ಮಾರುಕಟ್ಟೆಗೆ ಕಾಲಿಟ್ಟ ‘ರಿಯಲ್​​ಮಿ XT‘ ಸ್ಮಾರ್ಟ್​ಫೋನ್​; ಇದರ ಬೆಲೆ, ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ

ನೂತನ ರಿಯಲ್​ಮಿ XT ಸ್ಮಾರ್ಟ್​ಫೋನ್​​ 6.4 ಇಂಚಿನ ಫುಲ್​ HD+ಅಲೋಲ್ಡ್​ ಡಿಸ್​ಪ್ಲೇ ಹೊಂದಿದ್ದು,  ಡಿಸ್​​ಪ್ಲೇ ರಕ್ಷಣೆಗಾಗಿ ಕಾರ್ನಿಂಗ್​ ಗೊರಿಲ್ಲ ಗ್ಲಾಸ್ 5​ ಅಳವಡಿಸಲಾಗಿದೆ.

news18-kannada
Updated:September 14, 2019, 4:32 PM IST
ಮಾರುಕಟ್ಟೆಗೆ ಕಾಲಿಟ್ಟ ‘ರಿಯಲ್​​ಮಿ XT‘ ಸ್ಮಾರ್ಟ್​ಫೋನ್​; ಇದರ ಬೆಲೆ, ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ
‘ರಿಯಲ್​​ಮಿ XT‘
  • Share this:
ಚೀನಾದ ರಿಯಲ್​ಮಿ ಕಂಪೆನಿಯ ತಯಾರಿಸಿದ ರಿಯಲ್​ಮಿ  XT ಮಾಡೆಲ್​ ಸ್ಮಾರ್ಟ್​ಫೋನ್​, ದೇಶದಲ್ಲಿ ಬಿಡುಗಡೆಯಾಗಿದೆ. ನೂತನ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿರುವ​ ವಿವೋ, ಶಿಯೋಮಿ ಸ್ಮಾರ್ಟ್​ಫೋನಿಗಳಿಗೆ ಸ್ಪರ್ಧೆ ನೀಡಲು ರೆಡಿಯಾಗಿದೆ.

ಇತ್ತೀಚೆಗೆ ‘ರಿಯಲ್​ಮಿ 5‘ ಹಾಗೂ ‘ರಿಯಲ್​ಮಿ 5 ಪ್ರೊ‘ ಹೆಸರಿನ ನಾಲ್ಕು ಕ್ಯಾಮೆರಾವಿರುವ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆಗೊಳಿಸಿತ್ತು. ಇದೀಗ ನೂತನ ರಿಯಲ್​ಮಿ XT  ಅನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಮತ್ತಷ್ಟು ಬೇಡಿಕೆಯನ್ನು ನಿರ್ಮಿಸಲಿದೆ.  ರಿಯಲ್​ಮಿ XT ಸ್ಮಾರ್ಟ್​ಫೋನ್​ ಹೊಸ ವೈಶಿಷ್ಟ್ಯವನ್ನು ಮತ್ತು ಆಕರ್ಷಕ ಫೀಚರ್​​ ಅನ್ನು ಹೊಂದಿದೆ.

ರಿಯಲ್​ಮಿ ಸ್ಮಾರ್ಟ್​ಫೋನ್​ ಜೊತೆಗೆ ಬಡ್ಸ್​ ವೈರ್​ಲೆಸ್​ ಇಯರ್​ಫೋನ್​, ರಿಯಲ್​ಮಿ ಪವರ್​ಬ್ಯಾಂಕ್​ ಮತ್ತು ಫೋನ್​ ಕೇಸ್​ಗಳನ್ನು ನೀಡುತ್ತಿದೆ. ಗೇಮಿಂಗ್​ ಪ್ರಿಯರಿಗಾಗಿ ವಿಶೇಷ ರಿಯಲ್​ಮಿ XT 730G ಬಿಡುಗಡೆ ಮಾಡಿದೆ. ಹೊಸ ರಿಯಲ್​ಮಿ ಸ್ಮಾರ್ಟ್​ಫೋನ್​ ಸೆ.16 ರಂದು ಫ್ಲಿಪ್​ಕಾರ್ಟ್​ನಲ್ಲಿ ಮೊದಲ ಸೇಲ್​​ ಮೂಲಕ ಗ್ರಾಹಕರಿಗೆ ಲಭ್ಯವಾಗಲಿದೆ.

ಇದನ್ನೂ ಓದಿ: ವಾಟ್ಸ್​ಆ್ಯಪ್​ನಲ್ಲಿ ಬಂತು ‘ಫಿಂಗರ್​ ಪ್ರಿಂಟ್‘​ ಫೀಚರ್​; ಹೀಗೆ ಮಾಡಿದ್ರೆ ನಿಮ್ಮ ಫೋನ್​ಗೂ ಲಭ್ಯ

ರಿಯಲ್​ಮಿ ವೈಶಿಷ್ಟ್ಯಗಳು

ನೂತನ ರಿಯಲ್​ಮಿ XT ಸ್ಮಾರ್ಟ್​ಫೋನ್​​ 6.4 ಇಂಚಿನ ಫುಲ್​ HD+ಅಲೋಲ್ಡ್​ ಡಿಸ್​ಪ್ಲೇ ಹೊಂದಿದ್ದು,  ಡಿಸ್​​ಪ್ಲೇ ರಕ್ಷಣೆಗಾಗಿ ಕಾರ್ನಿಂಗ್​ ಗೊರಿಲ್ಲ ಗ್ಲಾಸ್ 5​ ಅಳವಡಿಸಲಾಗಿದೆ. ಈ ಸ್ಮಾರ್ಟ್​ಫೋನ್​ ಒಕ್ಟಾ ಕೋರ್​ ಸ್ನಾಪ್​ಡ್ರ್ಯಾಗನ್​ 712 ಪ್ರೊಸೆಸರ್​ನಿಂದ ಕಾರ್ಯ ನಿರ್ವಹಿಸುತ್ತದೆ.

ಗ್ರಾಹಕರಿಗಾಗಿ ನೂತನ ರಿಯಲ್​ಮಿ XT ಸ್ಮಾರ್ಟ್​ಫೋನ್​ 4GB RAM​ ಮತ್ತು 64GB ಸ್ಟೊರೇಜ್​ ಆಯ್ಕೆಯಲ್ಲಿ ಲಭ್ಯವಿದೆ. ಅದೇ ರೀತಿ 6GB RAM​ ಮತ್ತು 64GB ಸ್ಟೊರೇಜ್​, 8GB RAM​ ಮತ್ತು 128GB ಸ್ಟೊರೇಜ್​ ಆಯ್ಕೆಯಲ್ಲಿ ದೊರೆಯುತ್ತಿದ್ದು, 256GB ವರೆಗೆ ಸ್ಟೊರೇಜ್​ ಆಯ್ಕೆಯನ್ನು ವೃದ್ಧಿಸಬಹುದಾಗಿದೆ.ಕ್ಯಾಮೆರಾ ವಿಶೇಷತೆ

ರಿಯಲ್​ಮಿ XT ಸ್ಮಾರ್ಟ್​ಫೋನ್​ ಹಿಂಭಾಗದ 64 ಮೆಗಾಫಿಕ್ಸೆಲ್​ + 8 ಮೆಗಾಫಿಕ್ಸೆಲ್​ + 2 ಮೆಗಾಫೀಕ್ಸೆಲ್​ + 2 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಸೆಲ್ಫಿಗಾಗಿ 16 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ನೀಡಲಾಗಿದೆ.

ನೂತನ ಸ್ಮಾರ್ಟ್​ಫೋನ್​ ಗ್ರಾಹಕರಿಗಾಗಿ ಪರ್ಲ್​ ವೈಟ್​ ಮತ್ತು ಪರ್ಲ್​ ಬ್ಲೂ ಬಣ್ಣದಲ್ಲಿ ಲಭ್ಯವಾಗಲಿದೆ.

ಬೆಲೆ ವಿವರ

4​GB RAM ಮತ್ತು 64GB ಸ್ಟೊರೇಜ್ ಹೊಂದಿರುವ ಸ್ಮಾರ್ಟ್​ಫೋನ್​: 15,999 ರೂ.

6GB RAM​ ಮತ್ತು 64GB ಸ್ಟೊರೇಜ್ ಹೊಂದಿರುವ ಸ್ಮಾರ್ಟ್​ಫೋನ್​: 16,999 ರೂ.

8GB RAM ಮತ್ತು 128GB ಸ್ಟೊರೇಜ್ ಸ್ಟೊರೇಜ್​ ಹೊಂದಿರುವ ಸ್ಮಾರ್ಟ್​ಫೋನ್​: 18,999 ರೂ.

First published:September 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading