ರಿಯಲ್ಮಿ S ಹೆಸರಿನ ಸ್ಮಾಟ್ವಾಚ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ವಾಚ್ ವೃತ್ತಕಾರದ ಡಯಲ್ ಹೊಂದಿದ್ದು, ರಕ್ತದಲ್ಲಿರುವ ಆಕ್ಸಿಜನ್ ಮಾನಿಟರ್ ಮಾಡುವ ಫೀಚರ್ ಹೊಂದಿದೆ.
ರಿಯಲ್ಮಿ S ಸ್ಮಾರ್ಟ್ವಾಚ್ 1.3 ಇಂಚಿನ ಪ್ರೊಸೆಸರ್ ಹೊಂದಿದ್ದು, ಅಟೋ ಬ್ರೈಟ್ನೆಸ್ ಡಿಸ್ಪ್ಲೇ ಜೊತೆಗೆ 360x360 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಇದರಲ್ಲಿ 2.5D ಕರ್ವ್ಡ್ ಗೊರಿಲ್ಲಾ ಗ್ಲಾಸ್ 3 ನೀಡಲಾಗಿದೆ. ಪಿಪಿಜಿ ಸೆನ್ಸಾರ್ ಜೊತೆಗೆ ಸರಿಯಾದ ಸಮಯಕ್ಕೆ ಹೃದಯ ಬಡಿತ ಮಾನಿಟರ್ ಮಾಡುತ್ತದೆ. ಇದರಲ್ಲಿ ಅಳವಡಿಸಿರುವ ಎಸ್ಪಿ02 ಸೆನ್ಸಾರ್ ಬ್ಲಡ್ ಆಕ್ಸಿಜನ್ ಲೆವೆಲ್ ಮಾನಿಟರ್ ಮಾಡುತ್ತದೆ.
ನೂತನ ಸ್ಮಾರ್ಟ್ವಾಚ್ ಬೈಕ್, ಕ್ರಿಕೆಟ್, ಓಟ, ಸೈಕಲ್, ಫುಟ್ಬಾಲ್, ಯೋಗ ಮುಂತಾದ 16 ಸ್ಟೊರ್ಟ್ಸ್ ಮೋಡ್ ಹೊಂದಿದೆ. ಜೊತೆಗೆ ಸ್ಮಾರ್ಟ್ಫೋನಿಗೆ ಬರುವ ಕರೆಗಳನ್ನು ಕಟ್ ಮಾಡಬಹುದಾಗಿದೆ.
ರಿಯಲ್ಮಿ S ಸ್ಮಾರ್ಟ್ವಾಚ್ನಲ್ಲಿ 390mAh ಬ್ಯಾಟರಿ ನೀಡಲಾಗಿದೆ. 2 ಗಂಟೆಯೊಳಗೆ ಪೂರ್ತಿ ಚಾರ್ಜ್ ಆಗಲಿದೆ. ಅದರಂತೆ ಒಂದು ಬಾರಿ ಚಾರ್ಜ್ ಮಾಡಿದರೆ 15 ದಿನಗಳ ಕಾಲ ಬಳಸಬಹುದಾಗಿದೆ. ಭಾರತದಲ್ಲಿ ಈ ಸ್ಮಾರ್ಟ್ವಾಚ್ 3,999 ರೂ.ಗೆ ಸಿಗಲಿದೆ ಎಂದು ಅಂದಾಜಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ