• Home
  • »
  • News
  • »
  • tech
  • »
  • Realme Smartphone: 20 ನಿಮಿಷಕ್ಕೆ ಫುಲ್ ಚಾರ್ಜ್ ಆಗುತ್ತೆ ಈ ಫೋನ್​, ಸೂಪರ್​ ಬ್ಯಾಟರಿ ಬ್ಯಾಕಪ್​ ಕೂಡ ಇದೆ!

Realme Smartphone: 20 ನಿಮಿಷಕ್ಕೆ ಫುಲ್ ಚಾರ್ಜ್ ಆಗುತ್ತೆ ಈ ಫೋನ್​, ಸೂಪರ್​ ಬ್ಯಾಟರಿ ಬ್ಯಾಕಪ್​ ಕೂಡ ಇದೆ!

ರಿಯಲ್‌ಮಿ ಸ್ಮಾರ್ಟ್‌ಫೋನ್‌

ರಿಯಲ್‌ಮಿ ಸ್ಮಾರ್ಟ್‌ಫೋನ್‌

ರಿಯಲ್‌ಮಿ 10 ಸೀರಿಸ್‌ನಲ್ಲಿ ಬಿಡುಗಡೆ ಮಾಡುತ್ತಿರುವ ಸ್ಮಾರ್ಟ್‌ಫೋನ್‌ ರಿಯಲ್‌ಮಿ 10 ಪ್ರೊ ಪ್ಲಸ್‌ ಆಗಿದೆ. ಇದು ಈವರೆಗೆ ಬಿಡುಗಡೆಯಾಗಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಬಹಳಷ್ಟು ವಿಶೇಷತೆಯನ್ನು ಹೊಂದಿರಲಿದೆ ಎಂದು ತಂತ್ರಜ್ಞರು ಹೇಳಿದ್ದಾರೆ.

  • Share this:

    ಏನಪ್ಪಾ ಇದು ಸ್ಮಾರ್ಟ್‌ಫೋನ್‌ಗಳು (Smartphone) ದಿನದಿಂದ ದಿನಕ್ಕೆ ಹೊಸತನದಲ್ಲಿ ಬರ್ತಿದೆ ಅಂತ ಅನ್ಕೊಂಡ್ರಾ. ಹೌದು ಇದು ರಿಯಲ್‌ಮಿ (Realme) ಬಿಡುಗಡೆ ಮಾಡುತ್ತಿರುವ ಈ ವರ್ಷದ ಹೊಸ ಸ್ಮಾರ್ಟ್‌ಫೋನ್‌ ಆಗಿದೆ.  ರಿಯಲ್‌ಮಿ ಸಂಸ್ಥೆ ಈ ವರ್ಷ ತನ್ನ 10ನೇ ಸೀರಿಸ್‌ನಲ್ಲಿ (Realme 10 Series) ಹೊಸ ಮೊಬೈಲನ್ನು ಲಾಂಚ್‌ (Launch) ಮಾಡಲು ಹೊರಟಿದ್ದು ಇದು ಹಲವಾರು ವೈಶಿಷ್ಟ್ಯದೊಂದಿಗೆ ಜನರಿಗೆ ಕೈಗೆಟಕುವ ದರದಲ್ಲಿ ದೊರೆಯಲಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ರಿಯಲ್‌ಮಿ ಸ್ಮಾರ್ಟ್‌ಫೋನ್‌ ಕಂಪನಿ ತನ್ನ ಉತ್ಪನ್ನಗಳ ಮೂಲಕ ಪ್ರಪಂಚದಾದ್ಯಂತ ಗ್ರಾಹಕರನ್ನು ಹೊಂದಿದೆ. ಇದು ಇತ್ತೀಚಿಗೆ ತನ್ನ ಕಂಪನಿಯಲ್ಲಿ ಸ್ಮಾರ್ಟ್‌ವಾಚ್‌ (Smartwatch) ಅನ್ನು ಕೂಡ ಆರಂಭಿಸಿದ್ದು ಇದು ಕೂಡ ಬಹಳಷ್ಟು ಪ್ರಚಾರವನ್ನು ಹೊಂದಿದೆ. 


    ರಿಯಲ್‌ಮಿ 10 ಸೀರಿಸ್‌ನಲ್ಲಿ ಬಿಡುಗಡೆ ಮಾಡುತ್ತಿರುವ ಸ್ಮಾರ್ಟ್‌ಫೋನ್‌ ರಿಯಲ್‌ಮಿ 10 ಪ್ರೊ ಪ್ಲಸ್‌ ಆಗಿದೆ. ಇದು ಈವರೆಗೆ ಬಿಡುಗಡೆಯಾಗಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಬಹಳಷ್ಟು ವಿಶೇಷತೆಯನ್ನು ಹೊಂದಿರಲಿದೆ ಎಂದು ತಂತ್ರಜ್ಞರು ಹೇಳಿದ್ದಾರೆ.


    ರಿಯಲ್‌ಮಿ 10‌ ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌  ನೆಲ್ಲಾ ಫೀಚರ್ಸ್‌ ಹೊಂದಿದೆ? 


    •  ಇತ್ತೀಚಿನ ವರದಿಯ ಪ್ರಕಾರ, ರಿಯಲ್‌ಮಿ 10 Pro+ ನ 2.33mm ನಷ್ಟು ತೆಳುವಾಗಿರುತ್ತದೆ ಎಂದು ಹೇಳಿಕೊಂಡಿದೆ.


    Realme s new smartphone is coming to the market If you see the features you will get the guarantee
    ರಿಯಲ್‌ಮಿ  10 ಪ್ರೊ ಪ್ಲಸ್


    • ಇತ್ತೀಚಿನ ವರದಿಯ ಪ್ರಕಾರ, ರಿಯಲ್‌ಮಿ 10 Pro+ 6.7-ಇಂಚಿನ HD+ AMOLED ಡಿಸ್‌ಪ್ಲೇಯೊಂದಿಗೆ ಬರುವ ನಿರೀಕ್ಷೆಯಿದೆ.


    ಇದನ್ನೂ ಓದಿ: ಬರೀ 15 ಸಾವಿರಕ್ಕೆ ಖರೀದಿಸಿ 64 ಮೆಗಾಪಿಕ್ಸೆಲ್​ ಕ್ಯಾಮೆರಾವಿರುವ ಈ ಸ್ಮಾರ್ಟ್​ಫೋನ್​!

    •  ಈ ರಿಯಲ್‌ಮಿ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 1080 SoC ನಿಂದ ಕಾರ್ಯನಿರ್ವಹಿಸಬಹುದು.

    • ರಿಯಲ್‌ಮಿ 10 Pro+ 108 ಮೆಗಾಪಿಕ್ಸೆಲ್, 8-ಮೆಗಾಪಿಕ್ಸೆಲ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸರ್‌ ಅನ್ನು ಒಳಗೊಂಡಿದ್ದು ಜೊತೆಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಕೂಡ ಹೊಂದಿದೆ ಎಂದು ತಿಳಿದು ಬಂದಿದೆ.

    • ಇನ್ನು ಈ ಸ್ಮಾರ್ಟ್‌ಫೋನ್‌ 16-ಮೆಗಾಪಿಕ್ಸೆಲ್ ಮುಂಭಾಗದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿರುವ ಸಾಧ್ಯತೆಯಿದೆ ಎಂಬ ವರದಿಯಿದೆ.

    •  67 ವ್ಯಾಟ್ಸ್ ವೇಗದ ಚಾರ್ಜಿಂಗ್‌ ಬೆಂಬಲದೊಂದಿಗೆ 4,890mAh ಬ್ಯಾಟರಿಯನ್ನು ಸ್ಮಾರ್ಟ್‌ಫೋನ್ ಹೊಂದಿದೆ.


    ಎಲ್ಲಿ ಮೊದಲು ಪ್ರಾರಂಭ: 


    ಈ ಸ್ಮಾರ್ಟ್‌ಫೋನ್‌ ಮೊದಲಿಗೆ ನವೆಂಬರ್‌ 17 ರಂದು ಚೀನಾದಲ್ಲಿ ಪ್ರಾರಂಭವಾಗಲಿದೆ.


    ಯಾವೆಲ್ಲಾ ಕಲರ್‌ಗಳಲ್ಲಿ ಲಭ್ಯವಾಗಲಿದೆ?


    ಈ ಮೊದಲಿಗೆ ಬಿಡುಗಡೆಯಾಗಿದ್ದ ರಿಯಲ್‌ಮಿ 10 ಸೀರಿಸ್‌ನ  ಸ್ಮಾರ್ಟ್‌ಫೋನ್‌ಗಳಾದ ರಿಯಲ್‌ಮಿ 10, ರಿಯಲ್‌ಮಿ 10 ಪ್ರೊ ಮೊಬೈಲ್‌ಗಳು ಕೇವಲ ಎರಡು ಸ್ಟೋರೇಜ್‌ ಆಯ್ಕೆ ಮತ್ತು ಎರಡು ಬಣ್ಣಗಳಲ್ಲಿ ಲಭ್ಯವಿತ್ತು.


    ಆದರೆ ಮುಂಬರುವ ರಿಯಲ್‌ಮಿ 10 ಪ್ರೊ ಪ್ಲಸ್‌ ಸ್ಮಾರ್ಟ್‌ಫೋನ್‌ ಮೂರು‌ ರೀತಿಯ ಸ್ಟೋರೇಜ್ ಮತ್ತು ಮೂರು ವಿಧದ ಬಣ್ಣಗಳೊಂದಿಗೆ ಲಭ್ಯವಿರಲಿದೆ ಎಂದು ತಂತ್ರಜ್ಞರು ತಿಳಿಸಿದ್ದಾರೆ.‌


    Realme s new smartphone is coming to the market If you see the features you will get the guarantee
    ರಿಯಲ್‌ಮಿ  10 ಪ್ರೊ ಪ್ಲಸ್


    ಇದು ರಿಯಲ್‌ಮಿ ಬಿಡುಗಡೆ ಮಾಡುತ್ತಿರುವ ಹೊಸ ಸ್ಮಾರ್ಟ್‌ಫೋನ್‌ ಆಗಿದೆ. ಮೊದಲು ಚೀನಾದಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದ್ದು ತದನಂತರ ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ.


    ರಿಯಲ್‌ಮಿ 9 ಪ್ರೊ ಮತ್ತು 9 ಪ್ರೊ ಪ್ಲಸ್‌ ಬಿಡುಗಡೆಯಾಗಿತ್ತು. ಇದು ಕೂಡ ಬಹಳಷ್ಟು ಫೀಚರ್ಸ್‌ ಅನ್ನು ಹೊಂದಿದೆ.


    ರಿಯಲ್ ಮಿ 9 ಪ್ರೋ, 9 ಪ್ರೋ ಪ್ಲಸ್ ವಿಶೇಷತೆಗಳು


    ರಿಯಲ್ ಮಿ 9 ಪ್ರೋ ಸೀರೀಸ್ 5ಜಿಯನ್ನು ಕಂಪನಿಯು ಈ ಹಿಂದೆ ಬಿಡುಗಡೆ ಮಾಡಿತ್ತು. 9 ಪ್ರೋ ಪ್ಲಸ್ ಡೈಮೆನ್ಸಿಟಿ 920 ಪ್ರೊಸೆಸರ್‌ನೊಂದಿಗೆ ಬರಲಿದೆ ಮತ್ತು ಮುಖ್ಯ ಕ್ಯಾಮೆರಾದಲ್ಲಿ ಸೋನಿ ಐಎಂಎಕ್ಸ್ 766 ಸೆನ್ಸರ್ ಅನ್ನು ಒಳಗೊಂಡಿದೆ. 9 ಪ್ರೋ ಪ್ಲಸ್ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಇರುವ ಬಣ್ಣಗಳು ಬೇರೆ ಬೇರೆ ಆಯ್ಕೆಯಲ್ಲಿವೆ.


    ಇದನ್ನೂ ಓದಿ: ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ Realme 9 Pro, 9 Pro Plus: ಹೇಗಿದೆ ಗೊತ್ತಾ?


    ರಿಯಲ್ ಮಿ 9 ಪ್ರೋ ಪ್ಲಸ್ 8ಜಿಬಿ ರ‍್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಅನ್ನು ಹೊಂದಿದೆ. ಇದು 60 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4500 ಎಂಎಎಚ್ ಬ್ಯಾಟರಿಯೊಂದಿಗೆ ಬಂದಿದೆ. ರಿಯಲ್ ಮಿ 9 ಪ್ರೋ ಪ್ಲಸ್ ರಿಯಲ್ ಮಿ ಯುಐ 3.0 ನೊಂದಿಗೆ ಬಂದ ಮೊದಲ ಫೋನ್ ಆಗಿದೆ. ಇದು ಆ್ಯಂಡ್ರಾಯ್ಡ್ 12 ಅನ್ನು ಆಧರಿಸಿದೆ.

    Published by:Harshith AS
    First published: