ಸಾಮಾಜಿಕ ತಾಣಗಳಲ್ಲಿ ಸೋರಿಕೆ ಆಗಿದೆ ‘ರೆಡ್​ ಮಿ ನೋಟ್​ 7‘ ಬಿಡುಗಡೆ​ ದಿನಾಂಕ

ಇದೀಗ  ಭಾರತೀಯ ಕ್ಸಿಯಾಮಿ ಮೊಬೈಲ್​ನ ವ್ಯವಸ್ಥಾಪಕ ನಿರ್ದೇಶಕ  ಮನು ಕುಮಾರ್​ ಮತ್ತು ಕ್ಸಿಯಾಮಿ ಸಿಇಒ ಲೀ ಜುನ್​ ಅವರು ರೆಡ್​ ಮಿ ನೋಟ್​ 7 ಮೊಬೈಲ್​ ಅನ್ನು ಕೈಯಲ್ಲಿ ಹಿಡಿದಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಇದರಿಂದಾಗಿ ರೆಡ್​ ಮಿ ನೋಟ್​ 7 ಮೊಬೈಲ್​ ಸದ್ಯದಲ್ಲೇ ಬಿಡುಗಡೆಗೊಳ್ಳಲಿದೆ ಎಂಬ ಸುದ್ದಿಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

Harshith AS | news18
Updated:February 2, 2019, 3:45 PM IST
ಸಾಮಾಜಿಕ ತಾಣಗಳಲ್ಲಿ ಸೋರಿಕೆ ಆಗಿದೆ ‘ರೆಡ್​ ಮಿ ನೋಟ್​ 7‘ ಬಿಡುಗಡೆ​ ದಿನಾಂಕ
ರೆಡ್​ ಮಿ ನೋಟ್​ 7
Harshith AS | news18
Updated: February 2, 2019, 3:45 PM IST
ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ರೆಡ್​ ಮಿ ನೋಟ್​ 7 ಬಿಡುಗಡೆಯ ದಿನಾಂಕ ಲೀಕ್​ ಆಗಿದ್ದು ಫೆಬ್ರವರಿ 12 ರಂದು ಮಾರುಕಟ್ಟೆಗೆ ಬರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಕಳೆದ ತಿಂಗಳು ಚೀನಾ ಕ್ಸಿಯಾಮಿ ಕಂಪೆನಿಯು ರೆಡ್​ ಮಿ ನೋಟ್​ 7 ಸ್ಮಾರ್ಟ್​ ಫೋನ್​ ಅನ್ನು ಮುಂಬರುವ ದಿನಗಳಲ್ಲಿ ಪರಿಚಯಿಸುದಾಗಿ ಹೇಳಿತ್ತು. ಆದರೆ ಇದೀಗ  ಭಾರತೀಯ ಕ್ಸಿಯಾಮಿ ಮೊಬೈಲ್​ನ ವ್ಯವಸ್ಥಾಪಕ ನಿರ್ದೇಶಕ  ಮನು ಕುಮಾರ್​ ಮತ್ತು ಕ್ಸಿಯಾಮಿ ಸಿಇಒ ಲೀ ಜುನ್​ ಅವರು ರೆಡ್​ ಮಿ ನೋಟ್​ 7 ಮೊಬೈಲ್​ ಅನ್ನು ಕೈಯಲ್ಲಿ ಹಿಡಿದಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಇದರಿಂದಾಗಿ ರೆಡ್​ ಮಿ ನೋಟ್​ 7 ಮೊಬೈಲ್​ ಸದ್ಯದಲ್ಲೇ  ಬಿಡುಗಡೆಗೊಳ್ಳಲಿದೆ ಎಂಬ ಸುದ್ದಿಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

ಇದೀಗ ರೆಡ್​ ಮಿ ನೋಟ್​ 7 ಸ್ಮಾರ್ಟ್​ ಫೋನ್​ ಫೆಬ್ರವರಿ 12ರಂದು ಬಿಡುಗಡೆಗೊಳ್ಳಲಿದ್ದು, ಮೊಬೈಲ್​ ‘‘ ಅಪ್​ನಾ ಟೈಮ್​ ಆಯೇಗಾ ‘‘ ಎಂಬ ಟ್ಯಾಗ್​ ಲೈನ್​ ಹೊಂದಿದೆ.

ಇದನ್ನೂ ಓದಿ: ಬಿಎಸ್​ಎನ್​​ಎಲ್ ನೇಮಕಾತಿ ​; ಜ್ಯೂನಿಯರ್​ ಟೆಲಿಕಾಂ ಅಧಿಕಾರಿ ಹುದ್ದೆಗೆ ಆಹ್ವಾನ

ಶಿಯೋಮಿ ರೆಡ್ಮಿ ನೋಟ್ 7​ ಫೀಚರ್ಸ್​:

ಡಿಸ್​ಪ್ಲೇ: 6.3 ಇಂಚಿನ ಪೂರ್ಣ ಎಚ್​ಡಿ, 1080x2340 ಪಿಕ್ಸೆಲ್ ರೆಸಲ್ಯೂಷನ್
ಪ್ರೊಸೆಸರ್: 2.2GHz ​ ಸ್ನಾಪ್​ಡ್ರಾಗನ್ 660 ಆಕ್ಟಾ-ಕೋರ್
RAM: 3,4 ಮತ್ತು 6GB RAMಗಳಲ್ಲಿ ಲಭ್ಯವಿದೆ
Loading...

ಸ್ಟೋರೇಜ್: 32GB ಮತ್ತು 64GB ಮಾಡೆಲ್​ಗಳಿದ್ದು, ಮೈಕ್ರೋ ಎಸ್​ಡಿ ಕಾರ್ಡ್​ ಬಳಸಿ 256GBವರೆಗೂ ವಿಸ್ತರಿಸಬಹುದು.
ಕ್ಯಾಮೆರಾ: ಹಿಂಭಾಗದಲ್ಲಿ 48MP + 5MP, ಮುಂಭಾಗದಲ್ಲಿ 13MP
ಬ್ಯಾಟರಿ: 4,000 mAh ಸಾಮರ್ಥ್ಯ
ಆಪರೇಟಿಂಗ್ ಸಿಸ್ಟಂ​: MIUI 9 ಆಧರಿಸಿ ಆಂಡ್ರಾಯ್ಡ್ ಒರಿಯೊ ಒಎಸ್​ನಲ್ಲಿ ಕಾರ್ಯಾಚರಿಸಲಿದೆ. ​ 4G VoLTE ನೆಟ್​ವರ್ಕ್​, ವೈಫೈ, ಆಡಿಯೋ ಜಾಕ್ ಸೇರಿದಂತೆ ಇನ್ನು ಹಲವು ಫೀಚರ್​ಗಳನ್ನು ರೆಡ್​ಮಿ ನೋಟ್​ 7ನಲ್ಲಿ ನೀಡಲಾಗಿದೆ.

ಶಿಯೋಮಿ ರೆಡ್ಮಿ ನೋಟ್​ 7 ಬೆಲೆ:
ಚೀನಾ ಮಾರುಕಟ್ಟೆಯನ್ನು ಪ್ರವೇಶಿಸಿರುವ ರೆಡ್​ಮಿ ನೋಟ್​ 7 ಸ್ಮಾರ್ಟ್​ ಫೊನ್​ 3GB ಮತ್ತು 32 GB ಸ್ಟೋರೆಜ್​ ಬೆಲೆ 999 ಚೀನಿ ಯುವಾನ್​. ಅಂದರೆ ಈ ಮೊಬೈಲ್​ ಭಾರತದಲ್ಲಿ 10,500 ರೂ.ನಲ್ಲಿ ಸಿಗಲಿದೆ ಎನ್ನಲಾಗಿದೆ. ರೆಡ್​ ಮಿ ನೋಟ್​ 7 ಸ್ಟಾರ್ಟ್​ ಫೋನ್​ 4 ಮತ್ತು 64 ಸ್ಟೋರೆಜ್​ ಚೀನಿ ಬೆಲೆ 1,399 ರೂ ಆಗಿದ್ದು, ಭಾರತದಲ್ಲಿ 14,500 ಎನ್ನಲಾಗಿದೆ. ಬ್ಲಾಕ್​, ಗೋಲ್ಡ್​, ಮತ್ತು ನೀಲಿ ಬಣ್ಣಗಳಲ್ಲಿ ಈ ಮೊಬೈಲ್​ ಬಿಡುಗಡೆಯಾಗಿದ್ದು, ಆಯಾ ಮೊಬೈಲ್​ ಸಾಮರ್ಥ್ಯಕ್ಕನುಗುಣವಾಗಿ ಬೆಲೆಯಲ್ಲೂ ವ್ಯತ್ಯಾಸವಿದೆ. 4GB+32GB ಹಾಗೂ 6GB+64GB ಸ್ಟೋರೇಜ್​ಗಳಲ್ಲೂ ಈ ಫೋನ್​ಗಳು ಲಭ್ಯವಿದ್ದು ಇವುಗಳ ಬೆಲೆಯು ಭಾರತದಲ್ಲಿ 12 ರಿಂದ 15 ಸಾವಿರದೊಳಗೆ ಇರಲಿದೆ ಎಂದು ಹೇಳಲಾಗಿದೆ.

First published:February 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ