ರಿಯಲ್ಮಿ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿದೆ. ಅದರಂತೆ ಇದೀಗ ರಿಯಲ್ಮಿ ಎಸ್ ಮತ್ತು ಎಸ್ ಪ್ರೊ ವಾಚ್ ಅನ್ನು ಉತ್ಪಾದಿಸಿದೆ. ನೂತನ ವಾಚ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಡಿಸೆಂಬರ್ 23ರಂದು ದೇಶಿಯ ಮಾರುಕಟ್ಟೆಗೆ ಪರಿಚಯಿಸಲು ಯೋಜನೆ ಹಾಕಿಕೊಂಡಿದೆ.
ಅದರ ಜೊತೆಗೆ ರಿಯಲ್ಮಿ ಬಡ್ಸ್ ಏರ್ ಪ್ರೊ ಮಾಸ್ಟರ್ ಎಡಿಷನ್ ಅನ್ನು ಪರಿಚಯಿಸಲಿದೆ. ವಯರ್ಲೆಸ್ ಇಯರ್ಬಡ್ಸ್ ಇದಾಗಿದೆ.
ರಿಯಲ್ಮಿ ಗ್ರಾಹಕರಿಗಾಗಿ ಇಯರ್ಫೋನ್, ಅಸೆಸ್ಸರೀಸ್, ಸ್ಮಾರ್ಟ್ಹೋಮ್ ಉತ್ಪನ್ನಗಳನ್ನು ಪರಿಚಯಿಸಲು ಮುಂದಾಗಿದೆ. ಅದರಂತೆ ಕೈಗೆ ಧರಿಸಲು ಯೋಗ್ಯವಾದ ರಿಯಲ್ಮಿ ವಾಚ್ ಎಸ್ ಸಿರೀಸ್ ಫಿಟ್ನೆಸ್ ಟ್ರಾಕರ್ ಇದಾಗಿರಲಿದೆ.
ರಿಯಲ್ಮಿ ಎಸ್ ಸಿರೀಸ್:
ರಿಯಲ್ಮಿ ಕಳೆದ ಕೆಲ ತಿಂಗಳ ಹಿಂದೆ ರಿಯಲ್ಮಿ ವಾಚ್ ಎಸ್ ಅನ್ನು ಪಾಕಿಸ್ತಾನದಲ್ಲಿ ಪರಿಚಯಿಸಿದೆ. ಇದೀಗ ಭಾರತದಲ್ಲಿ ಪರಿಚಯಿಸಲು ಮುಂದಾಗಿದೆ. ನೂತನ ವಾಚ್ 1.3 ಸರ್ಕುಲರ್ ಡಿಸ್ಪ್ಲೇ ಹೊಂದಿದೆ.
ಅದರ ಜೊತೆಗೆ ಅಟೋ ಬ್ರೈಟ್ನೆಸ್ ಸೆನ್ಸಾರ್ ಇದರಲ್ಲಿ ಅಳವಡಿಸಲಾಗಿದೆ. ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಡಿಸ್ಪ್ಲೇ ನೀಡಲಾಗಿದೆ. ಅಷ್ಟು ಮಾತ್ರವಲ್ಲದೆ, ಒಳಬರುವ ಕರೆಗಳನ್ನು ನೋಡಬಹುದಾಗಿದೆ. ಸ್ಮಾರ್ಟ್ಫೋನ್ ಲಾಕ್ ಅನ್ನು ವಾಚ್ ಸಹಾಯದ ಮೂಲಕ ತೆಗೆಯಬಹುದಾಗಿದೆ. ಜೊತೆಗೆ ಸ್ಮಾರ್ಟ್ಫೋನ್ ನೋಟಿಫಿಕೇಶನ್ ಇದರ ಮೂಲಕ ವೀಕ್ಷಿಸಬಹುದಾಗಿದೆ.
ಹಲವಾರು ಫೀಚರ್ಗಳನ್ನು ಹೊಂದಿರುವ ರಿಯಲ್ಮಿ ಎಸ್ ವಾಚ್ನಲ್ಲಿ ಪಿಪಿಜಿ ಸೆನ್ಸಾರ್ ಮತ್ತು ಎದೆ ಬಡಿತ ನೋಡಬಹುದಾಗಿದೆ. ಅದರ ಜೊತೆಗೆ ರಕ್ತದಲ್ಲಿರುವ ಆಕ್ಸಿಜನ್ ಲೆವೆಲ್ ತಿಳಿಯಬಹುದಾಗಿದೆ. 16 ಸ್ಪೋರ್ಟ್ ಮೋಡ್ ಇದರಲ್ಲಿ, ಬೈಕ್, ಕ್ರಿಕೆಟ್, ಸೈಕಲ್ ಫುಟ್ಬಾಲ್, ಯೋಗ ಮುಂತಾದ ಫೀಚರ್ಗಳನ್ನು ಇದರಲ್ಲಿದೆ.
ರಿಯಲ್ಮಿ ಎಸ್ ವಾಚ್ ಒಂದು ಬಾರಿ ಚಾರ್ಜ್ ಮಾಡಿದರೆ 15 ದಿನಗಳ ಕಾಲ ಬಳಸಬಹುದಾಗಿದೆ. 390 ಎಮ್ಎಹೆಚ್ ಬ್ಯಾಟರಿ ಅಳವಡಿಸಲಾಗಿದೆ. 2 ಗಂಟೆಯಲ್ಲಿ ವಾರ್ಚ್ ಸಂಪೂರ್ಣ ಚಾರ್ಜ್ ಆಗಲಿದೆ.
ಇನ್ನು ರಿಯಲ್ಮಿ ಎಸ್ ಪ್ರೊ ಅಮೋಲ್ಡ್ ಡಿಸ್ಪ್ಲೇ ಹೊಂದಿದ್ದು, ಮೆಟಾಲಿಕ್ ವಿನ್ಯಾಸವನ್ನು ಹೊಂದಿದೆ. ಜಿಪಿಎಸ್ ಟ್ರಾಕಿಂಗ್ ಆಯ್ಕೆ ಇದರಲ್ಲಿದ್ದು, ಮಾರುಕಟ್ಟೆಯಲ್ಲಿ ಮೋಡಿ ಮಾಡಲಿದೆ ಎನ್ನಲಾಗುತ್ತಿದೆ. ಆದರೆ ನೂತನ ವಾಚ್ ಬೆಲೆಯ ಬಗ್ಗೆ ಬಿಡುಗಡೆಗೊಂಡ ನಂತರ ತಿಳಿಯಲಿದೆ.
ಇದರ ಜೊತೆಗೆ ರಿಯಲ್ಮಿ ಏರ್ ಬಡ್ಸ್ ಪ್ರೊ ಪರಿಚಯಿಸಲಿದೆ. ವಿವಿಧ ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ