ಟೆಲಿಕಾಂ ಕಂಪೆನಿಗಳಲ್ಲಿ (Telecom Company) ದೇಶದಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಪಟ್ಟಿಯಲ್ಲಿ ಏರ್ಟೆಲ್ (Airtel) ಎರಡನೇ ಸ್ಥಾನದಲ್ಲಿದೆ. ಆದರೆ ಈ ಕಂಪೆನಿ ದಿನದಿಂದ ದಿನಕ್ಕೆ ಜಿಯೋಗೆ ಪ್ರಬಲ ಪೈಪೋಟಿಯನ್ನು ನೀಡುತ್ತಲೇ ಇದೆ. ಜಿಯೋ ಮತ್ತು ಏರ್ಟೆಲ್ ದೇಶದೆಲ್ಲೆಡೆ 5ಜಿ ನೆಟ್ವರ್ಕ್ ಸೇವೆಯನ್ನು ಪ್ರಾರಂಭಿಸುವ ಮೂಲಕ ಎಲ್ಲರ ಗಮನಸೆಳೆಯುತ್ತಿದೆ. ಇದಲ್ಲದೆ ಏರ್ಟೆಲ್ 2023ರಲ್ಲಿ ದೇಶದ ಮೂಲೆ ಮೂಲೆಯಲ್ಲೂ ತನ್ನ 5ಜಿ ಸೇವೆಯನ್ನು ವಿಸ್ತರಿಸುವುದಾಗಿ ಗ್ರಾಹಕರಿಗೆ ಭರವಸೆ ನೀಡಿದೆ. ಇದರ ಜೊತೆಗೆ ಏರ್ಟೆಲ್ ಕಂಪೆನಿ ವಿಶೇಷ ಆಫರ್ನಲ್ಲಿ ರೀಚಾರ್ಜ್ ಪ್ಲ್ಯಾನ್ಗಳನ್ನು (Recharge Plans) ಸಹ ಬಿಡುಗಡೆ ಮಾಡುವ ಮೂಲಕ ಕಣ್ಮನ ಸೆಳೆಯುತ್ತಿದೆ.
ಏರ್ಟೆಲ್ 5ಜಿ ಸೇವೆಯ ಮಧ್ಯೆ ತನ್ನ 200 ರೂಪಾಯಿ ಒಳಗಿನ ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್ಗಳನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ ಆ ಪ್ಲ್ಯಾನ್ಗಳು ಯಾವುದೆಲ್ಲಾ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
ಏರ್ಟೆಲ್ನ 128 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಏರ್ಟೆಲ್ ಟೆಲಿಕಾಂನ 128 ರೂಪಾಯಿ ಯೋಜನೆಯು ಸ್ಥಳೀಯ ಮತ್ತು ಎಸ್ಟಿಡಿ ಕರೆಗಳಿಗೆ ಸೆಕೆಂಡಿಗೆ ರೂ 2.5 ಪೈಸೆಯಂತೆ ಕಟ್ ಆಗುತ್ತದೆ ಮತ್ತು ರಾಷ್ಟ್ರೀಯ ವಿಡಿಯೋ ಕರೆಗಳಿಗೆ ಸೆಕೆಂಡಿಗೆ ರೂ 5 ಪೈಸೆಯಂತೆ ವಿಧಿಸುತ್ತದೆ.
ಹೆಚ್ಚುವರಿಯಾಗಿ, ಮೊಬೈಲ್ ಡೇಟಾಗೆ ಪ್ರತಿ ಎಮ್ಬಿ ಗೆ 50 ಪೈಸೆ ವಿಧಿಸಲಾಗುತ್ತದೆ ಮತ್ತು ಸ್ಥಳೀಯ ಎಸ್ಎಮ್ಎಸ್ ಗೆ 1 ರೂಪಾಯಿ ಮತ್ತು ಎಸ್ಟಿಡಿ ಗೆ ಪ್ರತಿ ಎಸ್ಎಮ್ಎಸ್ ಗೆ 1.5 ರೂಪಾಯಿಅನ್ನು ವಿಧಿಸಲಾಗುತ್ತದೆ. ಏರ್ಟೆಲ್ನ ಈ ಪ್ಲ್ಯಾನ್ ಒಟ್ಟು 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.
ಏರ್ಟೆಲ್ನ 111 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಏರ್ಟೆಲ್ ಕಂಪೆನಿಯ 111 ರೂಪಾಯಿ ರೀಚಾರ್ಜ್ ಪ್ಲ್ಯಾನ್ 99 ರೂಪಾಯಿ ಟಾಕ್ ಟೈಮ್ ಮತ್ತು 200ಎಮ್ಬಿ ಮೊಬೈಲ್ ಡೇಟಾವನ್ನು ನೀಡುತ್ತದೆ. ಈ ಯೋಜನೆಯೊಂದಿಗೆ, ಎಲ್ಲಾ ಸ್ಥಳೀಯ, ಎಸ್ಟಿಡಿ ಮತ್ತು ಲ್ಯಾಂಡ್ಲೈನ್ ಕರೆಗಳಿಗೆ ಸೆಕೆಂಡಿಗೆ 2 ರೂಪಾಯಿ 5 ಪೈಸೆಯಂತೆ ವೆಚ್ಚವಾಗುತ್ತದೆ. ಎಸ್ಎಂಎಸ್ಗೆ ಸಂಬಂಧಿಸಿದಂತೆ, ಸ್ಥಳೀಯ ಎಸ್ಎಂಎಸ್ಗೆ 1 ರೂಪಾಯಿ ಮತ್ತು ಎಸ್ಟಿಡಿ ಪ್ರತಿ ಎಸ್ಎಂಎಸ್ ಗೆ 1.5 ರೂಪಾಯಿ ವೆಚ್ಚವಾಗಲಿದೆ. ಈ ಯೋಜನೆಯು ಒಟ್ಟು 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ.
ಏರ್ಟೆಲ್ನ 109 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಏರ್ಟೆಲ್ ಟೆಲಿಕಾಂನ 109 ರೂಪಾಯಿ ರೀಚಾರ್ಜ್ ಯೋಜನೆಯು 30 ದಿನಗಳವರೆಗೆ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಈ ರೀಚಾರ್ಜ್ನೊಂದಿಗೆ, ನೀವು 99 ಟಾಕ್-ಟೈಮ್ ಮತ್ತು 200ಎಮ್ಬಿ ಮೊಬೈಲ್ ಡೇಟಾವನ್ನು ಬಳಸಬಹುದಾಗಿದೆ. ಈ ಯೋಜನೆಯೊಂದಿಗೆ, ಎಲ್ಲಾ ಸ್ಥಳೀಯ, ಎಸ್ಟಿಡಿ ಮತ್ತು ಲ್ಯಾಂಡ್ಲೈನ್ ಕರೆಗಳಿಗೆ ಸೆಕೆಂಡಿಗೆ 2 ರೂಪಾಯಿ5 ಪೈಸೆ ವೆಚ್ಚವಾಗುತ್ತದೆ. ಪ್ರತಿ ಸ್ಥಳೀಯ ಎಸ್ಎಂಎಸ್ಗೆ 1 ರೂಪಾಯಿ ಮತ್ತು ಎಸ್ಟಿಡಿ ಪ್ರತಿ ಎಸ್ಎಂಎಸ್ಗೆ 1.5 ರೂಪಾಯಿ ವೆಚ್ಚವಾಗುತ್ತದೆ.
ಏರ್ಟೆಲ್ನ 99 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಏರ್ಟೆಲ್ ಟೆಲಿಕಾಂನ 99 ರೂಪಾಯಿ ಯೋಜನೆಯು ಒಟ್ಟು 28 ದಿನಗಳವರೆಗೆ ವ್ಯಾಲಿಡಿಟಿಯನ್ನು ಹೊಂದಿರುತ್ತದೆ . ಈ ರೀಚಾರ್ಜ್ನೊಂದಿಗೆ, ನೀವು 99 ರೂಪಾಯಿಯಷ್ಟು ಟಾಕ್-ಟೈಮ್ ಮತ್ತು 200 ಎಮ್ಬಿಯಷ್ಟು ಮೊಬೈಲ್ ಡೇಟಾವನ್ನು ಬಳಸಬಹುದಾಗಿದೆ.
ಇದನ್ನೂ ಓದಿ: ಭಾರತದ ಮಾರುಕಟ್ಟೆಗೆ ಲಗ್ಗೆಯಿಡ್ತಿದೆ ಟೆಕ್ನೋ ಫ್ಯಾಂಟಮ್ ಎಕ್ಸ್2 ಪ್ರೋ ಸ್ಮಾರ್ಟ್ಫೋನ್!
ಈ ಯೋಜನೆಯೊಂದಿಗೆ, ಎಲ್ಲಾ ಸ್ಥಳೀಯ, ಎಸ್ಟಿಡಿ ಮತ್ತು ಲ್ಯಾಂಡ್ಲೈನ್ ಕರೆಗಳಿಗೆ ಸೆಕೆಂಡಿಗೆ 2 ರೂಪಾಯಿ 5 ಪೈಸೆ ವೆಚ್ಚವಾಗುತ್ತದೆ. ಪ್ರತಿ ಸ್ಥಳೀಯ ಎಸ್ಎಂಎಸ್ಗೆ 1 ರೂಪಾಯಿ ಮತ್ತು ಎಸ್ಟಿಡಿ ಪ್ರತಿ ಎಸ್ಎಂಎಸ್ಗೆ 1.5 ರೂಪಾಯಿ ವೆಚ್ಚವಾಗುತ್ತದೆ.
ಏರ್ಟೆಲ್ ಟೆಲಿಕಾಂ ಕಂಪೆನಿ ಈ ಹಿಂದೆಯೂ ಹಲವಾರು ರೀಚಾರ್ಜ್ ಪ್ಲ್ಯಾನ್ಗಳನ್ನು ಪರಿಚಯಿಸಿದೆ. ಸದ್ಯ ದೇಶದಾದ್ಯಂತ 5ಜಿ ಸೇವೆಯನ್ನು ವಿಸ್ತರಿಸುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಏರ್ಟೆಲ್ನಿಂದ 5ಜಿ ರೀಚಾರ್ಜ್ ಪ್ಲ್ಯಾನ್ಗಳು ಸಹ ಬಿಡುಗಡೆಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ