Redmi 9i Launch: ರೆಡ್​ಮಿ 9ಐ ಮಾರುಕಟ್ಟೆಗೆ; 5 ಸಾವಿರ mAh ಬ್ಯಾಟರಿ ಹೊಂದಿರುವ ನೂತನ ಸ್ಮಾರ್ಟ್​ಫೋನ್​ ಹೇಗಿದೆ?

Redmi 9i: ರೆಡ್​ಮಿ 9ಎ ಸ್ಮಾರ್ಟ್​ಫೋನ್​ ಅನ್ನು ಸೆಪ್ಟೆಂಬರ್​ 09 ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು . ಇದೀಗ ರೆಡ್​ಮಿ 9ಐ ಅನ್ನು ಪರಿಚಯಿಸಿದೆ. ನೂತನ ಫೋನ್​ ಎರಡು ವೇರಿಯಂಟ್​ನಲ್ಲಿ ಬಿಡುಗಡೆ ಮಾಡಿದೆ. 4GB RAM​​ ಮತ್ತು 64GB +128GB ಸ್ಟೊರೇಜ್​ ಆಯ್ಕೆಯಲ್ಲಿ ಗ್ರಾಹಕರ ಖರೀದಿಗೆ ಸಿಗಲಿದೆ.

news18-kannada
Updated:September 15, 2020, 2:21 PM IST
Redmi 9i Launch: ರೆಡ್​ಮಿ 9ಐ ಮಾರುಕಟ್ಟೆಗೆ; 5 ಸಾವಿರ mAh ಬ್ಯಾಟರಿ ಹೊಂದಿರುವ ನೂತನ ಸ್ಮಾರ್ಟ್​ಫೋನ್​ ಹೇಗಿದೆ?
Redmi 9i
  • Share this:
ಶಿಯೋಮಿ ರೆಡ್​ಮಿ 9i ಸ್ಮಾರ್ಟ್​ಫೋನ್​ ಅನ್ನು ಸಿದ್ಧಪಡಿಸಿದ್ದು, ಇಂದು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಸ್ಮಾರ್ಟ್​ಫೋನ್​ ಅನ್ನು ಬಜೆಟ್​ ಬೆಲೆಯಲ್ಲಿ ನಿರ್ಮಿಸಲಾಗಿದ್ದು, ಗ್ರಾಹಕರನ್ನು ಸೆಳೆದುಕೊಳ್ಳುವ ಹಲವು ಫೀಚರ್​ಗಳನ್ನು ಇದು ಒಳಗೊಂಡಿದೆ.

ರೆಡ್​ಮಿ 9i ವಿಶೇಷತೆಗಳು:

ರೆಡ್​ಮಿ 9ಎ ಸ್ಮಾರ್ಟ್​ಫೋನ್​ ಅನ್ನು ಸೆಪ್ಟೆಂಬರ್​ 09 ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು . ಇದೀಗ ರೆಡ್​ಮಿ 9ಐ ಅನ್ನು ಪರಿಚಯಿಸಿದೆ. ನೂತನ ಫೋನ್​ ಎರಡು ವೇರಿಯಂಟ್​ನಲ್ಲಿ ಬಿಡುಗಡೆ ಮಾಡಿದೆ. 4GB RAM​​ ಮತ್ತು 64GB +128GB ಸ್ಟೊರೇಜ್​ ಆಯ್ಕೆಯಲ್ಲಿ ಗ್ರಾಹಕರ ಖರೀದಿಗೆ ಸಿಗಲಿದೆ.

ಡಿಸ್​​ಪ್ಲೇ: 6.53 ಇಂಚಿನ ಡಿಸ್​ಪ್ಲೇ ಹೊಂದಿದ್ದು,  ಮೀಡಿಯಾಟೆಕ್​ ಹೆಲಿಯೋ ಜಿ25 ಎಸ್​ಒಸಿಯಿಂದ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ: 13 ಮೆಗಾಫಿಕ್ಸೆಲ್​​ ಕ್ಯಾಮೆರಾ ನೀಡಲಾಗಿದೆ. ಸೆಲ್ಫಿಗಾಗಿ 5 ಮೆಗಾಫಿಕ್ಸೆಲ್​ ಕ್ಯಾಮೆರಾ ಅಳವಡಿಸಲಾಗಿದೆ.

ಬ್ಯಾಟರಿ: ಇನ್ನು ಧೀರ್ಘಕಾಲದ ಬಾಳಿಕೆಗಾಗಿ 5,000mAh​ ಬ್ಯಾಟರಿಯನ್ನು ಹೊಂದಿದ್ದು, ಕಪ್ಪು, ನೀಲಿ ಮತ್ತು ಹಸಿರು ಬಣ್ಣದಲ್ಲಿ ಬಿಡುಗಡೆ ಮಾಡಿದೆ.

 ಬೆಲೆ:  4GB RAM​​+ 64GB ವೇರಿಯಂಟ್​ನಲ್ಲಿ ಸಿಗುವ ರೆಡ್​ 9ಐ ಫೋನ್​ ಬೆಲೆ 8,299 ರೂ ಎಂದು ಅಂದಾಜಿಸಲಾಗಿದೆ. .4GB RAM​​+ 128GB ಸ್ಟೊರೇಜ್​ ಹೊಂದಿರುವ ಸ್ಮಾರ್ಟ್​ಫೋನ್​ ಬೆಲೆ 9,299 ರೂ ಎಂದು ಹೇಳಲಾಗುತ್ತಿದೆ.ರೆಡ್​​ಮಿ 9ಐ ಸ್ಮಾರ್ಟ್​ಫೋನ್​ ಆನ್​ಲೈನ್​ ಮಾರಾಟ ಮಳಿಗೆಯಾದ ಫ್ಲಿಪ್​ಕಾರ್ಟ್​ನಲ್ಲಿ ಮತ್ತು ಮಿ.ಕಾಮ್​ ಸೈಟ್​ನಲ್ಲಿ ಖರೀದಿಗೆ ಸಿಗಲಿದೆ. ಸೆಪ್ಟೆಂಬರ್​ 18ರಂದು ಆಫ್​ಲೈನ್​ ಸ್ಟೋರ್​ಗಳಲ್ಲಿ ಸಿಗಲಿದೆ.
Published by: Harshith AS
First published: September 15, 2020, 2:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading