ರಿಯಲ್‌ಮಿ X7 ಸರಣಿಯ ಮತ್ತೊಂದು ಸ್ಮಾರ್ಟ್‌ಫೋನ್‌ ಚೀನಾದಲ್ಲಿ ಬಿಡುಗಡೆ : ಭಾರತದಲ್ಲಿ ಬೆಲೆ ಎಷ್ಟಿರಲಿದೆ?

ರಿಯಲ್‌ಮಿ X7 ಪ್ರೊ ಅಲ್ಟ್ರಾ ಹೆಸರಿನಲ್ಲಿ 5 ಜಿ ಸಪೋರ್ಟ್‌ನೊಂದಿಗೆ ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. ಇದು 90Hz ರಿಫ್ರೆಶ್ ರೇಟ್‌ ಸ್ಕ್ರೀನ್‌ ಮತ್ತು ಮೀಡಿಯಾಟೆಕ್ ಡೈಮೆನ್ಸಿಟಿ 1000+ ನೊಂದಿಗೆ ರಿಯಲ್‌ಮಿ X7 ಪ್ರೊ ಅಲ್ಟ್ರಾವನ್ನು ಅನಾವರಣಗೊಳಿಸಿದೆ.

ರಿಯಲ್‌ಮಿ X7 ಪ್ರೊ

ರಿಯಲ್‌ಮಿ X7 ಪ್ರೊ

  • Share this:
ರಿಯಲ್‌ಮಿ 8 ಹಾಗೂ ರಿಯಲ್‌ ಮಿ 8 5G ಪ್ರೊ ಸ್ಮಾರ್ಟ್‌ಫೋನ್‌ಗಳು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂಬ ಸುದ್ದಿ ಕೇಳಿರುತ್ತೀರಾ. ಇದೇ ರಿಯಲ್‌ ಮಿ X7 ಸರಣಿಯಲ್ಲಿ ಹೊಸದಾಗಿ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ರಿಯಲ್‌ಮಿ X7 ಪ್ರೊ ಅಲ್ಟ್ರಾ ಹೆಸರಿನಲ್ಲಿ 5 ಜಿ ಸಪೋರ್ಟ್‌ನೊಂದಿಗೆ ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. ಇದು 90Hz ರಿಫ್ರೆಶ್ ರೇಟ್‌ ಸ್ಕ್ರೀನ್‌ ಮತ್ತು ಮೀಡಿಯಾಟೆಕ್ ಡೈಮೆನ್ಸಿಟಿ 1000+ ನೊಂದಿಗೆ ರಿಯಲ್‌ಮಿ X7 ಪ್ರೊ ಅಲ್ಟ್ರಾವನ್ನು ಅನಾವರಣಗೊಳಿಸಿದೆ.

ಹೊಸದಾಗಿ ಬಿಡುಗಡೆಯಾದ ಫೋನ್ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ರಿಯಲ್‌ಮಿ X7 ಪ್ರೊ ಎಕ್ಸ್‌ಟ್ರೀಮ್ ಆವೃತ್ತಿಯಾಗಿದೆ ಎಂದು ವರದಿಗಳು ತಿಳಿಸಿವೆ. ಅಲ್ಲದೆ, ಅವೆರಡೂ ಒಂದೇ ರೀತಿಯ ಸ್ಮಾರ್ಟ್‌ಫೋನ್‌ ಆಗಿದ್ದು, ಹೆಚ್ಚೇನೂ ವ್ಯತ್ಯಾಸವಿಲ್ಲ ಎಂದು ತಿಳಿದುಬಂದಿದೆ. X7 ಪ್ರೊ ಎಕ್ಸ್‌ಟ್ರೀಮ್ ಭಾರತದಲ್ಲಿ ಈ ವರ್ಷ ಬಿಡುಗಡೆಯಾಗಿತ್ತು. ಆದರೆ, ಚೀನಾದಲ್ಲಿ ಕಳೆದ ವರ್ಷವೇ ಲಾಂಚ್ ಆಗಿತ್ತು. ಇದೇ ರೀತಿ X7 ಪ್ರೊ ಅಲ್ಟ್ರಾ ಭಾರತದಲ್ಲಿ ಬಿಡುಗಡೆಯಾಗಲು ಇನ್ನೂ ಕೆಲ ಸಮಯ ಹಿಡಿಯುತ್ತದೆ.

ರಿಯಲ್‌ಮಿ X7 ಪ್ರೊ ಅಲ್ಟ್ರಾ ಬೆಲೆ

ರಿಯಲ್‌ಮಿ X7 ಪ್ರೊ ಅಲ್ಟ್ರಾ ಸ್ಮಾರ್ಟ್‌ಫೋನ್‌ ಎರಡು RAM ಮಾದರಿಗಳನ್ನು ಹೊಂದಿದೆ- 8GB ಮತ್ತು 12 GB. ಎರಡೂ 128GB ಮತ್ತು 256GB ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿವೆ. 8GB ಮಾಡೆಲ್‌ನ ಬೆಲೆ 2,299 ಯುವಾನ್ (ಸರಿಸುಮಾರು 25,695 ರೂ.), ನಂತರದ 12GB ಮಾಡೆಲ್‌ನ ಬೆಲೆ 2,599 ಯುವಾನ್ (ಸರಿಸುಮಾರು 29,050 ರೂ.) ಬೆಲೆಯೊಂದಿಗೆ ಚೀನಾದಲ್ಲಿ ಬಿಡುಗಡೆಯಾಗಿದೆ.

ರಿಯಲ್‌ಮಿ X7 ಪ್ರೊ ಅಲ್ಟ್ರಾ ವೈಶಿಷ್ಟ್ಯಗಳು

ಹ್ಯಾಂಡ್ಸೆಟ್ 6.55-ಇಂಚಿನ ಪೂರ್ಣ ಎಚ್‌ಡಿ + ಅಮೋಲ್ಡ್‌ ಸ್ಕ್ರೀನ್‌ ಅನ್ನು ಹೊಂದಿದೆ. ಜತೆಗೆ ಡಿಸ್ಪ್ಲೇ 90Hz ನ ರಿಫ್ರೆಶ್ ರೇಟ್‌ ಅನ್ನು ಹೊಂದಿದೆ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ನೀಡುತ್ತದೆ.

ರಿಯಲ್‌ಮಿ X7 ಪ್ರೊ ಅಲ್ಟ್ರಾ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್ ಅನ್ನು ಹೊಂದಿದೆ. ಇದನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 1000+ ಪ್ರೊಸೆಸರ್ ಹೊಂದಿದೆ. ಫೋನ್ 12GB LPDDR4x RAM ಮತ್ತು 256GB ವರೆಗೆ UFS 2.1 ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ.

ಸಾಧನವನ್ನು 4500mAh ಬ್ಯಾಟರಿಯಿಂದ ಬೆಂಬಲಿಸಲಾಗುತ್ತದೆ. ಹ್ಯಾಂಡ್‌ಸೆಟ್‌ನಲ್ಲಿ 65 ವ್ಯಾಟ್ ಚಾರ್ಜಿಂಗ್ ಅಡಾಪ್ಟರ್ ಬರುತ್ತದೆ, ಇದು ಕೇವಲ 35 ನಿಮಿಷಗಳಲ್ಲಿ ಬ್ಯಾಟರಿಯನ್ನು 0 ರಿಂದ 100% ವರೆಗೆ ಚಾರ್ಜ್ ಮಾಡುತ್ತದೆ ಎಂದು ಹೇಳಲಾಗುತ್ತದೆ. ಫ್ರಂಟ್‌ನಲ್ಲಿ ಸೆಲ್ಫಿಗಳಿಗಾಗಿ 32 ಎಂಪಿ ಕ್ಯಾಮೆರಾವನ್ನು ಈ ಸ್ಮಾರ್ಟ್‌ಫೋನ್‌ ಹೊಂದಿದೆ.

ರೇರ್‌ ಕ್ಯಾಮರಾ 64 ಎಂಪಿ ಮುಖ್ಯ ಸಂವೇದಕವನ್ನು 8 ಎಂಪಿ ಅಲ್ಟ್ರಾ-ವೈಡ್ ಆ್ಯಂಗಲ್‌ ಮತ್ತು 2 ಎಂಪಿ ಮ್ಯಾಕ್ರೋ ಸೆನ್ಸಾರ್‌ನೊಂದಿಗೆ ಜೋಡಿಸಿದೆ. ರಿಯಲ್‌ಮಿ ಎಕ್ಸ್ 7 ಪ್ರೊ ಅಲ್ಟ್ರಾ ಆ್ಯಂಡ್ರಾಯ್ಡ್ 11 ಆಧಾರಿತ ರಿಯಲ್‌ಮಿ ಯುಐ 2.0 ನಲ್ಲಿ ಕಾರ್ಯನಿರ್ವಹಿಸುತ್ತದೆ.

65W ಅಲ್ಟ್ರಾ-ಫಾಸ್ಟ್ ಫ್ಲ್ಯಾಷ್ ಚಾರ್ಜಿಂಗ್ ಹೊಂದಿರುವ 4500mAh (ವಿಶಿಷ್ಟ) / 4400mAh (ಕನಿಷ್ಠ) ಬ್ಯಾಟರಿಯನ್ನು ಒಳಗೊಂಡಿದೆ. ಅಲ್ಲದೆ, ರಿಯಲ್‌ಮಿ ಎಕ್ಸ್ 7 ಪ್ರೊ ಅಲ್ಟ್ರಾ ಸ್ಮಾರ್ಟ್‌ಫೋನ್‌ ಕಪ್ಪು ಮತ್ತು ಸ್ಕೈ ಬ್ಲೂ ಬಣ್ಣಗಳಲ್ಲಿ ಸದ್ಯ ಲಭ್ಯವಿದೆ.
Published by:Harshith AS
First published: