ಇತ್ತೀಚೆಗೆ ಮಾರುಕಟ್ಟೆಗೆ ಹಲವಾರು ಸ್ಮಾರ್ಟ್ಫೋನ್ಗಳು (Smartphones) ಬಿಡುಗಡೆಯಾಗುತ್ತಿದೆ. ಸ್ಮಾರ್ಟ್ಫೋನ್ ಕಂಪನಿಗಳಾದ ರೆಡ್ಮಿ (Redmi), ಸ್ಯಾಮ್ಸಂಗ್ (Samsung), ರಿಯಲ್ಮಿ (Realme), ಒಪ್ಪೋ (Oppo), ಒನ್ಪ್ಲಸ್ (Oneplus)ಇವುಗಳೆಲ್ಲಾ ಮಾರುಕಟ್ಟೆಯಲ್ಲಿ ತನ್ನದೇ ಆದಂತಹ ಸ್ಥಾನವನ್ನು ಪಡೆದುಕೊಂಡಿದೆ. ಈ ಮಧ್ಯೆ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲು ರೆಡ್ಮಿ ಮತ್ತೊಂದು ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಬಾರಿ ರೆಡ್ಮಿ ನೋಟ್ ಸೀರಿಸ್ನಲ್ಲಿ ಮೊಬೈಲ್ ಬಿಡುಗಡೆಯಾಗಿದ್ದು ಇದು ರೆಡ್ಮಿ ನೋಟ್ 12 ಪ್ರೋ ಸ್ಪೀಡ್ ಎಡಿಷನ್ (Redmi Note 12 Pro Speed Edition) ಎಂಬುದಾಗಿದೆ. ಇದು ರೆಡ್ಮಿ ನೋಟ್ 12 (Redmi Note 12) ಮಾದರಿಯ ಫೀಚರ್ಸ್ಗಳನ್ನು ಹೊಂದಿದ್ದು, ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಸಜ್ಜಾಗಿರುವ ಸ್ಮಾರ್ಟ್ಫೋನ್ ಎಂದೂ ಹೇಳ್ಬಹುದು.
ಇದೀಗ ರೆಡ್ಮಿ ನೋಟ್ ಸೀರಿಸ್ನಲ್ಲಿ ರೆಡ್ಮಿ ನೋಟ್ 12 ಪ್ರೋ ಸ್ಪೀಡ್ ಎಡಿಷನ್ ಎಂಬ ಹೊಸ ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. ಇದರ ಫೀಚರ್ಸ್, ಬೆಲೆ ಬಗ್ಗೆ ತಿಳಿಬೇಕಾದ್ರೆ ಈ ಲೇಖನವನ್ನು ಕಂಪ್ಲೀಟ್ ಓದಿ.
ಡಿಸ್ಪ್ಲೇ ಫೀಚರ್ಸ್
ರೆಡ್ಮಿ ನೋಟ್ 12 ಪ್ರೋ ಸ್ಪೀಡ್ ಎಡಿಷನ್ ಸ್ಮಾರ್ಟ್ಫೋನ್ 6.67 ಇಂಚಿನ ಫುಲ್ ಹೆಚ್ಡಿ ಪ್ಲಸ್ ಒಎಲ್ಇಡಿ ಫ್ಲೆಕ್ಸಿಬಲ್ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 1,080x2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಪ್ಲಿಂಗ್ ರೇಟ್ ಅನ್ನು ಹೊಂದಿದೆ. ಇದಲ್ಲದೆ HDR10+ ಬೆಂಬಲಿಸಲಿದ್ದು, 1920Hz PWM ಡಿಮ್ಮಿಂಗ್ ಮತ್ತು DCI-P3 ಕಲರ್ ಗ್ಯಾಮೆಟ್ ಅನ್ನು ಹೊಂದಿರಲಿದೆ.
ಇದನ್ನೂ ಓದಿ: 5ಜಿ ಹೆಸರಲ್ಲಿ ತಂತ್ರಜ್ಞಾನದಲ್ಲಿ ನಡೀತಿದೆ ದೊಡ್ಡ ಹಗರಣ! ತಪ್ಪಿಯೂ ಲಿಂಕ್ ಕ್ಲಿಕ್ ಮಾಡ್ಬೇಡಿ
ಕ್ಯಾಮೆರಾ ಫೀಚರ್ಸ್
ಯಾರೇ ಆಗಲಿ ಹೊಸ ಸ್ಮಾರ್ಟ್ಫೋನ್ ತೆಗೆದುಕೊಳ್ಳಬೇಕಾದರೆ ಅದರ ಕ್ಯಾಮೆರಾ ಹೇಗಿದೆ ಎಂದು ಮೊದಲು ನೋಡುತ್ತಾರೆ. ಇತ್ತೀಚಿನ ಸ್ಮಾರ್ಟ್ಫೋನ್ಗಳೆಲ್ಲವೂ ಹೆಚ್ಚಾಗಿ ಡಿಎಸ್ಎಲ್ಆರ್ನಂತೆಯೇ ಕ್ಯಾಮೆರಾ ಫೀಚರ್ಸ್ಗಳನ್ನು ಹೊಂದಿದೆ. ಇದೀಗ ರೆಡ್ಮಿ ನೋಟ್ ಸೀರಿಸ್ನಲ್ಲಿ ಬಿಡುಗಡೆ ಸ್ಮಾರ್ಟ್ಫೋನ್ ಕೂಡ ಹೀಗೆ ಗುಣಮಟ್ಟದ ಕ್ಯಾಮೆರಾ ಫೀಚರ್ಸ್ ಅನ್ನು ಒಳಗೊಂಡಿದೆ. ರೆಡ್ಮಿ ನೋಟ್ 12 ಪ್ರೋ ಸ್ಪೀಡ್ ಆವೃತ್ತಿಯು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
ಇದರಲ್ಲಿ ಮುಖ್ಯ ಕ್ಯಾಮೆರಾ 100 ಮೆಗಾಪಿಕ್ಸೆಲ್ ಸ್ಯಾಮ್ಸಂಗ್ HM2 ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆ್ಯಂಗಲ್ ಸೆನ್ಸಾರ್ ಜೊತೆಗೆ 119 ಡಿಗ್ರಿ ಫೀಲ್ಡ್ ಆಫ್ ವ್ಯೂ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಿದ್ದಾರೆ.
ಬ್ಯಾಟರಿ ಫೀಚರ್ಸ್
ರೆಡ್ಮಿ ನೋಟ್ 12 ಪ್ರೋ ಸ್ಪೀಡ್ ಆವೃತ್ತಿಯು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಒಳಗೊಂಡಿದೆ.
ಈ ಸ್ಮಾರ್ಟ್ಫೋನ್ನ ಪ್ರೊಸೆಸರ್ ಸಾಮರ್ಥ್ಯ ಹೇಗಿದೆ?
ರೆಡ್ಮಿ ನೋಟ್ 12 ಪ್ರೋ ಸ್ಪೀಡ್ ಸ್ಮಾರ್ಟ್ಫೋನ್ ಆಕ್ಟಾ-ಕೋರ್ 6nm ಸ್ನಾಪ್ಡ್ರಾಗನ್ 778G SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್-12 ಆಧಾರಿತ MIUI 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಈ ಸ್ಮಾರ್ಟ್ಫೋನ್ನ ಸ್ಟೋರೇಜ್ ಸಾಮರ್ಥ್ಯದ ಬಗ್ಗೆ ಮಾತನಾಡುವುದಾದರೆ ಇದು 12ಜಿಬಿ ರ್ಯಾಮ್ ಮತ್ತು 256ಜಿಬಿ ಇಂಟರ್ನಲ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್ಫೋನ್ನಲ್ಲಿ ಮೆಮೊರಿ ಕಾರ್ಡ್ ಅಳವಡಿಸುವಿಕೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಇತರೆ ಫೀಚರ್ಸ್
ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ, ವೈಫೈ 6, ಬ್ಲೂಟೂತ್ v5.2 ಮತ್ತು ಯುಎಸ್ಬಿ ಟೈಪ್ ಸಿ ಪೋರ್ಟ್ ಅನ್ನು ಒಳಗೊಂಡಿದೆ. ಇದಲ್ಲದೆ ಆಕ್ಸಿಲೆರೋಮೀಟರ್, ಆಂಬಿಯೆಂಟ್ ಸೆನ್ಸಾರ್, ಇ-ದಿಕ್ಸೂಚಿ, ಐಆರ್ ರಿಮೋಟ್ ಕಂಟ್ರೋಲ್ ಮತ್ತು ಗೈರೊಸ್ಕೋಪ್ ಅನ್ನು ಒಳಗೊಂಡಿದೆ.
ಬೆಲೆ ಮತ್ತು ಲಭ್ಯತೆ
ರೆಡ್ಮಿ ನೋಟ್ 12ಪ್ರೊ ಸ್ಪೀಡ್ ಎಡಿಷನ್ ಸ್ಮಾರ್ಟ್ಫೋನ್ ಇದೀಗ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದೆ. ಈ ಸ್ಮಾರ್ಟ್ಫೋನ್ ಬೇಸ್ ಮಾಡೆಲ್ 8ಜಿಬಿ ರ್ಯಾಮ್ ಮತ್ತು 256ಜಿಬಿ ಸ್ಟೋರೇಜ್ ಹೊಂದಿದ ಸ್ಮಾರ್ಟ್ಫೋನ್ ಅನ್ನಯ CNY 1,699 ಅಂದರೆ ಭಾರತದಲ್ಲಿ ಸುಮಾರು 20,200 ರೂಪಾಯಿ ಬೆಲೆ ಹೊಂದಿದೆ. ಇದರ 8jಇಬಿ ರ್ಯಾಮ್ ಮತ್ತು 256ಜಿಬಿ ಸ್ಟೋರೇಜ್ ಹೊಂದಿದ ಸ್ಮಾರ್ಟ್ಫೋನ್ ಅನ್ನು CNY 1,799 ಅಂದರೆ ಭಾರತದಲ್ಲಿ ಸುಮಾರು 21,400 ರೂಪಾಯಿಗೆ ಖರೀದಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ