HOME » NEWS » Tech » RECONNECT LAUNCHES DISNEY MARVEL FAN AT HEART COLLECTION HG

ಡಿಸ್ನಿ ಮಾರ್ವೆಲ್ ಸಂಗ್ರಹ ಬಿಡುಗಡೆ ಮಾಡಿದ ರಿಲಾಯನ್ಸ್ ರಿಕನೆಕ್ಟ್!

ಮಿಕ್ಕಿ ಮೌಸ್ ಮತ್ತು ಮಿನ್ನಿ ಮೌಸ್, ಡಿಸ್ನಿ ರಾಜಕುಮಾರಿ, ಮಾರ್ವೆಲ್ ಅವೆಂಜರ್ಸ್ ಮತ್ತು ಇತರ ಪಾತ್ರಗಳ ಹೆಸರಿನ ಪ್ರಾಡೆಕ್ಟ್​ಗಳನ್ನು ತರಲಿದೆ. ಆ ಮೂಲಕ ಡಿಸ್ನಿ- ಮಾರ್ವೆಲ್ ಪಾತ್ರಗಳು ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲಿದೆ

news18-kannada
Updated:November 28, 2020, 7:45 PM IST
ಡಿಸ್ನಿ ಮಾರ್ವೆಲ್ ಸಂಗ್ರಹ ಬಿಡುಗಡೆ ಮಾಡಿದ ರಿಲಾಯನ್ಸ್ ರಿಕನೆಕ್ಟ್!
ರಿಕನೆಕ್ಟ್
  • Share this:
ಮುಂಬೈ, ನವೆಂಬರ್ 26: ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆದ ರೀಕನೆಕ್ಟ್ (Reconnect) ಗುರುವಾರದಂದು ಡಿಸ್ನಿ-ಮಾರ್ವೆಲ್- ಫ್ಯಾನ್ ಅಟ್ ಹಾರ್ಟ್ ಮುಂತಾದ ಲೈಫ್ ಸ್ಟೈಲ್ ಎಲೆಕ್ಟ್ರಾನಿಕ್ ಉತ್ಪನ್ನಗಳ ಸಂಗ್ರಹವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಮಿಕ್ಕಿ ಮೌಸ್ ಮತ್ತು ಮಿನ್ನಿ ಮೌಸ್, ಡಿಸ್ನಿ ರಾಜಕುಮಾರಿ, ಮಾರ್ವೆಲ್ ಅವೆಂಜರ್ಸ್ ಮತ್ತು ಇತರ ಪಾತ್ರಗಳ ಹೆಸರಿನ ಪ್ರಾಡೆಕ್ಟ್​ಗಳನ್ನು ತರಲಿದೆ. ಆ ಮೂಲಕ ಡಿಸ್ನಿ- ಮಾರ್ವೆಲ್ ಪಾತ್ರಗಳು ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲಿದೆ. ಗ್ರಾಹಕರು ರೀಕನೆಕ್ಟ್ ವಿಶ್ವಾಸಾರ್ಹತೆಯೊಂದಿಗೆ ಡಿಸ್ನಿಯ ಮ್ಯಾಜಿಕ್ ಹಾಗೂ ಮಾರ್ವೆಲ್ ಪ್ರಾಡೆಕ್ಟ್​ಗಳನ್ನು ಖರೀದಿಸಬಹುದಾಗಿದೆ.

ಫೋನ್ ಆಕ್ಸೆಸರಿಗಳು, ಆಡಿಯೋ ಸಲಕರಣೆಗಳು, ಪರ್ಸನಲ್ ಕೇರ್ ಮತು ಅಡುಗೆ ಮನೆಯ ವಸ್ತುಗಳಲ್ಲಿ ಇವುಗಳನ್ನು ಕಾಣಬಹುದು.  ರೀಕನೆಕ್ಟ್ ಡಿಸ್ನಿ ಮತ್ತು ಮಾರ್ವೆಲ್ ನ 160ಕ್ಕೂ ಹೆಚ್ಚು ಉತ್ಪನ್ನಗಳನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದು. ಅದರಲ್ಲಿ ಪವರ್ ಬ್ಯಾಂಕ್, ಚಾರ್ಜರ್, ಸ್ಪೀಕರ್, ಹೆಡ್ ಫೋನ್, ಹೇರ್ ಡ್ರೈಯರ್, ಟೋಸ್ಟರ್ಸ್, ಇತರ ಎಲೆಕ್ಟ್ರಾನಿಕ್ ವಸ್ತುಗಳು ಒಳಗೊಂಡಿವೆ.



ವಿದ್ಯಾರ್ಥಿಗಳು, ವೃತ್ತಿಪರರು, ಹವ್ಯಾಸಿಗಳು ಅಥವಾ ಗೃಹಿಣಿಯರು ಹೀಗೆ ಎಲ್ಲರಿಗೂ ತಮ್ಮ ನೆಚ್ಚಿನ ಆಯ್ಕೆಯನ್ನು ಮಾಡಿಕೊಳ್ಳಬಹುದು.  ಡಿಸ್ನಿ -ಮಾರ್ವೆಲ್- ಫ್ಯಾನ್ ಅಟ್ ಹಾರ್ಟ್ ಪ್ರಾಡೆಕ್ಟ್​ಗಳು ರೂ. 249ರಿಂದ ಖರೀದಿಗೆ ಸಿಗಲಿದೆ. ದೇಶಾದ್ಯಂತ ಎಲೆಕ್ಟ್ರಾನಿಕ್ ರೀಟೇಲರ್ ಔಟ್ ಲೆಟ್ ಗಳು, ಸೂಪರ್ ಮಾರ್ಕೆಟ್ ಗಳು ಮತ್ತು ಮಳಿಗೆಗಳಲ್ಲಿ ದೊರೆಯುತ್ತವೆ.  ಈ ಸಂಗ್ರಹವು  ವೆಬ್ ಸೈಟ್ www.reliancedigital.inನಲ್ಲೂ ದೊರೆಯುತ್ತದೆ.

2011ರಲ್ಲಿ ರೀಕನೆಕ್ಟ್ ಆರಂಭವಾಗಿದ್ದು, ಅತ್ಯುತ್ತಮ ಗುಣಮಟ್ಟದ, ಕೈಗೆಟುಕುವ ದರದ, ಸ್ಟೈಲಿಷ್ ಉತ್ಪನ್ನಗಳು ಮಾರಾಟ ಮಾಡುತ್ತಿದೆ. ಅದರಲ್ಲಿ ಎಲ್ ಇಡಿ ಟೀವಿಗಳು, ಏರ್ ಕಂಡೀಷನರ್ ಗಳು, ವಾಷಿಂಗ್ ಮಷಿನ್, ಅಡುಗೆ ಮನೆ ವಸ್ತುಗಳು, ಸ್ಪೀಕರ್ ಗಳು ಮತ್ತಿತರ ವಸ್ತುಗಳು ದೊರೆಯುತ್ತವೆ.
ಭಾರತದ 800ಕ್ಕೂ ಹೆಚ್ಚು ನಗರಗಳಲ್ಲಿ 70 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ರೀಕನೆಕ್ಟ್ ಸೇವೆ ಒದಗಿಸುತ್ತಿದೆ.
Published by: Harshith AS
First published: November 28, 2020, 7:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading