64MP ಕ್ಯಾಮರಾವಿರುವ ರಿಯಲ್​ಮಿ XT ಸ್ಮಾರ್ಟ್​ಫೋನ್​; ಇದೇ ವಾರ ಭಾರತದಲ್ಲಿ ಬಿಡುಗಡೆ

‘ರಿಯಲ್​ಮಿ XT‘ ಸ್ಮಾರ್ಟ್​ಫೋನ್ 6.4 ಇಂಚಿನ ಡಿಸ್​ಪ್ಲೇ ಹೊಂದಿದ್ದು, ವಾಟರ್​ಡ್ರಾಪ್​ ನಾಚ್​ ಹೊಂದಿದೆ. ಜೊತೆಗೆ ಗೊರಿಲ್ಲಾ ಗ್ಲಾಸ್ 5​ ಪ್ರೊಟೆಕ್ಷನ್ ನೀಡಲಾಗಿದೆ.

news18-kannada
Updated:September 9, 2019, 9:06 AM IST
64MP ಕ್ಯಾಮರಾವಿರುವ ರಿಯಲ್​ಮಿ XT ಸ್ಮಾರ್ಟ್​ಫೋನ್​; ಇದೇ ವಾರ ಭಾರತದಲ್ಲಿ ಬಿಡುಗಡೆ
ರಿಯಲ್​ಮಿ XT
  • Share this:
ಚೀನಾದ ರಿಯಲ್​ಮಿ ಕಂಪೆನಿಯ ತಯಾರಿಸಿದ  XT ಮಾಡೆಲ್​ ಸ್ಮಾರ್ಟ್​ಫೋನ್​, ಸೆ. 13 ರಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ.

ಇತ್ತೀಚೆಗೆ ‘ರಿಯಲ್​ಮಿ 5‘ ಹಾಗೂ ‘ರಿಯಲ್​ಮಿ 5 ಪ್ರೊ‘ ಹೆಸರಿನ ನಾಲ್ಕು ಕ್ಯಾಮರಾವಿರುವ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆಗೊಳಿಸಿತ್ತು. ಇದೀಗ, ಸೆ.13 ರಂದು ನೂತನ ‘ರಿಯಲ್​ಮಿ XT‘ ಸ್ಮಾರ್ಟ್​ಫೋನ್​ ಅನ್ನು ಬಿಡುಗಡೆಗೊಳಿಸುತ್ತಿದೆ..

‘ರಿಯಲ್​ಮಿ XT‘ ಸ್ಮಾರ್ಟ್​ಫೋನ್ 6.4 ಇಂಚಿನ ಡಿಸ್​ಪ್ಲೇ ಹೊಂದಿದ್ದು, ವಾಟರ್​ಡ್ರಾಪ್​ ನಾಚ್​ ಹೊಂದಿದೆ. ಜೊತೆಗೆ ಗೊರಿಲ್ಲಾ ಗ್ಲಾಸ್ 5​ ಪ್ರೊಟೆಕ್ಷನ್ ನೀಡಲಾಗಿದೆ. ನೂತನ ‘ರಿಯಲ್​ಮಿ XT‘ ಸ್ಮಾರ್ಟ್​ಫೋನ್​ ಕ್ವಾಲ್​ ​ಕ್ಯಾಂ ಸ್ನಾಪ್​ಡ್ರ್ಯಾಗನ್​ 712 ಒಕ್ಟಾಕೋರ್​ ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸುತ್ತಿದೆ. 4GB RAM​ ಮತ್ತು 64GB  ಸ್ಟೊರೇಜ್​ ಆಯ್ಕೆಯನ್ನು ನೀಡಲಾಗಿದೆ. ಹೆಚ್ಚುವರಿಗಾಗಿ 256GB ವರೆಗೆ ಸ್ಟೊರೇಜ್​ ಆಯ್ಕೆಯನ್ನು ವೃದ್ಧಿಸಬಹುದಾಗಿದೆ. ಬ್ಯಾಟರಿ ಬಳಕೆಗಾಗಿ 4000mAh​ ಬ್ಯಾಟರಿಯನ್ನು ನೀಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಅಪಾರ್ಟ್​ಮೆಂಟ್​ನಲ್ಲಿ ಐಎಫ್​ಎಸ್​ ಅಧಿಕಾರಿ ಆತ್ಮಹತ್ಯೆ; ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಭಾರತದಲ್ಲಿ ಬಿಡುಗಡೆಗೆ ಸಿದ್ಧವಾದ ‘ರಿಯಲ್​ಮಿ XT‘ ಸ್ಮಾರ್ಟ್​ಫೋನ್​​ ನಾಲ್ಕು ಕ್ಯಾಮರಾವನ್ನು ಹೊಂದಿದೆ. 64 ಮೆಗಾಫಿಕ್ಸೆಲ್​+ 8 ಮೆಗಾಫಿಕ್ಸೆಲ್​​​ + 2 ಮೆಗಾಫಿಕ್ಸೆಲ್​ + 2 ಮೆಗಾಫಿಕ್ಸೆಲ್​​​ ಕ್ಯಾಮರಾವನ್ನು ಸ್ಮಾರ್ಟ್​ಫೋನಿನಲ್ಲಿ ನೀಡಲಾಗಿದೆ. ಸೆಲ್ಫಿಗಾಗಿ  16 ಮೆಗಾಫಿಕ್ಸೆಲ್​ ಕ್ಯಾಮರಾವನ್ನು ಅಳವಡಿಸಲಾಗಿದೆ.
First published:September 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading