೋಟ್ 11 ಸೀರಿಸ್ ಉಲ್ಲೇಖಿಸುತ್ತಾ, ಅನೇಕ ಸಾಧನಗಳನ್ನು ಸೂಚಿಸಿದೆ. ವಿಶಿಷ್ಟ ರೆಡ್‌ಮಿ ಶೈಲಿಯಲ್ಲಿ ನಾವು ಎರಡು ಅಥವಾ ಮೂರು ಸಾಧನಗಳನ್ನು ನೋಡುವ ಸಾಧ್ಯತೆಯಿದೆ. ರೆಡ್‌ಮಿ ನೋಟ್ 11, Redmi Note 11 ಪ್ರೋ ಮತ್ತು ಬಹುಶಃ ನೋಟ್ 11 ಪ್ರೋ ಮ್ಯಾಕ್ಸ್ ಆಗಿರಬಹುದು.


  ಈ ಹಿಂದಿನ ರೆಡ್‌ಮಿ ನೋಟ್ 10 ಪ್ರೋ ಮ್ಯಾಕ್ಸ್ ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಸೂಪರ್‌ ಡಿಸ್‌ಪ್ಲೇ ಹೊಂದಿತ್ತು. ಈ ವರ್ಷ, ರೆಡ್ಮಿ ನೋಟ್ 11ನ ಪ್ರೋ ವೇರಿಯಂಟ್ 120 ಹರ್ಟ್ಜ್ OLED ಡಿಸ್‌ಪ್ಲೇಯನ್ನು ಒಳಗೊಂಡಿರಬಹುದು ಎಂದು ನಿರೀಕ್ಷಿಸಲಾಗಿದೆ.
  Redmi Note 11 ಸೀರಿಸ್

  ಸಾಧಾರಣ ನೋಟ್ 11 ಸ್ಮಾರ್ಟ್‌ಫೋನ್ 120 ಹರ್ಟ್ಸ್‌ ಎಲ್‌ಸಿಡಿ ಡಿಸ್‌ಪ್ಲೇ ಜೊತೆಗೆ ಮೀಡಿಯಾಟೆಕ್ ಡೈಮೆನ್ಸಿಟಿ 810 ಚಿಪ್ ಒಳಗೊಂಡಿದೆ. ಇದು 5,000 ಮೆಗಾ ಆ್ಯಂಪಿಯರ್ ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುವ ನಿರೀಕ್ಷೆಯಿದೆ. ಆದರೆ ಕೇವಲ 33 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಒಳಗೊಂಡಿರಬಹುದು ಎಂದು ಹೇಳಲಾಗುತ್ತಿದೆ.


  Read Also: Viral Story: ಸ್ಮಾರ್ಟ್​ಫೋನ್ ಖರೀದಿಸುವ ಆಸೆ… 26 ವರ್ಷದ ಹೆಂಡತಿಯನ್ನು ಮಾರಿದ 17 ವರ್ಷದ ಗಂಡ!

  Redmi Note 11 6ಜಿಬಿ/128ಜಿಬಿ ಮತ್ತು 8ಜಿಬಿ/128ಜಿಬಿ ವೇರಿಯಂಟ್‌ಗಳಲ್ಲಿ ಬರುವ ನಿರೀಕ್ಷೆಯಿದ್ದರೆ, ಪ್ರೋ ಹೆಚ್ಚುವರಿಯಾಗಿ 8ಜಿಬಿ/256ಜಿಬಿ ವೇರಿಯಂಟ್ ಅನ್ನು ಸಹ ಪಡೆಯಬಹುದು ಎಂದು ಹೇಳಲಾಗುತ್ತಿದೆ. Redmi Note 11 ಸೀರಿಸ್ ನ ಹೆಚ್ಚಿನ ವಿವರಗಳು ಆನ್‌ಲೈನ್‌ನಲ್ಲಿ ಕೆಲವೇ ದಿನಗಳಲ್ಲಿ ಹೊರಬರುವ ಸಾಧ್ಯತೆಗಳಿವೆ ಎಂದು ನಿರೀಕ್ಷಿಸಲಾಗುತ್ತಿದೆ. ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ಲಭ್ಯತೆಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ದೊರೆತಿಲ್ಲ.


  First published: