• Home
  • »
  • News
  • »
  • tech
  • »
  • Unrecyclable Plastic: ಅತ್ಯಂತ ವಿಷಕಾರಿ ಪ್ಲಾಸ್ಟಿಕ್ ಪಿವಿಸಿಯನ್ನು ಮರುಬಳಕೆ ಮಾಡಬಹುದು! ಮಿಶಿಗನ್ ವಿವಿ ಸಂಶೋಧನೆ

Unrecyclable Plastic: ಅತ್ಯಂತ ವಿಷಕಾರಿ ಪ್ಲಾಸ್ಟಿಕ್ ಪಿವಿಸಿಯನ್ನು ಮರುಬಳಕೆ ಮಾಡಬಹುದು! ಮಿಶಿಗನ್ ವಿವಿ ಸಂಶೋಧನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೆಕ್ಯಾನಿಕಲ್ ಮರುಬಳಕೆ ಎಂಬ ಪ್ರಕ್ರಿಯೆಯ ಮೂಲಕ ಸಾಮಾನ್ಯವಾಗಿ ಪ್ಲಾಸ್ಟಿಕ್ ಅನ್ನು ಕರಗಿಸಿ ಕಡಿಮೆ ಗುಣಮಟ್ಟದ ವಸ್ತುವನ್ನಾಗಿಸಿ ತಯಾರಿಸುವ ಮೂಲಕ ಮರುಬಳಕೆ ಮಾಡಲಾಗುತ್ತದೆ.

  • Trending Desk
  • 4-MIN READ
  • Last Updated :
  • Karnataka, India
  • Share this:

ಪಿವಿಸಿ ಅಥವಾ ಪಾಲಿವಿನೈಲ್ ಕ್ಲೋರೈಡ್ (Polyvinyl Chloride) ಎಂಬುದು ಯುಎಸ್‌ನಲ್ಲಿ (US) ಅತಿ ಹೆಚ್ಚಾಗಿ ಉತ್ಪಾದಿಸಲಾಗುವ ಪ್ಲಾಸ್ಟಿಕ್‌ಗಳಲ್ಲಿ ಒಂದಾಗಿದೆ ಹಾಗೂ ಪ್ರಪಂಚದಲ್ಲಿ ಪ್ಲಾಸ್ಟಿಕ್ ಉತ್ಪಾದನೆಯ (Plastic Production) ಪ್ರಮಾಣದಲ್ಲಿ ಮೂರನೇ ಅತಿಹೆಚ್ಚು ಎಂದೆನಿಸಿದೆ. ನಾವು ನಿತ್ಯಜೀವನದಲ್ಲಿ ಬಳಸುವ ಅಪಾರ ಪ್ರಮಾಣದ ಪ್ಲಾಸ್ಟಿಕ್‌ಗಳನ್ನು ಪಿವಿಸಿಯಿಂದಲೇ ಮಾಡಲಾಗಿರುತ್ತದೆ


ಆಸ್ಪತ್ರೆಯ ಉಪಕರಣ ಹಾಗೂ ಪೈಪಿಂಗ್ ವ್ಯವಸ್ಥೆಯಲ್ಲಿ ಪಿವಿಸಿ ಬಳಕೆ


ಆಸ್ಪತ್ರೆಯ ಉಪಕರಣಗಳಲ್ಲಿ ಬಳಸಲಾಗುವ ಹೆಚ್ಚಿನ ಪ್ಲಾಸ್ಟಿಕ್ ಕೊಳವೆಗಳು, ರಕ್ತದ ಬ್ಯಾಗ್‌ಗಳು, ಮಾಸ್ಕ್ ಹಾಗೂ ಇನ್ನಿತರ ಪರಿಕರಗಳು ಪಿವಿಸಿಯಾಗಿದೆ. ಇದಲ್ಲದೆ ಆಧುನಿಕ ಪೈಪಿಂಗ್ ವ್ಯವಸ್ಥೆಗಳಲ್ಲಿ ಬಳಸಲಾಗುವ ಕಿಟಕಿ ಫ್ರೇಮ್‌ಗಳು, ನೆಲದ ಹಾಸುಗಳನ್ನು ಪಿವಿಸಿ ಬಳಸಿ ತಯಾರಿಸಲಾಗುತ್ತದೆ. ವಿದ್ಯುತ್ ವೈರಿಂಗ್ ಲೇಪನ ಈ ಪ್ಲಾಸ್ಟಿಕ್‌ನಲ್ಲಿದ್ದು ಶವರ್ ಕರ್ಟನ್‌ಗಳು, ಟೆಂಟ್‌ಗಳು, ಟಾರ್ಪ್‌ಗಳು ಹಾಗೂ ಬಟ್ಟೆಗಳಂತಹ ಸಾಮಾಗ್ರಿಗಳನ್ನು ಒಳಗೊಂಡಿದೆ.


ಪಿವಿಸಿಯನ್ನು ರಾಸಾಯನಿಕವಾಗಿ ಮರುಬಳಕೆ ಮಾಡಬಹುದಾದ ವಿಧಾನ ಕಂಡುಹಿಡಿದ ಸಂಶೋಧಕರು


ಅಮೆರಿಕಾದಂತಹ ದೇಶದಲ್ಲಿಯೇ ಈ ಪ್ಲಾಸ್ಟಿಕ್ ಶೂನ್ಯ ಮರುಬಳಕೆ ದರವನ್ನು ಹೊಂದಿದೆ. ಇದೀಗ ಪಿವಿಸಿಯನ್ನು ರಾಸಾಯನಿಕವಾಗಿ ಮರುಬಳಕೆ ಮಾಡಬಹುದಾದ ವಿಧಾನವನ್ನು ಮಿಶಿಗನ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಹಿಡಿದಿದ್ದಾರೆ.


Recycling Unrecyclable Plastic University Of Michigan Studies Stg pvn
ಸಾಂದರ್ಭಿಕ ಚಿತ್ರ


ಪಿವಿಸಿಯ ಅತ್ಯಂತ ಹಾನಿಕಾರಕ ಘಟಕಗಳಲ್ಲಿ ಒಂದಾಗಿರುವ ಪ್ಲಾಸ್ಟಿಸೈಜರ್‌ಗಳಲ್ಲಿ ಥಾಲೇಟ್‌ಗಳನ್ನು ಬಳಸಲು ಸಂಶೋಧಕರು ಒಂದು ವಿಧಾನವನ್ನು ಅನ್ವೇಷಿಸಿದ್ದಾರೆ. ಈ ಸಂಶೋಧನೆಯ ಫಲಿತಾಂಶವನ್ನು ನೇಚರ್ ಕೆಮೆಸ್ಟ್ರಿ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.


ಮರುಬಳಕೆಯ ಸಮಯದಲ್ಲಿ ವಿಷಕಾರಿಯಾಗಿರುವ ಪಿವಿಸಿ ಘಟಕಗಳು


ಪಿವಿಸಿಯು ತನ್ನದೇ ಆದ ವಿಶಿಷ್ಟ ಸಮಸ್ಯೆಗಳನ್ನು ಹೊಂದಿರುವುದರಿಂದ ಇದರ ಮರುಬಳಕೆಯಂತಹ ಪ್ರಯೋಗಗಳಿಗೆ ಯಾರೂ ಹೆಚ್ಚು ಮುಂದಾಗುವುದಿಲ್ಲ ಎಂದು U-M ರಸಾಯನಶಾಸ್ತ್ರ ವಿಭಾಗದಲ್ಲಿ ಪೋಸ್ಟ್‌ಡಾಕ್ಟರಲ್ ಸಂಶೋಧಕರಾಗಿರುವ ಫಗ್ನಾನಿ ಹೇಳಿಕೆಯಾಗಿದೆ.


ಪಿವಿಸಿ ಹೆಚ್ಚು ಪ್ಲಾಸ್ಟಿಸೈಜರ್‌ಗಳನ್ನು ಹೊಂದಿರುವುದರಿಂದ ಮರುಬಳಕೆಯ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ವಸ್ತುಗಳನ್ನು ಕಲುಷಿತಗೊಳಿಸುತ್ತದೆ ಹಾಗೂ ಸಾಮಾನ್ಯವಾಗಿ ತುಂಬಾ ವಿಷಕಾರಿಯಾಗಿದೆ.


ಸ್ವಲ್ಪ ಶಾಖದೊಂದಿಗೆ ಹೈಡ್ರೋಕ್ಲೋರಿಕ್ ಆಮ್ಲವನ್ನು ವೇಗವಾಗಿ ಬಿಡುಗಡೆ ಮಾಡುವ ಸಾಮರ್ಥ್ಯ ಹೊಂದಿದೆ ಎಂಬುದು ಫಗ್ನಾನಿ ಮಾತಾಗಿದೆ.


ಇತರ ಪ್ಲಾಸ್ಟಿಕ್‌ನಂತೆ ಪಿವಿಸಿಯನ್ನು ಕರಗಿಸಲಾಗುವುದಿಲ್ಲ


ಮೆಕ್ಯಾನಿಕಲ್ ಮರುಬಳಕೆ ಎಂಬ ಪ್ರಕ್ರಿಯೆಯ ಮೂಲಕ ಸಾಮಾನ್ಯವಾಗಿ ಪ್ಲಾಸ್ಟಿಕ್ ಅನ್ನು ಕರಗಿಸಿ ಕಡಿಮೆ ಗುಣಮಟ್ಟದ ವಸ್ತುವನ್ನಾಗಿಸಿ ತಯಾರಿಸುವ ಮೂಲಕ ಮರುಬಳಕೆ ಮಾಡಲಾಗುತ್ತದೆ.


ಇದೇ ಪ್ರಕ್ರಿಯೆಯನ್ನು ಪಿವಿಸಿಗೆ ಅನ್ವಯಿಸಿದಾಗ ಅದರ ಪ್ರಾಥಮಿಕ ಘಟಕಗಳಲ್ಲಿ ಒಂದಾದ ಪ್ಲಾಸ್ಟಿಸೈಜರ್‌ಗಳು ವೇಗವಾಗಿ ಹೊರಬರುತ್ತವೆ ಹಾಗೂ ಇದು ವಿಷಕಾರಿಯಾದುದು ಎಂಬುದು ಇನ್ನೊಬ್ಬ ಸಂಶೋಧಕರಾದ ಮೆಕ್‌ನೀಲ್ ಅಭಿಪ್ರಾಯವಾಗಿದೆ.


ಥೈರಾಯ್ಡ್ ಹಾರ್ಮೋನ್‌ಗೆ ಹಾನಿ


ಸಾಮಾನ್ಯ ಪ್ಲಾಸ್ಟಿಸೈಜರ್ ಆಗಿರುವ ಥಾಲೇಟ್‌ಗಳು ಹೆಚ್ಚು ವಿಷಕಾರಿಯಾಗಿದ್ದು, ಥೈರಾಯ್ಡ್ ಹಾರ್ಮೋನ್, ಬೆಳವಣಿಗೆಯ ಹಾರ್ಮೋನುಗಳು ಮತ್ತು ಮಾನವರು ಜೊತೆಗೆ ಸಸ್ತನಿಗಳಲ್ಲಿ ಸಂತಾನೋತ್ಪತ್ತಿ ಮಾಡುವ ಹಾರ್ಮೋನುಗಳಿಗೆ ಅಡ್ಡಿಯುಂಟು ಮಾಡಬಹುದು ಎಂಬುದು ಸಂಶೋಧಕರ ಮಾತಾಗಿದೆ.


ಹಾಗಾಗಿ ಶಾಖವನ್ನು ಬಳಸದೆಯೇ ಪಿವಿಸಿಯ ಮರುಬಳಕೆ ಮಾಡಲು ಫಗ್ನಾನಿ ಎಲೆಕ್ಟ್ರೋಕೆಮಿಸ್ಟ್ರಿಯನ್ನು ಅನ್ವೇಷಿಸಲು ಪ್ರಾರಂಭಿಸಿದರು. ಪಿವಿಸಿಯನ್ನು ವಿಭಜಿಸುವ ಪ್ರಕ್ರಿಯೆಯಲ್ಲಿ ಪ್ಲಾಸ್ಟಿಸೈಜರ್ ಅನ್ನು ಬಳಸಬಹುದು ಎಂಬುದನ್ನು ಫಗ್ನಾನಿ ಹಾಗೂ ತಂಡ ಕಂಡುಕೊಂಡಿತು.


ಪ್ಲಾಸ್ಟಿಸೈಜರ್ ವಿಧಾನವನ್ನು ಇನ್ನಷ್ಟು ಸುಧಾರಿಸಿದ್ದು ಎಲೆಕ್ಟ್ರೋಕೆಮಿಕಲ್ ವಿಧಾನವು ಹೈಡ್ರೋಕ್ಲೋರಿಕ್ ಆ್ಯಸಿಡ್‌ನೊಂದಿಗೆ ಪಿವಿಸಿಯನ್ನು ವಿಭಜಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ ಎಂಬುದನ್ನು ಫಗ್ನಾನಿ ತಿಳಿಸಿದರು.


ಪಿವಿಸಿ ಹೈಡ್ರೋಕ್ಲೋರಿಕ್ ಆಮ್ಲವನ್ನು ಬಿಡುಗಡೆ ಮಾಡುತ್ತದೆ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದು ಹೆಚ್ಚು ನಿಯಂತ್ರಿತ ದರದಲ್ಲಿ ಬಿಡುಗಡೆಯಾಗುತ್ತದೆ ಎಂದು ತಿಳಿಸಿದ್ದಾರೆ.


ಪಿವಿಸಿ ವಿಭಜಿಸಿ ಮರುಬಳಕೆ ಮಾಡಬಹುದು


ಹೈಡ್ರೋಕಾರ್ಬನ್ ಅಂಶವನ್ನು ಪಿವಿಸಿ ಒಳಗೊಂಡಿದ್ದು, ಶಾಖವನ್ನು ಸಕ್ರಿಯಗೊಳಿಸುವಿಕೆಯ ಸಮಯದಲ್ಲಿ ಹೈಡ್ರೋಕ್ಲೋರಿಕ್ ಆಮ್ಲವು ತ್ವರಿತವಾಗಿ ಬಿಡುಗಡೆಯಾಗುತ್ತದೆ.


ಇದನ್ನೂ ಓದಿ: ಫ್ಲಿಪ್​ಕಾರ್ಟ್​​ ಬಿಗ್​ ಸೇವಿಂಗ್​ ಡೇಸ್​​ ಸೇಲ್​: ಈ ವಸ್ತುಗಳ ಮೇಲೆ ಶೇಕಡಾ 80 ರಷ್ಟು ರಿಯಾಯಿತಿ ಲಭ್ಯ!


ಈ ಆಮ್ಲವನ್ನು ಕೈಗಾರಿಕೆಗಳು ಇತರ ರಾಸಾಯನಿಕ ಕ್ರಿಯೆಗಳಿಗೆ ಬಳಸಬಹುದು ಎಂಬುದು ಸಂಶೋಧಕರ ಮಾತಾಗಿದೆ. ಸಂಶೋಧನೆಯನ್ನು ಕೈಗೊಂಡಿರುವ ಲ್ಯಾಬ್‌ನ ಮುಖ್ಯ ಉದ್ದೇಶವು ವಿವಿಧ ರೀತಿಯ ಪ್ಲಾಸ್ಟಿಕ್‌ಗಳನ್ನು ರಾಸಾಯನಿಕವಾಗಿ ಮರುಬಳಕೆ ಮಾಡುವ ವಿಧಾನಗಳನ್ನು ಅಭಿವೃದ್ಧಿಪಡಿಸುವುದಾಗಿದೆ.


ಪ್ಲಾಸ್ಟಿಕ್‌ಗಳನ್ನು ಅವುಗಳ ಘಟಕಳ ಭಾಗಗಳಾಗಿ ವಿಭಜಿಸುವುದರಿಂದ ವಿಘಟನೆಗೊಳ್ಳದಿರುವ ವಸ್ತುಗಳನ್ನು ಉತ್ಪಾದಿಸಬಹುದು ಹೀಗೆ ಉತ್ಪಾದನೆಯಾದ ವಸ್ತುವನ್ನು ಮರುಬಳಕೆ ಮಾಡಬಹುದು ಎಂಬುದನ್ನು ಸಂಶೋಧಕರು ಅನ್ವೇಷಿಸಿದ್ದಾರೆ.

Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು