• Home
  • »
  • News
  • »
  • tech
  • »
  • Smart Phone: 6,999 ರೂ.ಗೆ Redmi A1+ ಸ್ಮಾರ್ಟ್‌ಫೋನ್ ರಿಲೀಸ್ ಫೀಚರ್ಸ್ ಹೇಗಿದೆ ಗೊತ್ತಾ?

Smart Phone: 6,999 ರೂ.ಗೆ Redmi A1+ ಸ್ಮಾರ್ಟ್‌ಫೋನ್ ರಿಲೀಸ್ ಫೀಚರ್ಸ್ ಹೇಗಿದೆ ಗೊತ್ತಾ?

Redmi A1+

Redmi A1+

ಮೊಬೈಲ್ ಪ್ರಿಯರಿಗೆ ಪ್ರತಿದಿನ ಒಂದಲ್ಲ ಒಂದು ಖುಷಿ ಸುದ್ದಿಗಳು ಕೇಳಿ ಬರುತ್ತಿರುತ್ತದೆ. ಅದೆರೀತಿ ಇಂದು ಒಂದು ಸಖತ್ ಆಫರ್ ಆಗಿ ಮೊಬೈಲ್ ಪ್ರಿಯರ ಮುಂದೆ ಬಂದು ನಿಂತಿದೆ ಆದೇನು ಗೊತ್ತಾ?

  • Share this:

    ಮೊಬೈಲ್ (Mobile) ಪ್ರಿಯರಿಗೆ ಪ್ರತಿದಿನ ಒಂದಲ್ಲ ಒಂದು ಖುಷಿ ಸುದ್ದಿಗಳು ಕೇಳಿ ಬರುತ್ತಿರುತ್ತದೆ. ಅದೇರೀತಿ ಇಂದು ಒಂದು ಸಖತ್ ಆಫರ್ (Best Offer)  ಸ್ಮಾರ್ಟ್ ಫೋನ್ (Smart Phone) ಕೇವಲ 6,999 ರೂ.ಗಳ ಆರಂಭಿಕ ಬೆಲೆಯಲ್ಲಿ (Rate) ಈ ಹೊಸ Redmi A1+ ಸ್ಮಾರ್ಟ್‌ಫೋನನ್ನು ಪರಿಚಯಿಸಲಾಗಿದ್ದು, ಈ ಬೆಲೆಯಲ್ಲಿ ವಾಟರ್-ಡ್ರಾಪ್ (Water Drop) ಶೈಲಿಯ ನಾಚ್ ಡಿಸ್‌ಪ್ಲೇ, ಮೀಡಿಯಾ ಟೆಕ್ (Media Tech) ಹೆಲಿಯೊ A22 ಪ್ರೊಸೆಸರ್, AI ಬೆಂಬಲಿತ 8-ಮೆಗಾಪಿಕ್ಸೆಲ್ (Megapixel) ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು 5,000mAh ಬ್ಯಾಟರಿಯಂತಹ ಫೀಚರ್ ಹೊಂದಿದೆ. ಕಡಿಮೆ ಹಣದಲ್ಲಿ ಉತ್ತಮ ಫೋನ್ (Good Phone) ಖರೀದಿಸಲು ಬಯಸಿದರೆ ಇಲ್ಲಿದೆ ಸಖತ್ ಚಾನ್ಸ್. ಇದರ ವಿಷೆಶತೆ ಎನು ಗೊತ್ತಾ?


    Redmi A1+ ಸ್ಮಾರ್ಟ್‌ಫೋನಿನ ಫೀಚರ್ ಹೆಂಗಿದೆ ಗೊತ್ತಾ?


    ಮೊದಲೇ ಹೇಳಿದಂತೆ ಈ ಹೊಸ Redmi A1+ ಸ್ಮಾರ್ಟ್‌ಫೋನಿನಲ್ಲಿ ವಾಟರ್‌ಡ್ರಾಪ್  ನಾಚ್ ಶೈಲಿಯ 6.52-ಇಂಚಿನ HD+ (1,600x700 ಪಿಕ್ಸೆಲ್‌ಗಳು) ಡಿಸ್‌ಪ್ಲೇ ನೀಡಲಾಗಿದೆ. 20:9 ರೇಶಿಯೋ ಈ ಡಿಸ್‌ಪ್ಲೇಯು 120Hz ಟಚ್ ಸ್ಯಾಂಪ್ಲಿಂಗ್ ರೇಟ್, 400 nits ಹೈ ಬ್ರೈಟ್‌ನೆಸ್ ಮತ್ತು 70 ಪ್ರತಿಶತ NTSC ಕಲರ್ ಗ್ಯಾಮೆಟ್ ಫೀಚರ್​ನ  ಹೊಂದಿದೆ.


    Redmi A1Plus smartphone release for Rs 6 999 is a Bumper offer
    Redmi A1+


    ಸ್ಟೋರೆಜ್


    ಈ ಹೊಸ Redmi A1+ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ MediaTek Helio A22 SoC ನಿಂದ ರನ್ ಆಗುತ್ತದೆ.  ಇದನ್ನು 3GB LPDDR4X RAM ಮತ್ತು IMG PowerVR GPU ಗಳೊಂದಿಗೆ ಜೋಡಿಸಲಾಗಿದೆ. 32GB ಆಂತರಿಕ ಮೆಮೊರಿ ಹೊಂದಿರುವ ಈ ಸ್ಮಾರ್ಟ್‌ಫೋನಿಲ್ಲಿ ಮೀಸಲಾಗಿರುವ ಸ್ಲಾಟ್ ಮೂಲಕ ಮೈಕ್ರೊ SD ಕಾರ್ಡ್ ಬಳಸಿ 512GB ವರೆಗೆ ಮೆಮೊರಿಯನ್ನು ಹೆಚ್ಚಿಸಿಕೊಳ್ಳಬಹುದು.


    ಕ್ಯಾಮೆರಾ


    ಕ್ಯಾಮೆರಾ ವಿಭಾಗದಲ್ಲಿ, Redmi A1+ ಸ್ಮಾರ್ಟ್‌ಫೋನಿನಲ್ಲಿ 8-ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ನ  ಒಳಗೊಂಡಿರುವ AI ಬೆಂಬಲಿತ  ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಚಾಟ್‌ಗಳಿಗಾಗಿ, ಈ ಸ್ಮಾರ್ಟ್‌ಫೋನಿನ ಮುಂಭಾಗದಲ್ಲಿ 5-ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.


    ಇದನ್ನೂ ಓದಿ: Flipkart: ಫ್ಲಿಪ್‌ಕಾರ್ಟ್‌ನಲ್ಲಿ ಕ್ಯಾಶ್ ಆನ್ ಡೆಲಿವರಿ ಮಾಡುವ ಮುನ್ನ ಸರಿಯಾಗಿ ಯೋಚಿಸಿ


    ಬ್ಯಾಟರಿ ಬ್ಯಾಕಪ್


    Redmi A1+ ಸ್ಮಾರ್ಟ್‌ಫೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi 802.11 b/g/n, Bluetooth 5, GPS/ A-GPS, Glonass, Beidou ಮತ್ತು 3.5mm ಆಡಿಯೋ ಜ್ಯಾಕ್ ಫೀಚರ್ ಹೊಂದಿದೆ . ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್  ಸೆನ್ಸರ್  ಹೊಂದಿರುವ ಈ ಸ್ಮಾರ್ಟ್‌ಫೋನ್ 10W ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ.


    ಇದನ್ನೂ ಓದಿ:  Tech Tips: ಇನ್​ಸ್ಟಾಗ್ರಾಮ್​ನಲ್ಲಿ ಹೆಚ್ಚು ಲೈಕ್, ವೀವ್ಸ್ ಬರಬೇಕಾ? ಈ ಟೈಮ್​ನಲ್ಲಿ ಪೋಸ್ಟ್ ಹಾಕಿ


    ಭಾರತದಲ್ಲಿ Redmi A1+ ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಗೊತ್ತಾ?


    ದೇಶದಲ್ಲಿ Redmi A1+ ಸ್ಮಾರ್ಟ್‌ಫೋನಿನ ಬೆಲೆ 6,999 ರೂ.ಗಳಿಂದ ಪ್ರಾರಂಭವಾಗಿದೆ. ಇದರ ಬೇಸ್ 2GB RAM + 32GB ಸ್ಟೋರೇಜ್ ಮಾದರಿಯು 6,999 ರೂ. ಹಾಗೂ 3GB + 32GB ಮಾದರಿಯು 7,999 ರೂ. ಬೆಲೆ ಹೊಂದಿದೆ.  ಕಪ್ಪು, ತಿಳಿ ನೀಲಿ ಮತ್ತು ತಿಳಿ ಹಸಿರು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.


    ದಿನಕ್ಕೊಂದು ರೀತಿಯ ಮೊಬೈಲ್​ ಮಾರಕಟ್ಟೆಯಲ್ಲಿ ಲಗ್ಗೆಯನ್ನು ಇಡುತ್ತಿದೆ. ಇಂತಹ ಸನ್ನಿವೇಶದಲ್ಲಿ ಗ್ರಾಹಕರೂ ಚೀಪ್​ ಆಂಡ್​ ಬೆಸ್ಟ್​ ಮೊಬೈಲ್​ ಬೇಕು ಎಂದು ಕೇಳುವವರಿಗೆ ಸೂಪರ್​ ಡೂಪರ್​ ಆಫರ್​ನ ಮೊಬೈಲ್​ ಇದೀಗ ನಿಮ್ಮ ಮುಂದೆ.

    First published: