Redmi 9i: ಬಜೆಟ್​ ಬೆಲೆಗೆ ಗ್ರಾಹಕರ ಕೈಸೇರಲಿದೆ ರೆಡ್​ಮಿ 9i ಸ್ಮಾರ್ಟ್​ಫೋನ್!

ನೂತನ ಫೋನ್​ ಎರಡು ವೇರಿಯಂಟ್​ನಲ್ಲಿ ಬಿಡುಗಡೆ ಆಗುತ್ತಿದೆ. ಮಾಹಿತಿಗಳ ಮೇರೆಗೆ 4GB RAM​​+ 64GB +128GB ಸ್ಟೊರೇಜ್​ ಆಯ್ಕೆಯಲ್ಲಿ ಸಿಗಲಿದೆ ಎನ್ನಲಾಗುತ್ತಿದೆ.

news18-kannada
Updated:September 12, 2020, 6:38 PM IST
Redmi 9i: ಬಜೆಟ್​ ಬೆಲೆಗೆ ಗ್ರಾಹಕರ ಕೈಸೇರಲಿದೆ ರೆಡ್​ಮಿ 9i ಸ್ಮಾರ್ಟ್​ಫೋನ್!
Redmi 9i
  • Share this:
ಶಿಯೋಮಿ ರೆಡ್​ಮಿ 9i ಸ್ಮಾರ್ಟ್​ಫೋನ್​ ಅನ್ನು ಸಿದ್ಧಪಡಿಸಿದ್ದು, ಸೆಪ್ಟೆಂಬರ್​​ 15ರಂದು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ನೂತನ ಸ್ಮಾರ್ಟ್​ಫೋನ್​ ಅನ್ನು ಬಜೆಟ್​ ಬೆಲೆಯಲ್ಲಿ ನಿರ್ಮಿಸಲಾಗಿದ್ದು, ಗ್ರಾಹಕರನ್ನು ಸೆಳೆದುಕೊಳ್ಳುವ ಹಲವು ಫೀಚರ್​ಗಳನ್ನು ಇದು ಒಳಗೊಂಡಿದೆ.

ರೆಡ್​ಮಿ 9i ವಿಶೇಷತೆಗಳು:

ರೆಡ್​ಮಿ 9ಎ ಸ್ಮಾರ್ಟ್​ಫೋನ್​ ಅನ್ನು ಸೆಪ್ಟೆಂಬರ್​ 09 ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೀಗ ರೆಡ್​ಮಿ 9ಐ ಅನ್ನು ಪರಿಚಯಿಸಲು ಮುಂದಾಗಿದೆ. ನೂತನ ಫೋನ್​ ಎರಡು ವೇರಿಯಂಟ್​ನಲ್ಲಿ ಬಿಡುಗಡೆ ಆಗುತ್ತಿದೆ. ಮಾಹಿತಿಗಳ ಮೇರೆಗೆ 4GB RAM​​+ 64GB +128GB ಸ್ಟೊರೇಜ್​ ಆಯ್ಕೆಯಲ್ಲಿ ಸಿಗಲಿದೆ ಎನ್ನಲಾಗುತ್ತಿದೆ.

ಬೆಲೆ: 4GB RAM + 64GB  ಸ್ಟೊರೇಜ್​ ಆಯ್ಕೆ ಸ್ಮಾರ್ಟ್​ಫೋನ್​ ಬೆಲೆ 7,999 ರೂ. 4GB RAM + 128GB ಸ್ಟೊರೇಜ್​ ಹೊಂದಿರುವ ಸ್ಮಾರ್ಟ್​ಫೋನ್​ 8,999 ರೂಗೆ ಗ್ರಾಹಕರಿಕೆ ಸಿಗಲಿದೆ ಎನ್ನಲಾಗುತ್ತಿದೆ.

ಇನ್ನು ಧೀರ್ಘಕಾಲದ ಬಾಳಿಕೆಗಾಗಿ 4,000mAh​ ಬ್ಯಾಟರಿಯನ್ನು ಹೊಂದಿದ್ದು, ಕಪ್ಪು, ನೀಲಿ ಮತ್ತು ಹಸಿರು ಬಣ್ಣದಲ್ಲಿ ಬಿಡುಗಡೆ ಮಾಡುತ್ತಿದೆ. ಸದ್ಯ ಸೆಪ್ಟೆಂಬರ್​​ 15 ರಂದು ಭಾರತೀಯ ಮಾರುಕಟ್ಟೆಯಲ್ಲಿ ಈ ನೂತನ ಫೋನ್​ ಬಿಡುಗಡೆಯಾಗುತ್ತಿದೆ ಎನ್ನಲಾಗುತ್ತಿದೆ. ಆ ಬಳಿಕ ರೆಡ್​ಮಿ 9ಐ ಏನೆಲ್ಲಾ ವಿಶೇಷತೆಯನ್ನು ಹೊಂದಿದೆ ಎಂಬುದರ ಬಗ್ಗೆ ಖಚಿತವಾಗಿ ತಿಳಿಯಲಿದೆ.
Published by: Harshith AS
First published: September 12, 2020, 6:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading