Redmi 11 Prime 5G: ಇನ್ನೇನು ಕೆಲವೇ ಹೊತ್ತಿನಲ್ಲಿ ರೆಡ್​ಮಿ 11 ಪ್ರೈಮ್​ 5G, ರೆಡ್​ಮಿ A1 ಸ್ಮಾರ್ಟ್​ಫೋನ್​ ಬಿಡುಗಡೆ! ಲೈವ್​ ಕಾರ್ಯಕ್ರಮ ಇಲ್ಲಿದೆ ನೋಡಿ

ರೆಡ್​ಮಿ 5G ರೂಪಾಂತರಗಳ ಫೋನ್​ ಅನ್ನು ಪರಿಚಯಿಸುತ್ತಿದೆ. ಇದು ಕೂಡ ಖರೀದಿಗೆ ಸಿಗಲಿದೆ. ಬಿಡುಗಡೆಗೆ ಮುಂಚಿತವಾಗಿ, ಕಂಪನಿಯು Redmi 11 Prime 5G ಸ್ಮಾರ್ಟ್​ಫೋನ್​ 50MP ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಮೀಡಿಯಾ ಟೆಕ್ ಡೈಮೆನ್ಸಿಟಿ 700 ಚಿಪ್‌ಸೆಟ್‌ನೊಂದಿಗೆ ಬರಲಿದೆ ಎಂದು ದೃಢಪಡಿಸಿದೆ.

ರೆಡ್​ಮಿ 11 ಪ್ರೈಮ್​ 5G

ರೆಡ್​ಮಿ 11 ಪ್ರೈಮ್​ 5G

  • Share this:
    ಚೀನಾ (China) ಮೂಲದ ಶಿಯೋಮಿ ರೆಡ್​ಮಿ (Xioami Redmi) ಹೊಸ ಸ್ಮಾರ್ಟ್​ಫೋನ್​ಗಳನ್ನು ಆಗಾಗ ಪರಿಚಯಿಸುತ್ತಿರುತ್ತದೆ.ಅದರಂತೆಯೇ ಶುಭ ಮಂಗಳವಾರದಂದು ಭಾರತದಲ್ಲಿ (India) ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ನೂತನ ಫೋನ್​​ಗಳಾದ Redmi 11 Prime ಮತ್ತು Redmi A1. Redmi 11 Prime 4G ಇಂದು ಭಾರತೀಯರ ಕೈಗೆ ಸೇರಲಿದೆ.

    ರೆಡ್​ಮಿ 5G ರೂಪಾಂತರಗಳ ಫೋನ್​ ಅನ್ನು ಪರಿಚಯಿಸುತ್ತಿದೆ. ಇದು ಕೂಡ ಖರೀದಿಗೆ ಸಿಗಲಿದೆ. ಬಿಡುಗಡೆಗೆ ಮುಂಚಿತವಾಗಿ, ಕಂಪನಿಯು Redmi 11 Prime 5G ಸ್ಮಾರ್ಟ್​ಫೋನ್​ 50MP ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಮೀಡಿಯಾ ಟೆಕ್ ಡೈಮೆನ್ಸಿಟಿ 700 ಚಿಪ್‌ಸೆಟ್‌ನೊಂದಿಗೆ ಬರಲಿದೆ ಎಂದು ದೃಢಪಡಿಸಿದೆ.

    Redmi 11 Prime ವಿಶೇಷತೆ ಹೇಗಿದೆ?

    Redmi 11 Prime ಸ್ಮಾರ್ಟ್​ಫೋನ್​ ನೋಡಲು ಆಕರ್ಷಕವಾಗಿದೆ. MediaTek Helio G99 SoC, 50MP ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 5,000mAh ಬ್ಯಾಟರಿಯೊಂದಿಗೆ ಬರುತ್ತದೆ ಎಂದು ಹೇಳಲಾಗುತ್ತಿದೆ.

    ಆದರೆ Redmi A1 ಸ್ಮಾರ್ಟ್​ಫೋನ್​ 5,000 mAh ಬ್ಯಾಟರಿ ಮತ್ತು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರಲಿದೆ. ಇದು ಲೆದರ್ ಟೆಕ್ಸ್ಚರ್ ಬ್ಯಾಕ್‌ನೊಂದಿಗೆ ಬರುತ್ತದೆ. ಸದ್ಯ ಇವೆರಡು ಸ್ಮಾರ್ಟ್​ಫೋನ್​ಗಾಗಿ ಸ್ಮಾರ್ಟ್​ಫೋನ್​ ಪ್ರಿಯರು ಕಾಯುತ್ತಿದ್ದಾರೆ. ಆದರೆ ನೂತನ ಫೋನ್​ಗಳ ಬೆಲೆ ಎಷ್ಟಿರಲಿದೆ ಎಂದು ತಿಳಿಯೋಣ

    ಇದನ್ನೂ ಓದಿ: Video: ಇದು ಅಪಘಾತ ವಲಯ; ಬೋರ್ಡ್​ ನೋಡಬೇಕಿಲ್ಲ, ಕಾರ್​ ನೋಡಿದ್ರೇ ಗೊತ್ತಾಗುತ್ತೆ

    ಇಂದು ನೂತನ ಸ್ಮಾರ್ಟ್​ಫೋನ್​ಗಳೆರಡು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿದೆ. ಅದರಲ್ಲೂ ಲಾಂಚ್​ ಕಾರ್ಯಕ್ರಮವನ್ನು ಪತ್ರತಿಯೊಬ್ಬರೂ ವೀಕ್ಷಿಸಬಹುದಾಗಿದೆ. ಭಾರತದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ Redmi 2 ಫೋನ್​ಗಳನ್ನು ಲಾಂಚ್ ಮಾಡುತ್ತಿದೆ.

    ವೀಕ್ಷಿಸುವುದು ಹೇಗೆ?

    ವೀಕ್ಷಕರು ಕಂಪನಿಯ ಯೂಟ್ಯೂಬ್​ ಪುಟದಲ್ಲಿ ಈವೆಂಟ್ ಅನ್ನು ಲೈವ್ ಆಗಿ ವೀಕ್ಷಿಸಬಹುದು. ಈವೆಂಟ್ ಅನ್ನು ಲೈವ್ ಆಗಿ ವೀಕ್ಷಿಸಲು ಕೆಳಗೆ ಎಂಬೆಡ್ ಮಾಡಲಾದ ಲೈವ್‌ಸ್ಟ್ರೀಮ್ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ವೀಕ್ಷಿಸಬಹುದಾಗಿದೆ.



    ಇದನ್ನೂ ಓದಿ: Facebook: ಫೇಸ್​ಬುಕ್​ ಅಕ್ಟೋಬರ್​ 1 ರಿಂದ ಈ ಸೇವೆಯನ್ನು ಸ್ಥಗಿತಗೊಳಿಸುತ್ತಿದೆ

    Redmi 11 Prime 5G/4G ವಿಶೇಷತೆಗಳು:

    ಕುತೂಹಲ ಮೂಡಿಸಿದ Redmi 11 Prime 4G ಸ್ಮಾರ್ಟ್​ಫೋನ್​ ಹಲವು ವಿಶೇಷತೆಯನ್ನು ಹೊಂದಿದೆ. ಆದರೆ 5ಜಿ ಕಾಲಘಟ್ಟದಲ್ಲಿ ಈ ಫೋನಿನ ಬಿಡುಗಡೆ ಅಷ್ಟೇನು ಸೂಕ್ತವಲ್ಲ. ಅಂದಹಾಗೆಯೇ ಈ ಸ್ಮಾರ್ಟ್​ಫೋನ್​ MediaTek Helio G99 SoC, ವಾಟರ್‌ಡ್ರಾಪ್ ನಾಚ್ ಡಿಸ್ಪ್ಲೇ, 50MP ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರಲು ಸಿದ್ಧವಾಗಿದೆ.



    ನೂತನ ಫೋನಿನಲ್ಲಿ 5,000 mAh ಬ್ಯಾಟರಿಯನ್ನು ಅಳವಡಿಸಲಾಗುವುದು. ಸ್ಮಾರ್ಟ್‌ಫೋನ್ ಕಪ್ಪು, ಹಸಿರು ಮತ್ತು ನೇರಳೆ ಬಣ್ಣದ ಆಯ್ಕೆಯಲ್ಲಿ ಲಭ್ಯವಿರುತ್ತದೆ ಎಂದು Redmi ಮತ್ತಷ್ಟು ದೃಢಪಡಿಸಿದೆ.

    Redmi 11 Prime 5G ಸ್ಮಾರ್ಟ್​ಫೋನ್​ ಖರೀದಿಗೆ ಸಿಗಲಿದೆ. ಇದು ಕೂಡ MediaTek ಡೈಮೆನ್ಸಿಟಿ 700 ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ. ದೀರ್ಘ ಕಾಲದ ಬ್ಯಾಟರಿ ಬಾಳಿಕಗಾಗಿ 5,000 mAh ಬ್ಯಾಟರಿ ಅಳವಡಿಸಲಾಗಿದೆ.

    ಕ್ಯಾಮೆರಾದ ವಿಷಯದ ಬಗ್ಗೆ ತಿಳಿದುಕೊಳ್ಳುವುದಾದರೆ, ಈ Redmi 11 Prime 5G ಸ್ಮಾರ್ಟ್​ಫೋನ್​  50MP ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದು ಹಸಿರು ಮತ್ತು ನೇರಳೆ ಬಣ್ಣದ ಆಯ್ಕೆಯಲ್ಲಿ ಲಾಂಚ್ ಆಗಲಿದೆ ಎಂದು ಹೇಳಲಾಗುತ್ತಿದೆ.

    Redmi A1 ವಿಶೇಷತೆಗಳು

    Redmi A1 ಸ್ಮಾರ್ಟ್​ಫೋನ್​ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್‌ನೊಂದಿಗೆ ಬರಲು ಸಿದ್ಧವಾಗಿದೆ. ಸ್ಮಾರ್ಟ್‌ಫೋನ್‌ನ ಪ್ರಮುಖ ಹೈಲೈಟ್‌ಗಳಲ್ಲಿ ಅದರ ಬ್ಯಾಕ್​ ಕವರ್ ಕೂಡ ವಿಶೇಷವಾಗಿದೆ. ಅಂದರೆ ಸ್ಮಾರ್ಟ್​ಫೋನ್ 5,000 mAh ಬ್ಯಾಟರಿಯನ್ನು ಅಳವಡಿಸಿಕೊಂಡಿದೆ.
    Published by:Harshith AS
    First published: