ನಾಳೆ ದೇಶಿಯ ಮಾರುಕಟ್ಟೆಗೆ Realme X7 ಸಿರೀಸ್​​ ಸ್ಮಾರ್ಟ್​ಫೋನ್​; ಏನಿದರ ವಿಶೇಷತೆ?

Realme X7 Series: ಕಳೆದ ವರ್ಷ ಸೆಪ್ಟೆಂಬರ್​ ತಿಂಗಳಿನಲ್ಲಿ ರಿಯಲ್​ಮಿ X7 ಸಿರೀಸ್​ ಸ್ಮಾರ್ಟ್​ಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಭಾರತೀಯ ಮಾರುಕಟ್ಟೆಗೆ ನಾಳೆ ಬಿಡುಗಡೆಗೊಳಿಸುತ್ತಿದೆ.

Realme X7 series

Realme X7 series

 • Share this:
  Realme ಸಂಸ್ಥೆ X7 ಮತ್ತು X7 Pro ಹೆಸರಿನ ಸ್ಮಾರ್ಟ್​ಫೋನನ್ನು ಗುರುವಾರದಂದು ದೇಶಿಯ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ನೂತನ ಸ್ಮಾರ್ಟ್​ಫೋನ್​ 5ಜಿ ನೆಟ್​ವರ್ಕ್​ನಲ್ಲಿ ಕಾರ್ಯನಿರ್ವಹಿಸುವಂತೆ ಅಭಿವೃದ್ಧಿ ಪಡಿಸಲಾಗಿದ್ದು, ಆಕರ್ಷಕ ಫೀಚರ್ಸ್​ ಅನ್ನು ಒಳಗೊಂಡಿದೆ.

  ಕಳೆದ ವರ್ಷ ಸೆಪ್ಟೆಂಬರ್​ ತಿಂಗಳಿನಲ್ಲಿ ರಿಯಲ್​ಮಿ X7 ಸಿರೀಸ್​ ಸ್ಮಾರ್ಟ್​ಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಭಾರತೀಯ ಮಾರುಕಟ್ಟೆಗೆ ನಾಳೆ ಬಿಡುಗಡೆಗೊಳಿಸುತ್ತಿದೆ.

  ಅಂದಹಾಗೆಯೇ ಈ ಸ್ಮಾರ್ಟ್​ಫೋನ್​ಗಳು 6.5 ಇಂಚಿನ ಫುಲ್​ ಹೆಚ್​ಡಿ+ ಸೂಪರ್​​ ಅಮೋಲ್ಡ್​​ ಪ್ಯಾನಲ್​ ಹೊಂದಿದೆ. ಗೊರಿಲ್ಲಾ ಗ್ಲಾಸ್​ 5 ಪ್ರೊಟೆಕ್ಷನ್​ ಮತ್ತು ಡಿಸ್​ಪ್ಲೇಗೆ ಯಾವುದೇ ಹಾನಿಯಾಗದಂತೆ ಸ್ಕ್ರಾಚಿಂಗ್​​ ರೆಸಿಸ್ಟೆಂಟ್​ ನೀಡಲಾಗಿದೆ.

  Realme X7 ಸಿರೀಸ್​ ಸ್ಮಾರ್ಟ್​ಫೋನ್​ಗಳು ಒಕ್ಟಾ ಕೋರ್​ ಡೈಮೆನ್​ಸಿಟಿ 1000 ಪ್ಲಸ್​​ ಚಿಪ್​ಸೆಟ್​ ಹೊಂದಿದೆ. ಇನ್ನು ಎಕ್ಸ್​7 6GB RAM​+128GB ಸ್ಟೊರೇಜ್​ ಮತ್ತು 8GB+128GB ಸ್ಟೊರೇಜ್​ ಆಯ್ಕೆಯಲ್ಲಿ ಪರಿಚಯಿಸಿದೆ. ಎಕ್ಸ್​7 ಪ್ರೊ ಸ್ಮಾರ್ಟ್​ಫೊನನ್ನು 8GB RAM+128GB ಮತ್ತು 8GB RAM + 256GB ವೇರಿಯಂಟ್​ನಲ್ಲಿ ಪರಿಚಯಿಸಿದೆ.

  ರಿಯಲ್​ಮಿ ಎಕ್ಸ್​7 ಪ್ರೊ ಕ್ವಾಡ್​ ಕ್ಯಾಮೆರಾ ಸೆಟ್​​ಅಪ್​ ಹೊಂದಿದೆ. ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ 64 ಮೆಗಾಫಿಕ್ಸೆಲ್​, 8 ಮೆಗಾಫಿಕ್ಸೆಲ್​ ಆಲ್ಟ್ರಾ ವೈಡ್​ ಮತ್ತು 2 ಮೆಗಾಫಿಕ್ಸೆಲ್​​ ಮ್ಯಾಕ್ರೊ ಲೆನ್ಸ್​ ಜೊತೆಗೆ 2 ಮೆಗಾಫಿಕ್ಸೆಲ್​ ರೆಟ್ರೊ ಪೊಟ್ರೇಟ್​​ ಸೆನ್ಸಾರ್​ ಅಳವಡಿಸಲಾಗಿದೆ. ಸೆಲ್ಫಿಗಾಗಿ 32 ಮೆಗಾಫಿಕ್ಸೆಲ್​​ ಪಂಚ್​​ ಹೋಲ್​​ ಕ್ಯಾಮೆರಾ ನೀಡಲಾಗಿದೆ.

  ಬೆಲೆ: ಎಕ್ಸ್​ 7 ಸ್ಮಾರ್ಟ್​ಫೋನ್​ ಬೆಲೆ 19,500 ರೂ ಮತ್ತು ಎಕ್ಸ್​7 ಪ್ರೊ ಬೆಲೆ 23,500 ರೂ ಎಂದು ಅಂದಾಜಿಸಲಾಗಿದೆ.
  Published by:Harshith AS
  First published: