ಚೀನಾದ ಸ್ಮಾರ್ಟ್ಫೋನ್ ತಯಾರಕ ಕಂಪನಿ ರಿಯಲ್ಮಿ ಹೊಸ ಸ್ಮಾರ್ಟ್ಟಿವಿಯನ್ನು ಭಾರತ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್ಟಿವಿ ಬೆಲೆ 12,999 ರೂ ಆಗಿದೆ.
ರಿಯಲ್ಮಿ ಪರಿಚಯಿಸಿರುವ ನೂತನ ಟಿವಿ ಟೆಕ್ 64 ಬಿಟ್ ಕ್ವಾಡ್ ಕೋಡ್ ಪ್ರೊಸೆಸರ್ ಹೊಂದಿದ್ದು, ಡಾಲ್ಬಿ ಆಡಿಯೊ ಪ್ರಮಾಣಿತ 24 ಕ್ವಾಡ್ ಸ್ಟಿರಿಯೋಗಳನ್ನು ಅಳವಡಿಸಿದೆ. ಇದರ ಜೊತೆಗೆ 64 ಬಿಟ್ ಮೀಡಿಯಾ ಟೆಕ್ ಪ್ರೊಸೆಸರ್, ಮಾಲಿ 470ಜಿಪಿಯು ಮತ್ತು 8GB ಸಂಗ್ರಹ ಸಾಮರ್ಥ್ಯ ಒಳಗೊಂಡಿದೆ.
ಗ್ರಾಹಕರಿಗಾಗಿ ಎರಡು ರೂಪಾಂತರದಲ್ಲಿ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಿದೆ. 32 ಇಂಚಿನ ಎಚ್ಡಿ ಟಿವಿ ಬೆಲೆ 12,999 ರೂ ಇರಲಿದ್ದು, 43 ಇಂಚಿನ ಟಿವಿ 21,999 ರೂ ಇರಲಿದೆ.
ಆ್ಯಂಡ್ರಾಯ್ಡ್ ಟಿವಿಯಾಗಿರುವುದರಿಂದ ಎಲ್ಲಾ ಆ್ಯಂಡ್ರಾಯ್ಡ್ ಆ್ಯಪ್ಗಳೊಂದಿಗೆ ನೆಟ್ಫ್ಲಿಕ್ಸ್, ಯ್ಯೂಟೂಬ್, ಡಿಸ್ನಿ+ ಸೇರಿದಂತೆ ಇತರೆ ಚಲನಚಿತ್ರ, ಟಿವಿ ಶೋ ವೀಕ್ಷಣೆ ಆ್ಯಪ್ಗಳನ್ನು ಹೊಂದಿದೆ.
ಜೂನ್ 2 ರಿಂದ ನೂತನ ಸ್ಮಾರ್ಟ್ಟಿವಿಗಳು ಅಧಿಕೃತ realme.com ವೆಬ್ಸೈಟ್ ಮತ್ತು ಆನ್ಲೈನ್ ಮಾರಾಟ ಮಳಿಗೆಯಾದ ಫ್ಲಿಪ್ಕಾರ್ಟ್ನಲ್ಲಿ ಮಾರಾಟಕ್ಕೆ ಸಿಗಲಿದೆ. ಜೊತೆಗೆ ಒಂದು ವರ್ಷ ಹೆಚ್ಚುವರು ವ್ಯಾರಂಟಿ (ಟಿವಿ ಪ್ಯಾನೆಲ್ಗೆ ಮಾತ್ರ), 6 ತಿಂಗಳು ಯ್ಯೂಟೂಬ್ ಪ್ರಿಮಿಯಂ ನೀಡಲಾಗಿದೆ.
ಇನ್ನು 4 ಸ್ಪೀಕರ್ ಹಾಗೂ 1 ಸಬ್ ಊಫರ್ ಒಳಗೊಂಡಿರುವ 100 ವಾಟ್ಸ್ ಸೌಂಡ್ ಬಾರ್ನಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ರಿಯಲ್ಮಿ ಸಂಸ್ಥೆ ತಿಳಿಸಿದೆ. ಆದರೆ ಇದರ ಬೆಲೆ ಹಾಗೂ ಬಿಡುಗಡೆ ದಿನಾಂಕವನ್ನು ಬಹಿರಂಗ ಪಡಿಸಿಲ್ಲ.
ಸ್ಮಾರ್ಟ್ಫೋನ್ನಲ್ಲಿ ಜಾಹೀರಾತು ಕಿರಿಕಿರಿ ನೀಡುತ್ತಿದೆಯಾ? ತಪ್ಪಿಸಲು ಹೀಗೆ ಮಾಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ