ತ್ರಿವಳಿ ಕ್ಯಾಮೆರಾವಿರುವ ರಿಯಲ್​​​ಮಿ GT 5G ಸ್ಮಾರ್ಟ್‌ಫೋನ್ ಬಿಡುಗಡೆ: ವೈಶಿಷ್ಟ್ಯಗಳೇನು ಗೊತ್ತಾ?

Realme GT 5G ಸ್ಮಾರ್ಟ್‌ಫೋನ್ ಅನ್ನು ಚೀನಾದಲ್ಲಿ ಲೈವ್‌ಸ್ಟ್ರೀಮ್ ಈವೆಂಟ್ ಮೂಲಕ ಬಿಡುಗಡೆ ಮಾಡಲಾಯಿತು. ಮೊದಲೇ ಹೇಳಿದಂತೆ ಇದನ್ನು ಲೆದರ್ ಬ್ಯಾಕ್ ಮತ್ತು ಗ್ಲಾಸ್ ಬ್ಯಾಕ್ ರೂಪಾಂತರದಲ್ಲಿ ನೀಡಲಾಗುತ್ತಿದೆ. ಇದು ಮಲ್ಟಿಪಲ್ RAM ಮತ್ತು ಸ್ಟೋರೇಜ್ ಹೊಂದಿರಲಿದೆ ಎಂದು ಊಹಿಸಲಾಗಿದೆ.

Realme GT 5G smartphone

Realme GT 5G smartphone

 • Share this:
  ಭಾರತೀಯ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಸಮಯದಲ್ಲಿಯೇ ಯಶಸ್ಸು ಕಂಡ ಕಂಪನಿಗಳ ಪೈಕಿ ರಿಯಲ್ ಮಿ ಕೂಡ ಒಂದು. ತನ್ನ ವಿಶಿಷ್ಠ ಶೈಲಿಯ ಸ್ಮಾರ್ಟ್‌ಫೋನ್​ಗಳನ್ನು ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡಿದೆ. ಕಾಸಿಗೆ ತಕ್ಕ ಕಜ್ಜಾಯವೆಂಬಂತೆ ಬಜೆಟ್ ಬೆಲೆಗೆ ಅತ್ಯುತ್ತಮ ಫೀಚರ್ ಉಳ್ಳ ಆಕರ್ಷಕ ಮೊಬೈಲ್ ಗಳನ್ನು ರಿಯಲ್ ಮಿ ಪರಿಚಯಿಸುತ್ತಾ ಬಂದಿದೆ. ಚೀನಾದಲ್ಲಿ ಈ ಕಂಪನಿಯ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.

  ಹೌದು, ಬುಧವಾರ ರಿಯಲ್ ಮಿ GT 5G ಸ್ಮಾರ್ಟ್‌ಫೋನ್ ಚೀನಾದಲ್ಲಿ ಬಿಡುಗಡೆಯಾಗಿದೆ. ಕಂಪನಿ ಈ ಹಿಂದೆ ಪರಿಚಯಿಸಿದ್ದ ಕೆಲವು ಸ್ಮಾರ್ಟ್‌ಫೋನ್ ಫೀಚರ್ಸ್ ಬಗ್ಗೆ ಟ್ರೋಲ್ ಮಾಡಲಾಗಿತ್ತು. ಹೀಗಾಗಿ ಹೊಸದಾಗಿ ಬಿಡುಗಡೆಯಾದ ರಿಯಲ್ ಮಿ GT 5G ಸ್ಮಾರ್ಟ್‌ಫೋನ್ ಬಗ್ಗೆ ಕಂಪನಿ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ. ಈ ರಿಯಲ್‏ಮಿ ಫೋನ್ ಸ್ನ್ಯಾಪ್‌ಡ್ರಾಗನ್ 888 SoC ಯಿಂದ ಚಾಲಿತವಾಗಲಿದೆ. ಇದನ್ನು 2 ಬ್ಯಾಕ್ ಪ್ಯಾನಲ್ ಆಯ್ಕೆಗಳಲ್ಲಿ ನೀಡಲಾಗಿದ್ದು, ಲೆದರ್ ಮತ್ತು ಗ್ಲಾಸ್ ಬ್ಯಾಕ್ ರೂಪಾಂತರದಲ್ಲಿ ಲಭ್ಯವಿದೆ.

  ರಿಯಲ್ ಮಿ GT 5G ಸ್ಮಾರ್ಟ್‌ಫೋನ್ ಬಿಡುಗಡೆ

  ರಿಯಲ್ ಮಿ GT 5G ಸ್ಮಾರ್ಟ್‌ಫೋನ್ ಅನ್ನು ಚೀನಾದಲ್ಲಿ ಲೈವ್‌ಸ್ಟ್ರೀಮ್ ಈವೆಂಟ್ ಮೂಲಕ ಬಿಡುಗಡೆ ಮಾಡಲಾಯಿತು. ಮೊದಲೇ ಹೇಳಿದಂತೆ ಇದನ್ನು ಲೆದರ್ ಬ್ಯಾಕ್ ಮತ್ತು ಗ್ಲಾಸ್ ಬ್ಯಾಕ್ ರೂಪಾಂತರದಲ್ಲಿ ನೀಡಲಾಗುತ್ತಿದೆ. ಇದು ಮಲ್ಟಿಪಲ್ RAM ಮತ್ತು ಸ್ಟೋರೇಜ್ ಹೊಂದಿರಲಿದೆ ಎಂದು ಊಹಿಸಲಾಗಿದೆ.

  ರಿಯಲ್ ಮಿ GT 5Gಯ ನಿರೀಕ್ಷಿಸಲಾಗಿರುವ ವೈಶಿಷ್ಟ್ಯಗಳು

  ಬಿಡುಗಡೆಗೂ ಮುನ್ನ ರಿಯಲ್ ಮಿ GT 5G ಸ್ಮಾರ್ಟ್‌ಫೋನ್ ಕೆಲವು ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಸೋರಿಕೆಯಾಗಿದೆ. ಕೆಲವು ಫೀಚರ್ಸ್ ಗಳನ್ನು ಸ್ವತಃ ಕಂಪನಿಯೇ ಒಪ್ಪಿಕೊಂಡಿದೆ. ರಿಯಲ್ ಮಿ GT 120Hz ಡಿಸ್‌ಪ್ಲೇ ರೀಫ್ರೇಶ್‌ ರೇಟ್, LPDDR5 RAM, UFS 3.1 ಸಂಗ್ರಹಣೆ ಮತ್ತು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ನಿಂದ ಚಾಲಿತವಾಗಲಿದೆ. ಫೋನ್ ಸುಧಾರಿತ ಕೂಲಿಂಗ್ ಸೆಲ್ಯೂಷನ್ ಸಹ ಹೊಂದಿದೆ, ಅದು 15 ಡಿಗ್ರಿಗಳವರೆಗೆ ತಾಪಮಾನವನ್ನು ಕಡಿಮೆ ಮಾಡುತ್ತದೆ. 64 ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವುಳ್ಳ ಟ್ರಿಪಲ್ ರೇರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ ಎಂದು ಕಂಪನಿ ದೃಢಪಡಿಸಿದೆ.

  ಡಿಜಿಟಲ್ ಗೀಕ್‌ಬೆಂಚ್‌ನಲ್ಲಿ ಕಾಣಿಸಿಕೊಂಡಿರುವ ಪ್ರಕಾರ ರಿಯಲ್ ಮಿ GT 5G ಸ್ಮಾರ್ಟ್‌ಫೋನ್ 12GB RAM ನೊಂದಿಗೆ ರೂಪಾಂತರವನ್ನು ಹೊಂದಿರುತ್ತದೆ ಮತ್ತು ಆಂಡ್ರಾಯ್ಡ್ 11 ರಿಂದ ಕಾರ್ಯ ನಿರ್ವಹಿಸುತ್ತದೆ. ಫೋನ್ ಮಾದರಿ ಸಂಖ್ಯೆ RMX2202 ಅನ್ನು ಹೊಂದಿದ್ದು, 256 GB UFS 3.1 ಸಂಗ್ರಹ ಮಿತಿಯಿದೆ.

  ರಿಯಲ್ ಮಿ GT 5G ಸ್ಮಾರ್ಟ್‌ಫೋನ್ 6.8-ಇಂಚಿನ (1,440x3,200 ಪಿಕ್ಸಲ್ಸ್) 20:9ರ ಅನುಪಾತದೊಂದಿಗೆ OLED ಡಿಸ್​ಪ್ಲೇ ಜೊತೆಗೆ ಪರಿಚಯಿಸಿದೆ. ಅಲ್ಲದೇ 125W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ನೀಡುತ್ತದೆ. ಸೋರಿಕೆಯಾಗಿರುವ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್ 165Hz ಡಿಸ್‌ಪ್ಲೇ ರೀಫ್ರೆಶ್‌‌ ರೇಟ್ ಹೊಂದಿರಲಿದೆ. ರಿಯಲ್ ಮಿ GT 5G ಸ್ಮಾರ್ಟ್‌ಫೋನ್ ಬೆಲೆ 31,5000 ರೂ ಆಗಿದೆ.
  Published by:Harshith AS
  First published: