ರೆಡ್ಮಿ ಕಂಪನಿ (Redmi Company) ಸದ್ಯ ಮಾರುಕಟ್ಟೆಯಲ್ಲಿ ಬಹಳಷ್ಟು ಸದ್ದು ಮಾಡಿರುವಂತಹ ಕಂಪನಿಯಾಗಿದೆ. ರೆಡ್ಮಿ ಕಂಪನಿ ತನ್ನ ಬ್ರಾಂಡ್ನ ಅಡಿಯಲ್ಲಿ ಸಾಕಷ್ಟು ಸ್ಮಾರ್ಟ್ಫೋನ್ಗಳನ್ನು (Smartphones) ಬಿಡುಗಡೆ ಮಾಡಿದೆ. ಆದರೆ ಒಂದೊಂದು ಸ್ಮಾರ್ಟ್ಫೋನ್ಗಳು ಕೂಡ ಬೇರೆ ಬೇರೆ ಫೀಚರ್ಸ್ಗಳೊಂದಿಗೆ ಗುರುತಿಸಿಕೊಂಡಿದೆ. ಈ ಹಿಂದೆ ರೆಡ್ಮಿ ಕಂಪನಿ ಮ್ಯೂಸಿಕ್ ಗ್ಯಾಜೆಟ್ಸ್ಗಳ (Music Gadgets) ಸಾಲಿಗೆ ಹೊಸ ಇಯರ್ಬಡ್ಸ್ಗಳನ್ನು (Earbuds) ಪರಿಚಯಿಸಿತ್ತು. ಆದರೆ ಇದೀಗ ಮಾರುಕಟ್ಟೆಗೆ ಹೊಸ ಇಯರ್ಬಡ್ಸ್ ಅನ್ನು ಪರಿಚಯಿಸಲು ನಿರ್ಧರಿಸಿದೆ. ಈ ಇಯರ್ ಬಡ್ಸ್ ಬಹಳಷ್ಟು ಫೀಚರ್ಸ್ ಅನ್ನು ಒಳಗೊಂಡಿದ್ದು ಮಾರುಕಟ್ಟೆಯಲ್ಲಿ ಸದ್ದು ಮಾಡಲು ಸಜ್ಜಾಗಿದೆ.
ಇದೀಗ ರೆಡ್ಮಿ ಕಂಪನಿ ಮಾರುಕಟ್ಟೆಗೆ ರೆಡ್ಮಿ ಬಡ್ಸ್ 4 ಲೈಟ್ ಎಂಬ ಇಯರ್ಬಡ್ಸ್ ಅನ್ನು ಪರಿಚಯಿಸುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಇದು ಮಾರುಕಟ್ಟೆಗೆ ಕಾಲಿಡಲಿದ್ದು ಬಳಕೆದಾರರಿಗೆ ಕೈಗೆಟಕುವ ಬೆಲೆಯಲ್ಲಿ ಸಿಗಲಿದೆ. ಹಾಗಿದ್ರೆ ಇದರ ಸ್ಪೆಷಲ್ ಫೀಚರ್ಸ್ ಏನೆಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.
ರೆಡ್ಮಿ ಬಡ್ಸ್ 4 ಲೈಟ್ ಫೀಚರ್ಸ್
ರೆಡ್ಮಿ ಬಡ್ಸ್ 4 ಲೈಟ್ 12mmನ ದೊಡ್ಡ ಡ್ರೈವರ್ಗಳ ಆಯ್ಕೆ ಪಡೆದುಕೊಂಡಿದ್ದು, ಗ್ರಾಹಕರಿಗೆ ಉತ್ತಮ ಅನುಭವ ನೀಡುವ ಸೌಂಡ್ ನೀಡಲಿದೆ. ಹಾಗೆಯೇ ವಾಯರ್ಲೆಸ್ ಸಂಪರ್ಕಕ್ಕಾಗಿ ಬ್ಲೂಟೂತ್ ಆವೃತ್ತಿ 5.3 ನಲ್ಲಿಕಾರ್ಯನಿರ್ವಹಿಸುತ್ತದೆ. ಜೊತೆಗೆ ಇದು 10m ಶ್ರೇಣಿಯಲ್ಲಿ ಕೆಲಸ ಮಾಡಲಿದೆ. ಇದರೊಂದಿಗೆ IP54 ರೇಟಿಂಗ್ ಅನ್ನು ಇದು ಹೊಂದಿದೆ.
ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ರೆಡ್ಮಿ ಹೊಸ ಸ್ಮಾರ್ಟ್ಫೋನ್! ಹೇಗಿದೆ ಗೊತ್ತಾ ಫೀಚರ್ಸ್?
ಹಾಗೆಯೇ ಈ ಇಯರ್ಬಡ್ಸ್ ಕರೆ ಸಂದರ್ಭದಲ್ಲಿ ಇತರೆ ಶಬ್ಧವನ್ನು ತಡಯುವ ವಾಯ್ಸ್ ಕ್ಯಾನ್ಸಲಿಂಗ್ ಫೀಚರ್ ಅನ್ನು ಒಳಗೊಂಡಿದೆ. ವಿಶೇಷವಾಗಿ ಈ ಬಡ್ಸ್ಗಳು ಕೇವಲ 3.9 ಗ್ರಾಂ. ತೂಕ ಹೊಂದಿದ್ದು, ಕಿವಿಯಲ್ಲಿ ಭಾರ ಎನಿಸುವ ಅನುಭವ ಉಂಟಾಗುವುದಿಲ್ಲ. ಇನ್ನು ಇದರ ವಿನ್ಯಾಸವನ್ನು ಇದಕ್ಕಾಗಿಯೇ ಆಫ್ ಇಯರ್ ಶೈಲಿಯ ರಚಿಸಲಾಗಿದೆ. ಇದರೊಂದಿಗೆ ಕಾಲ್ಗಾಗಿ ಮತ್ತು ಮ್ಯೂಸಿಕ್ ಕಂಟ್ರೋಲ್ಗಾಗಿ ಟಚ್ ಫೀಚರ್ಸ್ ಅನ್ನು ಸಹ ಹೊಂದಿದೆ. ಇನ್ನು ಈ ಬಡ್ಸ್ಗಳು ವಿಶೇಷವಾಗಿ ವೇಗವಾದ ಕನೆಕ್ಟಿವಿಟಿ ಆಯ್ಕೆಗಳನ್ನು ಪಡೆದುಕೊಂಡಿದೆ.
ಬ್ಯಾಟರಿ ಫೀಚರ್ಸ್ ಹೇಗಿದೆ?
ಈ ರೆಡ್ಮಿ ಕಂಪನಿಯಿಂದ ಬಿಡುಗಡೆಯಾದ ಬಡ್ಸ್ಗಳನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 5 ಗಂಟೆಗಳವರೆಗೆ ಸಂಗೀತ ಪ್ಲೇಬ್ಯಾಕ್ ಮಾಡುವಂತಹ ಅವಕಾಶ ಸಿಗಲಿದೆ. ಹಾಗೆಯೇ ಚಾರ್ಜಿಂಗ್ ಕೇಸ್ನ ಬ್ಯಾಟರಿ ಸಾಮರ್ಥ್ಯ ಒಂದು ಪೂರ್ಣ ಚಾರ್ಜ್ನಲ್ಲಿ ಬರೋಬ್ಬರಿ 20 ಗಂಟೆಗಳಷ್ಟು ಹೊಂದಿದೆ.
ಬೆಲೆ ಮತ್ತು ಲಭ್ಯತೆ
ರೆಡ್ಮಿ ಬಡ್ಸ್ 4 ಲೈಟ್ ಸದ್ಯಕ್ಕೆ ಚೀನಾದಲ್ಲಿ ಮಾತ್ರ ಲಾಂಚ್ ಆಗಿದ್ದು, ಇದಕ್ಕೆ ಅಲ್ಲಿ 139 ಯುವಾನ್ ಅಂದರೆ ಭಾರತದಲ್ಲಿ ಸುಮಅರು 1,650ರೂ. ಗಳಷ್ಟು ಬೆಲೆ ನಿಗದಿ ಮಾಡಲಾಗಿದೆ. ಇದರೊಂದಿಗೆ ಇಯರ್ಬಡ್ಗಳು ಸನ್ನಿ ವೈಟ್, ಮಿಡ್ನೈಟ್ ಬ್ಲ್ಯಾಕ್, ಸನ್ಸೆಟ್ ಆರೆಂಜ್ ಮತ್ತು ಟ್ರೆಂಡ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಲು ಅವಕಾಶವಿದೆ. ಈ ಬಣ್ಣಗಳು ಭಾರತದ ಧ್ವಜದ ಬಣ್ಣಕ್ಕೆ ಹೋಲಿಕೆಯಾಗಲಿದ್ದು, ಖಂಡಿತವಾಗಿಯೂ ಭಾರತೀಯರಿಗೆ ಬೇಗನೆ ಸೆಳೆಯುತ್ತದೆ ಎಂದು ಹೇಳಬಹುದು. ಇನ್ನು ಈ ಇಯರ್ಬಡ್ಸ್ಗಳು ಮಾರುಕಟ್ಟೆಗೆ ಜಾಗತಿಕವಾಗಿ ಯಾವಾಗ ಬಿಡುಗಡೆಗೊಳ್ಳಲಿದೆ ಎಂಬ ಮಾಹಿತಿಯನ್ನು ಇದುವರೆಗೆ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.
ರೆಡ್ಮಿ 12 ಪ್ರೋ ಸ್ಪೀಡ್ ಎಡಿಷನ್ ಬಿಡುಗಡೆ
ರೆಡ್ಮಿ ನೋಟ್ 12 ಪ್ರೋ ಸ್ಪೀಡ್ ಎಡಿಷನ್ ಸ್ಮಾರ್ಟ್ಫೋನ್ 6.67 ಇಂಚಿನ ಫುಲ್ ಹೆಚ್ಡಿ ಪ್ಲಸ್ ಒಎಲ್ಇಡಿ ಫ್ಲೆಕ್ಸಿಬಲ್ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 1,080x2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಪ್ಲಿಂಗ್ ರೇಟ್ ಅನ್ನು ಹೊಂದಿದೆ. ಇದಲ್ಲದೆ HDR10+ ಬೆಂಬಲಿಸಲಿದ್ದು, 1920Hz PWM ಡಿಮ್ಮಿಂಗ್ ಮತ್ತು DCI-P3 ಕಲರ್ ಗ್ಯಾಮೆಟ್ ಅನ್ನು ಹೊಂದಿರಲಿದೆ. ಈ ಸ್ಮಾರ್ಟ್ಫೋನ್ ಸದ್ಯ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದ್ದು ಭಾರತಕ್ಕೆ ಕೆಲವೇ ದಿನಗಳಲ್ಲಿ ಲಗ್ಗಯಿಡಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ